ಹೊಚ್ಚ ಹೊಸ ಕಾರು ಡೆಲಿವರಿ ದಿನವೆ ಅಪಘಾತ: ನಡುರಸ್ತೆಯಲ್ಲಿ ಕುಳಿತು ಕಣ್ಣೀರಿಟ್ಟ ಮಾಲೀಕ!
ಕನಸಿನ ಕಾರನ್ನು ಇಷ್ಟಪಟ್ಟು ಖರೀದಿಸಿ ಡೆಲಿವರಿ ಪಡೆದ ದಿನವೇ ಅಪಘಾತಕ್ಕೀಡಾದರೆ ಹೇಗಿರುತ್ತದೆ? ಹೌದು, ಇಂಥಹದ್ದೇ ಘಟನೆ ಇತ್ತೀಚೆಗೆ ನಡೆದಿದ್ದು, ಹೊಚ್ಚ ಹೊಸ ನಿಸ್ಸಾನ್ ಮ್ಯಾಗ್ನೈಟ್ ಕಾರು ಅಪಘಾತದಲ್ಲಿ ಸಿಲುಕಿದ ದುರದೃಷ್ಟಕರ ಘಟನೆ ವೈರಲ್ ಆಗಿದೆ. ಅಪಘಾತದ ನಂತರ ಕಾರಿನ ಮಾಲೀಕ ರಸ್ತೆ ಬದಿಯಲ್ಲಿ ಕುಳಿತು ಅಳುತ್ತಿರುವುದು ಕಂಡುಬಂದಿದೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಘಟನೆ ಪುಣೆಯಲ್ಲಿ ನಡೆದಿದೆ ಎನ್ನಲಾಗಿದ್ದು, ನಿಸ್ಸಾನ್ ಮ್ಯಾಗ್ನೈಟ್ ಮುರಿದ ಮುಂಭಾಗದ ಬಂಪರ್, ಬದಿಯ ಹೆಡ್‌ಲ್ಯಾಂಪ್‌ನೊಂದಿಗೆ ರಸ್ತೆಯಲ್ಲಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ಘಟನೆಯಿಂದಾಗಿ ಮಾಲೀಕ ಉದ್ವಿಗ್ನನಾಗಿ ಅಳುವುದನ್ನು ನಾವು ನೋಡಬಹುದು, ಡೆಲಿವರಿ ತೆಗೆದುಕೊಂಡ ಕೂಡಲೇ ಕಾರು ಅಪಘಾತಕ್ಕೀಡಾಗಿದೆ ಎಂದು ತೋರುತ್ತಿದೆ. ಇದು ನಿಜವಾಗಿಯೂ ತುಂಬಾ ದುಃಖದ ದೃಶ್ಯವಾಗಿದೆ. ಚಾಲಕ ಎಡಭಾಗದಲ್ಲಿ ವಾಹನ ಅಥವಾ ಅಡೆತಡೆಯನ್ನು ನೋಡದೆ ಡಿಕ್ಕಿ ಹೊಡೆದಿದ್ದಾನೆ ಎಂದು ಹೇಳಲಾಗುತ್ತಿದೆ. ಅಥವಾ ಚಾಲಕ ಹೊಸ ಕಾರೆಂಬ ಕಾರಣಕ್ಕೆ ಭಯಭೀತನಾಗಿ ಓಡಿಸಿರಬಹುದು.

ನೀವು ವೀಡಿಯೊವನ್ನು ನೋಡಿದರೆ, ಇದು ದೊಡ್ಡ ಅಪಘಾತವೆಂದು ತೋರುವುದಿಲ್ಲ. ಆದರೆ ಅಪಘಾತವು ನಿಖರವಾಗಿ ಹೇಗೆ ಸಂಭವಿಸಿತು ಎಂಬುದು ತಿಳಿದುಬಂದಿಲ್ಲ. ಈ ವಿಡಿಯೋಗೆ ಬಂದ ಕಮೆಂಟ್‌ಗಳನ್ನು ಪರಿಶೀಲಿಸಿದ ನಂತರ, ಮ್ಯಾಗ್ನೈಟ್ ರಸ್ತೆಯ ಮಧ್ಯದಲ್ಲಿ ಇದ್ದಕ್ಕಿದ್ದಂತೆ ನಿಂತ ಮತ್ತೊಂದು ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ ಎಂದು ಉಲ್ಲೇಖಿಸಲಾಗಿದೆ.
ಆದರೆ ನಾವು ವೀಡಿಯೊದಲ್ಲಿ ಇತರ ಯಾವುದೇ ವಾಹನವನ್ನು ನೋಡುವುದಿಲ್ಲ. ಇನ್ನೊಂದು ವಾಹನದ ಚಾಲಕ ಸ್ಥಳದಿಂದ ಪರಾರಿಯಾಗಿರುವ ಸಾಧ್ಯತೆಯಿದೆ. ಕಾರಣ ಏನೇ ಇರಲಿ, ಇದು ದುರದೃಷ್ಟಕರ ಘಟನೆ. ಮಾಲೀಕ ದೇವಾಲಯದಲ್ಲಿ ಪೂಜೆ ಮಾಡಿದ ನಂತರ ಕಾರನ್ನು ಮನೆಗೆ ಕೊಂಡೊಯ್ಯುತ್ತಿದ್ದರು ಎಂದು ತೋರುತ್ತದೆ. ಈ ಅಪಘಾತದಲ್ಲಿ ನಿಸ್ಸಾನ್ ಮ್ಯಾಗ್ನೈಟ್‌ನ ಫೆಂಡರ್, ಹೆಡ್ ಲ್ಯಾಂಪ್ ಮತ್ತು ಬಂಪರ್ ಹಾನಿಗೊಳಗಾಗಿವೆ.

ಮಾಲೀಕ ವಾಹನವನ್ನು ಮತ್ತೆ ಸರ್ವಿಸ್ ಸೆಂಟರ್‌ಗೆ ತೆಗೆದುಕೊಂಡು ಹೋಗಿ ವಿಮೆಯ ಅಡಿಯಲ್ಲಿ ದುರಸ್ತಿ ಮಾಡಿದ್ದಾರೆ ಎಂದು ಭಾವಿಸಿದ್ದೇವೆ. ಈ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ತಕ್ಷಣವೇ ಫುಲ್ ವೈರಲ್ ಆಗಿದೆ. ಕಾರು ದುರಸ್ತಿಗೊಂಡು ಶೀಘ್ರದಲ್ಲೇ ರಸ್ತೆಗೆ ಮರಳುತ್ತದೆ ಎಂದು ಹೇಳುವ ಮೂಲಕ ಹೆಚ್ಚಿನ ಕಾಮೆಂಟ್‌ಗಳು ಮಾಲೀಕರನ್ನು ಸಮಾಧಾನಪಡಿಸಿವೆ.
ಹೊಚ್ಚ ಹೊಸ ಕಾರನ್ನು ಡೆಲಿವರಿ ಪಡೆದ ದಿನವೇ ಇಂತಹ ಅಪಘಾತ ಎದುರಾಗುವುದು ನಿಜಕ್ಕೂ ವಿಷಾದನೀಯ. ಕಾರನ್ನು ಖರೀದಿಸಿ ಇಂತಹ ಘಟನೆಯನ್ನು ಎದುರಿಸಿದವರಿಗೆ ಮಾತ್ರ ಈ ನೋವು ಅರಿಯುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ವಿಮೆ ಇರುವುದರಿಂದ ಯಾವುದೇ ಚಿಂತಿಸುವ ಅಗತ್ಯವಿಲ್ಲ ಎಂದು ಇನ್ನೂ ಕೆಲವರು ಮಾಲೀಕನಿಗೆ ಧೈರ್ಯ ತುಂಬಿದ್ದಾರೆ.
ಇಂತಹ ಮೊದಲ ದಿನದ ಅಪಘಾತಗಳ ಕುರಿತಂತೆ ನಾವು ಈಗಾಗಲೇ ಹಲವು ಸುದ್ದಿಗಳನ್ನು ಮಾಡಿದ್ದೇವೆ. ಕಾರನ್ನು ಡೆಲಿವರಿ ಪಡೆಯುವ ಮುನ್ನ ಆ ಕಾರಿನ ಬಗ್ಗೆ ಸಂಪೂರ್ಣವಾಗಿ ತಿಳಿಯುವುದು ಉತ್ತಮ. ಏಕೆಂದರೆ ಇತ್ತೀಚಿನ ಹೊಸ ಕಾರುಗಳಲ್ಲಿ ನಮಗೆ ತಿಳಿಯದ ಹಲವು ಫೀಚರ್ಸ್ ಇರುವುದರಿಂದ ಒಮ್ಮೆ ಕಂಪನಿಯ ಸಿಬ್ಬಂದಿಯೊಂದಿಗೆ ಆ ಕಾರಿನ ಬಗ್ಗೆ ವಿವರವಾದ ಮಾಹಿತಿ ಪಡೆಯುವುದು ಉತ್ತಮ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications