ಜಮೀನಿನ ಉಳುಮೆ ಕಾರ್ಯಕ್ಕೆ ಬಳಕೆಯಾದ ಹ್ಯುಂಡೈ ಕ್ರೆಟಾ ಎಸ್‌ಯುವಿ

ಹ್ಯುಂಡೈ ಕ್ರೆಟಾ ದೇಶದಲ್ಲಿರುವ ಜನಪ್ರಿಯ ಮಿಡ್-ಸೈಡ್ ಎಸ್‌ಯುವಿಗಳಲ್ಲಿ ಒಂದಾಗಿದೆ. ಹ್ಯುಂಡೈ ಕಂಪನಿಯು 2020ರಲ್ಲಿ ಹೊಸ ಕ್ರೆಟಾ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು.

ಜಮೀನಿನ ಉಳುಮೆ ಕಾರ್ಯಕ್ಕೆ ಬಳಕೆಯಾದ ಹ್ಯುಂಡೈ ಕ್ರೆಟಾ ಎಸ್‌ಯುವಿ

ಹೊಸ ಕ್ರೆಟಾ ಎಸ್‌ಯುವಿಯು ಕಡಿಮೆ ಅವಧಿಯಲ್ಲಿಯೇ ಹೆಚ್ಚು ಜನಪ್ರಿಯತೆ ಪಡೆಯಿತು. ಕ್ರೆಟಾ ಎಸ್‌ಯುವಿ ಈಗ ಭಾರತದ ರಸ್ತೆಗಳಲ್ಲಿ ಕಂಡು ಬರುವುದು ಸಾಮಾನ್ಯವಾಗಿದೆ. ಪ್ರೀಮಿಯಂ ಲುಕ್ ಹಾಗೂ ಫೀಚರ್'ಗಳಿಂದಾಗಿ ಕ್ರೆಟಾ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ತನ್ನತ್ತ ಸೆಳೆಯುತ್ತಿದೆ.

ಜಮೀನಿನ ಉಳುಮೆ ಕಾರ್ಯಕ್ಕೆ ಬಳಕೆಯಾದ ಹ್ಯುಂಡೈ ಕ್ರೆಟಾ ಎಸ್‌ಯುವಿ

ಕಾರು ಪ್ರಿಯರು ತಮ್ಮ ನೆಚ್ಚಿನ ಕ್ರೆಟಾ ಎಸ್‌ಯುವಿಯೊಂದಿಗೆ ಫೋಟೋ ತೆಗೆಸಿಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಈಗ ಹ್ಯುಂಡೈ ಕ್ರೆಟಾ ಎಸ್‌ಯುವಿಗೆ ಸಂಬಂಧಿಸಿದ ಅದ್ಭುತ ವೀಡಿಯೊವೊಂದು ಹೊರಬಂದಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಜಮೀನಿನ ಉಳುಮೆ ಕಾರ್ಯಕ್ಕೆ ಬಳಕೆಯಾದ ಹ್ಯುಂಡೈ ಕ್ರೆಟಾ ಎಸ್‌ಯುವಿ

ಈ ವೀಡಿಯೊ ಹ್ಯುಂಡೈ ಕ್ರೆಟಾ ಎಸ್‌ಯುವಿಗೆ ಹಾರೋ ಜೋಡಿಸಿ ಉಳುಮೆ ಮಾಡುವುದನ್ನು ತೋರಿಸುತ್ತದೆ. ಈ ವೀಡಿಯೊವನ್ನು ಮುಸಾಫಿರ್ ರಾಜ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಜಮೀನಿನ ಉಳುಮೆ ಕಾರ್ಯಕ್ಕೆ ಬಳಕೆಯಾದ ಹ್ಯುಂಡೈ ಕ್ರೆಟಾ ಎಸ್‌ಯುವಿ

ಇವರು ತಮ್ಮ ಯೋಜನೆಯನ್ನು ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುತ್ತಾ ವೀಡಿಯೊವನ್ನು ಆರಂಭಿಸುತ್ತಾರೆ. ಹಾರೋವನ್ನು ಹ್ಯುಂಡೈ ಕ್ರೆಟಾಗೆ ಕನೆಕ್ಟ್ ಮಾಡುವ ಮೂಲಕ ಜಮೀನನ್ನು ಉಳುಮೆ ಮಾಡಲು ಅವರು ಮುಂದಾಗುತ್ತಾರೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಜಮೀನಿನ ಉಳುಮೆ ಕಾರ್ಯಕ್ಕೆ ಬಳಕೆಯಾದ ಹ್ಯುಂಡೈ ಕ್ರೆಟಾ ಎಸ್‌ಯುವಿ

ಹಾರೋ ಎಂಬುದು ಲೋಹಗಳ ಚಕ್ರಗಳನ್ನು ಹೊಂದಿರುವ ಸಾಧನವಾಗಿದೆ. ಈ ಸಾಧನವು ಸಾಕಷ್ಟು ತೂಕವನ್ನು ಹೊಂದಿರುತ್ತದೆ. ಕ್ರೆಟಾದ ಹಿಂದೆ ಟೋಹುಕ್ ಜೋಡಿಸುವ ಮೂಲಕ ಈ ವೀಡಿಯೊ ಆರಂಭಿಸಲಾಗುತ್ತದೆ.

ಜಮೀನಿನ ಉಳುಮೆ ಕಾರ್ಯಕ್ಕೆ ಬಳಕೆಯಾದ ಹ್ಯುಂಡೈ ಕ್ರೆಟಾ ಎಸ್‌ಯುವಿ

ಹಾರೋ ಜೋಡಿಸಿ ಉಳುಮೆ ಮಾಡಲು ಹ್ಯುಂಡೈ ಕ್ರೆಟಾದ 1.5-ಲೀಟರ್ ಡೀಸೆಲ್ ಮ್ಯಾನುಯಲ್ ಮಾದರಿಯನ್ನು ಬಳಸಲಾಗಿದೆ. ಟೋ ಹುಕ್ ಜೋಡಿಸಿದ ನಂತರ ಕ್ರೆಟಾವನ್ನು ಜಮೀನಿಗೆ ಕೊಂಡೊಯ್ಯಲಾಗುತ್ತದೆ.

MOSTREAD: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಜಮೀನಿನ ಉಳುಮೆ ಕಾರ್ಯಕ್ಕೆ ಬಳಕೆಯಾದ ಹ್ಯುಂಡೈ ಕ್ರೆಟಾ ಎಸ್‌ಯುವಿ

ಹಾರೋವನ್ನು ಮೊದಲು ಟ್ರ್ಯಾಕ್ಟರ್‌ನಿಂದ ಬೇರ್ಪಡಿಸಿ, ನಂತರ ಹಗ್ಗ ಬಳಸಿ ಹ್ಯುಂಡೈ ಕ್ರೆಟಾಗೆ ಜೋಡಿಸಲಾಗುತ್ತದೆ. ಇದಾದ ನಂತರ ಕ್ರೆಟಾ ಯಾವುದೇ ತೊಂದರೆಗಳಿಲ್ಲದೆ ಹಾರೋವನ್ನು ಎಳೆಯುತ್ತದೆ.

ಜಮೀನಿನ ಉಳುಮೆ ಕಾರ್ಯಕ್ಕೆ ಬಳಕೆಯಾದ ಹ್ಯುಂಡೈ ಕ್ರೆಟಾ ಎಸ್‌ಯುವಿ

ಹ್ಯುಂಡೈ ಕ್ರೆಟಾದಲ್ಲಿ ಅಳವಡಿಸಿರುವ ಡೀಸೆಲ್ ಎಂಜಿನ್ ಹೆಚ್ಚಿನ ಪ್ರಮಾಣದ ಟಾರ್ಕ್ ಉತ್ಪಾದಿಸುತ್ತದೆ. ಇದರಿಂದಾಗಿ ಹಾರೋವನ್ನು ಸುಲಭವಾಗಿ ಎಳೆಯಲು ಸಾಧ್ಯವಾಗಿದೆ. ಕ್ರೆಟಾ ಎಸ್‌ಯುವಿಗೆ ಹಾರೋ ಜೋಡಿಸಿಕೊಂಡು ಜಮೀನಿನಲ್ಲಿ ಎರಡು-ಮೂರು ಸುತ್ತು ಹೊಡೆಯಲಾಗುತ್ತದೆ.

