ಶೋರೂಂನಿಂದಲೇ ಕಳುವಾಯ್ತು ನೋಂದಣಿಯಾಗದ ಹೊಸ ಕಾರು

ಹ್ಯಾರಿಯರ್, ಟಾಟಾ ಮೋಟಾರ್ಸ್ ಕಂಪನಿಯ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಈ ಕಾರನ್ನು ಶೋ ರೂಂನಿಂದ ಅಪರಿಚಿತ ವ್ಯಕ್ತಿಯೊಬ್ಬ ಕಳುವು ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಶೋರೂಂನಿಂದಲೇ ಕಳುವಾಯ್ತು ನೋಂದಣಿಯಾಗದ ಹೊಸ ಕಾರು

ಗುರುಗ್ರಾಮದ ಟಾಟಾ ಕಾರು ಶೋರೂಂ ಬಳಿ ಈ ಘಟನೆ ನಡೆದಿದೆ. ಜೂನ್ 15ರಂದು ಟಾಟಾ ಹ್ಯಾರಿಯರ್ ಎಸ್‌ಯುವಿಯನ್ನು ಕಳುವು ಮಾಡಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಹೇಳುವುದಾದರೆ ಈ ಘಟನೆ ಬೆಳಿಗ್ಗೆ 5.30ರಲ್ಲಿ ಸಂಭವಿಸಿದೆ.

ಶೋರೂಂನಿಂದಲೇ ಕಳುವಾಯ್ತು ನೋಂದಣಿಯಾಗದ ಹೊಸ ಕಾರು

ಹ್ಯಾರಿಯರ್ ಎಸ್‌ಯುವಿಯ ಹೊಸ ಬ್ಯಾಚ್‌ ಅನ್ನು ಕಳುವು ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಹೊಸ ಬ್ಯಾಚ್ ಜೂನ್ 13 ರಂದು ಟಾಟಾ ಮೋಟಾರ್ಸ್ ಉತ್ಪಾದನಾ ಘಟಕದಿಂದ ಶೋರೂಂ ತಲುಪಿತ್ತು. ತಲುಪಿದ ಎರಡು ದಿನಗಳಲ್ಲಿಯೇ ಈ ಘಟನೆ ಸಂಭವಿಸಿದೆ.

ಶೋರೂಂನಿಂದಲೇ ಕಳುವಾಯ್ತು ನೋಂದಣಿಯಾಗದ ಹೊಸ ಕಾರು

ಝಡ್‌ಟೆಕ್ಸ್ ಟಾಟಾ ಮೋಟಾರ್ಸ್ ಫಾಜಿಲ್‌ಪುರ್ ಚೌಕ್‌ನ ಸ್ಕಾಟಿಷ್ ಮಾಲ್ ಬಳಿ ಕಾರ್ಯ ನಿರ್ವಹಿಸುತ್ತದೆ. ಈ ಶೋರೂಂನಿಂದಲೇ ಕಾರನ್ನು ಕಳವು ಮಾಡಲಾಗಿದೆ. ಪಾರ್ಕಿಂಗ್ ಪ್ರದೇಶದಿಂದ ಕಾರನ್ನು ಕಳವು ಮಾಡಲಾದ ಘಟನೆ ವರದಿಯಾಗುತ್ತಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಶೋರೂಂನಿಂದಲೇ ಕಳುವಾಯ್ತು ನೋಂದಣಿಯಾಗದ ಹೊಸ ಕಾರು

ಈ ಕಾರನ್ನು ಕದ್ದ ಕಳ್ಳ ಮುಖ್ಯ ರಸ್ತೆ ಪ್ರವೇಶಿಸಿ ಕಣ್ಣು ಮಿಟುಕಿಸುವಷ್ಟರಲ್ಲಿ ಅಲ್ಲಿಂದ ಪರಾರಿಯಾಗಿದ್ದಾನೆ. ಕಳುವಾಗಿರುವ ಎಕ್ಸ್‌ಝಡ್‌ ಪ್ಲಸ್, ಹ್ಯಾರಿಯರ್ ಎಸ್‌ಯುವಿಯ ಟಾಪ್ ಎಂಡ್ ಮಾದರಿಯಾಗಿದೆ. ಈ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.20 ಲಕ್ಷಗಳಾಗಿದೆ.

ಶೋರೂಂನಿಂದಲೇ ಕಳುವಾಯ್ತು ನೋಂದಣಿಯಾಗದ ಹೊಸ ಕಾರು

ಕಾರು ಕಳುವು ಘಟನೆಗೆ ಸಂಬಂಧಿಸಿದಂತೆ ಕಾರು ಶೋರೂಂನವರು ದೂರು ದಾಖಲಿಸಿದ್ದಾರೆ. ಶೀಘ್ರದಲ್ಲೇ ಕಳ್ಳನನ್ನು ಹಿಡಿಯುವ ನಿರೀಕ್ಷೆಗಳಿವೆ. ಈ ಎಸ್‌ಯುವಿಯನ್ನು ಇನ್ನೂ ನೋಂದಣಿ ಮಾಡಿರಲಿಲ್ಲ.

ಶೋರೂಂನಿಂದಲೇ ಕಳುವಾಯ್ತು ನೋಂದಣಿಯಾಗದ ಹೊಸ ಕಾರು

ಟಾಟಾ ಹ್ಯಾರಿಯರ್ ಎಸ್‌ಯುವಿಯ ಆರಂಭಿಕ ಬೆಲೆ ರೂ.14.21 ಲಕ್ಷಗಳಾಗಿದೆ. ಈ ಎಸ್‌ಯುವಿಯನ್ನು ಎಕ್ಸ್‌ಇ, ಎಕ್ಸ್‌ಎಂ, ಎಕ್ಸ್‌ಡಿ, ಎಕ್ಸ್‌ಡಿ ಪ್ಲಸ್, ಎಕ್ಸ್‌ಝಡ್‌, ಎಕ್ಸ್‌ಝಡ್‌ ಪ್ಲಸ್ ಎಂಬ ಆರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಶೋರೂಂನಿಂದಲೇ ಕಳುವಾಯ್ತು ನೋಂದಣಿಯಾಗದ ಹೊಸ ಕಾರು

ಟಾಟಾ ಹ್ಯಾರಿಯರ್ ಡಾರ್ಕ್ ಎಡಿಷನ್ ಹಾಗೂ ಕೀಮೋ ಎಂಬ ಎರಡು ವಿಶೇಷ ಆವೃತ್ತಿಗಳಲ್ಲಿ ಲಭ್ಯವಿದೆ. ಈ ಆವೃತ್ತಿಗಳು ವಿಶಿಷ್ಟ ಬಣ್ಣ, ಬ್ಯಾಡ್ಜ್ ಹಾಗೂ ವಿಶೇಷ ಫೀಚರ್'ಗಳೊಂದಿಗೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತವೆ.

ಟಾಟಾ ಹ್ಯಾರಿಯರ್ ಎಸ್‌ಯುವಿಯನ್ನು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಹ್ಯಾರಿಯರ್ ಎಸ್‌ಯುವಿಯಲ್ಲಿ 2.0 ಲೀಟರ್ ಕೈರೊಟೆಕ್ ಎಂಜಿನ್‌ ಅಳವಡಿಸಲಾಗಿದೆ.

ಶೋರೂಂನಿಂದಲೇ ಕಳುವಾಯ್ತು ನೋಂದಣಿಯಾಗದ ಹೊಸ ಕಾರು

ಈ ಎಂಜಿನ್ 170 ಬಿ‌ಹೆಚ್‌ಪಿ ಪವರ್ ಹಾಗೂ 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಟಾಟಾ ಹ್ಯಾರಿಯರ್ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್, ಹೆಕ್ಟರ್ ಪ್ಲಸ್ ಹಾಗೂ ಜೀಪ್ ಕಂಪಾಸ್‌ ಟಾಟಾ ಹ್ಯಾರಿಯರ್ ಎಸ್‌ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಚಿತ್ರಕೃಪೆ: ಗುರುಗ್ರಾಮ್ ಸುದ್ದಿ

Most Read Articles

Kannada
English summary
New Tata Harrier SUV stolen from showroom parking area. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X