ಆಕ್ಸಿಜನ್ ಆಟೋ ಮೂಲಕ ಕರೋನಾ ಸೋಂಕಿತರಿಗೆ ನೆರವಾಗುತ್ತಿರುವ ಎನ್‌ಜಿ‌ಒ ನಿರ್ದೇಶಕಿ

ಕರೋನಾ ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಸಂಕಷ್ಟದ ಪರಿಸ್ಥಿತಿಯಲ್ಲಿ ಹಲವಾರು ಹೃದಯವಂತರು ಜನರ ಸಂಕಷ್ಟಕ್ಕೆ ಮಿಡಿಯುತ್ತಿದ್ದಾರೆ. ಇಂತಹವರ ಬಗ್ಗೆ ಪ್ರತಿದಿನ ವರದಿಯಾಗುತ್ತಲೇ ಇರುತ್ತದೆ.

ಆಕ್ಸಿಜನ್ ಆಟೋ ಮೂಲಕ ಕರೋನಾ ಸೋಂಕಿತರಿಗೆ ನೆರವಾಗುತ್ತಿರುವ ಎನ್‌ಜಿ‌ಒ ನಿರ್ದೇಶಕಿ

ಕರೋನಾ ವೈರಸ್'ನಿಂದ ತಾವು ಅನುಭವಿಸಿದ ಕಷ್ಟ ಬೇರೆಯವರಿಗೆ ಬರಬಾರದು ಎಂಬ ಕಾರಣಕ್ಕೆ ಸಾರ್ವಜನಿಕರಿಗೆ ನೆರವಾಗುತ್ತಿದ್ದಾರೆ. ಈಗ ಇದೇ ರೀತಿ ಸಾರ್ವಜನಿಕರಿಗೆ ನೆರವಾಗುತ್ತಿರುವ ಮತ್ತೊಬ್ಬ ವ್ಯಕ್ತಿಯ ಬಗ್ಗೆ ವರದಿಯಾಗಿದೆ. ಕರೋನಾದಿಂದ ತಮ್ಮ ತಾಯಿಯನ್ನು ಕಳೆದುಕೊಂಡ 36 ವರ್ಷದ ಆರ್.ಸೀತಾ ದೇವಿ ಚೆನ್ನೈನ ರಾಜೀವ್ ಗಾಂಧಿ ಆಸ್ಪತ್ರೆಗೆ ಬರುವವರಿಗೆ ಆಕ್ಸಿಜನ್ ಆಟೋ ಮೂಲಕ ನೆರವಾಗುತ್ತಿದ್ದಾರೆ.

ಆಕ್ಸಿಜನ್ ಆಟೋ ಮೂಲಕ ಕರೋನಾ ಸೋಂಕಿತರಿಗೆ ನೆರವಾಗುತ್ತಿರುವ ಎನ್‌ಜಿ‌ಒ ನಿರ್ದೇಶಕಿ

ಅವರು ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದ ತಮ್ಮ 65 ವರ್ಷದ ತಾಯಿಯನ್ನು ಚಿಕಿತ್ಸೆಗಾಗಿ ಮೇ 1 ರಂದು ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಬೆಡ್ ಕೊರತೆಯಿಂದ ಆಸ್ಪತ್ರೆಯ ಹೊರಗೆ ಗಂಟೆಗಟ್ಟಲೆ ಕಾಯುತ್ತಾ ಕುಳಿತಿದ್ದರು.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಆಕ್ಸಿಜನ್ ಆಟೋ ಮೂಲಕ ಕರೋನಾ ಸೋಂಕಿತರಿಗೆ ನೆರವಾಗುತ್ತಿರುವ ಎನ್‌ಜಿ‌ಒ ನಿರ್ದೇಶಕಿ

ಕೊನೆಗೂ ಚಿಕಿತ್ಸೆ ದೊರೆಯದೇ ಸೀತಾ ದೇವಿ ಅವರ ತಾಯಿ ಮೃತಪಟ್ಟರು. ತಮ್ಮ ತಾಯಿಗೆ ಬಂದ ಪರಿಸ್ಥಿತಿ ಬೇರೆಯವರಿಗೆ ಬರಬಾರದು ಎಂಬ ಕಾರಣಕ್ಕೆ ಕರೋನಾ ವೈರಸ್ ಸೋಂಕಿತರಿಗೆ ನೆರವಾಗಲು ನಿರ್ಧರಿಸಿದರು.

ಆಕ್ಸಿಜನ್ ಆಟೋ ಮೂಲಕ ಕರೋನಾ ಸೋಂಕಿತರಿಗೆ ನೆರವಾಗುತ್ತಿರುವ ಎನ್‌ಜಿ‌ಒ ನಿರ್ದೇಶಕಿ

ಬೆಡ್'ಗಾಗಿ ಈ ಆಸ್ಪತ್ರೆಯ ಹೊರಗೆ ಗಂಟೆಗಟ್ಟಲೆ ತಮ್ಮ ತಾಯಿಯೊಂದಿಗೆ ಕಾಯುತ್ತಿದ್ದ ಸೀತಾ ದೇವಿ ಈಗ ರಾಜೀವ್ ಗಾಂಧಿ ಆಸ್ಪತ್ರೆಗೆ ಬರುವವರಿಗೆ ಸಾಕ್ಷಾತ್ ದೇವಿಯಂತೆ ನಿಂತು ಆಕ್ಸಿಜನ್ ಸಿಲಿಂಡರ್ ಹೊಂದಿರುವ ಆಟೋ ಮೂಲಕ ಸಾಧ್ಯವಾದಷ್ಟು ಜನರ ಜೀವ ಉಳಿಸುತ್ತಿದ್ದಾರೆ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಆಕ್ಸಿಜನ್ ಆಟೋ ಮೂಲಕ ಕರೋನಾ ಸೋಂಕಿತರಿಗೆ ನೆರವಾಗುತ್ತಿರುವ ಎನ್‌ಜಿ‌ಒ ನಿರ್ದೇಶಕಿ

