ನಿಸ್ಸಾನ್ ತೇಲುವ ಕಾರು 'ನೋಟ್ ಬೋಟ್'

By Nagaraja

ಭಾವಗೀತೆಯಾಗಿ, ಚಲನಚಿತ್ರೆಗೀತೆಯಾಗಿ ಹಲವಾರು ದಶಕಗಳಿಂದ ಕನ್ನಡಿಗರ ಜನಮನದಲ್ಲಿ ನೆಲೆಯಾಗಿರುವ ಹಾಡು 'ದೋಣಿಹಾಡು'. ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ! ಎಂದು ಆರಂಭವಾಗುವ ಹಾಡಿಗೆ ಐತಿಹಾಸಿಕ ಹಿನ್ನೆಲೆಯಿದೆ. 80 ವರ್ಷಗಳಷ್ಟು ಇತಿಹಾಸವಿರುವ ಈ ಕವಿತೆಯನ್ನು ರಾಷ್ಟ್ರಕವಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಪ್ರಥಮ ವ್ಯಕ್ತಿ ಕುವೆಂಪು ರಚಿಸಿದ್ದರು.

ಇಲ್ಲಿ ವಾಹನ ಜಗತ್ತಿಗೂ ದೋಣಿಗೂ ಯಾವ ಸಂಬಂಧ ವ್ಯಾಖ್ಯಾನಿಸಲು ಹೊರಟಿದ್ದೇವೆ ಎಂಬ ಕುತೂಹಲ ನಿಮ್ಮಲ್ಲಿರಬಹುದು. ವಿಷಯ ಇಷ್ಟೇ ಜರ್ಮನಿಯ ಮುಂಚೂಣಿಯ ಕಂಪನಿಗಳಲ್ಲಿ ಒಂದಾಗಿರುವ ನಿಸ್ಸಾನ್, ತನ್ನ ನೂತನ ನೋಟ್ ಬೋಟ್ ಕಾರನ್ನು ಅನಾವರಣಗೊಳಿಸಲು ವಿಶೇಷವಾದ ಸನ್ನಿವೇಶವೊಂದನ್ನು ಸೃಷ್ಟಿ ಮಾಡಿತ್ತು. ಈ ತೇಲುವ ನಿಸ್ಸಾನ್ ಕಾರಿತಾದ ಆಸಕ್ತಿದಾಯಕ ವಿಚಾರಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ನಿಸ್ಸಾನ್ ತೇಲುವ ಕಾರು 'ನೋಟ್ ಬೋಟ್'

ಸಾಮಾನ್ಯಗಿಂತಲೂ ಅತಿ ವಿಶೇಷ ರೀತಿಯಲ್ಲಿ ನೋಟ್ ಬೋಟ್ ಲಾಂಚ್ ಮಾಡಿರುವ ನಿಸ್ಸಾನ್, ವಾಹನ ವಲಯದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ತೆಪ್ಪೆಯಲ್ಲಿ ಜೋಡಣೆ ಮಾಡಲಾದ ನಿಸ್ಸಾನ್ ಕಾರನ್ನು 2012 ಲಂಡನ್ ಒಲಿಂಪಿಕ್ ತಾಣದ ನದಿಯಲ್ಲಿ ಬಿಡಲಾಗಿತ್ತು.

ನಿಸ್ಸಾನ್ ತೇಲುವ ಕಾರು 'ನೋಟ್ ಬೋಟ್'

ಇನ್ನು ದೋಣಿ ಮುಂದೆ ಸಾಗಲು ನಾವಿಕರ ಅಗತ್ಯವಿಲ್ಲವೇ? ಈ ಕಾರ್ಯಕ್ಕಾಗಿ ಮೂವರು ಒಲಿಂಪಿಯನ್ನರನ್ನು ನೇಮಕಗೊಳಿಸಿತ್ತು. ಅವರು ಈ ಕೆಲಸವನ್ನು ಹೆಚ್ಚು ಖುಷಿಯಿಂದಲೇ ಮಾಡಿ ತೋರಿಸಿದರು.

ನಿಸ್ಸಾನ್ ತೇಲುವ ಕಾರು 'ನೋಟ್ ಬೋಟ್'

ಒಲಿಂಪಿಕ್ ಚಿನ್ನ ವಿಜೇತರಾದ ಹೆಲೆನ್ ಗ್ಲೋವರ್, ಸೋಫಿ ಹಾಸ್ಕಿಂಗ್ ಮತ್ತು ಪೊಲಿ ಸ್ವಾನ್ ಪ್ರಮುಖ ಆಕರ್ಷಣೆಯಾಗಿದ್ದರು. ಇವರಿಗೆ ಸಮಸ್ಯೆಯಾಗದಿರಲು ಕಾರಿನ ಮಧ್ಯಭಾಗದಲ್ಲಿರುವ ಸೀಟನ್ನು ತೆರವುಗೊಳಿಸಲಾಗಿತ್ತು.

ನಿಸ್ಸಾನ್ ತೇಲುವ ಕಾರು 'ನೋಟ್ ಬೋಟ್'

ನಿಮ್ಮ ಮಾಹಿತಿಗಾಗಿ, ನೋಟ್‌ನ್ಲಲಿ 360 ಡಿಗ್ರಿ ಪಾರ್ಕಿಂಗ್ ಸಿಸ್ಟಂ ಹಾಗೂ ಸೇಫ್ಟಿ ಶೀಲ್ಡ್ ಟೆಕ್ನಾಲಜಿ ಫೀಚರ್ಸ್ 4 ಕ್ಯಾಮೆರಾಗಳಿವೆ. ಇದು ಒಂದು ಎದುರುಗಡೆ, ಇನ್ನೊಂದು ಹಿಂದುಗಡೆ ಹಾಗೆಯೇ ಪ್ರತಿ ಡೋರ್ ಮಿರರ್‌ನಲ್ಲೂ ಒಂದೊಂದು ಲಗತ್ತಿಸಲಾಗಿದೆ.

ನಿಸ್ಸಾನ್ ತೇಲುವ ಕಾರು 'ನೋಟ್ ಬೋಟ್'

ಅಷ್ಟಕ್ಕೂ ಇಂತಹದೊಂದು ಕಾರ್ಯಕ್ರಮ ಆಯೋಜಿಸುವ ಉದ್ದೇಶ ಏನಾಗಿತ್ತು ಅಂತೀರಾ? ಹೌದು, ಕಾರಿನ ಪ್ರಚಾರದ ಸಹಿತ ನೋಟ್ ರಿವರ್ಸ್ ಕ್ಯಾಮೆರಾ ಸಿಸ್ಟಂ ಉತ್ತೇಜಿಸುವುದು ಆಯೋಜಕರ ಉದ್ದೇಶವಾಗಿತ್ತು.

ನಿಸ್ಸಾನ್ ತೇಲುವ ಕಾರು 'ನೋಟ್ ಬೋಟ್'

ನೋಟ್ ರೋಡ್ ಕಾರಿನಂತೆಯೇ ನೋಟ್ ಬೋಟ್‌ನಲ್ಲಿಯೂ ರಿಯರ್ ಕ್ಯಾಮೆರಾ ಸೌಲಭ್ಯ ಆಳವಡಿಸಲಾಗಿತ್ತು. ಇದು ಲೇನ್ ತಪ್ಪಿದ್ದಲ್ಲಿ ಎಚ್ಚರಿಕೆ ರವಾನಿಸುತ್ತಿತ್ತು.

ನಿಸ್ಸಾನ್ ತೇಲುವ ಕಾರು 'ನೋಟ್ ಬೋಟ್'

ಅಂದ ಹಾಗೆ ನಿಸ್ಸಾನ್ ಬೋಟ್ ಯುರೋಪ್‌ನಲ್ಲಿ ಈಗಾಗಲೇ 3860 ಬುಕ್ಕಿಂಗ್ ದಾಖಲಿಸಿಕೊಂಡಿದ್ದು, ಅಕ್ಟೋಬರ್ 1ರಂದು ವಿತರಣೆ ಕಾರ್ಯ ಆರಂಭವಾಗಲಿದೆ.

ನಿಸ್ಸಾನ್ ತೇಲುವ ಕಾರು 'ನೋಟ್ ಬೋಟ್'

ಈ ಮೂಲಕ ಮಾರುಕಟ್ಟೆಯಲ್ಲಿ ಗರಿಷ್ಠ ಬುಕ್ಕಿಂಗ್ ಗಿಟ್ಟಿಸಿಕೊಳ್ಳಲು ನಿಸ್ಸಾನ್ ಹೊಸ ಮಾರಾಟ ತಂತ್ರ ಅನುಸರಿಸಿದೆ. ಇದಕ್ಕೆ ಜಗತ್ತಿನಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಿಸ್ಸಾನ್ ತೇಲುವ ಕಾರು 'ನೋಟ್ ಬೋಟ್'

ಇಷ್ಟೆಲ್ಲ ಆದರೂ ನೋಟ್ ಬೋಟ್ ನೀರಿಗಿಳಿಸುವಾಗ ಸಂದರ್ಭದಲ್ಲಿ ಎಂಜಿನ್ ಹೊರಗಿಡಲಾಗಿತ್ತು ಎಂಬುದನ್ನು ಮರೆಯಬಾರದು.

ವೀಡಿಯೊ ವೀಕ್ಷಿಸಿ

Most Read Articles

Kannada
English summary
THE UK’s motoring press descended on Eton to witness the new Nissan Note being launched in unusual fashion.
Story first published: Friday, October 25, 2013, 17:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X