Nelson Dilipkumar: ಅಂದು ಸಾಮಾನ್ಯ ಹುಡುಗ, ಇಂದು ಸ್ಟಾರ್ ಡೈರೆಕ್ಟರ್.. ಕೋಟಿ ಬೆಲೆ ಪೋರ್ಷೆ ಕಾರು ಗಿಫ್ಟ್ ಸಿಕ್ತು!
ನಟ ರಜನಿಕಾಂತ್ (Rajinikanth) ನಟನೆಯ ಜೈಲರ್ (Jailer) ಸಿನಿಮಾ ಸೂಪರ್ ಹಿಟ್ ಆಗಿದ್ದು, ಇಡೀ ಚಿತ್ರತಂಡ ಯಶಸ್ಸಿನ ಸಂಭ್ರಮದಲ್ಲಿದೆ. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವುದರಿಂದ ಸನ್ ಪಿಕ್ಚರ್ಸ್ ಮುಖ್ಯಸ್ಥ ಕಲಾನಿತಿ ಮಾರನ್, ಸಿನಿಮಾದ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್‌ಗೆ ದುಬಾರಿ ಬೆಲೆಯ ಪೋರ್ಷೆ ಕಾರನ್ನು ಗಿಫ್ಟ್ ನೀಡಿದ್ದಾರೆ.
ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆಯೊಂದಿಗೆ 'ಜೈಲರ್' ತಮಿಳು ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ. ಇದರಿಂದ ಖುಷಿಯಾಗಿರುವ ಚಿತ್ರ ನಿರ್ಮಾಣ ಸಂಸ್ಥೆ 'ಸನ್ ಪಿಕ್ಚರ್ಸ್' ಮಾಲೀಕರು, ನಟ ರಜನಿಕಾಂತ್ ಬಳಿಕ, ಸಿನಿಮಾ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರಿಗೆ ದೊಡ್ಡ ಮೊತ್ತದ ಚೆಕ್, ದುಬಾರಿ ಬೆಲೆಯ ಹೊಚ್ಚ ಹೊಸ ಪೋರ್ಷೆ (Porsche) ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.

ವರದಿ ಪ್ರಕಾರ, ರಜನಿಕಾಂತ್ ಅವರಿಗೆ ರೂ.100 ಕೋಟಿ ಚೆಕ್ ಹಾಗೂ ಬಿಎಂಡಬ್ಲ್ಯೂ ಕಾರನ್ನು ಸನ್ ಪಿಕ್ಚರ್ಸ್ ಮುಖ್ಯಸ್ಥ ಕಲಾನಿತಿ ಮಾರನ್ ಗಿಫ್ಟ್ ನೀಡಿದ್ದಾರೆ. ಆದರೆ, ಆ ಮೊತ್ತದ ಬಗ್ಗೆ ಎಲ್ಲಿಯೂ ಸಿನಿ ನಿರ್ಮಾಣ ಸಂಸ್ಥೆ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಚಿತ್ರದ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರಿಗೂ ರೂ.1.5 ಕೋಟಿ ಬೆಲೆಯ 'ಪೋರ್ಷೆ ಕಯೆನ್ನೆ' ಕಾರು ಉಡುಗೊರೆಯಾಗಿ ಸಿಕ್ಕಿದೆ.
ಸದ್ಯ, ನೆಲ್ಸನ್ ಗಿಫ್ಟ್ ಪಡೆದಿರುವ ವಿಶ್ವದ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿರುವ ಕಪ್ಪು ಬಣ್ಣದ ಪೋರ್ಷೆ ಮ್ಯಾಕನ್ ವಿಶೇಷತೆಗಳ ಬಗ್ಗೆ ತಿಳಿಯೋಣ. ಈ ಕಾರು, ಭಾರತದ ಮಾರುಕಟ್ಟೆಯಲ್ಲಿ ರೂ.88.06 ಲಕ್ಷದಿಂದ ರೂ.1.53 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಪ್ರಮುಖವಾಗಿ ಮೂರು ರೂಪಾಂತರಗಳ ಆಯ್ಕೆಯಲ್ಲಿ ಸಿಗುತ್ತದೆ.
ಅವುಗಳೆಂದರೆ, ಎಂಟ್ರಿ ಲೆವೆಲ್ ವೇರಿಯೆಂಟ್ ಮ್ಯಾಕನ್ (Macan), ಮಿಡ್ ವೇರಿಯೆಂಟ್ ಮ್ಯಾಕನ್ ಎಸ್ (Macan S) ಹಾಗೂ ಟಾಪ್ ಎಂಡ್ ಮಾಡೆಲ್ ಮ್ಯಾಕನ್ ಜಿಟಿಎಸ್ (Macan GTS). ಐದು ಆಸನಗಳನ್ನು ಹೊಂದಿರುವ ಈ ಕಾರು, AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನದೊಂದಿಗೆ ಗ್ರಾಹಕರಿಗೆ ಲಭ್ಯವಿದೆ. ವಿನ್ಯಾಸ ದೃಷ್ಟಿಯಿಂದ ನೋಡುಗರನ್ನು ತನ್ನತ್ತ ಸೆಳೆಯುವ ಲುಕ್ ಪಡೆದಿದೆ.
ಪೋರ್ಷೆ ಮ್ಯಾಕನ್ ಪವರ್‌ಟ್ರೇನ್ ಬಗ್ಗೆ ಮಾತನಾಡುವುದಾದರೆ, ಇದರ ಹೈ ಎಂಡ್ ರೂಪಾಂತರ ಮ್ಯಾಕನ್ ಜಿಟಿಎಸ್ 2.9 - ಲೀಟರ್ ಟ್ವಿನ್ ಟರ್ಬೊ ವಿ6 ಪೆಟ್ರೋಲ್ ಎಂಜಿನ್ ಹೊಂದಿದ್ದು, 440 PS ಗರಿಷ್ಠ ಪವರ್ ಹಾಗೂ 550 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮಿಡ್ ಮೇರಿಯೆಂಟ್ ಮ್ಯಾಕನ್ ಎಸ್ ಅದೇ ಎಂಜಿನ್ ಹೊಂದಿದೆ. ಆದರೆ, 380 PS ಪವರ್, 520 Nm ಪೀಕ್ ಟಾರ್ಕ್ ಹೊರಹಾಕುತ್ತದೆ.
ಎಂಟ್ರಿ ಲೆವೆಲ್ ವೇರಿಯೆಂಟ್ ಮ್ಯಾಕನ್, 2 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 265 PS ಗರಿಷ್ಠ ಪವರ್ ಹಾಗೂ 400 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 7 - ಸ್ವೀಡ್ ಡುಯೆಲ್ ಕ್ಲಚ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ. ಸರಿ ಸುಮಾರು 11.24 kmpl ಮೈಲೇಜ್ ನೀಡುತ್ತದೆ.
ಪೋರ್ಷೆ ಮ್ಯಾಕನ್, ಬೆಲೆಗೆ ತಕ್ಕಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದುವ ಮೂಲಕ ಹೆಚ್ಚು ಆಕರ್ಷಣೀಯವಾಗಿದೆ. 10.9 - ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಕನೆಕ್ಟ್ದ್ ಕಾರ್ ಟೆಕ್, 21 - ಇಂಚಿನ ಅಲಾಯ್ ವೀಲ್ಸ್, 8 - ವೇ ಅಡ್ಜಸ್ಟ್ಏಬಲ್ ಸೀಟ್ ಸೇರಿದಂತೆ ವಿವಿಧ ಫೀಚರ್ಸ್ ಹೊಂದಿದೆ. ಈ ಕಾರಿಗೆ ಜಾಗ್ವಾರ್ ಎಫ್ ಪೇಸ್ ಸೇರಿದಂತೆ ವಿವಿಧ ಕಾರುಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಇನ್ನು, ಸಾಮಾನ್ಯ ಕುಟುಂಬದಿಂದ ಚಿತ್ರರಂಗಕ್ಕೆ ಬಂದಿರುವ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಅವರು, ವಿಶುವಲ್ ಕಮ್ಯುನಿಕೇಷನ್ ವಿಷಯದಲ್ಲಿ ಪದವಿ ಪಡೆದಿದ್ದು, 'ಸ್ಟಾರ್ ವಿಜಯ್' ವಾಹಿನಿಯಲ್ಲಿ ಸ್ಕ್ರಿಪ್ಟ್ ರೈಟರ್ ಆಗಿ ತಮ್ಮ ವೃತ್ತಿಜೀವನವನ್ನು ಶುರು ಮಾಡಿದ್ದರು. 2018ರಲ್ಲಿ ಅವರು, ಆಕ್ಷನ್ ಕಟ್ ಹೇಳಿದ್ದ ಕೋಲಮಾವು ಕೋಕಿಲ ಸಿನಿಮಾ, ಭರ್ಜರಿಯಾಗಿ ಹಿಟ್ ಆಗಿತ್ತು. ಈಗ ಜೈಲರ್ ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆ ಹೊಡೆಯುತ್ತಿದೆ.


Click it and Unblock the Notifications