ಚಲಿಸುವ ಬೈಕಿನಲ್ಲಿಯೇ ಸ್ನಾನ ಮಾಡಿದ ಭೂಪರು..!

ವಾಹನ ಚಾಲನೆ ಮಾಡುವಾಗ ಸಂಚಾರಿ ನಿಯಮಗಳನ್ನು ಪಾಲಿಸಬೇಕಾದ್ದು ವಾಹನ ಸವಾರರ ಕರ್ತವ್ಯ. ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತದೆ. ಪದೇ ಪದೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ಡ್ರೈವಿಂಗ್ ಲೈಸೆನ್ಸ್ ಅನ್ನು ಅಮಾನತುಗೊಳಿಸಲಾಗುತ್ತದೆ.

ಚಲಿಸುವ ಬೈಕಿನಲ್ಲಿಯೇ ಸ್ನಾನ ಮಾಡಿದ ಭೂಪರು..!

ವಾಹನ ಚಾಲನೆ ಮಾಡುವಾಗ ಅಸಂಬದ್ಧವಾದ ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಈ ರೀತಿಯ ಕೆಲಸಗಳನ್ನು ಮಾಡುವುದರಿಂದ ವಾಹನ ಚಾಲನೆ ಮಾಡುವವರ ಜೀವಕ್ಕೆ ಮಾತ್ರವಲ್ಲದೇ, ರಸ್ತೆಯಲ್ಲಿ ಚಲಿಸುವ ಸಾರ್ವಜನಿಕರ ಪ್ರಾಣಕ್ಕೂ ಕಂಟಕ ಎದುರಾಗುತ್ತದೆ.

ಚಲಿಸುವ ಬೈಕಿನಲ್ಲಿಯೇ ಸ್ನಾನ ಮಾಡಿದ ಭೂಪರು..!

ಯುವಕರಿಬ್ಬರು ಬೈಕ್ ಚಾಲನೆ ಮಾಡುವಾಗ ಬೈಕಿನಲ್ಲಿಯೇ ಸ್ನಾನ ಮಾಡಿದ ಘಟನೆಯೊಂದು ವರದಿಯಾಗಿದೆ. ಈ ರೀತಿ ಚಲಿಸುವ ಬೈಕಿನಲ್ಲಿ ಸ್ನಾನ ಮಾಡಿದ ಯುವಕರಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ಅಂದ ಹಾಗೆ ಈ ಘಟನೆ ನಡೆದಿರುವುದು ವಿಯೆಟ್ನಾಂನಲ್ಲಿ.

ಚಲಿಸುವ ಬೈಕಿನಲ್ಲಿಯೇ ಸ್ನಾನ ಮಾಡಿದ ಭೂಪರು..!

23 ವರ್ಷದ ಹ್ಯುನ್ ಥಾನ್ ಕನ್ಹ್ ಹಾಗೂ ಮತ್ತೊಬ್ಬ ಬೈಕಿನಲ್ಲಿ ಸ್ನಾನ ಮಾಡುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಇಬ್ಬರೂ ಹೆಚ್ಚು ಬಿಜಿ ಇರುವ ದಕ್ಷಿಣ ವಿಯೆಟ್ನಾಂ ರಸ್ತೆಯಲ್ಲಿ ಈ ಕೃತ್ಯವೆಸಗಿದ್ದಾರೆ.

ಚಲಿಸುವ ಬೈಕಿನಲ್ಲಿಯೇ ಸ್ನಾನ ಮಾಡಿದ ಭೂಪರು..!

ಅದೂ ಸಹ ಬೈಕಿನಲ್ಲಿ ಚಲಿಸುವಾಗ ಸ್ನಾನ ಮಾಡುವ ಸಲುವಾಗಿ ತಾವು ಧರಿಸಿದ್ದ ಶರ್ಟ್ ಹಾಗೂ ಹೆಲ್ಮೆಟ್‍‍ಗಳನ್ನು ತೆಗೆದು ಹಾಕಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಲ್ಲಿನ ಪೊಲೀಸರು ಇಬ್ಬರಿಗೂ ದಂಡ ವಿಧಿಸಿದ್ದಾರೆ.

ಚಲಿಸುವ ಬೈಕಿನಲ್ಲಿಯೇ ಸ್ನಾನ ಮಾಡಿದ ಭೂಪರು..!

ಈ ವೀಡಿಯೊದಲ್ಲಿರುವ ಇಬ್ಬರು ಯುವಕರು ಬೈಕಿನ ಮಧ್ಯೆ ಬಕೆಟ್‍‍ನಲ್ಲಿ ನೀರು ಹಾಗೂ ಬೈಕಿನ ಮುಂಭಾಗದಲ್ಲಿ ಬಿಯರ್ ಹಿಡಿದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಈ ಇಬ್ಬರೂ ಯುವಕರು ಅರೆ ಬೆತ್ತಲೆಯಾಗಿಯೇ ಬೈಕಿನಲ್ಲಿ ಸಂಚರಿಸಿದ್ದಾರೆ.

ಚಲಿಸುವ ಬೈಕಿನಲ್ಲಿಯೇ ಸ್ನಾನ ಮಾಡಿದ ಭೂಪರು..!

ಬೈಕ್ ಸವಾರನು ಬೈಕ್ ಬ್ಯಾಲೆನ್ಸ್ ಮಾಡುತ್ತಾ ತನ್ನ ತಲೆ ಹಾಗೂ ಮುಖವನ್ನು ಒರೆಸಿಕೊಳ್ಳುತ್ತಿದ್ದರೆ ಹಿಂಬದಿ ಸವಾರನು ಸವಾರನ ತಲೆಗೆ ಸೋಪ್ ಹಚ್ಚಿ ಆತನ ತಲೆಯ ಮೇಲೆ ಹಾಗೂ ತನ್ನ ತಲೆಯ ಮೇಲೆ ನೀರು ಸುರಿಯುತ್ತಿದ್ದಾನೆ.

ಚಲಿಸುವ ಬೈಕಿನಲ್ಲಿಯೇ ಸ್ನಾನ ಮಾಡಿದ ಭೂಪರು..!

ವೈರಲ್ ಆಗಿರುವ ಈ ವೀಡಿಯೊ ಬಗ್ಗೆ ಸಾರ್ವಜನಿಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ರೀತಿಯಾಗಿ ಸ್ಟಂಟ್ ಮಾಡುವುದು ಅಪಾಯಕಾರಿಯಾಗಿದ್ದು, ಇವರ ಜೀವದ ಜೊತೆಗೆ ಬೇರೆಯವರ ಜೀವಕ್ಕೂ ಸಂಚಕಾರ ತರುತ್ತದೆಂದು ಹೇಳಿದ್ದಾರೆ.

ಚಲಿಸುವ ಬೈಕಿನಲ್ಲಿಯೇ ಸ್ನಾನ ಮಾಡಿದ ಭೂಪರು..!

ವಿಯೆಟ್ನಾಂನ ಬಿನ್ಹ್ ಡುಯಾಂಗ್‍‍ನಲ್ಲಿ ಈ ಘಟನೆ ನಡೆದಿದೆ. ಈ ವೀಡಿಯೊ ಪೊಲೀಸರ ಜೊತೆಗೆ ಅಲ್ಲಿನ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ಬಂದಿದೆ. ಪೊಲೀಸರು ವೀಡಿಯೊದಲ್ಲಿ ಕಾಣುವ ನಂಬರ್ ಪ್ಲೇಟ್‍‍ನ ಸಹಾಯದಿಂದ ಈ ಇಬ್ಬರು ಯುವಕರನ್ನು ಪತ್ತೆಹಚ್ಚಿದ್ದಾರೆ.

ಬೈಕ್ ಚಾಲನೆ ಮಾಡುತ್ತಿದ್ದವನನ್ನು ಹ್ಯುನ್ ಥಾನ್ ಕನ್ಹ್ ಎಂದು ಗುರುತಿಸಲಾಗಿದೆ. ಈತನಿಗೆ 1.8 ಮಿಲಿಯನ್ ವಿಯೆಟ್ನಾಂ ಡಾಲರ್ ದಂಢ ವಿಧಿಸಲಾಗಿದೆ. ಅಂದರೆ ಭಾರತೀಯ ಕರೆನ್ಸಿಯ ಪ್ರಕಾರ ರೂ.5,500 ದಂಡವನ್ನು ವಿಧಿಸಲಾಗಿದೆ.

ಚಲಿಸುವ ಬೈಕಿನಲ್ಲಿಯೇ ಸ್ನಾನ ಮಾಡಿದ ಭೂಪರು..!

ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಬೈಕ್ ಚಾಲನೆ, ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ ಮಾಡಿರುವುದು, ರೇರ್ ವೀವ್ ಮಿರರ್‍‍ಗಳಿಲ್ಲದೇ ಬೈಕ್ ಚಾಲನೆ ಮಾಡಿರುವುದು, ಸಿವಿಲ್ ಇನ್ಶೂರೆನ್ಸ್ ಇಲ್ಲದೇ ಬೈಕ್ ಚಾಲನೆ ಮಾಡಿರುವ ಕಾರಣಗಳಿಗೆ ದಂಡ ವಿಧಿಸಲಾಗಿದೆ.

Article Published On: Monday, January 27, 2020, 12:33 [IST]
English summary
Two Vietnamese men bathing while riding on busy roads. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+