ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶೀಘ್ರ ದುಬಾರಿ ಬೆಲೆಯ ಹೊಸ Toyota ಕಾರು!

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಕರ್ನಾಟಕದ ಆಡಳಿತ ಚುಕ್ಕಾಣಿ ಹಿಡಿದಿದೆ. ರಾಜ್ಯ ಆಡಳಿತ ಸುಧಾರಣಾ ಇಲಾಖೆ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಎಲ್ಲ ಸಚಿವರಿಗೆ ಹೊಸ ಕಾರುಗಳನ್ನು ಹಂಚಿಕೆ ಮಾಡಿದೆ. ಸಿಎಂ ಸಿದ್ದರಾಮಯ್ಯ ಬಿಟ್ಟರೆ ಬಹುತೇಕರಿಗೆ ಟೊಯೊಟಾ ಇನ್ನೋವಾ ಸರಣಿ ಎಂಪಿವಿಯನ್ನು ನೀಡಲಾಗಿದೆ.

ಸದ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 2019ರ 'ಟೊಯೊಟಾ ಫಾರ್ಚುನರ್' ಎಸ್‌ಯುವಿಯನ್ನು ನೀಡಲಾಗಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ್ ಮತ್ತು ಜಮೀರ್ ಅಹಮದ್ ಖಾನ್ ಅವರಿಗೆ ಇದೇ ವರ್ಷ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಹಾಗೂ ವಿತರಣೆಗೆ ದೀರ್ಘಕಾಲ ಕಾಯುವಿಕೆ ಅವಧಿ ಹೊಂದಿರುವ ಅತ್ಯಾಧುನಿಕ 'ಟೊಯೊಟಾ ಇನ್ನೋವಾ ಹೈಕ್ರಾಸ್' ಎಂಪಿವಿಯನ್ನು ಕೊಡಲಾಗಿದೆ.

ಸಿಎಂ ಸಿದ್ದರಾಮಯ್ಯಗಾಗಿ ಶೀಘ್ರದಲ್ಲೇ ದುಬಾರಿ Toyota ಕಾರು: ಸಚಿವರಿಗೆಲ್ಲ ಇನ್ನೋವಾ..!

ಇತರೆ, ಎಲ್ಲ ಸಚಿವರಿಗೂ ಟೊಯೊಟಾ ಇನ್ನೋವಾ ಕ್ರಿಸ್ಟಾ ಎಂಪಿವಿಯನ್ನು ನೀಡಲಾಗಿದೆ. ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ತಮಗೆ ನೀಡಿರುವ ಹೊಸ ಕಾರನ್ನು ಪಡೆದಿಲ್ಲ. ಅದರಲ್ಲೂ ಕೆಲವು ಸಚಿವರು ನೂತನ ಕಾರುಗಳಿಗೆ ಬೇಡಿಕೆ ಇಟ್ಟಿದ್ದು, ಸಿಎಂ ಸಿದ್ದರಾಮಯ್ಯ ಅವರಿಗಾಗಿ ಶೀಘ್ರದಲ್ಲೇ ದುಬಾರಿ ಬೆಲೆಯ ಹೊಚ್ಚ ಹೊಸ 'ಟೊಯೊಟಾ ಫಾರ್ಚುನರ್ ಎಸ್‌ಯುವಿ'ಯನ್ನು ಸರ್ಕಾರ ಖರೀದಿಸಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ದೇಶೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಖರೀದಿಗೆ ಲಭ್ಯವಿರುವ ಟೊಯೊಟಾ ಫಾರ್ಚುನರ್ ಬಗ್ಗೆ ಮಾತನಾಡುವುದಾದರೆ, ಇದು ರೂ.32.59 ಲಕ್ಷದಿಂದ ರೂ.50.34 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸ್ಟ್ಯಾಂಡರ್ಡ್ ಮತ್ತು ಲೆಜೆಂಡರ್ ಎಂಬ ಎರಡು ರೂಪಾಂತರದಲ್ಲಿ ಖರೀದಿಗೆ ಸಿಗುತ್ತದೆ. ಇದು, 2.7 ಲೀಟರ್ ಪೆಟ್ರೋಲ್ ಹಾಗೂ 2.8 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 10.0 kmpl ಮೈಲೇಜ್ ನೀಡುತ್ತದೆ.

ಹೊರಭಾಗದಿಂದ ನೋಡುಗರನ್ನು ಸೆಳೆಯುವ ಈ ಫಾರ್ಚುನರ್, ಕ್ಯಾಬಿನ್ ವಿನ್ಯಾಸವು ಅಚ್ಚುಕಟ್ಟಾಗಿದೆ. ಏಳು ಆಸನ ಆಯ್ಕೆಯನ್ನು ಹೊಂದಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಅನುಭವವನ್ನು ನೀಡುತ್ತದೆ. ಇದು 9 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, 360 ಪಾರ್ಕಿಂಗ್ ಕ್ಯಾಮೆರಾ, ವೈರ್ ಲೆಸ್ ಫೋನ್ ಚಾರ್ಜರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 7 ಏರ್ ಬಾಗ್ಸ್, VSC (ವೆಹಿಕಲ್ ಸ್ಟೆಬಿಲಿಟಿ ಕಟ್ರೋಲ್) ಅನ್ನು ಹೊಂದಿದೆ.

ಡಿಸಿಎಂ ಡಿಕೆಶಿ, ಸಚಿವರಾದ ಎಂ.ಬಿ.ಪಾಟೀಲ್ ಮತ್ತು ಜಮೀರ್ ಪಡೆದಿರುವ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯುವುದಾದರೆ, ಹೈಕ್ರಾಸ್ ಎಂಟ್ರಿ ಲೆವೆಲ್ 'G' ವೇರಿಯೆಂಟ್ ಬೆಲೆ ರೂ.18.55 ಲಕ್ಷ ಇದ್ದು, ಟಾಪ್ ಎಂಡ್ ಮಾದರಿ ಹೈಬ್ರಿಡ್ ಎಂಜಿನ್ ಪಡೆದಿರುವ ZX (O) ರೂ.29.99 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಭಾರತದ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಜೊತೆಗೆ 21 kmpl ಮೈಲೇಜ್ ನೀಡುತ್ತದೆ.

10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ಲೈಮೇಟ್ ಕಂಟ್ರೋಲ್, ಸನ್‌ರೂಫ್, ಫೋನ್ ಚಾರ್ಜಿಂಗ್ ಸೇರಿದಂತೆ ಹತ್ತಾರು ಫೀಚರ್ಸ್ ಅನ್ನು ಈ ಇನ್ನೋವಾ ಹೈಕ್ರಾಸ್ ಪಡೆದಿದೆ. ಸುರಕ್ಷತೆಯ ಸಲುವಾಗಿ 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್), TPMS (ಟೈರ್-ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಒಳಗೊಂಡಿದೆ.

ಇನ್ನು, ದೇಶೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಖರೀದಿಗೆ ಲಭ್ಯವಿರುವ ನೂತನ ಇನ್ನೋವಾ ಕ್ರಿಸ್ಟಾ ರೂ.19.99 ಲಕ್ಷದಿಂದ ರೂ.25.43 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಇದು, 2.4 ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಹೊಂದಿದ್ದು, 150 PS ಗರಿಷ್ಠ ಪವರ್ ಹಾಗೂ 343 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.

Article Published On: Tuesday, June 13, 2023, 12:31 [IST]
English summary
Expensive toyota fortuner car for cm siddaramaiah soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+