New Car Smell: ಹೊಸ ಕಾರಿನ ವಾಸನೆ ಸೈಲೆಂಟ್ ಆಗಿ ಗಂಭೀರ ಖಾಯಿಲೆ ತರಬಹುದು..ಅಧ್ಯಯನ
ಪ್ರತಿಯೊಬ್ಬರಿಗೂ ಜೀವನದಲ್ಲಿ ಹೊಸ ಕಾರು ಖರೀದಿಸಬೇಕೆಂಬ ಆಸೆ ಇರುತ್ತದೆ. ಹೇಗೋ ಮಾಡಿ, ಆ ಕನಸನ್ನು ನನಸು ಮಾಡಿಕೊಂಡು ನೂತನ ಕಾರಿನ ಒಳಪ್ರವೇಶಿಸಿದರೆ, ಮೊದಲಿಗೆ ಗ್ರಹಿಸುವ ಅದರ ವಾಸನೆ ಹಲವರಿಗೆ ಖುಷಿಯನ್ನು ನೀಡುತ್ತದೆ. ಆದರೆ, ಅದು ಮಾರಕವಾಗಬಹುದು ಎಂದು ಅಧ್ಯಯನವೊಂದು ತಿಳಿಸಿದೆ.
ಇತ್ತೀಚೆಗೆ ಬೀಜಿಂಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಹಾರ್ವರ್ಡ್ ಟಿ.ಹೆಚ್.ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಂಶೋಧನಾ ತಂಡ, 'ಹೊಸ ಕಾರಿನ ವಾಸನೆ' ಸಂಬಂಧ ಅಧ್ಯಯನವೊಂದನ್ನು ನಡೆಸಿ, 'ಸೆಲ್ ರಿಪೋರ್ಟ್ಸ್ ಫಿಸಿಕಲ್ ಸೈನ್ಸ್'ನಲ್ಲಿ ವರದಿ ಪ್ರಕಟಿಸಿದೆ. ಅದರಲ್ಲಿ ನೂತನ ಕಾರುಗಳ ವಾಸನೆಯಲ್ಲಿ ಫಾರ್ಮಾಲ್ಡಿಹೈಡ್ ಮತ್ತು ಅಸೆಟಾಲ್ಡಿಹೈಡ್‌ನಂತಹ ಕ್ಯಾನ್ಸರ್‌ಗೆ ಕಾರಣವಾಗುವ ಕೆಲವು ಹಾನಿಕಾರಕ ರಾಸಾಯನಿಕಗಳು ಒಳಗೊಂಡಿರಬಹುದು ಎಂದು ಹೇಳಿದೆ.

ಸಂಶೋಧಕರು, ಹಲವು ರಾಸಾಯನಿಕಗಳನ್ನು ಪತ್ತೆಹಚ್ಚಲು ಸೆನ್ಸರ್ಸ್ ಬಳಸಿಕೊಂಡು, ಹೊಸ ಕಾರುಗಳ ಗಾಳಿಯ ಗುಣಮಟ್ಟವನ್ನು ಪರೀಕ್ಷಿಸಿದ್ದಾರೆ. ವಿವಿಧ ವಾತಾವರಣದಲ್ಲಿ ಸತತ 12 ದಿನಗಳವರೆಗೆ ಕಾರುಗಳನ್ನು ಮುಚ್ಚಿ, ಹೊರಗಡೆ ನಿಲ್ಲಿಸಲಾಗಿದ್ದು, ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಹೊಸ ಕಾರುಗಳ ಕ್ಯಾಬಿನ್‌ನಲ್ಲಿರುವ ಗಾಳಿಯಲ್ಲಿನ ರಾಸಾಯನಿಕಗಳ ಮಿಶ್ರಣವು ಅದರ ಬಳಕೆದಾರರ (owner) ಆರೋಗ್ಯದ ಮೇಲೆ ಗಂಭೀರ ಪರಿಮಾಮ ಬೀರಬಹುದು.
ಸಂಶೋಧನಾ ಫಲಿತಾಂಶದಲ್ಲಿ ಕಂಡು ಬಂದಿರುವ 'ಫಾರ್ಮಾಲ್ಡಿಹೈಡ್' ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದಾದ ರಾಸಾಯನಿಕ ಸಂಯುಕ್ತವಾಗಿದೆ ಎಂದು ಯುಎಸ್ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ ಹೇಳಿದೆ. ಈ ಫಾರ್ಮಾಲ್ಡಿಹೈಡ್, ಚೀನಾದ ರಾಷ್ಟ್ರೀಯ ಸುರಕ್ಷತಾ ಮಾನದಂಡಗಳಿಗಿಂತ ಶೇಕಡ 34.9% ಹೆಚ್ಚಿನ ಮಟ್ಟದಲ್ಲಿರುವುದನ್ನು ಗುರುತಿಸಲಾಗಿದೆ. ಇದು ಬಣ್ಣರಹಿತವಾಗಿದ್ದು, ವಿವಿಧ ಗೃಹೋಪಯೋಗಿ ಉತ್ಪನ್ನಗಳ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ.

