ಬಾಲಿವುಡ್​ ತಾರಾ ಜೋಡಿ ವಿಕ್ಕಿ-ಕತ್ರಿನಾ ಬಳಿಯಿರುವ ಐಷಾರಾಮಿ ಕಾರುಗಳಿವು

ಬಾಲಿವುಡ್ ನಟಿ ಕತ್ರಿನಾ ಕೈಫ್​ ಹಾಗೂ ನಟ ವಿಕ್ಕಿ ಕೌಶಲ್​​ ರಾಜಸ್ಥಾನದ ಸವಾಯಿ ಮಾಧೋಪುರದ ಫೋರ್ಟ್ ಬರ್ವಾರದ ಸಿಕ್ಸ್ ಸೆನ್ಸ್‌ನಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ತುಂಬಾನೇ ಗುಟ್ಟಾಗಿ ಡಿಸೆಂಬರ್​ 7 ರಿಂದ 10 ರವರೆಗೆ ಮದುವೆ ಕಾರ್ಯಕ್ರಮ ನಡೆದಿದೆ.

ಬಾಲಿವುಡ್​ ತಾರಾ ಜೋಡಿ ವಿಕ್ಕಿ-ಕತ್ರಿನಾ ಬಳಿಯಿರುವ ಐಷಾರಾಮಿ ಕಾರುಗಳಿವು

ಬಾಲಿವುಡ್​ನಲ್ಲಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್​ ಅವರು ಭದ್ರವಾಗಿ ನೆಲೆ ಕಂಡುಕೊಂಡಿರುವ ಜನಪ್ರಿಯ ನಟ ಮತ್ತು ನಟಿಯಾಗಿದ್ದಾರೆ. ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಈ ಜೋಡಿ ಅದ್ದೂರಿಯಾಗಿಯೇ ಹಸೆಮಣೆ ಏರಿವೆ. ಮದುವೆಗಾಗಿ ತುಂಬಾ ವೆಚ್ಚ ಮಾಡಲಾಗಿದೆ. ಈ ಮದುವೆಯಲ್ಲಿ ಕೇವಲ ಈ ಒಂದು ಉಂಗುರಕ್ಕೆ ರೂ.7.4 ಲಕ್ಷ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ತುಂಬಾನೇ ಗುಟ್ಟಾಗಿ ನಡೆದ ಈ ಮದುವೆಯಲ್ಲಿ ಭಾಗಿಯಾದ ಅತಿಥಿಗಳ ಬಗ್ಗೆ ಕೂಡ ರಹಸ್ಯ ಕಾಪಾಕೊಳ್ಳಲಾಗಿದೆ.

ಬಾಲಿವುಡ್​ ತಾರಾ ಜೋಡಿ ವಿಕ್ಕಿ-ಕತ್ರಿನಾ ಬಳಿಯಿರುವ ಐಷಾರಾಮಿ ಕಾರುಗಳಿವು

ಮದುವೆಯ ಅತಿಥಿಗಳ ಪಟ್ಟಿಯು ತುಂಬಾ ರಹಸ್ಯವಾಗಿರಿಸಿತ್ತು. ಮದುವೆಯಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬ ವಿಷಯ ಎಲ್ಲೂ ಹೊರ ಬಂದಿರಲಿಲ್ಲ. ಇನ್ನು ಈ ಬಾಲಿವುಡ್​ ತಾರಾ ಜೋಡಿಗಳ ಬಳಿ ಹಲವಾರು ಐಷಾರಾಮಿ ಕಾರುಗಳಿವೆ. ಇವರು ಯಾವ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ ಎಂಬುದನ್ನು ಇಲ್ಲಿ ನಾವು ನೋಡೋಣ.

ಬಾಲಿವುಡ್​ ತಾರಾ ಜೋಡಿ ವಿಕ್ಕಿ-ಕತ್ರಿನಾ ಬಳಿಯಿರುವ ಐಷಾರಾಮಿ ಕಾರುಗಳಿವು

ನಟ ವಿಕ್ಕಿ ಕೌಶಲ್ ಕಾರುಗಳು

ರೇಂಜ್ ರೋವರ್ ಆಟೋಬಯೋಗ್ರಫಿ

ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಸಿನಿಮಾ ಮೂಲಕ ಜನಪ್ರಿಯತೆ ಪಡೆದ ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರ ಬಳಿ ಹಲವಾರು ಕಾರುಗಳಿವೆ. ಮೊದಲಿಗೆ ಇವರು ರೇಂಜ್ ರೋವರ್ ಆಟೋಬಯೋಗ್ರಫಿ ಎಸ್‍ಯುವಿ ಮಾದರಿಯನ್ನು ಹೊಂದಿದ್ದಾರೆ. ರೇಂಜ್ ರೋವರ್ ಆಟೋಬಯೋಗ್ರಫಿ ಉತ್ತಮ ಪರ್ಫಾಮೆನ್ಸ್ ಎಸ್‍ಯುವಿಯಾಗಿದೆ.