ತಮ್ಮ ತಾಯಿಗೆ ಸರಿಯಾದ ಸಮಯದಲ್ಲಿ ಆಕ್ಸಿಜನ್ ದೊರೆತಿದ್ದರೆ ಅವರ ಜೀವವನ್ನು ಉಳಿಸಬಹುದಿತ್ತು ಎಂದು ಹೇಳುವ ಸೀತಾ ದೇವಿ, ಸ್ಟ್ರೀಟ್ ವಿಷನ್ ಎಂಬ ಎನ್‌ಜಿ‌ಒವೊಂದನ್ನು ನಡೆಸುತ್ತಿದ್ದಾರೆ. ಅವರು ಈ ಎನ್‌ಜಿ‌ಒದ ನಿರ್ದೇಶಕಿಯೂ ಹೌದು.

ಆಕ್ಸಿಜನ್ ಆಟೋ ಮೂಲಕ ಕರೋನಾ ಸೋಂಕಿತರಿಗೆ ನೆರವಾಗುತ್ತಿರುವ ಎನ್‌ಜಿ‌ಒ ನಿರ್ದೇಶಕಿ

ಈ ಚಾರಿಟಿ ಮೂಲಕ ಅವರು ತೃತೀಯ ಲಿಂಗಿಗಳಿಗೆ, ಹೆಚ್‌ಐವಿ ಸೋಂಕಿತ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ನೆರವಾಗುತ್ತಿದ್ದಾರೆ. ಇದರ ಜೊತೆಗೆ ಅವರು ಸುತ್ತ ಮುತ್ತ ಇರುವ ಕೊಳಗೇರಿ ಪ್ರದೇಶದ ಮಕ್ಕಳಿಗೆ ಫ್ರೀಯಾಗಿ ಟ್ಯೂಷನ್ ನಡೆಸುತ್ತಾರೆ.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಆಕ್ಸಿಜನ್ ಆಟೋ ಮೂಲಕ ಕರೋನಾ ಸೋಂಕಿತರಿಗೆ ನೆರವಾಗುತ್ತಿರುವ ಎನ್‌ಜಿ‌ಒ ನಿರ್ದೇಶಕಿ

ಆಕ್ಸಿಜನ್ ಅಳವಡಿಸುವ ಮುನ್ನ ಈ ಆಟೋ ರಿಕ್ಷಾವನ್ನು ಮನೆಯಿಲ್ಲದವರನ್ನು ರಕ್ಷಿಸಲು ಬಳಸಲಾಗುತ್ತಿತ್ತು. ಅವರ ತಾಯಿಯ ನಿಧನದ ನಂತರ ಮೇ 6ರಿಂದ ಈ ಆಟೋವನ್ನು ಆಕ್ಸಿಜನ್ ಆಟೋ ಆಗಿ ಬದಲಿಸಲಾಗಿದೆ.

ಆಕ್ಸಿಜನ್ ಆಟೋ ಮೂಲಕ ಕರೋನಾ ಸೋಂಕಿತರಿಗೆ ನೆರವಾಗುತ್ತಿರುವ ಎನ್‌ಜಿ‌ಒ ನಿರ್ದೇಶಕಿ

ತುರ್ತಾಗಿ ಮೆಡಿಕಲ್ ಆಕ್ಸಿಜನ್ ಅಗತ್ಯವಿರುವವರನ್ನು ನಮ್ಮ ಸಿಬ್ಬಂದಿ ಆಟೋ ರಿಕ್ಷಾದಲ್ಲಿ ಕೂರಿಸಿ ಆಕ್ಸಿಜನ್ ಒದಗಿಸುತ್ತಾರೆ. ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ನಮ್ಮ ಸಿಬ್ಬಂದಿ ಪಿಪಿಇ ಕಿಟ್ ಧರಿಸುತ್ತಾರೆ ಎಂದು ಅವರು ಹೇಳಿದ್ದಾರೆ.

MOST READ: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಆಕ್ಸಿಜನ್ ಆಟೋ ಮೂಲಕ ಕರೋನಾ ಸೋಂಕಿತರಿಗೆ ನೆರವಾಗುತ್ತಿರುವ ಎನ್‌ಜಿ‌ಒ ನಿರ್ದೇಶಕಿ

ಇದುವರೆಗೂ ಸೀತಾ ದೇವಿಯವರ ಆಕ್ಸಿಜನ್ ಸಿಲಿಂಡರ್‌ಗಳಿಂದ ಸುಮಾರು 300 ಜನರು ಪ್ರಯೋಜನ ಪಡೆದಿದ್ದಾರೆ. ಇನ್ನಷ್ಟು ಆಟೋ ರಿಕ್ಷಾಗಳ ಮೂಲಕ ಈ ಸೇವೆಯನ್ನು ವಿಸ್ತರಿಸಲು ಬಯಸಿದ್ದರೂ ಹಣಕಾಸಿನ ಕೊರತೆ ಎದುರಾಗಿದೆ ಎಂದು ಸೀತಾ ದೇವಿ ಹೇಳಿದ್ದಾರೆ.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
NGO Director helps corona patients through oxygen auto. Read in Kannada.
Story first published: Thursday, May 27, 2021, 15:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X