ನವ ದಂಪತಿ ಕೆ.ಎಲ್ ರಾಹುಲ್-ಅಥಿಯಾ ಶೆಟ್ಟಿ...ಶ್ರೀಮಂತ ಸೆಲಬ್ರಿಟಿ ಯಾರು? ಇವರ ಕಾರ್ ಕಲೆಕ್ಷನ್ ನೋಡಿ ಸಾಕು...

ಇತ್ತೀಚಿನ ಸೆಲೆಬ್ರಿಟಿ ದಂಪತಿಯಾದ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಮದುವೆ ದೇಶದಲ್ಲಿ ಸಖತ್ ಸದ್ದು ಮಾಡಿದೆ. ಸುನೀಲ್ ಶೆಟ್ಟಿ ಅವರ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ಮತ್ತು ಕ್ರಿಕೆಟ್ ಜಗತ್ತಿನ ಹತ್ತಿರದ ಮತ್ತು ಆತ್ಮೀಯರನ್ನು ಹೊರತುಪಡಿಸಿ, ಸಮಾರಂಭದಲ್ಲಿ ಹೆಚ್ಚಿನ ಜನರು ಇರಲಿಲ್ಲ.

ಇಬ್ಬರು ಕೂಡ ಸೆಲಬ್ರಿಟಿಗಳಾದ ಕಾರಣ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಹಾಗೆಯೇ ಸಿನಿಮಾ ರಂಗ ಹಾಗೂ ಕ್ರಿಕೆಟ್ ಕ್ಷೇತ್ರದಲ್ಲಿ ಹಲವರು ಸ್ನೇಹಿತರಿದ್ದಾರೆ. ಹಾಗಾಗಿ ಮುಂದಿನ ಹಂತದಲ್ಲಿ ಎಲ್ಲಾ ಬಂಧು-ಮಿತ್ರರಿಗೂ ಅದ್ದೂರಿ ಸ್ವಾಗತ ನೀಡಲಿದ್ದಾರೆ ಎಂದು ವರದಿಯಾಗಿದೆ. ಇದು ಹೀಗಿದ್ದರೆ ಇವರಿಬ್ಬರ ಕಾರ್ ಕಲೆಕ್ಷನ್ ಕೂಡ ಇದೀಗ ಸದ್ದು ಮಾಡುತ್ತಿದ್ದೆ. ಅಥಿಯಾ ಶೆಟ್ಟಿ ಸ್ಟಾರ್ ನಟನ ಮಗಳಾಗಿ ದುಬಾರಿ ಕಾರ್ ಕಲೆಕ್ಷನ್ ಹೊಂದಿದ್ದರೆ, ಕೆ.ಎಲ್ ರಾಹುಲ್ ಸ್ಟಾರ್ ಕ್ರಿಕೆಟರ್ ಆಗಿ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಈ ಇಬ್ಬರ ಕಾರ್ ಕಲೆಕ್ಷನ್ ಹೋಲಿಕೆಯನ್ನು ನೋಡೋಣ.

ಕೆಎಲ್ ರಾಹುಲ್ ಕಾರ್ ಕಲೆಕ್ಷನ್

ನವ ದಂಪತಿ ಕೆ.ಎಲ್ ರಾಹುಲ್-ಅಥಿಯಾ ಶೆಟ್ಟಿ...ಶ್ರೀಮಂತ ಸೆಲಬ್ರಿಟಿ ಯಾರು? ಇವರ ಕಾರ್ ಕಲೆಕ್ಷನ್ ನೋಡಿ ಸಾಕು...

BMW X7
KL ರಾಹುಲ್ ಅವರ ಕಾರು ಸಂಗ್ರಹಣೆಯಲ್ಲಿ BMW X7 ಮೊದಲ ವಾಹನವಾಗಿದೆ. ಇದು BMW ಸ್ಟೇಬಲ್‌ನಲ್ಲಿ ಅತ್ಯಂತ ಐಷಾರಾಮಿ SUV ಆಗಿದೆ. BMW X7 ಮಾದರಿಯು 3.0-ಲೀಟರ್ ಡೀಸೆಲ್ ಮತ್ತು 3.0-ಲೀಟರ್ ಪೆಟ್ರೋಲ್ ಎಂ ಸ್ಪೋರ್ಟ್ ಟ್ರಿಮ್ ಎಂಬ ಎರಡು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ. ಮೊದಲನೆಯದು 265 hp ಪವರ್ ಮತ್ತು 620 Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. ಎರಡನೆಯದು 340 hp ಪವರ್ ಮತ್ತು 450 Nm ಗರಿಷ್ಠ ಟಾರ್ಕ್ ಹೊರಹಾಕುತ್ತದೆ.

ಡೀಸೆಲ್ ರೂಪಾಂತರದೊಂದಿಗೆ 7-ಸೀಟ್ ಆಯ್ಕೆ ಕೂಡ ಇದೆ. ಈ ಎರಡೂ ಪವರ್‌ಟ್ರೇನ್‌ಗಳನ್ನು 8-ಸ್ಪೀಡ್ ಸ್ಟೆಪ್‌ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮತ್ತು xDrive ಗೆ ಜೋಡಿಸಲಾಗಿದೆ. ಇದರ ಪೆಟ್ರೋಲ್ ಆವೃತ್ತಿಯು 0-100 ಕಿ.ಮೀ ವೇಗವನ್ನು ಕೇವಲ 6.1 ಸೆಕೆಂಡ್‌ಗಳಲ್ಲಿ ತಲುಪಿದರೆ, ಡೀಸೆಲ್ ಆವೃತ್ತಿಯು 7 ಸೆಕೆಂಡ್‌ಗಳಲ್ಲಿ 0-100 ಕಿ.ಮೀ ವೇಗವನ್ನು ತಲುಪುತ್ತದೆ. ಇದರ ಆರಂಭಿಕ ಬೆಲೆಯು 1.18 ಕೋಟಿ ರೂ. ಎಕ್ಸ್‌ ಶೋರೂಂ ಇದೆ.

ಲ್ಯಾಂಬೋರ್ಗಿನಿ ಹುರಾಕನ್ ಸ್ಪೈಡರ್
ಕೆಎಲ್ ರಾಹುಲ್ ಅವರ ಆಕರ್ಷಕ ಕಾರ್ ಗ್ಯಾರೇಜ್‌ನಲ್ಲಿರುವ ಅತ್ಯಂತ ದುಬಾರಿ ವಾಹನವೆಂದರೆ ಲ್ಯಾಂಬೋರ್ಗಿನಿ ಹುರಾಕನ್ ಸ್ಪೈಡರ್. ಇದು 5.2-ಲೀಟರ್ 10-ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. 640 hp ಪವರ್ ಮತ್ತು 600 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕೇವಲ 2.9 ಸೆಕೆಂಡುಗಳಲ್ಲಿ 100 ಕೀ.ಮೀ ವೇಗವನ್ನು ತಲುಪುತ್ತದೆ. 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್ ಮೂಲಕ ಎಂಜಿನ್ ಕಾರ್ಯ ನಿರ್ವಹಿಸುತ್ತದೆ. ಇದರ ಗರಿಷ್ಠ ವೇಗವು 325 ಕಿ.ಮೀಗೆ ಸೀಮಿತವಾಗಿದೆ. ಇದರ ಬೆಲೆ ಸುಮಾರು 4 ಕೋಟಿ ರೂ. ಎಕ್ಸ್‌ ಶೋರೂಂ ಇದೆ.

ಮರ್ಸಿಡಿಸ್ ಬೆಂಜ್ ಸಿ43
ಕೆಎಲ್ ರಾಹುಲ್ ಅವರು ತಮ್ಮ ಆಡಂಬರದ ಗ್ಯಾರೇಜ್‌ನಲ್ಲಿ ಮರ್ಸಿಡಿಸ್ ಬೆಂಜ್ ಸಿ43 ಅನ್ನು ಹೊಂದಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಈ ಐಷಾರಾಮಿ ಕಾರು 3.0-ಲೀಟರ್ V6 ಎಂಜಿನ್‌ನಿಂದ ಚಾಲಿತವಾಗಿದ್ದು, 390 ಎಚ್‌ಪಿ ಪವರ್ ಉತ್ಪಾದಿಸುತ್ತದೆ. ಕೇವಲ 4.7 ಸೆಕೆಂಡುಗಳಲ್ಲಿ 0-60 mph (96 ಕಿ.ಮೀ) ವೇಗವನ್ನು ತಲುಪಬಲ್ಲದು. ಹಾಗೆಯೇ ಇದರ ಟಾಪ್ ಸ್ಪೀಡ್ 155 mph (249 ಕಿ.ಮೀ) ಇದೆ. ಕೆ.ಎಲ್ ರಾಹುಲ್ ಅವರು ಇನ್ನೂ ಮರ್ಸಿಡಿಸ್ ಬೆಂಜ್ ಸಿ43 ಹೊಂದಿದ್ದಾರೆಯೇ ಎಂಬುದು ನಮಗೆ ತಿಳಿದಿಲ್ಲ. ಇದರ ಬೆಲೆ ಸುಮಾರು 83 ಲಕ್ಷ ರೂ. ಎಕ್ಸ್‌ ಶೋರೂಂ

ಅಥಿಯಾ ಶೆಟ್ಟಿ ಕಾರ್ ಕಲೆಕ್ಷನ್

ನವ ದಂಪತಿ ಕೆ.ಎಲ್ ರಾಹುಲ್-ಅಥಿಯಾ ಶೆಟ್ಟಿ...ಶ್ರೀಮಂತ ಸೆಲಬ್ರಿಟಿ ಯಾರು? ಇವರ ಕಾರ್ ಕಲೆಕ್ಷನ್ ನೋಡಿ ಸಾಕು...

ಆಡಿ Q7
Athiya ಹೊಸ Audi Q7 ಐಷಾರಾಮಿ SUV ಅನ್ನು ಖರೀದಿಸಿರುವುದಾಗಿ ಇತ್ತೀಚೆಗೆ ವರದಿಯಾಗಿತ್ತು. ಈ ಆಡಿ ಕ್ಯೂ7 3.0-ಲೀಟರ್ 6-ಸಿಲಿಂಡರ್ ಮೈಲ್ಡ್ ಹೈಬ್ರಿಡ್ ಟಿಎಫ್‌ಎಸ್‌ಐ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 340 ಎಚ್‌ಪಿ ಪವರ್ ಮತ್ತು 500 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಡಿಯ ಕ್ವಾಟ್ರೊ AWD ವ್ಯವಸ್ಥೆಯ ಮೂಲಕ ಎಲ್ಲಾ ನಾಲ್ಕು ಚಕ್ರಗಳಿಗೆ ಶಕ್ತಿಯನ್ನು ರವಾನಿಸುತ್ತದೆ. ಕೇವಲ 5.9 ಸೆಕೆಂಡುಗಳಲ್ಲಿ 100 km/h ವೇಗ ತಲುಪಬಲ್ಲದು. ಗರಿಷ್ಠ ವೇಗ ಗಂಟೆಗೆ 250 ಕಿ.ಮೀ ಇದೆ. ಈ SUV ಬೆಲೆ ಭಾರತದಲ್ಲಿ 1 ಕೋಟಿ ರೂ. ಎಕ್ಸ್‌ ಶೋರೂಂ ಇದೆ.

ಜಾಗ್ವಾರ್ ಎಕ್ಸ್‌ಜೆಎಲ್ ಅಥಿಯಾ ಶೆಟ್ಟಿ ಅವರ ಕಾರ್ ಕಲೆಕ್ಷನ್‌ನ ಭಾಗವಾಗಿತ್ತು
ಮಾಹಿತಿಯ ಪ್ರಕಾರ, ಅಥಿಯಾ ಅವರು 1.15 ಕೋಟಿ ರೂ.ಗಿಂತ ಹೆಚ್ಚಿನ ಬೆಲೆಯ ಜಾಗ್ವಾರ್ ಎಕ್ಸ್‌ಜೆಎಲ್ ಅನ್ನು ಸಹ ಹೊಂದಿದ್ದರು. ಪ್ರಸ್ತುತ, ಜಾಗ್ವಾರ್ XJ L ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಆರು ರೂಪಾಂತರಗಳಲ್ಲಿ ಬರುತ್ತದೆ. ಇದು ಡೀಸೆಲ್ ಮತ್ತು ಪೆಟ್ರೋಲ್ ಆಯ್ಕೆಗಳನ್ನು ಒಳಗೊಂಡಿದೆ (1999 ರಿಂದ 5000 cc). ಇದನ್ನು 7 ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು. ರೂಪಾಂತರವನ್ನು ಅವಲಂಬಿಸಿ, ನೀವು 225 - 470 bhp ಪವರ್ ಮತ್ತು 340 - 700 Nm ಟಾರ್ಕ್ ಅನ್ನು ಪಡೆಯಬಹುದು. ಜಾಗ್ವಾರ್ ಎಕ್ಸ್‌ಜೆ ಎಲ್ ಬೆಲೆ ರೂ 99.56 ಲಕ್ಷದಿಂದ ರೂ. 1.97 ಕೋಟಿ ರೂ. ಎಕ್ಸ್‌ ಶೋರೂಂ ಬೆಲೆಯಿದೆ.

Most Read Articles

Kannada
English summary
New couple kl rahul athiya shetty car collection
Story first published: Tuesday, January 24, 2023, 11:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X