New Vande Bharat: ಈ ವರ್ಷ 60 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಹಳಿಗೆ.. ಕರ್ನಾಟಕಕ್ಕೆ ದೊಡ್ಡ ಪಾಲು?

ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಸೆಮಿ - ಹೈಸ್ವೀಡ್ ರೈಲಾಗಿ ಖ್ಯಾತಿಗಳಿಸಿದೆ. ಈ ವರ್ಷ (2024) 14 ರಾಜ್ಯಗಳು ಸೇರಿದಂತೆ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 60 ನೂತನ ವಂದೇ ಭಾರತ್ ರೈಲುಗಳನ್ನು ಪರಿಚಯಿಸಲು ರೈಲ್ವೆ ಇಲಾಖೆ ಯೋಜಿಸುತ್ತಿದೆ.

ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಹಳಿಗೆ ತರುವ ಸಂಬಂಧ ಚರ್ಚೆ ನಡೆಯುತ್ತಿದೆ ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. 2024ರಲ್ಲಿಯೇ ಸುಮಾರು 70 ರೈಲುಗಳು ವಿವಿಧ ರೈಲ್ವೆ ವಲಯಗಳಿಗೆ ಸೇರ್ಪಡೆಯಾಗುವ ನಿರೀಕ್ಷೆಯಿದೆ. ಸುಮಾರು 60 ವಂದೇ ಭಾರತ್ ರೈಲು ನವೆಂಬರ್ 15ರ ಮೊದಲೇ ಕಾರ್ಯಾಚರಣೆ ಆರಂಭಿಸಬಹುದು ಎನ್ನಲಾಗಿದೆ.

New Vande Bharat

ವಿವಿಧ ರಾಜ್ಯ ಸರ್ಕಾರ, ರೈಲ್ವೆ ಅಧಿಕಾರಿಗಳು ಮತ್ತು ಪರಿಣಿತರು ಹಲವು ಸುತ್ತಿನ ಚರ್ಚೆ ಹಾಗೂ ಅಧ್ಯಯನದ ಆಧಾರದ ಮೇಲೆ ಭಾರತೀಯ ರೈಲ್ವೆ 'ವಂದೇ ಭಾರತ್' ರೈಲಿನ ಮಾರ್ಗಗಳನ್ನು ನಿಗದಿಪಡಿಸುತ್ತಿದೆ. ಇಲ್ಲಿಯವರೆಗೆ ಪ್ರಮುಖ 35 ಮಾರ್ಗಗಳನ್ನು ಗುರುತಿಸಲಾಗಿದ್ದು, ಅಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯನ್ನು ಆರಂಭಿಸಬಹುದು. ಇನ್ನೂ 50 ಮಾರ್ಗಗಳಲ್ಲಿ ಸಂಚಾರ ಶುರು ಮಾಡುವ ಕುರಿತು ಅಧ್ಯಯನಗಳು ನಡೆಸುತ್ತಿವೆ ಎಂದು ತಿಳಿದುಬಂದಿದೆ.

ರೈಲ್ವೆ ಇಲಾಖೆಯು ಪ್ರಯಾಣಿಯರ ಬೇಡಿಕೆ ಆಧಾರದ ಮೇಲೆ ಹೊಸ ಮಾರ್ಗಗಳನ್ನು ಗುರುತಿಸುವ ಜವಾಬ್ದಾರಿಯನ್ನು ಜೋನ್ಸ್ (ವಲಯ) ಚೀಫ್ ಪ್ಯಾಸೆಂಜರ್ ಟ್ರಾನ್ಸ್ ಪೋರ್ಟ್ ಮ್ಯಾನೇಜರ್ ಗಳಿಗೆ ನೀಡಿದೆ. ವಿಮಾನಸೇವೆ ದುಬಾರಿಯಾಗಿದ್ದು, ಕೆಲವೊಂದು ದೊಡ್ಡ ನಗರಗಳಲ್ಲಿ ವಾಯುಸಂಪರ್ಕ ಜಾಲವಿಲ್ಲ. ಅಂತಹ ಕಡೆಗಳಲ್ಲಿ ವಂದೇ ಭಾರತ್ ರೈಲುಗಳನ್ನು ನೀಡಲು ಭಾರತೀಯ ರೈಲ್ವೆ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ.

