Maruti: ಡೆಲಿವರಿ ದಿನವೇ ಅಪಘಾತ: ತಲೆಕೆಳಗಾದ ಜನರ ನಂಬಿಕೆ: 5-ಸ್ಟಾರ್ ಮಾರುತಿ ಕಾರು ನಜ್ಜು-ಗುಜ್ಜು
ಭಾರತದಲ್ಲಿ ಸುರಕ್ಷಿತ ಕಾರುಗಳ ವಿಷಯಕ್ಕೆ ಬಂದರೆ ಕೇವಲ ಬೆರಳೆಣಿಕೆಯಷ್ಟು ಬ್ರಾಂಡ್‌ಗಳು ಮಾತ್ರ ಉತ್ತಮ ನಿರ್ಮಾಣ ಗುಣಮಟ್ಟವನ್ನು ಹೊಂದಿವೆ. ಟಾಟಾ, ಮಹೀಂದ್ರಾದಂತಹ ಕಾರು ಬ್ರಾಂಡ್‌ಗಳು ದೇಶದಲ್ಲಿ 5-ಸ್ಟಾರ್ ರೇಟಿಂಗ್‌ನ ಸುರಕ್ಷಿತ ಕಾರುಗಳನ್ನು ನೀಡುತ್ತಿವೆ. ಮಾರುತಿ ಸುಜುಕಿ ವಿಷಯಕ್ಕೆ ಅಗ್ಗದ ಬೆಲೆಗೆ ಬೆಸ್ಟ್ ಮೈಲೇಜ್ ಕಾರುಗಳನ್ನು ನೀಡುತ್ತದರೆಯಾದರೂ, ಸುರಕ್ಷತೆ ವಿಷಯದಲ್ಲಿ ಹಿಂದುಳಿದಿದೆ ಎಂಬ ಕೆಟ್ಟ ಹೆಸರನ್ನು ಹೊಂದಿತ್ತು. ಆದರೆ ಹೊಸ ನಾಲ್ಕನೇ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಗ್ಲೋಬಲ್ ಎನ್‌ಸಿಎಪಿಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದು ದೇಶದ ಎಲ್ಲರಿಗೂ ಆಶ್ಚರ್ಯವನ್ನುಂಟುಮಾಡಿದೆ.
ಆದರೆ ದೇಶದಲ್ಲಿ ಸುರಕ್ಷತೆ ಬಗ್ಗೆ ಬ್ರಾಂಡ್‌ಗಿರುವ ಅಪಪ್ರಚಾರದ ಕಾರಣದಿಂದಾಗಿ ಅನೇಕ ಜನರು ಇನ್ನೂ ಮಾರುತಿ ಕಾರುಗಳನ್ನು ಅನುಮಾನಿಸುತ್ತಿದ್ದಾರೆ. ಆದರೆ ಈ ಅನುಮಾನಗಳನ್ನು ತೊಡೆದುಹಾಕುವಂತೆ ಇತ್ತೀಚೆಗೆ ನಡೆದ ಮಾರುತಿ ಡಿಜೈರ್ ಅಪಘಾತವು ಮಾರುತಿ ಬ್ರಾಂಡ್ ಅನ್ನು ನಂಬುವಂತೆ ಮಾಡಿದೆ. ಹೊಸ ಡಿಜೈರ್ ನಿಜವಾಗಿಯೂ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದ ಸೆಡಾನ್ ಎಂದು ಸಾಬೀತಾಗಿದೆ.

ಹೊಚ್ಚ ಹೊಸ ಡಿಜೈರ್ ಭಯಾನಕ ಅಪಘಾತಕ್ಕೆ ಒಳಗಾಗಿದ್ದು, ಕಾರು ನಿರ್ಮಾಣದಲ್ಲಿ ಎಷ್ಟು ಪ್ರಬಲವಾಗಿದೆ ಎಂಬುದನ್ನು ತೋರಿಸಿದೆ. ಅಪಘಾತಕ್ಕೊಳಗಾದ ಕಾರನ್ನು ನೋಡಿದ್ರೆ ಇತ್ತೀಚೆಗೆ ಡೆಲಿವರಿ ಪಡೆದಂತೆ ಕಾಣುತ್ತಿದ್ದು, ಕಾರಿನ ಮೇಲಿರುವ ರಿಬ್ಬನ್ ಕೂಡ ತೆಗೆದಿಲ್ಲ. ಕಾರು ಭಾಗಶಃ ಹಾನಿಯಾಗಿದ್ದು, ವಿಡಿಯೋದಲ್ಲಿ ಯಾವೆಲ್ಲಾ ಭಾಗಗಳಿಗೆ ಹಾನಿಯಾಗಿದೆ ಎಂಬುದನ್ನು ವಿಡಿಯೋ ಮಾಡಿರುವ ವ್ಯಕ್ತಿ ವಿವರಿಸಿದ್ದಾರೆ.
ಮಾರುತಿ ಡಿಜೈರ್ ಕಾರಿನ ಕ್ಯಾಬಿನ್ ಒಳಗೆ ಎರಡು ಮುಂಭಾಗದ ಏರ್‌ಬ್ಯಾಗ್‌ಗಳು ಮಾತ್ರ ತೆರೆದುಕೊಂಡಿವೆ. ಡಿಜೈರ್‌ನ ಹಿಂಭಾಗವು ಭಾರೀ ಹಾನಿಯಾಗಿದ್ದು ಹಿಂಭಾಗದ ವಿಂಡ್‌ಶೀಲ್ಡ್ ಸಹ ಸಂಪೂರ್ಣವಾಗಿ ಪುಡಿಪುಡಿಯಾಗಿದೆ. ಬಾಗಿಲುಗಳು ಹಾಗೇ ಇದ್ದರೂ, ಮುಂಭಾಗದ ಸಂಪೂರ್ಣ ಬಂಪರ್, ಹೆಡ್ ಲೈಟ್‌ಗಳು ಮತ್ತು ಗ್ರಿಲ್ ಹಾಳಾಗಿವೆ.

ಹೊರಭಾಗ ಸಂಪೂರ್ಣವಾಗಿ ಹಾನಿಯಾಗಿದ್ದರೂ, ವಾಹನದ ಒಳಭಾಗದ ಕ್ಯಾಬಿನ್ ಹಾಗೇ ಇದೆ. ಈ ಅಪಘಾತದ ಸಮಯದಲ್ಲಿ ಒಳಗೆ ಇದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ. ಆದರೆ ಹೊಸ ನಾಲ್ಕನೇ ತಲೆಮಾರಿನ ಮಾರುತಿ ಡಿಜೈರ್ ಆರು ಏರ್ ಬ್ಯಾಗ್‌ಗಳೊಂದಿಗೆ ಬರುತ್ತದೆ. ಕೇವಲ ಎರಡು ಏರ್‌ಬ್ಯಾಗ್‌ಗಳು ಮಾತ್ರ ಏಕೆ ತೆರೆದುಕೊಂಡಿವೆ ಎಂಬ ಪ್ರಶ್ನೆ ಮೂಡಬಹುದು.
ಸರಿ, ಈ ಪ್ರಶ್ನೆಗೆ ಉತ್ತರವೇನೆಂದರೆ ಏರ್ ಬ್ಯಾಗ್‌ಗಳು ತೆರೆದುಕೊಳ್ಳಲು ನಿರ್ಧರಿಸುವ ಸೆನ್ಸಾರ್‌ಗಳು ಯಾವ ಭಾಗಕ್ಕೆ ಡಿಕ್ಕಿಯಾಗಿದೆ ಎಂಬುದನ್ನು ಆಧರಿಸಿ ತೆರೆದುಕೊಳ್ಳುತ್ತವೆ. ಹೊಸ ಡಿಜೈರ್ ಅಪಘಾತವನ್ನು ನೋಡುವುದಾದ್ರೆ, ಬದಿಗಳಲ್ಲಿ ಯಾವುದೇ ಹಾನಿಯಾಗದಿರುವುದರಿಂದ ಸೈಡ್ ಏರ್‌ಬ್ಯಾಗ್‌ಗಳು ತೆರೆದುಕೊಂಡಿಲ್ಲ ಎಂಬುದು ನಮ್ಮ ಅಭಿಪ್ರಾಯವಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.
ಡಿಜೈರ್‌ಗೆ 5 - ಸ್ಟಾರ್ ರೇಟಿಂಗ್: ಮಾರುತಿ ಸುಜುಕಿ ಡಿಜೈರ್, ಗ್ಲೋಬಲ್ ಎನ್‌ಸಿಎಪಿ ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ 34 ಅಂಕಗಳಿಗೆ 31.24 ಅಂಕಗಳನ್ನು ಗಳಿಸುವ ಮೂಲಕ 5-ಸ್ಟಾರ್ ರೇಟಿಂಗ್ ಪಡೆದಿದೆ. ಅದೇ ರೀತಿಯಲ್ಲಿ ಮಕ್ಕಳ ರಕ್ಷಣೆ ವಿಭಾಗದಲ್ಲಿ 42 ಅಂಕಗಳಿಗೆ 39.20 ಅಂಕಗಳನ್ನು ಪಡೆದು 4 - ಸ್ಟಾರ್ ರೇಟಿಂಗ್‌ನ್ನು ತನ್ನದಾಗಿಸಿಕೊಂಡಿದೆ.
ಈ ಡಿಜೈರ್ ಕಾರಿನಲ್ಲಿ ಆರು ಏರ್‌ಬ್ಯಾಗ್‌ಗಳು, ESP, ಹಿಲ್ ಹೋಲ್ಡ್ ಅಸಿಸ್ಟ್, EBD ಜೊತೆಗೆ ABS, ಬ್ರೇಕ್ ಅಸಿಸ್ಟ್, ಎಲ್ಲಾ ಸೀಟ್‌ಗಳಿಗೆ ಮೂರು-ಪಾಯಿಂಟ್ ಸೀಟ್ ಬೆಲ್ಟ್‌ಗಳು ಮತ್ತು ISOFIX ಮೌಂಟ್‌ಗಳಂತಹ ಸುರಕ್ಷತಾ ಫೀಚರ್ಸ್‌ಗಳಿವೆ. ಈ ಹೊಸ ಮಾರುತಿ ಸುಜುಕಿ ಡಿಜೈರ್ ಎಕ್ಸ್ ಶೋರೂಂ ಪ್ರಕಾರ ಆರಂಭಿಕ ಬೆಲೆಯು ರೂ.6.79 ಲಕ್ಷವಾಗಿದೆ. ಕಳೆದ ತಿಂಗಳು ಮಾರುತಿ ಡಿಜೈರ್ ಕಾರಿನ 10,709 ಯುನಿಟ್‌ಗಳು ಮಾರಾಟವಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications