ಶೀಘ್ರ ಹಳಿಗೆ ಬರಲಿವೆ.. ವಂದೇ ಭಾರತ್ ಸ್ಲೀಪರ್, ವಂದೇ ಮೆಟ್ರೋ, ಅಮೃತ್ ಭಾರತ್: ವಿಶೇಷತೆಗಳೇನು?

ಕರ್ನಾಟಕವು ಒಳಗೊಂಡಂತೆ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಪ್ರೀಮಿಯಂ ಸೆಮಿ ಹೈಸ್ವೀಡ್ ರೈಲಾಗಿ ಜನಮನ್ನಣೆ ಪಡೆದಿದೆ. ಅದರ ಮುಂದುವರಿದ ಭಾಗವಾಗಿ, ಈ ವರ್ಷವೇ ವಂದೇ ಭಾರತ್ ಸ್ಲೀಪರ್, ವಂದೇ ಮೆಟ್ರೋ ಹಾಗೂ ಮತ್ತಷ್ಟು ಅಮೃತ್ ಭಾರತ್ ರೈಲುಗಳು ಹಳಿಗೆ ಬರಲಿವೆ.

ಮೊದಲಿಗೆ ಅಮೃತ್ ಭಾರತ್ (Amrit Bharat) ರೈಲಿನ ಬಗ್ಗೆ ಮಾತನಾಡೋಣ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಡಿ.30ರಂದು ಅಯೋಧ್ಯೆಯ ರೈಲು ನಿಲ್ದಾಣದಲ್ಲಿ ಮಾಲ್ಡಾ - ಬೆಂಗಳೂರು, ದೆಹಲಿ - ಅಯೋಧ್ಯೆ - ದರ್ಬಂಗಾ ಮಧ್ಯೆ ಸಂಚರಿಸುವ 2 ಅಮೃತ್ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದ್ದರು. ಈ ವರ್ಷವು (2024) ಸಹ ವಿವಿಧ ಮಾರ್ಗಗಳಲ್ಲಿ ಕಡಿಮೆ ಖರ್ಚಿನ ಅಮೃತ್ ಭಾರತ್ ರೈಲು ಕಾರ್ಯಾಚರಣೆ ನಡೆಸುವ ನೀರಿಕ್ಷೆಯಿದೆ.

ಶೀಘ್ರ ಹಳಿಗೆ ಬರಲಿವೆ.. ವಂದೇ ಭಾರತ್ ಸ್ಲೀಪರ್, ವಂದೇ ಮೆಟ್ರೋ, ಅಮೃತ್ ಭಾರತ್: ವಿಶೇಷತೆಗಳೇನು?

ವಂದೇ ಸಾಧಾರಣ್ (Vande Sadharan) ಹೆಸರನ್ನು ಹೊಂದಿದ್ದ ಈ ರೈಲನ್ನು 'ಅಮೃತ್ ಭಾರತ್‌ ಎಕ್ಸ್‌ಪ್ರೆಸ್' ಎಂದು ಕೇಂದ್ರ ಸರ್ಕಾರ ಮರುನಾಮಕರಣ ಮಾಡಿತ್ತು. ಸದ್ಯ ಅಮೃತ್ ಭಾರತ್‌ ರೈಲುವೊಂದನ್ನು ತಯಾರಿಸಲು ರೂ.65 ಕೋಟಿ ವ್ಯಯಿಸಲಾಗುತ್ತಿದೆ. ಇದರಲ್ಲಿ 1,834 ಜನರು ಆರಾಮದಾಯವಾಗಿ ಪ್ರಯಾಣಿಸಬಹುದು. ಮುಂಭಾಗ - ಹಿಂಭಾಗ ಎಂಜಿನ್ ಒಳಗೊಂಡಿದ್ದು, ದ್ವಿತೀಯ ದರ್ಜೆಯ ಸ್ಲೀಪರ್ ಕೋಚ್‌ ಹಾಗೂ ಕಾಯ್ದಿರಿಸದ ಕೋಚ್‌ಗಳನ್ನು ಹೊಂದಿದೆ.

ಅಮೃತ್ ಭಾರತ್‌ ಎಕ್ಸ್‌ಪ್ರೆಸ್ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಈ ರೈಲಿನಲ್ಲಿ ಹವಾನಿಯಂತ್ರಿತ (ಎಸಿ) ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲುಗಳಿಲ್ಲ. ಬದಲಾಗಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌, ಎಲ್‌ಇಡಿ ಲೈಟ್, ಫುಡ್ ಟೇಬಲ್‌, ಮೊಬೈಲ್ & ಬಾಟಲ್ ಹೋಲ್ಡರ್, ಸಿಸಿಟಿವಿಯನ್ನು ಒಳಗೊಂಡಿದೆ. ಹಗಲು - ರಾತ್ರಿ ಪ್ರಯಾಣಕ್ಕೆ ಹೆಚ್ಚು ಸೂಕ್ತವಾಗಿದೆ.

ಶೀಘ್ರ ಹಳಿಗೆ ಬರಲಿವೆ.. ವಂದೇ ಭಾರತ್ ಸ್ಲೀಪರ್, ವಂದೇ ಮೆಟ್ರೋ, ಅಮೃತ್ ಭಾರತ್: ವಿಶೇಷತೆಗಳೇನು?