New Vande Bharat

ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಬಿಹಾರ ಹಾಗೂ ಕೇರಳ ರಾಜ್ಯ ಸರ್ಕಾರಗಳು, ಸಂಭಾವ್ಯ ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಆರಂಭಿಸುವಂತೆ ರೈಲ್ವೆ ಇಲಾಖೆಯನ್ನು ಸಂಪರ್ಕಿಸಿವೆ ಎಂದು ಮತ್ತೋರ್ವ ಅಧಿಕಾರಿ ಹೇಳಿದ್ದಾರೆ ಎಂದು ಮನಿ ಕಂಟ್ರೋಲ್ ತಿಳಿಸಿದೆ. ಸದ್ಯ, ಲಭ್ಯವಿರುವ ಮಾಹಿತಿ ಪ್ರಕಾರ, ರೈಲ್ವೆ ಇಲಾಖೆಯು ಈ ವರ್ಷದ ಜೂನ್ ತಿಂಗಳೊಳಗೆ 18 ನೂತನ ವಂದೇ ಭಾರತ್ ರೈಲುಗಳನ್ನು ಆರಂಭಿಸಬಹುದು.

ಆ ಬಳಿಕ, ಅಂದರೆ ಜುಲೈನಿಂದ ಪ್ರತಿ 15 ದಿನಗಳಿಗೊಮ್ಮೆ 4 ಹೊಸ ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ ಪ್ರಾರಂಭಿಸುವ ಸಾಧ್ಯತೆಯಿದೆ. ಹಾಗೆಯೇ, ಭಾರತೀಯ ರೈಲ್ವೆ ಉತ್ತರ ಭಾರತದ ರಾಜ್ಯಗಳಲ್ಲಿ 34 ಹಾಗೂ ದಕ್ಷಿಣ ಭಾರತದ ರಾಜ್ಯಗಳಲ್ಲಿ 25 ಹೊಸ ವಂದೇ ಭಾರತ್ ರೈಲುಗಳನ್ನು ಶುರು ಮಾಡಲು ಯೋಜಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ವರ್ಷ, ಮುಂಬೈ-ಶೇಗಾಂವ್, ಪುಣೆ-ಶೇಗಾಂವ್, ಬೆಳಗಾವಿ-ಪುಣೆ, ರಾಯ್ ಪುರ-ವಾರಣಾಸಿ, ಕೋಲ್ಕತ್ತಾ-ರೂರ್ಕೆಲಾ, ವಡೋದರಾ-ಪುಣೆ, ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ ಆರಂಭಿಸುವ ನೀರಿಕ್ಷೆಯಿದೆ. ಕರ್ನಾಟಕಕ್ಕೆ ಎಷ್ಟು ರೈಲುಗಳು ಸಿಗಲಿವೆ ಎಂಬುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆ. ಜನವರಿ 15ರ ವೇಳೆಗೆ ಭಾರತದಾದ್ಯಂತ 41 ವಂದೇ ಭಾರತ್ ರೈಲುಗಳು ಕಾರ್ಯಚರಣೆ ನಡೆಸುತ್ತಿವೆ.

2047ರ ವೇಳೆಗೆ 4,500 ವಂದೇ ಭಾರತ್ ರೈಲುಗಳನ್ನು ಓಡಿಸಲು ಕೇಂದ್ರ ಸರ್ಕಾರ ಯೋಜಿಸಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಅವರು ಈ ಹಿಂದೆ ಹೇಳಿದ್ದರು. ಭಾರತೀಯ ರೈಲ್ವೆಯು ಇದುವರೆಗೆ 402 ನೂತನ ವಂದೇ ಭಾರತ್ ರೈಲುಗಳನ್ನು ತಯಾರಿಸಲು ಗುತ್ತಿಗೆ ನೀಡಿದೆ. ಅವೆಲ್ಲವೂ ಮಾರ್ಚ್ 2027 ರೊಳಗೆ ಹಳಿಗೆ ಇಳಿಯುವ ಸಾಧ್ಯತೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, January 18, 2024, 13:33 [IST]
English summary
New 60 vande bharat train launch in 2024 including karnataka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+