Accident: ಭಾರೀ ವೇಗದಲ್ಲಿ ಹೊಸ ಮಹೀಂದ್ರಾ ಸ್ಕಾರ್ಪಿಯೋ N, ಟ್ರ್ಯಾಕ್ಟರ್‌ ಮುಖಾಮುಖಿ..ಡಿಕ್ಕಿ ರಭಸಕ್ಕೆ ಎರಡು ತುಂಡು!

ಭಾರತದಲ್ಲಿ ಮಹೀಂದ್ರಾ ಕಂಪನಿಯ ಜನಪ್ರಿಯ 'ಸ್ಕಾರ್ಪಿಯೋ ಎನ್' ಎಸ್‌ಯುವಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದೆ. ಕಳೆದ ವರ್ಷ ಬಿಡುಗಡೆಯಾದ ಈ ಎಸ್‌ಯುವಿ ದೊಡ್ಡ ಮಟ್ಟದಲ್ಲಿ ಬೇಡಿಕೆ ಪಡೆದಿದೆ. ಇತ್ತೀಚೆಗೆ ನೂತನ ಸ್ಕಾರ್ಪಿಯೋ ಎನ್ ಹಾಗೂ ಟ್ರ್ಯಾಕ್ಟರ್‌ ಮುಖಾಮುಖಿಯಾಗಿದ್ದು, ಡಿಕ್ಕಿಯಾದ ರಭಸಕ್ಕೆ ಟ್ರ್ಯಾಕ್ಟರ್‌ ಎರಡು ತುಂಡಾಗಿದೆ.

ಉತ್ತರ ಪ್ರದೇಶದ ಬಾಗ್‌ಪತ್‌ನ ದ್ವಿಪಥ ರಸ್ತೆಯಲ್ಲಿ ಈ ಆಕ್ಸಿಡೆಂಟ್ ನಡೆದಿದೆ ಎಂದು ವರದಿಯಾಗಿದೆ. ರಾತ್ರಿ ಇಬ್ಬರು ವ್ಯಕ್ತಿಗಳು ಸ್ಕಾರ್ಪಿಯೊ ಎನ್‌ ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದರು. ಆಗ ಟ್ರಾಕ್ಟರ್ ನೊಂದಿಗೆ ಮುಖಾಮುಖಿಯಾಗಿದ್ದು, ಎರಡು ವಾಹನಗಳು ವೇಗದಲ್ಲಿಯೇ ಸಂಚರಿಸುತ್ತಿದ್ದವು ಎಂದು ಹೇಳಲಾಗಿದೆ. ಆದರೆ, ಸ್ಕಾರ್ಪಿಯೋದಲ್ಲಿ ಪ್ರಯಾಣಿಸುತ್ತಿದ್ದವರೂ ಟ್ರ್ಯಾಕ್ಟರ್‌ನಲ್ಲಿ ಹೆಡ್‌ಲ್ಯಾಂಪ್‌ ಆನ್ ಮಾಡಿರಲಿಲ್ಲ. ಇದರಿಂದ ರಸ್ತೆಯಲ್ಲಿ ಅದು ಕಾಣಲಿಲ್ಲ ಎಂದಿದ್ದಾರೆ.

Accident: ಭಾರೀ ವೇಗದಲ್ಲಿ ಹೊಸ ಮಹೀಂದ್ರಾ ಸ್ಕಾರ್ಪಿಯೋ ಎನ್, ಟ್ರ್ಯಾಕ್ಟರ್‌ ಮುಖಾಮುಖಿ.. ಡಿಕ್ಕಿ ರಭಸಕ್ಕೆ ಎರಡು ತುಂಡು!

ಇಲ್ಲಿ ಯಾರ ತಪ್ಪು ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬರಬೇಕಾಗಿದೆ. ಅಪಘಾತದ ಭೀಕರತೆ ಎಷ್ಟಿತ್ತೆಂದರೆ ಮಹೀಂದ್ರಾ ಸ್ಕಾರ್ಪಿಯೋ ಎನ್ ಮುಂಭಾಗಕ್ಕೆ ಸಂಪೂರ್ಣ ಜಖಂಗೊಂಡಿದ್ದು, ಗುದ್ದಿದ ರಭಸಕ್ಕೆ ಟ್ರ್ಯಾಕ್ಟರ್‌ ಎರಡು ಪೀಸ್ ಆಗಿದೆ. ಘಟನೆ ನಡೆದಾಗ ಸ್ಕಾರ್ಪಿಯೋದಲ್ಲಿದ್ದ ಏರ್ ಬಾಗ್ಸ್ ಓಪನ್ ಆಗಿದ್ದು, ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಟ್ರ್ಯಾಕ್ಟರ್‌ ಚಾಲಕನು ಗಾಯಗೊಂಡಿದ್ದಾನೆ. ಎಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅಪಘಾತವಾದರೂ ಸ್ಕಾರ್ಪಿಯೋ ಎನ್ ಪ್ರಯಾಣಿಕರು ಸುರಕ್ಷಿತವಾಗಿರಲು ಕಾರಣ, ಅದರಲ್ಲಿರುವ ಸೇಫ್ಟಿ ಫೀಚರ್ಸ್ ಕೂಡ ಆಗಿರಬಹುದು. ಇದು ಗ್ಲೋಬಲ್ NCAPಯಿಂದ ವಯಸ್ಕರ ರಕ್ಷಣೆ ವಿಭಾಗದಲ್ಲಿ 34ಕ್ಕೆ 29.25 ಅಂಕಗಳನ್ನು ಪಡೆಯುವ ಮೂಲಕ 5 ಸ್ಟಾರ್ ರೇಟಿಂಗ್ ಪಡೆದಿದ್ದು, ಮಕ್ಕಳ ರಕ್ಷಣೆ ವಿಭಾದಲ್ಲಿ 48ಕ್ಕೆ 29.25 ಅಂಕಗಳನ್ನು ಪಡೆದು 3 ಸ್ಟಾರ್ ರೇಟಿಂಗ್ ಗಳಿಸಿದೆ.

