ಮಾಡಿಫೈಗೊಂಡು ಉಗ್ರರೂಪ ತಾಳಿದ ರಣಬೇಟೆಗಾರ ಮಾರುತಿ ಜಿಮ್ನಿ: ಖರ್ಚಾಗಿದ್ದು ಎಷ್ಟು ಲಕ್ಷ ಗೊತ್ತಾ?

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜಿಮ್ನಿ ಎಸ್‍ಯುವಿಯು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿ ಹೊಸ ಸಂಚಲನವನ್ನು ಸೃಷ್ಟಿಸಿತು. ಇದೀಗ ಜನಪ್ರಿಯ ಜಿಮ್ನಿ ಎಸ್‍ಯುವಿಗೆ ಭಾರತೀಯ ಮಾರುಕಟ್ಟೆಯಲ್ಲೂ ಕೂಡ ಬಾರೀ ಬೇಡಿಕೆಯೊಂದಿಗೆ ಸಂಚಲನ ಸೃಷ್ಟಿಸಿದೆ. ಒಂದು ಕಾಲದ ಆಫ್-ರೋಡ್ ಕಿಂಗ್ ಆಗಿದ್ದ ಜಿಪ್ಸಿಯ ಉತ್ತರಾಧಿಕಾರಿಯಾಗಿ ಬಂದ ಜಿಮ್ನಿಯೂ ಕೂಡ ಅದೇ ರೀತಿಯ ಜನಪ್ರಿಯತೆ ಗಳಿಸುತ್ತಿದೆ.

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ಮ್ನ ಹೊಸ ಜಿಮ್ನಿ ಎಸ್‌ಯುವಿ ವಿತರಣೆಯನ್ನು ಪ್ರಾರಂಭಿಸಿದೆ. ಈ ಮಾರುತಿ ಜಿಮ್ಮಿ (Maruti Jimny) ಆಫ್-ರೋಡ್ ಪ್ರೇಮಿಗಳು ಈಗಾಗಲೇ ಮಾಡಿಫೈ ಮಾಡಲು ಪ್ರಾರಂಭಿಸಿದ್ದಾರೆ. ದೆಹಲಿ ಮೂಲದ AM ರೇಸಿಂಗ್‌ನಿಂದ ಕಸ್ಟಮೈಸ್ ಮಾಡಲಾದ ಒಂದು ನಿರ್ದಿಷ್ಟ ಬಿಳಿ-ಬಣ್ಣದ ಮಾರುತಿ ಸುಜುಕಿ ಜಿಮ್ನಿಯ ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.

Modified Maruti Jimny

AM ರೇಸಿಂಗ್‌ನಿಂದ ಮಾಡಿಫೈ ಮಾಡಲಾದ ಮಾರುತಿ ಜಿಮ್ನಿ ಅಚಿಂತ್ಯ ಮೆಹ್ರೋತ್ರಾ ಅವರಿಗೆ ಸೇರಿದೆ .ಮಾರುತಿ ಜಿಮ್ನಿ ಎಸ್‍ಯುವಿಯ ಝೀಟಾ ರೂಪಾಂತರವು 15-ಇಂಚಿನ ಸ್ಟೀಲ್ ವ್ಹೀಲ್ ಗಳನ್ನು ಬದಲಿಸಿ, ಗೋಲ್ಡನ್ ಬಣ್ಣದಲ್ಲಿ ENKEI ಜಪಾನ್ RPT1 ಅಲಾಯ್ ವ್ಹೀಲ್ ಗಳನ್ನು ನೀಡಿದ್ದಾರೆ. ಈ ಟ್ವಿನ್ 5-ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ಕಾಂಟಿನೆಂಟಲ್ ಕ್ರಾಸ್ ಕಾಂಟ್ಯಾಕ್ಟ್ ಎಟಿ ಆಲ್-ಟೆರೈನ್ ಟೈರ್‌ಗಳೊಂದಿಗೆ ಅಳವಡಿಸಲಾಗಿದೆ.

ಇದಲ್ಲದೆ, ಮಾರುತಿ ಜಿಮ್ನಿ ಎಸ್‍ಯುವಿಯು ತನ್ನ ಸಸ್ಪೆಕ್ಷನ್ ಸಿಸ್ಟಂ ಬಗ್ಗೆ ಮಾರ್ಪಾಡುಗಳನ್ನು ಹೊಂದಿದೆ. ಇದು ಈಗ ಸರಿಹೊಂದಿಸಬಹುದಾದ ಎತ್ತರ ಮತ್ತು ಡ್ಯಾಂಪಿಂಗ್ ಸಾಮರ್ಥ್ಯಗಳೊಂದಿಗೆ TANABE ಜಪಾನ್ ಕಾಯಿಲೋವರ್ ಕಿಟ್ ಅನ್ನು ಹೊಂದಿದೆ. ಇದು ವಾಹನದ ಸಸ್ಪೆನ್ಶನ್ ಅನ್ನು ಹೆಚ್ಚಿಸಲು ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ 14-ಕ್ಲಿಕ್ ಹೊಂದಾಣಿಕೆ ಡಯಲ್ ಮೂಲಕ ಸರಿಹೊಂದಿಸಬಹುದು.

Modified Maruti Jimny

ಹೆಚ್ಚುವರಿಯಾಗಿ, ಜಿಮ್ನಿಯು ಮುಂಭಾಗ ಮತ್ತು ಹಿಂಭಾಗದ ಲ್ಯಾಟರಲ್ ರಾಡ್‌ಗಳು, ಸ್ಟೀರಿಂಗ್ ಡ್ಯಾಂಪರ್ ಮತ್ತು ಮುಂಭಾಗದ ಸ್ಟ್ರಟ್ ಬ್ರೇಸ್‌ನೊಂದಿಗೆ ಸಜ್ಜುಗೊಂಡಿದೆ. ಇವುಗಳನ್ನು TANABE ಜಪಾನ್‌ನಿಂದ ಪಡೆಯಲಾಗಿದೆ. ಹೊಸ ಮಾರುತಿ ಸುಜುಕಿ ಜಿಮ್ನಿಗೆ ಮಾಡಲಾದ ಈ ಮಾಡಿಫೈ, ಈ ಎಸ್‍ಯುವಿಯನ್ನು ಮತ್ತಷ್ಟು ಅಗ್ರೇಸಿವ್ ಲುಕ್ ಅನ್ನು ನೀಡಿದೆ. ಆಫ್-ರೋಡಿಂಗ್ ಅನುಭವವನ್ನು ಸಂಪೂರ್ಣ ಹೊಸ ಮಟ್ಟಕ್ಕೆ ಏರಿಸುತ್ತವೆ.

ಇಂತಹ ಮಾಡಿಫೈಗಳು ಗಮನಾರ್ಹ ವೆಚ್ಚದಲ್ಲಿ ಬರುತ್ತವೆ ಎಂಬುದನ್ನು ಗಮನಿಸಬೇಕಾದ ಮುಖ್ಯ ಅಂಶವಾಗಿದೆ. ನಾಲ್ಕು Enkei RPT1 ಅಲಾಯ್ ವ್ಹೀಲ್ ಗಳು ಸುಮಾರು ಸುಮಾರು 1.45 ಲಕ್ಷವಿದೆ. ಇನ್ನು ಟೈರುಗಳು ಸುಮಾರು 50,000 ರೂ. ಸ್ಟೀರಿಂಗ್ ಡ್ಯಾಂಪರ್, ಫ್ರಂಟ್ ಸ್ಟ್ರಟ್ ಬ್ರೇಸ್ ಮತ್ತು ಫ್ರಂಟ್ ಮತ್ತು ರಿಯರ್ ಲ್ಯಾಟರಲ್ ರಾಡ್‌ಗಳ ಬೆಲೆ ಸುಮಾರು ರೂ.27,000 ರಿಂದ ರೂ.29,000, ಅಂದರೆ ಸುಮಾರು ರೂ 85,000 ಆಗಿದೆ.

ಎತ್ತರ ಮತ್ತು ಡ್ಯಾಂಪಿಂಗ್ ಹೊಂದಾಣಿಕೆಯ ಸಸ್ಪೆಕ್ಷನ್ ಬೆಲೆ 1.45 ಲಕ್ಷ ರೂ. ಆಮದು ಮತ್ತು ಅನುಸ್ಥಾಪನೆಯ ವೆಚ್ಚಗಳು ಸುಮಾರು 1 ಲಕ್ಷ ರೂ.ಗಳವರೆಗೆ ಸೇರಿಕೊಳ್ಳುತ್ತವೆ. ಇದರ ಪರಿಣಾಮವಾಗಿ ಒಟ್ಟು ಮಾರ್ಪಾಡು ವೆಚ್ಚ ಸುಮಾರು 5.5 ಲಕ್ಷ ರೂ. ಆಗಿತ್ತದೆ. ಇನ್ನು ಬೆಲೆ ಏರಿಕೆ, ವಿದೇಶೀ ವಿನಿಮಯ ಏರಿಳಿತಗಳು ಮತ್ತು ಅಂತರಾಷ್ಟ್ರೀಯ ಸರಕು ಸಾಗಣೆಗಳ ಕಾರಣದಿಂದಾಗಿ ಎಲ್ಲಾ ಬೆಲೆಗಳು ವ್ಯತ್ಯಾಸಕ್ಕೆ ಒಳಪಟ್ಟಿರುತ್ತವೆ.

ಈ ಮಾಡಿಫೈ ನಿಸ್ಸಂದೇಹವಾಗಿ ಜಿಮ್ನಿಯ ಸೌಂದರ್ಯ ಮತ್ತು ಚಾಲನಾ ಅನುಭವವನ್ನು ಹೆಚ್ಚಿಸುತ್ತದೆ. ಈ ಹೊಸ ಮಾರುತಿ ಜಿಮ್ನಿ ಎಸ್‍ಯುವಿಯು ದೇಶೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾಗೆ ಭಾರೀ ಪೈಪೋಟಿ ನೀಡುತ್ತಿದೆ. ಮಾರುತಿ ಜಿಮ್ನಿ ಎಸ್‍ಯುವಿಗೆ ಇಷ್ಟು ದೊಡ್ಡ ಮಟ್ಟದ ಬೇಡಿಕೆಯನ್ನು ಹೊಂದಿರುವುದರಿಂದ ಇದರ ಕಾಯುವ ಅವಧಿಯು 8 ತಿಂಗಳವರೆಗೆ ವಿಸ್ತರಿಸಿದೆ.

Image Courtesy: AM Racing/Facebook

More from DriveSpark

Article Published On: Friday, June 16, 2023, 11:28 [IST]
English summary
New maruti jimny suv with modifications details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+