ಕೊನೆಗೂ ಹರಾಜಾಯ್ತು ನೀರವ್ ಮೋದಿ ಐಷಾರಾಮಿ ಕಾರು
ಬ್ಯಾಂಕ್‌ಗಳಿಗೆ ವಂಚಿಸಿ ಪರಾರಿಯಾಗಿರುವ ನೀರವ್ ಮೋದಿಯವರ ಹಲವು ಐಷಾರಾಮಿ ಕಾರುಗಳನ್ನು ಜಾರಿ ನಿರ್ದೇಶನಾಲಯವು ವಶಪಡಿಸಿಕೊಂಡಿತ್ತು. ವಶಪಡಿಸಿಕೊಂಡ ಕಾರುಗಳ ಹರಾಜು ಪ್ರಕ್ರಿಯೆಯನ್ನು ಆರಂಭಿಸಲಾಗಿತ್ತು. ಈಗ ಆ ಕಾರುಗಳನ್ನು ಜೋಧಪುರದ ವ್ಯಾಪಾರಿಗಳಿಗೆ ಹಸ್ತಾಂತರಿಸಲಾಗಿದೆ.

ರೋಲ್ಸ್ ರಾಯ್ಸ್ ಸೇರಿದಂತೆ ನೀರವ್ ಮೋದಿಯವರ 13 ಕಾರುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅವುಗಳಲ್ಲಿ ಹಲವು ಕಾರುಗಳನ್ನು ಹರಾಜು ಹಾಕಲಾಗಿದೆ. ರೋಲ್ಸ್ ರಾಯ್ಸ್ ಕಾರ್ ಅನ್ನು ಹರಾಜಿನಲ್ಲಿ ಖರೀದಿಸಿರುವ ಜೋಧ್ಪುರದ ನಿವಾಸಿಗಳಾದ ಮನೋಜ್ ಶರ್ಮಾ ಹಾಗೂ ಪ್ರವೀಣ್ ಶರ್ಮಾ ಎಂಬ ಸಹೋದರರು ಕರಕುಶಲ ರಫ್ತಿನ ಕೆಲಸ ಮಾಡುತ್ತಾರೆ.

ಈ ಕಾರನ್ನು ಮಾರ್ಚ್ 15ರಂದು ಹರಾಜು ಹಾಕಲಾಯಿತು. ಹರಾಜಿನಲ್ಲಿ ಭಾಗವಹಿಸುವವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಭಾಗವಹಿಸಬಹುದಿತ್ತು. ಹರಾಜು ಪೂರ್ಣಗೊಂಡ ನಂತರ ಈ ಕಾರನ್ನು ಮನೋಜ್ ಶರ್ಮಾ ಅವರಿಗೆ ಬುಧವಾರ ಹಸ್ತಾಂತರಿಸಲಾಗಿದೆ. ಇದು ನೀರವ್ ಮೋದಿಯವರ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಈ ಕಾರಿಗೆ ರೂ.75 ಲಕ್ಷ ಬಿಡ್ ನಿಗದಿಪಡಿಸಲಾಗಿತ್ತು. ನಂತರ ಅದು ರೂ.1.5 ಕೋಟಿಗಳಿಗೆ ಏರಿತು. ಮನೋಜ್ ಶರ್ಮಾ ರೂ.1.5 ಕೋಟಿ ನೀಡಿ ಈ ಕಾರ್ ಅನ್ನು ಖರೀದಿಸಿದರು. ತೆರಿಗೆ ಪಾವತಿಯ ನಂತರ ಈ ಕಾರಿನ ಬೆಲೆ ರೂ.2 ಕೋಟಿಗಳಾಗಿದೆ.

ಭಾರತದಲ್ಲಿ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.5.25 ಕೋಟಿಗಳಿಂದ ಆರಂಭವಾಗುತ್ತದೆ. ಭಾರತದ ಅತಿ ಶ್ರೀಮಂತರು ಮಾತ್ರ ಈ ಕಾರನ್ನು ಬಳಸುತ್ತಾರೆ. ಮೋದಿಯವರ ರೋಲ್ಸ್ ರಾಯ್ಸ್ ಘೋಸ್ಟ್ ಕಾರು 2010ರ ಮಾದರಿಯಾಗಿದ್ದು, ಗ್ರೇ ಬಣ್ಣವನ್ನು ಹೊಂದಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಈ ಕಾರಿನಲ್ಲಿ 652 ಸಿಸಿಯ ವಿ 12 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 603 ಬಿಹೆಚ್‌ಪಿ ಪವರ್ ಹಾಗೂ 840 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 8-ಸ್ಪೀಡ್ ಗೇರ್ ಬಾಕ್ಸ್ ಟ್ರಾನ್ಸ್‌ಮಿಷನ್ ಹೊಂದಿದೆ. ಈ ಕಾರು ಕೇವಲ ಐದು ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲೇರಟ್ ಮಾಡುತ್ತದೆ.

ನೀರವ್ ಮೋದಿಯವರಿಂದ ವಶಪಡಿಸಿಕೊಂಡ ಕಾರುಗಳಲ್ಲಿ ರೋಲ್ಸ್ ರಾಯ್ಸ್ ಘೋಸ್ಟ್, ಪೋರ್ಷೆ ಪನಾಮೆರಾ, ಮರ್ಸಿಡಿಸ್ ಬೆಂಜ್ ಸಿಎಲ್ಎಸ್, ಮರ್ಸಿಡಿಸ್ ಬೆಂಜ್ ಜಿಎಲ್ಎಸ್, ಟೊಯೊಟಾ ಫಾರ್ಚೂನರ್, ಟೊಯೋಟಾ ಇನ್ನೋವಾ, ಹೋಂಡಾ ಸಿಆರ್-ವಿ ಸೇರಿವೆ. ಹರಾಜಿನ ಪಾರದರ್ಶಕತೆ ಕಾಪಾಡಲು ಈ ಕಾರುಗಳನ್ನು ಆನ್‌ಲೈನ್‌ನಲ್ಲಿ ಹರಾಜು ಹಾಕಲಾಗಿದೆ.


Click it and Unblock the Notifications