ನಾಝಿ ಚಿನ್ನದ ರೈಲಿಗಾಗಿ ಭೂಗತ ಶೋಧ ಕಾರ್ಯ; ಬಯಲಾದಿತೇ ಸತ್ಯಾಸತ್ಯತೆ?

By Nagaraja

ಎರಡನೇ ಜಾಗತಿಕ ಮಹಾ ಯುದ್ಧದ ಕಾಲಘಟ್ಟದಲ್ಲಿ ನಾಪತ್ತೆಯಾಗಿದೆ ಎನ್ನಲಾಗುತ್ತಿರುವ ನಾಝಿ ಚಿನ್ನದ ರೈಲಿಗಾಗಿ ಶೋಧ ಕಾರ್ಯವನ್ನು ಪೊಲೆಂಡ್ ನಲ್ಲಿ ಆರಂಭಿಸಲಾಗಿದೆ.

ನಾಝಿ ಪಕ್ಷವೆಂದೇ ಖ್ಯಾತಿ ಪಡೆದಿರುವ ನ್ಯಾಷನಲ್ ಸೋಷಿಯಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿಯ ಸಂಸ್ಥಾಪಕರಾಗಿರುವ ಅಡಾಲ್ಫ್ ಹಿಟ್ಲರ್ ಕೊಳ್ಳೆ ಹೊಡೆದಿರುವ ಅಪಾರ ಪ್ರಮಾಣದ ಧನ, ಚಿನ್ನಾಭರಣಗಳು ಪೊಲೆಂಡ್ ನಲ್ಲಿ ಹೂತು ಹೋಗಿದೆ ಎಂದು ಶಂಕಿಸಲಾಗಿದೆ. ಈ ಸಂಬಂಧ ನಿಧಿ ಶೋಧಕರು ಸಂಶೋಧನೆ ಆರಂಭಿಸಿದ್ದಾರೆ.

ನಾಝಿ ಚಿನ್ನದ ರೈಲಿಗಾಗಿ ಭೂಗತ ಶೋಧ ಕಾರ್ಯ; ಬಯಲಾದಿತೇ ಸತ್ಯಾಸತ್ಯತೆ?

ಮಹಾ ಯುದ್ಧದಲ್ಲಿ ಸೋಲಿನ ಅಂಚಿಗೆ ತಲುಪಿದ್ದ ಹಿಟ್ಲರ್ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ಶತ್ರು ಪಾಳೇಯಕ್ಕೆ ಸಿಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಹೂತಿಟ್ಟಿದ್ದರು. ಆದರೆ ಇದಕ್ಕೆಲ್ಲ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.

ನಾಝಿ ಚಿನ್ನದ ರೈಲಿಗಾಗಿ ಭೂಗತ ಶೋಧ ಕಾರ್ಯ; ಬಯಲಾದಿತೇ ಸತ್ಯಾಸತ್ಯತೆ?

ಈ ರೈಲಿಗೆ ಸರಿ ಸುಮಾರು 70 ವರ್ಷಗಳ ಇತಿಹಾಸವಿದ್ದು, ಭೂಮಿಯೊಳಗೆ 26ರಿಂದ 28 ಅಡಿ ಆಳದಲ್ಲಿ ರೈಲು ಹೂತು ಹೋಗಿದೆಯೆಂದು ಸಂಶೋಧಕರು ಘೋಷಣೆ ಮಾಡಿರುವುದು ಮತ್ತಷ್ಟು ರೋಚಕತೆ ಸೃಷ್ಟಿ ಮಾಡಿದೆ.

ನಾಝಿ ಚಿನ್ನದ ರೈಲಿಗಾಗಿ ಭೂಗತ ಶೋಧ ಕಾರ್ಯ; ಬಯಲಾದಿತೇ ಸತ್ಯಾಸತ್ಯತೆ?

ಕಳೆದ ವರ್ಷ ರಾಡಾರ್ ಮುಖಾಂತರ ಸಂಶೋಧನೆ ನಿರತರಾಗಿದ್ದ ಆಂಡ್ರೆಯಾಸ್ ರಿಕ್ಟರ್ ಮತ್ತು ಪೊಲೆಂಡ್ ನ ಪಿಯಾಟ್ರ ಕೋಪೆರ್ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಬಯಲು ಮಾಡಿದ್ದರು.

ನಾಝಿ ಚಿನ್ನದ ರೈಲಿಗಾಗಿ ಭೂಗತ ಶೋಧ ಕಾರ್ಯ; ಬಯಲಾದಿತೇ ಸತ್ಯಾಸತ್ಯತೆ?

ಇದರಂತೆ ವ್ರೊಕ್ಲಾ ಮತ್ತು ವಾಲ್ಬ್ ಝಿಕ್ ನಡುವಣ ರೈಲ್ವೇ ಹಳಿಯಲ್ಲಿ ಖಾಸಗಿ ಅನುದಾನಿತ 35ರಷ್ಟು ಸಂಶೋಧಕರ ತಂಡವು ನಿರಂತರ ಶೋಧನಾ ಕಾರ್ಯವನ್ನು ಆರಂಭಿಸಿದೆ.

ನಾಝಿ ಚಿನ್ನದ ರೈಲಿಗಾಗಿ ಭೂಗತ ಶೋಧ ಕಾರ್ಯ; ಬಯಲಾದಿತೇ ಸತ್ಯಾಸತ್ಯತೆ?

ಮಗದೊಂದು ಮೂಲದ ಪ್ರಕಾರ 1940ರ ದಶಕದಲ್ಲಿ ಪೂರ್ವ ಯುರೋಪ್ ನಿಂದ ಕೊಳ್ಳೆ ಹೊಡೆದ ಸಂಪತ್ತುಗಳನ್ನು ರೈಲು ಮೂಲಕ ಬರ್ಲಿನ್ ಗೆ ಸಾಗಿಸಲಾಗುತ್ತಿತ್ತು.

ನಾಝಿ ಚಿನ್ನದ ರೈಲಿಗಾಗಿ ಭೂಗತ ಶೋಧ ಕಾರ್ಯ; ಬಯಲಾದಿತೇ ಸತ್ಯಾಸತ್ಯತೆ?

ಪ್ರಸ್ತುತ ನಾಪತ್ತೆಯಾಗಿರುವ ರೈಲು 300 ಟನ್ ಗಳಷ್ಟು ಚಿನ್ನಾಭರಣಗಳನ್ನು ಸಾಗಿಸಲಾಗುತ್ತಿತ್ತು ಎಂಬುದನ್ನು ಊಹೆ ಮಾಡಲಾಗಿದೆ. ಆದರೆ ಇದ್ಯಾವುದೂ ದೃಢಪಟ್ಟಿಲ್ಲ.

ನಾಝಿ ಚಿನ್ನದ ರೈಲಿಗಾಗಿ ಭೂಗತ ಶೋಧ ಕಾರ್ಯ; ಬಯಲಾದಿತೇ ಸತ್ಯಾಸತ್ಯತೆ?

ಈ ನಡುವೆ ರೈಲಿನಲ್ಲಿ ಸ್ಪೋಟಕ ವಸ್ತುಗಳು, ಶಸ್ತ್ರಾಸ್ತ್ರಗಳನ್ನು ಸಾಗಿಸಲು ಯತ್ನ ನಡೆದಿತ್ತು ಎಂಬುದರ ಬಗ್ಗೆಯೂ ಭೀತಿ ಕಾಡಿದೆ.

ನಾಝಿ ಚಿನ್ನದ ರೈಲಿಗಾಗಿ ಭೂಗತ ಶೋಧ ಕಾರ್ಯ; ಬಯಲಾದಿತೇ ಸತ್ಯಾಸತ್ಯತೆ?

ಒಟ್ಟಿನಲ್ಲಿ ವೈಜ್ಞಾನಿಕ ಅಧ್ಯಯನದಲ್ಲಿ ಅಂತಹ ರೈಲಿನ ಯಾವುದೇ ಪುರಾವೆಗಳಿಲ್ಲ ಎಂದು ಘೋಷಿಸಿದ್ದರೂ ಛಲ ಬಿಡದ ಸಂಶೋಧಕರು ನಾಝಿ ರೈಲಿನ ಸತ್ಯಾಸತ್ಯತೆಯನ್ನು ಬಯಲು ಮಾಡಲು ಹೊರಟಿರುವುದು ಬಹಳಷ್ಟು ಕುತೂಹಲ ಕೆರಳಿಸಿದೆ.

More from DriveSpark

Article Published On: Wednesday, August 17, 2016, 16:15 [IST]
English summary
Nazi 'Gold Train' hunt in Poland
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+