ವಿಕ್ರಮಾದಿತ್ಯ ಮತ್ತು ಮೋದಿ; ಪವರ್‌ಫುಲ್ ಪ್ರಧಾನಿ

By Nagaraja

ದೇಶ ಕಂಡ ಅತ್ಯಂತ ಶಕ್ತಿಶಾಲಿ ಪ್ರಧಾನಿ ಎಂದು ನಿರೂಪಿಸಲು ಹೊರಟಿರುವ ನರೇಂದ್ರ ಮೋದಿ, ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಲಿದ್ದು, ಸದ್ಯದಲ್ಲೇ ಭಾರತ ನೌಕಾ ಸೇನೆಯ ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧ ವಿಮಾನವಾಹಕ ನೌಕೆಯಲ್ಲಿ ತಮ್ಮ ಪಯಣ ಕೈಗೊಳ್ಳಲಿದ್ದಾರೆ.

ಜಗತ್ತಿನ 25 ಅತಿದೊಡ್ಡ ವಿಹಾರ ನೌಕೆಗಳು

ಮೋದಿ ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧ ವಿಮಾನ ಯಾನ ಹಡಗಿನಲ್ಲಿ ಕುಳಿತುಕೊಳ್ಳುವ ಇರಾದೆ ವ್ಯಕ್ತಪಡಿಸಿರುವ ಬೆನ್ನಲ್ಲೇ ಭಾರತೀಯ ನೌಕಾದಳವು ಇದಕ್ಕೆ ಬೇಕಾಗಿರುವ ಸಕಲ ರೀತಿಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವಲ್ಲಿ ಕಾರ್ಯ ನಿರತವಾಗಿದೆ. ವರದಿಗಳ ಪ್ರಕಾರ ನರೇಂದ್ರ ಮೋದಿ ಜೂನ್ 14 ಹಾಗೂ 15ರಂದು ಭಾರತೀಯ ನೌಕಾದಳ ಹಾಗೂ ಭೂಸೇನೆಗೆ ಭೇಟಿ ಕೊಡಲಿದ್ದಾರೆ.

ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧ ವಿಮಾನ ವಾಹಕ ಹಡಗನ್ನೇರಲಿರುವ ಮೋದಿ

ಕಳೆದ ವರ್ಷ ಡಿಸೆಂಬರ್‌ನಲ್ಲಿ ರಷ್ಯಾದಿಂದ ಭಾರತಕ್ಕೆ ಪ್ರವೇಶಿಸಿದ್ದ ಐಎನ್‌ಎಸ್ ವಿಕ್ರಮಾದಿತ್ಯ ಇದೇ ಸಂದರ್ಭದಲ್ಲಿ ಮೊದಲ ಸಾರ್ವಜನಿಕ ದರ್ಶನವನ್ನು ಪಡೆಯಲಿದೆ.

ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧ ವಿಮಾನ ವಾಹಕ ಹಡಗನ್ನೇರಲಿರುವ ಮೋದಿ

ಇದೇ ಮೊದಲ ಬಾರಿಗೆ ಅತ್ಯಂತ ಶಕ್ತಿಶಾಲಿ ಯುದ್ಧ ನೌಕೆಗೆ ದೇಶದ ಪ್ರಧಾನಿಯ ಭೇಟಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಯುದ್ಧ ನೌಕೆಯ ಶಕ್ತಿಯ ಬಗ್ಗೆ ಪ್ರಧಾನಿಗೆ ಮನವರಿಕೆ ಮಾಡಿಕೊಡಲಾಗುವುದು.

ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧ ವಿಮಾನ ವಾಹಕ ಹಡಗನ್ನೇರಲಿರುವ ಮೋದಿ

ವರದಿಗಳ ಪ್ರಕಾರ ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಯುದ್ಧ ನೌಕೆಯಲ್ಲಿ ಕೆಲವು ಹೊತ್ತುಗಳ ಕಾಲ ಮೋದಿ ತಮ್ಮ ಪಯಣ ಬೆಳೆಸಲಿದ್ದಾರೆ. ಬಳಿಕ ಭಾರತೀಯ ಭೂ ಸೇನೆಗೂ ತಮ್ಮ ಭೇಟಿ ಹಮ್ಮಿಕೊಳ್ಳುವ ಮೂಲಕ ದೇಶದ ಶಕ್ತಿಯನ್ನು ಜಗತ್ತಿಗೆ ಸಾರಲಿದ್ದಾರೆ.

ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧ ವಿಮಾನ ವಾಹಕ ಹಡಗನ್ನೇರಲಿರುವ ಮೋದಿ

ಭಾರತದ ಸೇನೆಯ ಅತ್ಯಂತ ಶಕ್ತಿಶಾಲಿ ಚಿಹ್ನೆಯಾಗಿರುವ ಐಎನ್‌ಎಸ್ ವಿಕ್ರಮಾದಿತ್ಯ ಜಗತ್ತಿನ ಯಾವುದೇ ಮೂಲೆಗೂ ಬೇಕಾದರೂ ಆಕ್ರಮಣ ಕೈಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧ ವಿಮಾನ ವಾಹಕ ಹಡಗನ್ನೇರಲಿರುವ ಮೋದಿ

ಕ್ರಿಸ್ತ ಪೂರ್ವ ಒಂದನೇ ಶತಮಾನದಲ್ಲಿ ಭಾರತದ ಉಜ್ಜಯಿನಿಯ ಪೌರಾಣಿಕ ರಾಜನಾಗಿದ್ದ ವಿಕ್ರಮಾದಿತ್ಯ ಹೆಸರನ್ನು ಇದಕ್ಕೆ ಇಡಲಾಗಿದೆ. ಇಲ್ಲಿ ವಿಕ್ರಮಾದಿತ್ಯ ಎಂಬುದು 'ಸೂರ್ಯನಷ್ಟು ಧೈರ್ಯಶಾಲಿ' ಎಂಬ ಸಂಕೇತ ನೀಡುತ್ತದೆ.

ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧ ವಿಮಾನ ವಾಹಕ ಹಡಗನ್ನೇರಲಿರುವ ಮೋದಿ

ಭಾರತವು ರಷ್ಯಾ ಬಳಿಯಿಂದ 2004ನೇ ಇಸವಿಯಲ್ಲಿ ಬರೋಬ್ಬರಿ 2.35 ಬಿಲಿಯನ್ ಅಮೆರಿಕನ್ ಡಾಲರ್ ತೆತ್ತು ವಿಕ್ರಮಾದಿತ್ಯ ಯುದ್ಧ ಹಡಗನ್ನು ಖರೀದಿಸಿತ್ತು. ಬಳಿಕ 2013ನೇ ಸಾಲಿನಲ್ಲಿ ತನ್ನ ಯಶಸ್ವಿ ಪಯಣ ಹಮ್ಮಿಕೊಂಡಿತ್ತು.

ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧ ವಿಮಾನ ವಾಹಕ ಹಡಗನ್ನೇರಲಿರುವ ಮೋದಿ

1987ನೇ ಇಸವಿಯಲ್ಲಿ ಬಾಕು ಎಂದರಿಯಲ್ಪಟ್ಟಿದ್ದ ಇದೇ ಹಡಗು ಸೋವಿಯತ್ ಯೂನಿಯನ್‌ಗಾಗಿ ಸೇವೆ ಸಲ್ಲಿಸಿತ್ತು. ಆದರೆ ಸೋವಿಯತ್ ಒಕ್ಕೂಟದ ಪತನದ ಬಳಿಕ ಇದನ್ನು ನಿರ್ವಹಿಸುವುದು ತುಂಬಾನೇ ಕಷ್ಟಕರವೆನಿಸಿದ್ದರಿಂದ 1996ನೇ ಇಸವಿಯಲ್ಲಿ ಸೇವೆಯನ್ನು ನಿಲುಗಡೆಗೊಳಿಸಿತ್ತು. ವರ್ಷಗಳ ಬಳಿಕ ಇದನ್ನು ಖರೀದಿಸಲು ಭಾರತ ಉತ್ಸುಕತೆ ವ್ಯಕ್ತಪಡಿಸಿತ್ತು.

ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧ ವಿಮಾನ ವಾಹಕ ಹಡಗನ್ನೇರಲಿರುವ ಮೋದಿ

ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊತ್ಯೊಯ್ಯುವ ಸಾಮರ್ಥ್ಯ ಹೊಂದಿರುವ ಐಎನ್‌ಎಸ್ ವಿಕ್ರಮಾದಿತ್ಯ ಏಕಕಾಲದಲ್ಲಿ ಹಲವಾರು ಜೆಟ್ ಫೈಟರುಗಳನ್ನು ನಿಯಂತ್ರಿಸಬಹುದಾಗಿದೆ.


More from DriveSpark

Article Published On: Tuesday, June 10, 2014, 17:52 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+