'ಅಸಿಟಾಲ್ಡಿಹೈಡ್' ಸಹ ಒಂದು ರಾಸಾಯನಿಕವಾಗಿದ್ದು, ಚೀನಾದ ರಾಷ್ಟ್ರೀಯ ಸುರಕ್ಷತಾ ಮಾನದಂಡಗಳಿಗಿಂತ ಶೇಕಡ 60.5% ಹೆಚ್ಚಿನ ಮಟ್ಟದಲ್ಲಿ ಪತ್ತೆಯಾಗಿದೆ. ಇದನ್ನು ಸುಗಂಧ ದ್ರವ್ಯ, ಪಾಲಿಯೆಸ್ಟರ್ ರೆಸಿನ್ ಸೇರಿದಂತೆ ಬಣ್ಣಗಳ ಉತ್ಪಾದನೆಯಲ್ಲಿ ಬಳಕೆ ಮಾಡಲಾಗುತ್ತದೆ. ಈ ಸಮಸ್ಯೆಗೆ ಪರಿಹಾರವೇ ಇಲ್ಲ ಎಂದು ಅಂದುಕೊಳ್ಳುವುದು ತಪ್ಪು. ಅದಕ್ಕಾಗಿ ಸಂಶೋಧಕರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಮೊದಲಿಗೆ ಕಾರಿನ ಕಿಟಕಿಯನ್ನು ತೆರೆಯುವುದು ಸುಲಭದ ಉಪಾಯವಾಗಿದೆ.
ಶಾಖ (ಬಿಸಿಲಿನ ಝಳ) ಈ ಹಾನಿಕಾರಕ ರಾಸಾಯನಿಕಗಳ ಸಾಂದ್ರತೆಯನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ನೆರಳಿನ ಸ್ಥಳದಲ್ಲಿ ಕಾರುಗಳನ್ನು ಪಾರ್ಕಿಂಗ್ ಮಾಡುವುದು ಉತ್ತಮ. ಉದಾಹರಣೆಗೆ ಮರದ ಕೆಳಗೆ. ಅಲ್ಲದೆ, ಪಾರ್ಕಿಂಗ್ ಮಾಡುವ ಸ್ಥಳ ಸುರಕ್ಷಿತವಾಗಿದ್ದರೆ, ಕಾರು ಬಾಗಿಲನ್ನು ಸ್ವಲ್ಪ ಸಮಯ ತೆರೆದಿಡಬಹುದು. ನೂತನ ಕಾರುಗಳ ಕ್ಯಾಬಿನ್‌ನ್ನು ರಾಸಾಯನಿಕ ಮುಕ್ತವಾಗಿಡಲು ವಾಹನ ತಯಾರಕ ಕಂಪನಿಗಳು ಈಗಾಗಲೇ ಹಲವು ಬಗೆಯಲ್ಲಿ ಪ್ರಯತ್ನಿಸುತ್ತಿವೆ.
ಪ್ರಮುಖವಾಗಿ ಕೊರೋನಾ ಸೋಂಕಿನ ಬಳಿಕ, ಇತ್ತೀಚೆಗೆ ಬಿಡುಗಡೆಯಾದ ಟಾಟಾ ನೆಕ್ಸನ್ ಇವಿ ಮ್ಯಾಕ್ಸ್ ಡಾರ್ಕ್ ನಂತಹ ಹೊಸ ಕಾರುಗಳು ಕ್ಯಾಬಿನ್‌ನೊಳಗೆ ಕಾರ್ ಪ್ಯೂರಿಫೈಯರ್ ಆಯ್ಕೆಯನ್ನು ಹೊಂದಿವೆ. ಒಟ್ಟಾರೆ, ಈ ಅಧ್ಯಯನವು ಕೆಲವೊಂದು ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುವ ರಾಸಾಯನಿಕಗಳು ಪತ್ತೆಯಾಗಿದೆ ಎಂದು ಹೇಳಿದೆ. ಆದರೆ, ಇದರ ಸತ್ಯಾಸತ್ಯತೆ ತಿಳಿಯಲು ಭಾರತವು ಸೇರಿದಂತೆ ವಿವಿಧ ದೇಶಗಳ ಸಂಶೋಧಕರಿಂದ ಮತ್ತಷ್ಟು ಅಧ್ಯಯನ ನಡೆಸುವುದು ಅಗತ್ಯವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications