ವಿತರಣೆ ವೇಳೆ ನೆಲಕ್ಕುರುಳಿದ ಕಿಯಾ ಸೆಲ್ಟೊಸ್‌ ಕಾರು

ಕಿಯಾ ಮೋಟಾರ್ಸ್‌ನ ಕಾರುಗಳು ಹಲವು ಬಾರಿ ಶೋರೂಂಗಳ ಬಳಿ ಅಪಘಾತಕ್ಕೀಡಾಗಿವೆ. ಕೆಲ ದಿನಗಳ ಹಿಂದೆ ಕಿಯಾ ಕಾರ್ನಿವಾಲ್ ಕಾರು ಶೋರೂಂ ಬಳಿಯಿದ್ದ ಗೋಡೆಗೆ ಗುದ್ದಿದ್ದ ಬಗ್ಗೆ ವರದಿಯಾಗಿತ್ತು.

ವಿತರಣೆ ವೇಳೆ ನೆಲಕ್ಕುರುಳಿದ ಕಿಯಾ ಸೆಲ್ಟೊಸ್‌ ಕಾರು

ಈಗ ಮತ್ತೊಂದು ಕಿಯಾ ಕಾರು ಅಪಘಾತಕ್ಕೀಡಾಗಿದೆ. ಈ ಘಟನೆಯ ಕೆಲವು ಚಿತ್ರಗಳು ಇಂಟರ್ ನೆಟ್ ನಲ್ಲಿ ಕಾಣಿಸಿಕೊಂಡಿವೆ. ಈ ಚಿತ್ರಗಳಲ್ಲಿ ಸೆಲ್ಟೊಸ್ ಕಾರು ವಿತರಿಸುವ ಸಮಯದಲ್ಲಿ ದುರ್ಘಟನೆ ಸಂಭವಿಸಿದೆ. ಈ ಘಟನೆ ನಮ್ಮ ಬೆಂಗಳೂರಿನಲ್ಲಿ ಸಂಭವಿಸಿದ್ದು, ಯಾವ ಶೋರೂಂನಲ್ಲಿ ಈ ಘಟನೆ ಸಂಭವಿಸಿದೆ ಎಂಬ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.

ವಿತರಣೆ ವೇಳೆ ನೆಲಕ್ಕುರುಳಿದ ಕಿಯಾ ಸೆಲ್ಟೊಸ್‌ ಕಾರು

ಕಿಯಾ ಸೆಲ್ಟೊಸ್ ಕಾರಿನ ವಿತರಣೆ ಪಡೆಯುವ ವೇಳೆ ಈ ಘಟನೆ ನಡೆದಿರುವ ಸಾಧ್ಯತೆಗಳಿವೆ. ಎತ್ತರದ ಸ್ಥಳದಿಂದ ಕೆಳಗೆ ಬಿದ್ದ ಕಿಯಾ ಸೆಲ್ಟೊಸ್ ಕಾರನ್ನು ನೋಡಲು ಜನರ ಗುಂಪು ಜಮಾಯಿಸಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ವಿತರಣೆ ವೇಳೆ ನೆಲಕ್ಕುರುಳಿದ ಕಿಯಾ ಸೆಲ್ಟೊಸ್‌ ಕಾರು

ಕಿಯಾ ಮೋಟಾರ್ಸ್ ಈ ಎಸ್‌ಯುವಿಯನ್ನು 2019ರ ಆಗಸ್ಟ್‌ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಎಸ್‌ಯುವಿ ದೇಶಿಯ ಮಾರುಕಟ್ಟೆಯಲ್ಲಿ ಕಿಯಾ ಮೋಟಾರ್ಸ್ ಕಂಪನಿಯು ಬಿಡುಗಡೆಗೊಳಿಸಿದ ಮೊದಲ ಕಾರು.

ವಿತರಣೆ ವೇಳೆ ನೆಲಕ್ಕುರುಳಿದ ಕಿಯಾ ಸೆಲ್ಟೊಸ್‌ ಕಾರು

ನಂತರ ಕಿಯಾ ಮೋಟಾರ್ಸ್, ಕಾರ್ನಿವಲ್ ಕಾರನ್ನು ಬಿಡುಗಡೆಗೊಳಿಸಿತು. ಕಿಯಾ ಸೊನೆಟ್ ಬಿಡುಗಡೆಯಾದ ಕೆಲವೇ ತಿಂಗಳುಗಳಲ್ಲಿ ದೇಶದ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿ ಎಂಬ ಹೆಗ್ಗಳಿಕೆಯನ್ನು ಪಡೆಯಿತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ವಿತರಣೆ ವೇಳೆ ನೆಲಕ್ಕುರುಳಿದ ಕಿಯಾ ಸೆಲ್ಟೊಸ್‌ ಕಾರು

ಕಿಯಾ ಮೋಟಾರ್ಸ್, ದೇಶಿಯ ಮಾರುಕಟ್ಟೆಯಲ್ಲಿ ಒಂದು ವರ್ಷದ ಅವಧಿಯಲ್ಲಿ 1.25 ಲಕ್ಷ ಯುನಿಟ್‌ ಸೆಲ್ಟೊಸ್ ಕಾರುಗಳನ್ನು ಮಾರಾಟ ಮಾಡಿದೆ. ಈ ಕಾರು ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ ಮೂರು ಸ್ಟಾರ್ ರೇಟಿಂಗ್ ಪಡೆದಿದೆ.

ವಿತರಣೆ ವೇಳೆ ನೆಲಕ್ಕುರುಳಿದ ಕಿಯಾ ಸೆಲ್ಟೊಸ್‌ ಕಾರು

ಕ್ರ್ಯಾಶ್ ಟೆಸ್ಟ್'ನಲ್ಲಿ ಭಾಗಿಯಾಗಿದ್ದ ಸೆಲ್ಟೊಸ್‌ನ ಹೆಚ್‌ಟಿಇ ಮೂಲ ಮಾದರಿಯು ವಯಸ್ಕರ ಸುರಕ್ಷತೆಗಾಗಿ ಮೂರು ಸ್ಟಾರ್ ಹಾಗೂ ಮಕ್ಕಳ ಸುರಕ್ಷತೆಗಾಗಿ ಎರಡು ಸ್ಟಾರ್ ಗಳನ್ನು ಪಡೆದಿದೆ. ಈ ಕ್ರ್ಯಾಶ್ ಟೆಸ್ಟ್'ನಲ್ಲಿ ಕಿಯಾ ಸೆಲ್ಟೊಸ್ ಗಂಟೆಗೆ 64 ಕಿ.ಮೀ ವೇಗದಲ್ಲಿ ಗೋಡೆಗೆ ಅಪ್ಪಳಿಸಿತು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ವಿತರಣೆ ವೇಳೆ ನೆಲಕ್ಕುರುಳಿದ ಕಿಯಾ ಸೆಲ್ಟೊಸ್‌ ಕಾರು

ಕಿಯಾ ಸೆಲ್ಟೊಸ್‌ನ ಎಂಟ್ರಿ ಲೆವೆಲ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.9.89 ಲಕ್ಷಗಳಾದರೆ, ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.17.34 ಲಕ್ಷಗಳಾಗಿದೆ.

ವಿತರಣೆ ವೇಳೆ ನೆಲಕ್ಕುರುಳಿದ ಕಿಯಾ ಸೆಲ್ಟೊಸ್‌ ಕಾರು

ಟರ್ಬೊ ಪೆಟ್ರೋಲ್ ಆವೃತ್ತಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.15.54 ಲಕ್ಷದಿಂದ ರೂ.17.29 ಲಕ್ಷಗಳಾದರೆ, ಡೀಸೆಲ್ ಆವೃತ್ತಿಯ ಬೆಲೆ ಎಕ್ಸ್ ಶೋರೂಂದರದಂತೆ ರೂ.10.34 ಲಕ್ಷದಿಂದ ರೂ.17.34 ಲಕ್ಷಗಳಾಗಿದೆ.

Most Read Articles

Kannada
English summary
New Kia Seltos car falls down near showroom. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X