ಬಾಲಿವುಡ್​ ತಾರಾ ಜೋಡಿ ವಿಕ್ಕಿ-ಕತ್ರಿನಾ ಬಳಿಯಿರುವ ಐಷಾರಾಮಿ ಕಾರುಗಳಿವು

ಇದರ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.7 ಕೋಟಿಯಾಗಿದೆ. ಈ ಐಷಾರಾಮಿ ಎಸ್‍ಯುವಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಡೀಸೆಲ್ ಮಾದರಿಯಲ್ಲಿ 3.0-ಲೀಟರ್ ಇನ್-ಲೈನ್ ಆರು-ಸಿಲಿಂಡರ್ ಎಂಹೆಚ್‌ಇವಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 4000 ಆರ್‌ಪಿಎಂನಲ್ಲಿ 296 ಬಿಹೆಚ್‌ಪಿ ಮತ್ತು 1500-2500 ಆರ್‌ಪಿಎಂ ನಡುವೆ 650 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಾಲಿವುಡ್​ ತಾರಾ ಜೋಡಿ ವಿಕ್ಕಿ-ಕತ್ರಿನಾ ಬಳಿಯಿರುವ ಐಷಾರಾಮಿ ಕಾರುಗಳಿವು

ಇನ್ನು ಪೆಟ್ರೋಲ್ ಮಾದರಿಯಲ್ಲಿ 3.0-ಲೀಟರ್ ಆರು ಸಿಲಿಂಡರ್ ಎಂಹೆಚ್‌ಇವಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 5500-6000 ಆರ್‌ಪಿಎಂ ನಡುವೆ 394 ಬಿಹೆಚ್‌ಪಿ ಮತ್ತು 2000-5000 ಆರ್‌ಪಿಎಂ ನಡುವೆ ಲಭ್ಯವಿರುವ 550 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಾಲಿವುಡ್​ ತಾರಾ ಜೋಡಿ ವಿಕ್ಕಿ-ಕತ್ರಿನಾ ಬಳಿಯಿರುವ ಐಷಾರಾಮಿ ಕಾರುಗಳಿವು

ಮರ್ಸಿಡಿಸ್-ಬೆಂಝ್ ಜಿಎಲ್ಇ

ವಿಕ್ಕಿ ಅವರ ಬಳಿ ಮರ್ಸಿಡಿಸ್-ಬೆಂಝ್ ಜಿಎಲ್ಇ ಎಸ್‍ಯುವಿಯನ್ನು ಸಹ ಹೊಂದಿದ್ದಾರೆ. ಅವರ ಗ್ಯಾರೇಜ್‌ನಲ್ಲಿ ಬಹುಕಾಲದವರೆಗೆ ಬಿಳಿ ಬಣ್ಣದ ಜಿಎಲ್‌ಇ ಕಾರು ಮಾತ್ರ ಇತ್ತು. ವಿಕ್ಕಿ ಓಡಿಸಲು ಇಷ್ಟಪಡುತ್ತಾರೆ ಮತ್ತು ಅದಕ್ಕಾಗಿಯೇ ಅವರು ರೇಂಜ್ ರೋವರ್ ಅಥವಾ ಜಿಎಲ್ಇ ಅನ್ನು ಸ್ವತಃ ಚಾಲನೆ ಮಾಡುತ್ತಾರೆ. ಜಿಎಲ್‌ಇ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಕಾರು ಆಗಿದೆ. ಈ ಮರ್ಸಿಡಿಸ್-ಬೆಂಝ್ ಜಿಎಲ್ಇ ಸೆಲಬ್ರಿಟಿಗಳ ಮೆಚ್ಚಿನ ಆಯ್ಕೆಯಾಗಿದೆ.

ಬಾಲಿವುಡ್​ ತಾರಾ ಜೋಡಿ ವಿಕ್ಕಿ-ಕತ್ರಿನಾ ಬಳಿಯಿರುವ ಐಷಾರಾಮಿ ಕಾರುಗಳಿವು

ಬಿಎಂಡಬ್ಲ್ಯು 5ಜಿಟಿ

ಐಷಾರಾಮಿ ಬಿಎಂಡಬ್ಲ್ಯು 5-ಸೀರಿಸ್ ಜಿಟಿ ಕಾರನ್ನು ಸಹ ಹೊಂದಿದ್ದಾರೆ. ಇದು ಹೊಚ್ಚಹೊಸ ಕಾರು ಮತ್ತು ಈ ಕಾರಿನಲ್ಲಿ ಅವರು ಹೆಚ್ಚು ಗುರುತಿಸಲ್ಪಟ್ಟಿಲ್ಲ. ಆದರೆ ಅವರು ಜಿಮ್ ತೆರಳಲು ಮತ್ತು ಸಿಟಿ ಡ್ರೈವ್ ತೆರಳಲು ಆಗಾಗ ಅದನ್ನು ಬಳಸುತ್ತಾರೆ.ಬಿಳಿ ಬಣ್ಣದಬಿಎಂಡಬ್ಲ್ಯು 5ಜಿಟಿ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಇದು ಅತ್ಯಂತ ವಿಶಾಲವಾದ ಕ್ಯಾಬಿನ್ ಅನ್ನು ನೀಡುತ್ತದೆ. ಈ ಬಿಎಂಡಬ್ಲ್ಯು 5ಜಿಟಿ ಕಾರಿನ ಬೆಲೆಯು ಸುಮಾರು ರೂ.1 ಕೋಟಿಯಾಗಿದೆ ಮತ್ತು ಇದು ಅತ್ಯಂತ ಪ್ರಾಯೋಗಿಕ ಕಾರು.

ಬಾಲಿವುಡ್​ ತಾರಾ ಜೋಡಿ ವಿಕ್ಕಿ-ಕತ್ರಿನಾ ಬಳಿಯಿರುವ ಐಷಾರಾಮಿ ಕಾರುಗಳಿವು

ಕತ್ರಿನಾ ಕೈಫ್ ಕಾರುಗಳು

ಆಡಿ ಕ್ಯೂ7

ನಟಿ ಕತ್ರಿನಾ ಕೈಫ್ ಮೊದಲ ಐಷಾರಾಮಿ ಕಾರ್ ಆಡಿ ಕ್ಯೂ7 ಆಗಿದೆ. ಈ ಎಸ್‍ಯುವಿ ಮಾದರಿ ಕಾರನ್ನು ಹಲವಾರು ವರ್ಷಗಳಿಂದ ಬಳಸುತ್ತಿದ್ದರು. ನಟಿಯ ಒಡೆತನದ ಆಡಿ ಕ್ಯೂ7 ಎಸ್‍ಯುವಿಯು ಬ್ಲ್ಯಾಕ್ ಬಣ್ಣವನ್ನು ಹೊಂದಿದೆ. ಆಡಿ ಕ್ಯೂ7 ಜರ್ಮನ್ ವಾಹನ ತಯಾರಕರ ಪ್ರಮುಖ ಎಸ್‍ಯುವಿಯಾಗಿದೆ. ಇದು ಜಾಗತಿಕ ಮಾರುಕಟ್ಟೆಗಳಲ್ಲಿ ಅತ್ಯಂತ ಜನಪ್ರಿಯ ಕಾರು.

ಬಾಲಿವುಡ್​ ತಾರಾ ಜೋಡಿ ವಿಕ್ಕಿ-ಕತ್ರಿನಾ ಬಳಿಯಿರುವ ಐಷಾರಾಮಿ ಕಾರುಗಳಿವು

ಇನ್ನು ಆಡಿ ಇಂಡಿಯಾ ತನ್ನ ನವೀಕರಿಸಿದ ಕ್ಯೂ7 ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಆಡಿ ಕ್ಯೂ7 ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಬಿಎಸ್6 ಮಾಲಿನ್ಯ ನಿಯಮ ಜಾರಿಯಾಗುವ ವೇಳೆ ಈ ಹೊಸ ಆಡಿ ಕ್ಯೂ7 ಎಸ್‍ಯುವಿಯನ್ನು ಸ್ಥಗಿತಗೊಳಿತು. ಹೊಸ 2022ರ ಆಡಿ ಕ್ಯೂ7 ಫೇಸ್‌ಲಿಫ್ಟ್ ಗಮನಾರ್ಹವಾದ ಕಾಸ್ಮೆಟಿಕ್ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ.

ಬಾಲಿವುಡ್​ ತಾರಾ ಜೋಡಿ ವಿಕ್ಕಿ-ಕತ್ರಿನಾ ಬಳಿಯಿರುವ ಐಷಾರಾಮಿ ಕಾರುಗಳಿವು

ರೇಂಜ್ ರೋವರ್ ವೋಗ್

ಕತ್ರಿನಾ ಕೈಫ್ ಕೂಡ ರೇಂಜ್ ರೋವರ್ ಅನ್ನು ಹೊಂದಿದ್ದಾರೆ. ಆದರೆ ಲೋ ವೆರಿಯೆಂಟ್ ವೋಗ್ ಮಾದರಿಯಾಗಿದೆ. . ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಅವರು ನಟನೊಂದಿಗೆ ಮಾಡಿದ ಚಲನಚಿತ್ರಗಳಲ್ಲಿ ಒಂದಕ್ಕೆ ಪಾವತಿಯಾಗಿ ಕತ್ರಿನ್ ಅವರಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಉಡುಗೊರೆಯ ಭಾಗದ ಬಗ್ಗೆ ನಮಗೆ ಖಚಿತವಿಲ್ಲ ಆದರೆ ಕತ್ರಿನಾ ಕೈಫ್ ತನ್ನ ಎಲ್ಲಾ ಕಡೆ ತೆರಳಲು ರೇಂಜ್ ರೋವರ್ ಅನ್ನು ಬಳಸುತ್ತಾರೆ.

Most Read Articles

Kannada
English summary
Newly wed couple katrina kaif and vicky kaushal car collection details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X