ಈ ಕಾರು, ಯಾವೆಲ್ಲ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳುವುದಾದರೆ, ಇದು 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯುಷನ್), ರೇರ್ ಪಾರ್ಕಿಂಗ್ ಸೆನ್ಸರ್ಸ್, ಫ್ರಂಟ್ ಹಾಗೂ ರೇರ್ ವೆಂಟಿಲೇಟೆಡ್ ಡಿಸ್ಕ್ ಬ್ರೇಕ್ಸ್ ಸೇರಿದಂತೆ ಅನೇಕ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ. ಇಲ್ಲಿ ನಡೆದ ಅಪಘಾತದಲ್ಲಿ ಏರ್‌ಬ್ಯಾಗ್ಸ್ ಅದ್ಬುತವಾಗಿ ಕಾರ್ಯನಿರ್ವಹಿಸಿವೆ.

ಕೆಲವೊಮ್ಮೆ ನಿರ್ದಿಷ್ಟ ಸ್ಥಳವನ್ನು (destination) ವೇಗವಾಗಿ ತಲುಪುವ ಸಲುವಾಗಿ ರಸ್ತೆಗಳಲ್ಲಿ ಕೆಲವರು ವಿರುದ್ಧ ದಿಕ್ಕಿನಲ್ಲಿ ವಾಹನಗಳನ್ನು ಚಲಾಯಿಸುತ್ತಾರೆ. ಅದು ದೊಡ್ಡ ಮಟ್ಟದ ಅಪಘಾತಕ್ಕೆ ಕಾರಣವಾಗಬಹುದು. ಆದ್ದರಿಂದ ಹೆದ್ದಾರಿ ಸೇರಿದಂತೆ ಸಾಮಾನ್ಯ ರಸ್ತೆಯಲ್ಲಿ ವಾಹನಗಳನ್ನು ಸರಿಯಾದ ಲೈನ್ ನಲ್ಲಿ ಚಲಾಯಿಸುವ ಅಭ್ಯಾಸವನ್ನು ರೂಡಿಸಿಕೊಳ್ಳಿ. ಮೊದಲೇ, ಗುಡ್ಡಗಾಡಿನ ಪ್ರದೇಶದಲ್ಲಿ ಸಣ್ಣ ರೋಡ್ ಇರುತ್ತದೆ. ಅಲ್ಲಿ ಸಂಚರಿಸುವಾಗ ಎದುರಿಗೆ ಬರುವ ವಾಹನಗಳ ಬಗ್ಗೆ ಜಾಗೃತಿ ಇರಲಿ.

ವಾಹನ ಚಲಾಯಿಸುವಾಗ ಪ್ರತಿಯೊಬ್ಬರು ತಪ್ಪದೇ ಸಂಚಾರಿ ನಿಯಮಗಳನ್ನು ಪಾಲಿಸಿ. ಮದ್ಯಪಾನ ಮಾಡಿ ವಾಹನಗಳನ್ನು ಎಂದಿಗೂ ಓಡಿಸಬೇಡಿ. ಮೊಬೈಲ್ ಅಥವಾ ಏರ್ ಫೋನ್ ನಲ್ಲಿ ಮಾತನಾಡಿಕೊಂಡು ಕಾರು ಅಥವಾ ದ್ವಿಚಕ್ರ ವಾಹನಗಳನ್ನು ಓಡಿಸಬೇಡಿ. ತಪ್ಪದೇ ಸೀಟ್ ಬೆಲ್ಟ್ ಅಥವಾ ಹೆಲ್ಮೆಟ್ ಧರಿಸಿ. ನಿಗದಿತ ವೇಗದ ಮಿತಿಯಲ್ಲಿ ವಾಹನವನ್ನು ಚಲಾಯಿಸಿರಿ. ಈ ಮೂಲಕ ಅಪಘಾತವನ್ನು ತಪ್ಪಿಸಬಹುದು.

ಈ ಘಟನೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಎನ್, ಟ್ರ್ಯಾಕ್ಟರ್‌ ಡಿಕ್ಕಿಯಾಗಿದ್ದು, ಅದು ಎರಡು ಪೀಸ್ ಆಗಿದೆ. ಸ್ಕಾರ್ಪಿಯೋ ಪ್ರಯಾಣಿಕರು, ಟ್ರ್ಯಾಕ್ಟರ್‌ ಚಾಲಕ ಹೆಡ್‌ಲ್ಯಾಂಪ್‌ ಆಫ್ ಮಾಡಿದ್ದನು ಅದೇ ಅಪಘಾತಕ್ಕೆ ಕಾರಣವೆಂದು ಹೇಳಿದ್ದಾರೆ. ಆದರೆ, ತನಿಖೆಯಿಂದ ಸತ್ಯಸತ್ಯತೆ ಹೊರಬರಬೇಕಿದ್ದು, ಸ್ಕಾರ್ಪಿಯೋ ಬಹಳಷ್ಟು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಇಬ್ಬರು ಪ್ರಯಾಣಿಕರು ಸುಲಭವಾಗಿ ಬಚಾವ್ ಆಗಿದ್ದಾರೆ. ಏನೇ ಆಗಲಿ ನಿಮ್ಮ ಎಚ್ಚರಿಕೆಯಲ್ಲಿ ನೀವು ವಾಹನ ಚಲಾಯಿಸಿ.

Article Published On: Thursday, April 20, 2023, 15:21 [IST]
English summary
New mahindra scorpio n crashes tractor details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+