ಮೋದಿ ಮೋಡಿ; ವಾಹನಗಳು ಮೋಡಿಫೈಡ್
"ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು", "ಸದೃಢ ಭಾರತಕ್ಕಾಗಿ ಈ ಬಾರಿ ನನ್ನ ಮತ ಮೋದಿಯವರಿಗೆ" - ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಎಲ್ಲೆಡೆ ನಮೋ ಮಂತ್ರ ಪಠನೆ ಜೋರಾಗುತ್ತಲೇ ಇದೆ. ಚಹಾ ಮಾರುವ ಮೋದಿ ಹೀಗೆಲ್ಲ ಹಲವು ರೂಪಗಳಿಂದ ಬಿಂಬಿತವಾಗಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಚುನಾವಣಾ ಕಾವೇರಿಸುವಲ್ಲಿ ಅಕ್ಷರಶ: ಯಶಸ್ವಿಯಾಗಿದ್ದಾರೆ.
ಮೋದಿ ಸರಳ ವ್ಯಕ್ತಿತ್ವ ಸಾರುತ್ತಿರುವ ಸ್ಕಾರ್ಪಿಯೊ ಪಯಣ
ಇದಕ್ಕೆ ಪೂರ್ಣ ಬೆಂಬಲ ನೀಡುವಲ್ಲಿ ಅನುಯಾಯಿಗಳು ಯಶಸ್ವಿಯಾಗಿದ್ದಾರೆ. ಒಂದು ರೀತಿಯಲ್ಲಿ ಹೇಳುವುದಾದ್ದಲ್ಲಿ ಇದುವರೆಗಿನ ಮೋದಿ ಯಶಸ್ಸಿನಲ್ಲಿ ಅಭಿಮಾನಿಗಳ ಪಾತ್ರ ದೊಡ್ಡದ್ದು. ತಮ್ಮ ಸರ್ವಸ್ವವನ್ನು ಮೋದಿಗೆ ಅರ್ಪಿಸಲು ತಯಾರಾಗಿರುವ ಅಂತವರು ಸದಾ ಮೋದಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದರಿಂದ ವಾಹನಗಳು ಸಹ ಹೊರತಾಗಿಲ್ಲ.

ಇದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕಂಡುಬಂದಿರುವ ಚಿತ್ರಗಳು. ನರೇಂದ್ರ ಮೋದಿ ಮೇಲಿನ ತಮ್ಮ ಬದ್ಧತೆ ಪ್ರದರ್ಶಿಸಿರುವ ಮದೇಶ ಮುದಗುಂಡಿ ಎಂಬವರು ತಮ್ಮ ನೂತನ ಸ್ಕೂಟರನ್ನು ಮೋಡಿಫೈಡ್‌ಗೊಳಿಸಿದ್ದಾರೆ. ಅಕ್ಷರಶ: ಈ ಎಲೆಕ್ಟ್ರಿಕ್ ಸ್ಕೂಟರ್ ಮೋಡಿಫೈಡ್ ಆಗಿದ್ದು, 'ವೋಟ್ ಫಾರ್ ಇಂಡಿಯಾ, ವೋಟ್ ಫಾರ್ ಮೋದಿ' ಎಂಬ ಮುದ್ರಣ ಲಗತ್ತಿಸಲಾಗಿದೆ.

ಅಷ್ಟೇ ಅಲ್ಲದೆ ಮೋದಿ ಶಕ್ತಿಶಾಲಿ ಬಿಂಬಿಸುವ ಸಲುವಾಗಿ ಸಿಂಹ ರೂಪವನ್ನು ಬಳಕೆ ಮಾಡಲಾಗಿದೆ.

"ಕನಸುಗಳನ್ನು ನೋಡಲಾಗುವುದಿಲ್ಲ. ನೀವು ನಿದ್ರಿಸುವಾಗ, ಕನಸುಗಳು ನಿಮ್ಮನ್ನು ಮಲಗಲು ಅವಕಾಶ ಮಾಡಿಕೊಡುವುದಿಲ್ಲ" ಎಂಬುದನ್ನು ಇದರಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಸ್ಕೂಟರ್ ಮುಂದುಗಡೆ ಮೋದಿ ಜತೆ ಗುಜರಾತ್‌ನಲ್ಲಿ ತಲೆಯೆತ್ತಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆ ಚಿತ್ರಣವನ್ನು ಕೊಡಲಾಗಿದೆ. ಇದರ ಕೆಳಗಡೆ ಬಿಜೆಪಿ ಲಾಂಛನ ಹೊಂದಿದೆ.

"ಜಾತ್ಯತೀತತೆ ಎಂಬ ಪದವನ್ನು ಅನೇಕ ಜನರು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಬಹುದು. ಆದರೆ ಮೋದಿ ಪಾಲಿಗಿದು ಸರಳವಾಗಿದ್ದು, ಯಾವಾಗಲೂ ಭಾರತ ಮೊದಲು" ಎಂಬ ಘೋಷಣೆಯನ್ನು ಇದರಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ದಾವಣಗೆರೆ ಮೋದಿ ಸಮಾವೇಶದಲ್ಲಿ ಬಸ್ಸಿನ ಹಿಂದುಗಡೆಯೂ ಗೋ ಮಾತೆಗೆ ವಂದಿಸುವ ಮೋದಿ ಚಿತ್ರಣವನ್ನು ಲಗತ್ತಿಸಲಾಗಿತ್ತು.

ಅದೇ ರೀತಿ ಸದೃಢ ಭಾರತಕ್ಕಾಗಿ ನರೇಂದ್ರ ಮೋದಿಯವರನ್ನು ಬೆಂಬಲಿಸಿ ಎಂಬುದರ ಮೂಲಕ ಬಸ್ ಪೂರ್ಣವಾಗಿಯೂ ಮೋದಿ ಭಾವಚಿತ್ರಗಳಿಂದ ಕಂಗೊಳಿಸುತ್ತಿದ್ದವು.

ದಾವಣಗೆರೆಯಲ್ಲಿ ನಡೆದ ಮೋದಿ ಸಂಚಾರ ಯಾತ್ರೆಯಲ್ಲಿ ಕಂಡುಬಂದ ವಾಹನವಿದು.


Click it and Unblock the Notifications








