ನಾಳೆಯಿಂದ 100 ಹೊಸ KSRTC ಅಶ್ವಮೇಧ ಬಸ್‌ಗಳು ಕಾರ್ಯಾರಂಭ: ಕಮ್ಮಿ ಖರ್ಚಿನಲ್ಲಿ ನಿಮ್ಮೂರಿಗೆ ಹೋಗಬಹುದು!
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ - KSRTC), ತನ್ನ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ನಾಳೆಯಿಂದ (ಫೆ.5) ನೂತನ 100 ಅಶ್ವಮೇಧ (Ashvamedha) ಬಸ್‌ಗಳು ಕಾರ್ಯಾರಂಭ ಮಾಡಲಿವೆ. ಕರ್ನಾಟಕ ಸಾರಿಗೆ ನಾನ್-ಎಸಿ ಬಸ್‌ಗಳನ್ನು ಮೇಲ್ದರ್ಜೆರಿಸಲಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಬೆಂಗಳೂರಿನ ವಿಧಾನಸೌಧ ಮುಂಭಾಗ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು, ಹೊಸ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಸ್‌ಗಳಿಗೆ ಅಶ್ವಮೇಧ ಕ್ಲಾಸಿಕ್ (Ashvamedha Classic) ಎಂದು ನಾಮಕರಣ ಮಾಡಲಾಗಿದ್ದು, 'ಪ್ರಯಾಣದ ಮರುಕಲ್ಪನೆ' ಎಂಬ ಘೋಷ ವಾಕ್ಯವನ್ನು ಹೊಂದಿವೆ. ರಾಜಧಾನಿ ಬೆಂಗಳೂರು ಹಾಗೂ ಜಿಲ್ಲಾ ಕೇಂದ್ರಗಳ ನಡುವೆ ಸಂಚರಿಸಲಿವೆ.

ಈ ಬಸ್‌ಗಳು 52 ಆಸನಗಳನ್ನು ಒಳಗೊಂಡಿದ್ದು, ಮುಂಭಾಗ ಮತ್ತು ಹಿಂಭಾಗದ ಎಲ್‌ಇಡಿ ಡೆಸ್ಟಿನೇಶನ್ ಬೋರ್ಡ್‌ಗಳನ್ನು ಪಡೆದಿರುತ್ತವೆ. ಜೊತೆಗೆ ಇವು ಸೆನ್ಸರ್ ಚಾಲಿತ ನ್ಯೂಮ್ಯಾಟಿಕ್ ಡೋರ್ (ಬಾಗಿಲು) ಮತ್ತು ಎಮರ್ಜೆನ್ಸಿ ಬಟನ್ (emergency button), ಮ್ಯಾಗಜೀನ್ (ನಿಯತಕಾಲಿಕೆ) ಮತ್ತು ವಾಟರ್ ಬಾಟಲ್ (ನೀರಿನ ಬಾಟಲಿ) ಇಡಲು ಪೌಚ್ ಅನ್ನು ಸಹ ಹೊಂದಿದೆ.
ಈ ಹಿಂದೆ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಅನ್ಬುಕುಮಾರ್ ಅವರು, '20 ಅಂಬಾರಿ ಉತ್ಸವ, 20 ಐರಾವತ ಕ್ಲಬ್ ಕ್ಲಾಸ್, 100 ಪಲ್ಲಕಿ ನಾನ್ ಎಸಿ ಸ್ಲೀಪರ್, 500 ಎಲೆಕ್ಟ್ರಿಕ್ ಮತ್ತು 1000 ಕರ್ನಾಟಕ ಸಾರಿಗೆ ಬಸ್‌ಗಳನ್ನು ಈ ವರ್ಷ ಸೇವೆಗೆ ನಿಯೋಜಿಸಲಾಗುವುದು. ಇದರೊಂದಿಗೆ 1000 ಬಸ್‌ಗಳನ್ನು ನವೀಕರಿಸಲಾಗುವುದು ಎಂದು ಹೇಳಿದ್ದರು.
ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಕೆಎಸ್‌ಆರ್‌ಟಿಸಿ, ಕಡಿಮೆ ಖರ್ಚಿನ 40 ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್‌ಗಳನ್ನು ಪರಿಚಯಿಸಿತ್ತು. ಇವುಗಳಲ್ಲಿ ಪ್ರಯಾಣಿಕರಿಂದ ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಪಲ್ಲಕ್ಕಿ ಬಸ್‌ಗಳು 30 ಸ್ಲೀಪರ್ ಬರ್ತ್‌ಗಳನ್ನು ಹೊಂದಿದ್ದು, ಪ್ರೀಮಿಯಂ ಅಂಬಾರಿ ಉತ್ಸವ ಬಸ್‌ಗಳಂತೆಯೇ ಸೌಕರ್ಯವನ್ನು ಒಳಗೊಂಡಿವೆ.
ಬೆಂಗಳೂರಿನಿಂದ ಹತ್ತಿರದ ಜಿಲ್ಲೆಗಳ ಪ್ರಯಾಣಕ್ಕಾಗಿ 300 ಎಲೆಕ್ಟ್ರಿಕ್ ಬಸ್ ಗಳನ್ನು ಬಿಡಲು ಕೆಎಸ್‌ಆರ್‌ಟಿಸಿ ಯೋಜಿಸುತ್ತಿದೆ ಎಂದು ಸಹ ಈ ಹಿಂದೆ ವರದಿಯಾಗಿತ್ತು ಇದರಿಂದ ಬೆಂಗಳೂರು ಸುತ್ತಮುತ್ತಲಿರುವ ಜಿಲ್ಲೆಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮೂಲಗಳು ಹೇಳಿದ್ದವು. ಮುಂಬರಲಿರುವ ಈ ನಾನ್-ಎಸಿ ಎಲೆಕ್ಟ್ರಿಕ್ ಬಸ್‌ಗಳು, ಪೂರ್ತಿ ಚಾರ್ಜ್ ನಲ್ಲಿ 180 ಕಿ.ಮೀ ಕ್ರಮಿಸಲಿವೆ ಎನ್ನಲಾಗಿದೆ.
ಬೆಂಗಳೂರಿನಿಂದ ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಕೆಎಸ್ಆರ್ಟಿಸಿಯ ಪ್ರೀಮಿಯಂ ಅಂಬಾರಿ ಉತ್ಸವ (Ambari Utsav), ಅಂಬಾರಿ ಡ್ರೀಮ್ ಕ್ಲಾಸ್ (Ambari Dream Class) ಹಾಗೂ ಐರಾವತ (Airavat) ಹವಾನಿಯಂತ್ರಿತ (Air-Conditioned) ಬಸ್‌ಗಳು ಓಡಾಟ ನಡೆಸುತ್ತಿವೆ. ಒಟ್ಟಾರೆ, ಪ್ರಯಾಣಿಕರಿಗೆ ಸದಾ ಉತ್ತಮ ಸೌಕರ್ಯವನ್ನು ಒದಗಿಸಲು ಕೆಎಸ್‌ಆರ್‌ಟಿಸಿ ವಿವಿಧ ಬಸ್ ಗಳನ್ನು ಬಿಡುವ ಮೂಲಕ ಹಲವು ಸಾರಿಗೆ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications