ಮೆಟ್ರೋಗಿಂತಲೂ ಅಗ್ಗ; ಭಾರತಕ್ಕೆ ನಾಸಾ 'ಸ್ಕೈ ಟ್ರಾನ್'
ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ನಿಕಟ ಭವಿಷ್ಯದಲ್ಲೇ ಬಿಹಾರದಲ್ಲಿ ಸ್ಕೈ ಟ್ರಾನ್ ಸಂಚಾರ ವ್ಯವಸ್ಥೆಯ ಕನಸು ನನಸಾಗಲಾಗಿದೆ. ಅಮೆರಿಕದ ನಾಸಾ ಸಂಸ್ಥೆಯು ಸ್ಕೈ ಟ್ರಾನ್ ಆಯಸ್ಕಾಂತೀಯ ತೇಲುವಿಕೆ ಸಂಚಾರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ ಎಂಬುದು ಇಲ್ಲಿ ಗಮನಾರ್ಹ.
ಪ್ರಸ್ತುತ ಚಾಲ್ತಿಯಲ್ಲಿರುವ ಮೆಟ್ರೋ ಹಾಗೂ ಮೊನೊ ರೈಲುಗಳಿಗೆ ಹೋಲಿಸಿದಾಗ ಇದರ ನಿರ್ಮಾಣ ವೆಚ್ಚ ಅಗ್ಗವಾಗಿರುವುದು ಮಗದೊಂದು ಮಹತ್ವದ ಅಂಶವಾಗಿದೆ. ಈ ಬಗ್ಗೆ ಸಮಗ್ರ ಮಾಹಿತಿಗಳನ್ನು ಇಲ್ಲಿ ಕೊಡಲಾಗುವುದು.

ಈ ಸಂಬಂಧ ನಗರಾಭಿವೃದ್ಧಿ ಹಾಗೂ ವಸತಿ ಇಲಾಖೆ ಸಚಿವ ಮಹೇಶ್ವರ್ ಹಜಾರಿ ಜೊತೆಗೆ ನೈಟ್ ಶೇಡ್ ಗ್ಲೋಬಲ್ ಇನ್ಪ್ರಾ ಪ್ರೈವೇಟ್ ಲಿಮಿಟೆಡ್ ಮಾತುಕತೆಯನ್ನು ಆರಂಭಿಸಿದೆ. ದಕ್ಷಿಣ ಪೂರ್ವ ಏಷ್ಯಾದಲ್ಲಿ ನಾಸಾ ಸ್ಕೈಟ್ರಾನ್ ಗಳನ್ನು ಆಳವಡಿಸುವ ಹಕ್ಕುಗಳನ್ನು ಈ ಸಂಸ್ಥೆಯು ಪಡೆದಿದೆ.

ಪೊಡ್ ಸಂಚಾರ ವ್ಯವಸ್ಥೆಗೆ ಸಮಾನವಾದ ಸ್ಕೈ ಟ್ರಾನ್ ಗಲು ಆಯಸ್ಕಾಂತೀಯ ತೇಲುವಿಕೆ ಸಿದ್ಧಾಂತವನ್ನು ಹೊಂದಿದೆ. ಇದು ನೆಲದಿಂದ ಆರು ಮೀಟರ್ ಗಳಷ್ಟು ಎತ್ತರದಲ್ಲಿರಲಿದೆ. ಇದು ವಿದ್ಯುತ್ ಕಂಬದ ಎತ್ತರಕ್ಕೆ ಸಮಾನವಾಗಿದೆ.

ಎಲ್ಲ ಸ್ಕೈಟ್ರಾನ್ ಪೊಡ್ ಗಳಲ್ಲಿ ನಾಲ್ಕು ಮಂದಿ ಪ್ರಯಾಣಿಕರಿಗೆ ಆರಾಮದಾಯವಾಗಿ ಸಂಚರಿಸಬಹುದಾಗಿದೆ.

ಕಡಿಮೆ ವಿದ್ಯುತ್
ಸಂಸ್ಥೆಯ ಪ್ರಕಾರ ಸ್ಕೈಟ್ರಾನ್ ಪೊಡ್ ಗಳಿಗೆ ಕಡಿಮೆ ವಿದ್ಯುತ್ ವ್ಯಯವಾಗಲಿದೆ. ಅಂದರೆ ಪೊಡ್ ಗಳನ್ನು ಚಾರ್ಜ್ ಮಾಡಿಸಲು 10 ಕೆ.ವಿ ವಿದ್ಯುತ್ ಮಾತ್ರ ಬಳಕೆಯಾಗಲಿದೆ.

ವೇಗ
ನಗರ ಹಾಗೂ ಉಪನಗರಗಳಲ್ಲಿ ಗಂಟೆಗೆ 120ರಿಂದ 140 ಕೀ.ಮೀ. ಅಂತೆಯೇ ತೆರೆದ ಜಾಗಗಳಲ್ಲಿ ಗಂಟೆಗೆ 240 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಮೆಟ್ರೋಗಿಂತಲೂ ವೇಗ ಹಾಗೂ ಕಡಿಮೆ ವೆಚ್ಚದ ಸ್ಕೈ ಟ್ರಾನ್ ಪ್ರತಿ ಕೀ.ಮೀ. ನಿರ್ಮಾಣಕ್ಕೆ 90ರಿಂದ 120 ಕೋಟಿ ರುಪಾಯಿಗಳಷ್ಟು ವೆಚ್ಚ ತಗುಲಲಿದೆ. ಇನ್ನೊಂದೆಡೆ ಪ್ರತಿ ಕೀ.ಮೀ. ಮೆಟ್ರೋ ಹಾಗೂ ಮೊನೊ ರೈಲು ನಿರ್ಮಾಣಕ್ಕೆ ಅಂದಾಜು 250ರಿಂದ 500 ಕೋಟಿ ರುಪಾಯಿಗಳ ವೆಚ್ಚ ಬೇಕಾಗುತ್ತದೆ.

ಇವೆಲ್ಲವೂ ಆಟೋಮ್ಯಾಟಿಕ್ ತಂತ್ರಗಾರಿಕೆಯಲ್ಲಿ ಕಾರ್ಯ ನಿರ್ವಹಿಸಲಿದೆ. ಅಂದರೆ ಪೊಡ್ ಒಳಗಡೆ ಪ್ರವೇಶಿಸಿದ ಪ್ರಯಾಣಿಕರು ತಮಗೆ ತಲುಪಬೇಕಾದ ಸ್ಟೇಷನ್ ಬಟನ್ ಒತ್ತಿದರೆ ಸಾಕು. ಇದರಲ್ಲಿ ಆಳವಡಿಸಲಾಗಿರುವ ಕಂಪ್ಯೂಟರ್ ತಂತ್ರಜ್ಞಾನವು ನಿಮ್ಮನ್ನು ಗುರಿ ಮುಟ್ಟಿಸಲಿದೆ.

ಹೊಸ ತಂತ್ರಜ್ಞಾನದ ಅವಿಷ್ಕಾರದೊಂದಿಗೆ ನಗರದ ವಾಹನ ದಟ್ಟಣೆ ಸಮಸ್ಯೆಗಳಿಗೆ ಪರಿಹಾರವಾಗಲಿದೆ. ಅಲ್ಲದೆ ನಿರ್ವಹಣೆ ವೆಚ್ಚವೂ ಕಡಿಮೆಯಾಗಿದ್ದು, ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಂಡಿದೆ.


Click it and Unblock the Notifications








