New Expressway: ಕರ್ನಾಟಕವು ಸೇರಿ ದೇಶದಲ್ಲಿ ನಿರ್ಮಾಣವಾಗುತ್ತಿವೆ ವಿವಿಧ ಎಕ್ಸ್‌ಪ್ರೆಸ್‌ವೇಗಳು.. ವಿಶೇಷತೆಗಳೇನು?

ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಾಕಷ್ಟು ಶ್ರಮಿಸುತ್ತಿದ್ದು, ಹಲವು ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುತ್ತಿದೆ. ಕೆಲವೇ ವರ್ಷಗಳಲ್ಲಿ ವಿವಿಧ ಎಕ್ಸ್‌ಪ್ರೆಸ್‌ವೇಗಳು (Expressway) ಲೋಕಾರ್ಪಣೆಗೊಳ್ಳಲಿವೆ. ಇವುಗಳ ನಿರ್ಮಾಣದಿಂದ ಪ್ರಯಾಣದ ಅವಧಿ ತುಂಬಾ ಕಡಿಮೆಯಾಗಲಿದ್ದು, ಕೈಗಾರಿಕೆ ಹಾಗೂ ಉದ್ಯಮ ಚಟುವಟಿಕೆಗಳು ಬೆಳವಣಿಗೆಯಾಗಲಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಮೊದಲಿಗೆ ದೆಹಲಿ - ಮುಂಬೈ ಎಕ್ಸ್‌ಪ್ರೆಸ್‌ವೇ (Delhi - Mumbai Expressway) ಬಗ್ಗೆ ಮಾತನಾಡೋಣ. 1,382 ಕಿಮೀ ಉದ್ದದ ಹೆದ್ದಾರಿ ಇದಾಗಿದ್ದು, ಸಂಪೂರ್ಣವಾಗಿ ಲೋಕಾರ್ಪಣೆಗೊಂಡ ಮೇಲೆ ಎರಡು ನಗರಗಳ ನಡುವೆ ಪ್ರಯಾಣದ ಅವಧಿಯು ಅರ್ಧದಷ್ಟು ಕಡಿಮೆಯಾಗಲಿದ್ದು, ದೆಹಲಿಯಿಂದ ಮುಂಬೈಗೆ ಕೇವಲ 12.5 ಗಂಟೆಯಲ್ಲಿ ಸಂಚಾರಿಸಬಹುದು. 2024 ಫೆಬ್ರವರಿಯಲ್ಲಿ ಈ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೊಳ್ಳಲಿದೆ. ದೆಹಲಿ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.

New Expressway: ಕರ್ನಾಟಕವು ಸೇರಿ ದೇಶದಲ್ಲಿ ನಿರ್ಮಾಣವಾಗುತ್ತಿವೆ ವಿವಿಧ ಎಕ್ಸ್‌ಪ್ರೆಸ್‌ವೇಗಳು.. ವಿಶೇಷತೆಗಳೇನು?

ಮೀರತ್ - ಪ್ರಯಾಗ್‌ರಾಜ್ ನಡುವೆ ಗಂಗಾ ಎಕ್ಸ್‌ಪ್ರೆಸ್‌ವೇ (Ganga Expressway) ಕಾಮಗಾರಿ ಭರದಿಂದ ಸಾಗುತ್ತಿದೆ. 595 ಕಿಮೀ ಉದ್ದದ ಹೆದ್ದಾರಿ ಇದಾಗಿದ್ದು, ಎರಡು ನಗರಗಳ ನಡುವಿನ ಪ್ರಯಾಣದ ಅವಧಿಯು 6 ಗಂಟೆಗೆ ಇಳಿಕೆಯಾಗಲಿದ್ದು, 2024 ರೊಳಗೆ ಲೋಕಾರ್ಪಣೆಯಾಗಲಿದೆ. ಇದು, ಉದ್ಘಾಟನೆಗೊಂಡ ಮೇಲೆ ದೇಶದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಪಟ್ಟಿಯಲ್ಲಿ ಸ್ಥಾನವನ್ನು ಪಡೆಯಲಿದೆ.

ಪವಿತ್ರ ಪುಣ್ಯಕ್ಷೇತ್ರಗಳನ್ನು ಸಂಪರ್ಕಿಸುವ ದೆಹಲಿ - ಅಮೃತಸರ - ಕತ್ರಾ ಎಕ್ಸ್‌ಪ್ರೆಸ್‌ವೇ (Delhi - Amritsar - Katra Expressway) ನಿರ್ಮಾಣ ಕಾಮಗಾರಿಯು ವೇಗವಾಗಿ ಸಾಗುತ್ತಿದೆ. 669 ಕಿಲೋಮೀಟರ್ ಉದ್ದದ ಹೆದ್ದಾರಿ ಇದಾಗಿದ್ದು, 40,000 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಈ ಎಕ್ಸ್‌ಪ್ರೆಸ್‌ವೇ ನಿರ್ಮಾಣಗೊಂಡ ಮೇಲೆ ಅಮೃತಸರ - ದೆಹಲಿ ನಡುವೆ 4 ಗಂಟೆ, ದೆಹಲಿ - ಕತ್ರಾ ಮಧ್ಯೆ 6 ಗಂಟೆಗಳಲ್ಲಿ ಪ್ರಯಾಣಿಸಬಹುದು.

New Expressway: ಕರ್ನಾಟಕವು ಸೇರಿ ದೇಶದಲ್ಲಿ ನಿರ್ಮಾಣವಾಗುತ್ತಿವೆ ವಿವಿಧ ಎಕ್ಸ್‌ಪ್ರೆಸ್‌ವೇಗಳು.. ವಿಶೇಷತೆಗಳೇನು?

ಅಹಮದಾಬಾದ್ - ಧೋಲೆರಾ ಎಕ್ಸ್‌ಪ್ರೆಸ್‌ವೇ (Ahmedabad - Dholera Expressway) ಕಾಮಗಾರಿ ಕೂಡ ನಡೆಯುತ್ತಿದ್ದು, 2024 ರಲ್ಲಿ ಉದ್ಘಾಟನೆಗೊಳ್ಳುವ ನೀರಿಕ್ಷೆಯಿದೆ. 109 ಕಿಮೀ ಉದ್ದದ 4 ಪಥದ ಹೆದ್ದಾರಿ ಇದಾಗಿದೆ. ಈ ರಸ್ತೆ ನಿರ್ಮಾಣದಿಂದ ಅಲ್ಲಿನ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ನಿರ್ಮಾಣ ಹಂತದಲ್ಲಿರುವ ಧೋಲೇರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೂ ಇದೇ ಮಾರ್ಗದಲ್ಲಿ ಬರುತ್ತದೆ.

ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru - Chennai Expressway) ಕೆಲಸಗಳು ನಡೆಯುತ್ತಿದ್ದು, ಮುಂದಿನ ವರ್ಷ ಲೋಕಾರ್ಪಣೆಗೊಳ್ಳಲಿದೆ. 262 ಕಿಮೀ ಉದ್ದದ ಈ ಹೆದ್ದಾರಿ ನಿರ್ಮಾಣಗೊಂಡ ನಂತರ, ಬೆಂಗಳೂರು - ಚೆನ್ನೈ ಮಧ್ಯೆ ಈಗಿರುವ 5 - 6 ಗಂಟೆ ಪ್ರಯಾಣ ಅವಧಿ 2 ಗಂಟೆ 30 ನಿಮಿಷಗಳಿಗೆ ಕಡಿಮೆಯಾಗುವ ಸಾಧ್ಯತೆಯಿದೆ. ಈ ಎಕ್ಸ್‌ಪ್ರೆಸ್‌ವೇಗೆ ರೂ.17,930 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.

ರಾಯ್‌ಪುರ - ವಿಶಾಖಪಟ್ಟಣಂ ಎಕ್ಸ್‌ಪ್ರೆಸ್‌ವೇ (Raipur - Visakhapatnam Expressway) ಕಾಮಗಾರಿ ನಡೆಯುತ್ತಿದ್ದು, ಛತ್ತೀಸ್‌ಗಢ ಹಾಗೂ ಆಂಧ್ರ ಪ್ರದೇಶ ನಡುವೆ ಸಂಪರ್ಕ ಕಲ್ಪಿಸಲಿದೆ. 464 ಕಿಲೋಮೀಟರ್ ಉದ್ದದ ಈ ಹೆದ್ದಾರಿ, 6 ಪಥಗಳನ್ನು ಒಳಗೊಂಡಿರಲಿದ್ದು, ಈಗಿರುವ ಪ್ರಯಾಣ ಅವಧಿಯು 13 ಗಂಟೆಗಳಿಂದ ಕೇವಲ 8-9 ಗಂಟೆಗೆ ಕಡಿಮೆಯಾಗಲಿದ್ದು, ಬಹುತೇಕ 2025 ರಲ್ಲಿ ಉದ್ಘಾಟನೆಗೊಳ್ಳಲಿದೆ.

ಬೆಂಗಳೂರು - ಪುಣೆ ಮಧ್ಯೆ ನಡುವೆ ಎಕ್ಸ್‌ಪ್ರೆಸ್‌ವೇ (Bengaluru Pune Expressway) ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭರದ ಸಿದ್ಧತೆಯನ್ನು ನಡೆಸುತ್ತಿದೆ. ಕರ್ನಾಟಕದ 9 ಜಿಲ್ಲೆಗಳು, ಮಹಾರಾಷ್ಟ್ರದ 3 ಜಿಲ್ಲೆಯಲ್ಲಿ ಈ ಹೆದ್ದಾರಿ ಹಾದುಹೋಗಲಿದೆ. 719.26 ಕಿಲೋಮೀಟರ್ ಉದ್ದದ ರಸ್ತೆ ಇದಾಗಿರಲಿದ್ದು, ಸದ್ಯ, ಬೆಂಳೂರಿನಿಂದ ಪುಣೆ ತಲುಪಲು 15 ಗಂಟೆ ಹಿಡಿಯುತ್ತದೆ. ಅದು, ಈ ಹೆದ್ದಾರಿ ನಿರ್ಮಾಣಗೊಂಡಾಗ 7 ಗಂಟೆಗೆ ಕಡಿಮೆಯಾಗಲಿದೆ ಎನ್ನಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, November 29, 2023, 16:22 [IST]
English summary
New expressways in india including karnataka what are the specialties
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+