ಮತ್ತೊಂದು ಜನ ಸಾಮಾನ್ಯರ ವಂದೇ ಮೆಟ್ರೋ (Vande Metro) ರೈಲನ್ನು ಚೆನ್ನೈನಲ್ಲಿರುವ ಐಸಿಎಫ್ (ICF) ಘಟಕದಲ್ಲಿ ತಯಾರಿಸಲಾಗುತ್ತಿದೆ. ಹತ್ತಿರದ ನಗರಗಳ ಸಂಚಾರಕ್ಕೆ (300 ಕಿಲೋಮೀಟರ್‌) ಈ ರೈಲುಗಳು ಬಳಕೆಯಾಗುವ ಸಾಧ್ಯತೆಯಿದೆ. ವಂದೇ ಭಾರತ್ ರೈಲುಗಳಂತೆ ಸ್ವಯಂ ಚಾಲಿತ ಬಾಗಿಲು, ಹವಾನಿಯಂತ್ರಿತ ವ್ಯವಸ್ಥೆ ಹೊಂದಿರಬಹುದು. ಈ ರೈಲು ಗಂಟೆಗೆ 130 ಕಿಮೀ ವೇಗದಲ್ಲಿ ಸಂಚರಿಸುವ ನೀರಿಕ್ಷೆಯಿದೆ.

ವಂದೇ ಮೆಟ್ರೋದ ಪ್ರತಿ ಕೋಚ್‌ನಲ್ಲಿ 100 ಪ್ರಯಾಣಿಕರ ಆಸನಗಳಿರಲಿದ್ದು, 200 ಮಂದಿ ನಿಲುವಷ್ಟು ಸ್ಥಳಾವಕಾಶವಿರಲಿದೆ ಎನ್ನಲಾಗಿದೆ. ಈ ರೈಲು ಸಹ ಸುರಕ್ಷತೆಯ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾ, ಎಲ್‌ಸಿಡಿ, ಡಿಸ್ಪ್ಲೇ, ಅತ್ಯಾಧುನಿಕ ಶೌಚಾಲಯ, ದೊಡ್ಡದಾದ ಕಿಟಕಿ, ಎಮರ್ಜೆನ್ಸಿ ಟಾಕ್ ಬ್ಯಾಕ್ ಯೂನಿಟ್, ಮೊಬೈಲ್ ಚಾರ್ಜಿಂಗ್ ಸಾಕೆಟ್‌ ಹೊಂದಿರುವ ಸಾಧ್ಯತೆಯಿದ್ದು, ಬಹುತೇಕ ಈ ವರ್ಷವೇ ಹಳಿಗೆ ಬರಬಹುದು.

ಶೀಘ್ರ ಹಳಿಗೆ ಬರಲಿವೆ.. ವಂದೇ ಭಾರತ್ ಸ್ಲೀಪರ್, ವಂದೇ ಮೆಟ್ರೋ, ಅಮೃತ್ ಭಾರತ್: ವಿಶೇಷತೆಗಳೇನು?

ಪ್ರೀಮಿಯಂ ವಂದೇ ಭಾರತ್ ಸ್ಲೀಪರ್ (Vande Bharat Sleeper) ರೈಲು, ಫೆಬ್ರವರಿಯಿಂದ ಕಾರ್ಯಾಚರಣೆ ನಡೆಸಬಹುದು. ಈ ರೈಲು ವಿಶ್ವದರ್ಜೆಯ ಸೌಕರ್ಯವನ್ನು ಹೊಂದಿದ್ದು, 'ರಾಜಧಾನಿ ಎಕ್ಸ್‌ಪ್ರೆಸ್'ಗಳಿಗೆ ಪರ್ಯಾಯವಾಗಲಿವೆ ಎನ್ನಲಾಗಿದೆ. ಇದು ದೂರದ ಪ್ರಯಾಣದ ಸರಿಹೊಂದಲಿದೆ. 16 ಕೋಚ್ ಗಳನ್ನು ಒಳಗೊಂಡಿರಲಿದ್ದು, 823 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.

ಈ ವಂದೇ ಭಾರತ್ ಸ್ಲೀಪರ್ ಪ್ರಯಾಣಿಕರನ್ನು ವೇಗವಾಗಿ ಗಮ್ಯ ಸ್ಥಾನವನ್ನು ತಲುಪಿಸಲು ಗಂಟೆಗೆ 160 ವೇಗದಲ್ಲಿ ಸಂಚಾರಿಸುವ ಸಾಮರ್ಥ್ಯ ಪಡೆದಿರುವ ನೀರಿಕ್ಷೆಯಿದೆ. ಜೊತೆಗೆ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿರಲಿದೆ. ಪ್ರಮುಖವಾಗಿ, ಇಂಟರ್ ಕಮ್ಯುನಿಕೇಷನ್ ಡೋರ್, ಆಟೋಮೆಟಿಕ್ ಡೋರ್, ವಾಸನೆ ಮುಕ್ತ ಶೌಚಾಲಯ, ಶಬ್ದ ನಿರೋಧಕ ವ್ಯವಸ್ಥೆ ಒಳಗೊಂಡಿರಲಿದೆ. ಒಟ್ಟಿನಲ್ಲಿ ಯಾವುದೇ ವಿಮಾನಕ್ಕೆ ಕಮ್ಮಿಯಿರುವುದಿಲ್ಲ ಎಂದು ಹೇಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, January 20, 2024, 18:33 [IST]
English summary
New vande bharat sleeper vande metro amrit bharat launch soon here the details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+