MOSTREAD: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಜಮೀನಿನ ಉಳುಮೆ ಕಾರ್ಯಕ್ಕೆ ಬಳಕೆಯಾದ ಹ್ಯುಂಡೈ ಕ್ರೆಟಾ ಎಸ್‌ಯುವಿ

ಜಮೀನಿನ ಮೇಲ್ಮೈ ಸಮತಟ್ಟಾಗಿದ್ದರಿಂದ ಹ್ಯುಂಡೈ ಕ್ರೆಟಾ ಈ ಕೆಲಸವನ್ನು ಸುಲಭವಾಗಿ ಮಾಡಿದೆ. ಜಮೀನಿನ ಮಣ್ಣು ಒದ್ದೆಯಾಗಿ, ಮೃದುವಾಗಿದ್ದರೆ ಹಾರೋವನ್ನು ಎಳೆಯಲು ಕ್ರೆಟಾಗೆ ಕಷ್ಟವಾಗುತ್ತಿತ್ತು.

ಜಮೀನಿನ ಉಳುಮೆ ಕಾರ್ಯಕ್ಕೆ ಬಳಕೆಯಾದ ಹ್ಯುಂಡೈ ಕ್ರೆಟಾ ಎಸ್‌ಯುವಿ

ಕ್ರೆಟಾ ಫ್ರಂಟ್ ವ್ಹೀಲ್ ಡ್ರೈವ್ ಕಾರ್ ಆಗಿರುವುದು ಇದಕ್ಕೆ ಕಾರಣ. ಹ್ಯುಂಡೈ ಕ್ರೆಟಾ ಈ ರೀತಿಯ ಕೆಲಸವನ್ನು ಮಾಡಲು ಸರಿಯಾದ ಎಸ್‌ಯುವಿಯಲ್ಲ. ಹ್ಯುಂಡೈ ಕ್ರೆಟಾ ತುರ್ತು ಸಂದರ್ಭದಲ್ಲಿ ಕೆಲವು ವಸ್ತುಗಳನ್ನು ಎಳೆಯಬಹುದು.

MOSTREAD: ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

https://www.youtube.com/embed/on9XIwBn3M8

ಆದರೆ ಪದೇ ಪದೇ ಹಾಗೆ ಮಾಡುವುದರಿಂದ ಎಂಜಿನ್ ಹಾಗೂ ಗೇರ್‌ಬಾಕ್ಸ್ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ ಅವುಗಳ ಬಾಳಿಕೆ ಕಡಿಮೆಯಾಗುತ್ತದೆ. ವೀಡಿಯೊದಲ್ಲಿರುವ ಹ್ಯುಂಡೈ ಕ್ರೆಟಾ ಡೀಸೆಲ್ ಎಂಜಿನ್ ಮಾದರಿಯಾಗಿದ್ದು, 1.5-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿದೆ.

ಜಮೀನಿನ ಉಳುಮೆ ಕಾರ್ಯಕ್ಕೆ ಬಳಕೆಯಾದ ಹ್ಯುಂಡೈ ಕ್ರೆಟಾ ಎಸ್‌ಯುವಿ

ಈ ಎಂಜಿನ್ 115 ಬಿಹೆಚ್‌ಪಿ ಪವರ್ ಹಾಗೂ 250 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆ ಮ್ಯಾನುಯಲ್ ಹಾಗೂ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ.

ಚಿತ್ರ ಕೃಪೆ: ಮುಸಾಫಿರ್ ರಾಜ್

Most Read Articles

Kannada
English summary
New Hyundai creta used to plough the agricultural land. Read in Kannada.
Story first published: Monday, April 26, 2021, 16:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X