ಹೊಸ ಕಾರು ಡೆಲಿವರಿ ಪಡೆದ ಖುಷಿ ಒಂದು ದಿನವೂ ಸಿಗಲಿಲ್ಲ... ಸೇತುವೆಯಿಂದ ಬಿದ್ದರೂ ಜೀವ ಉಳಿಸಿದ ಕಾರು!

ಹೊಸ ಕಾರು ಡೆಲಿವರಿ ಪಡೆಯುವಾಗ ಅದರ ಖುಷಿಯೇ ಬೇರೆ, ವಾಹನ ಕೈ ಸೇರುತ್ತಿದ್ದಂತೆ ಅದರ ಮೇಲೆ ಎಲ್ಲಿಲ್ಲದ ಕಾಳಜಿ ತೋರುತ್ತೇವೆ. ವಾಹನಕ್ಕೆ ಏನಾದರೂ ಹಾನಿಯಾಗುತ್ತದೆಯೇ ಎಂಬ ಭಯ ಕೂಡ ಕಾಡುತ್ತಿರುತ್ತದೆ. ಇದೇ ಮನಸ್ಥಿತಿಯಲ್ಲಿ ವಾಹನ ಓಡಿಸುವಾಗ ಅನಿರೀಕ್ಷಿತ ಅಪಘಾತಗಳು ನಡೆಯುತ್ತವೆ. ಇಂತಹದ್ದೇ ಘಟನೆ ಇದೀಗ ಬೆಳಕಿಗೆ ಬಂದಿದೆ.

ಗುಜರಾತ್‌ನ ಬಿಲ್ಮೋರಾದಲ್ಲಿ ಇತ್ತೀಚೆಗೆ ನಡೆದ ಘಟನೆಯಲ್ಲಿ, ಹೊಸದಾಗಿ ಡೆಲಿವರಿ ಪಡೆದ ಹ್ಯುಂಡೈ ವೆರ್ನಾ ಮಾಲೀಕನಿಗೆ ಆ ಖುಷಿ ಒಂದು ದಿನವೂ ಇರಲಿಲ್ಲ. ಉತ್ಸುಕರಾಗಿದ್ದ ಮಾಲೀಕ ಸ್ನೇಹಿತರೊಂದಿಗೆ ತಡರಾತ್ರಿ ಡ್ರೈವ್‌ಗೆ ತೆಗೆದುಕೊಂಡು ಹೋದಾಗ ಅಪಘಾತಕ್ಕೆ ಸಿಲುಕಿ ಸೇತುವೆಯೊಂದರ ಮೇಲಿನಿಂದ ಕಾರು ಉರುಳಿ ನದಿಗೆ ಬಿದ್ದಿದೆ.

new-hyundai-verna-car-accident-on-delivery

ಚಾಲಕನ ನಿಯಂತ್ರಣ ತಪ್ಪಿ ಹೊಸ ಹ್ಯುಂಡೈ ವರ್ನಾ ಪಕ್ಕದ ನದಿಗೆ ಉರುಳಿದೆ ಎಂದು ತಿಳಿದುಬಂದಿದೆ. ಮಾಲೀಕ ಬ್ರೇಕ್ ಬದಲಿಗೆ ಆಕ್ಸಿಲರೇಟರ್ ಅನ್ನು ತಪ್ಪಾಗಿ ಬಳಸಿದ ಕಾರಣ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಹುಂಡೈ ವೆರ್ನಾ ಬಹಳ ಎತ್ತರದಿಂದ ಒಣ ನದಿಪಾತ್ರಕ್ಕೆ ಬಿದ್ದಿದ್ದು, ಅಲ್ಲಿ ಕೆಸರು ತುಂಬಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಮಾಲೀಕನ ಅದೃಷ್ಟಕ್ಕೆ ನೀರಿನ ಹರಿವು ಇರಲಿಲ್ಲ, ಇಲ್ಲದಿದ್ದರೇ ಪರಿಣಾಮ ಇನ್ನೂ ತೀವ್ರವಾಗಿರುತ್ತಿತ್ತು. ಘಟನೆಯ ಬಗ್ಗೆ ಮಾಹಿತಿ ಹೊರಬರುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿ ಕ್ರೇನ್ ಅನ್ನು ಬಳಸಿಕೊಂಡು ರಕ್ಷಣಾ ಕಾರ್ಯಾಚರಣೆ ಮಾಡಲಾಗಿದೆ. ಪವಾಡವೆಂಬಂತೆ ವೆರ್ನಾದಲ್ಲಿದ್ದ ಮೂವರೂ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂಬುದು ಗಮನಾರ್ಹ.

new-hyundai-verna-car-accident-on-delivery

ವಿಡಿಯೋ ಹಾಗೂ ಫೋಟೋಗಳನ್ನು ಪರಿಶೀಲಿಸಿದಾಗ, ವಾಹನವು ಕನಿಷ್ಠ ಹಾನಿಗೊಳಗಾಗಿರುವುದು ಸ್ಪಷ್ಟವಾಗಿದೆ. ಕಾರು ಅದರ ರೂಫ್ ಮೇಲೆ ತಲೆಕೆಳಗಾಗಿ ಬಿದ್ದಿರುವುದನ್ನು ಕಾಣಬಹುದು. ರೂಫ್ ಮೇಲಿನ ದೊಡ್ಡ ಡೆಂಟ್ ಅನ್ನು ಹೊರತುಪಡಿಸಿದರೆ ಯಾವುದೇ ಹಾನಿಯಾಗಿಲ್ಲ ಎಂದು ಕಾಣುತ್ತಿದೆ. ಏನೇ ಆಗಲಿ ಹೊಸ ಕಾರು ಡೆಲಿವರಿ ಪಡೆದ ಖುಷಿ ಮಾಲೀಕನಿಗೆ ಒಂದು ದಿನವೂ ಸಿಕ್ಕಿಲ ಎಂಬುದಂತು ನಿಜ.

ಸುರಕ್ಷತೆಯಲ್ಲಿ ವೆರ್ನಾ ಉತ್ತಮವಾಗಿದೆ: ಅಪಘಾತದಲ್ಲಿ ಹಾನಿಯಾಗಿರುವ ಕಾರು ಯಾವ ವೇರಿಯೆಂಟ್ ಎಂದು ತಿಳಿದುಬಂದಿಲ್ಲ. ಆದರೆ ಹೊಸ ಹ್ಯುಂಡೈ ವೆರ್ನಾ ಟಾಪ್ ವೇರಿಯೆಂಟ್‌ಗಳಲ್ಲಿ 30 ಗುಣಮಟ್ಟದ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಸುಧಾರಿತ ಚಾಲಕ ಸಹಾಯಕ ವ್ಯವಸ್ಥೆಗಳು (ADAS) ಸೇರಿದಂತೆ ಹೆಚ್ಚಿನ ಸುರಕ್ಷತಾ ತಂತ್ರಜ್ಞಾನದಿಂದ ತುಂಬಿದೆ.

new-hyundai-verna-car-accident-on-delivery

ಸ್ಟ್ಯಾಂಡರ್ಡ್ ಸುರಕ್ಷತಾ ವೈಶಿಷ್ಟ್ಯಗಳಾಗಿ ಆರು ಏರ್‌ಬ್ಯಾಗ್‌ಗಳು, ಎಲ್ಲಾ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮೈಂಡರ್‌ಗಳು, ಎಲ್ಲಾ ಪ್ರಯಾಣಿಕರಿಗೆ ಮೂರು-ಪಾಯಿಂಟ್ ಸೀಟ್ ಬೆಲ್ಟ್‌ಗಳು, ಇಂಪ್ಯಾಕ್ಟ್-ಸೆನ್ಸಿಂಗ್ ಆಟೋ ಡೋರ್ ಅನ್‌ಲಾಕ್‌, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್‌, ಎಬಿಎಸ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್, ಹೆಡ್‌ಲ್ಯಾಂಪ್ ಎಸ್ಕಾರ್ಟ್ ಫಂಕ್ಷನ್, ISOFIX, ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ.

ವೇರಿಯೆಂಟ್‌ಗಳು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಆಲ್-ಡಿಸ್ಕ್ ಬ್ರೇಕ್‌, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಟಿಪಿಎಂಎಸ್, ಕಾರ್ನರ್ಲಿಂಗ್ ಲ್ಯಾಂಪ್‌ಗಳು ಸೇರಿದಂತೆ ಆಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಹಾಗಾಗಿಯೇ ಕಾರು ಆಳಕ್ಕೆ ಬಿದ್ದರೂ ಸುರಕ್ಷತಾ ವೈಶಿಷ್ಟ್ಯಗಳಿಂದ ಪ್ರಯಾಣಿಕರು ಬದುಕುಳಿದಿದ್ದಾರೆ ಎಂಬುದು ನಮ್ಮ ಅಭಿಪ್ರಾಯ.

Article Published On: Friday, July 14, 2023, 12:07 [IST]
English summary
New hyundai verna car accident on delivery
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+