2024ರ ಅಂತ್ಯದ ವೇಳೆಗೆ ಅಮೇರಿಕಾಗೆ ಹೊಂದಿಕೆಯಾಗಲಿವೆ ಹೆದ್ದಾರಿಗಳು: ನಿತಿನ್ ಗಡ್ಕರಿ ಭರವಸೆ
ಉತ್ತರಾಖಂಡ ರಾಜ್ಯವು ಶೀಘ್ರದಲ್ಲೇ ಅಮೆರಿಕಾ ರಸ್ತೆಗಳ ಗುಣಮಟ್ಟಕ್ಕೆ ಸರಿಹೊಂದುವಂತಹ ರಸ್ತೆಗಳು ಮತ್ತು ಹೆದ್ದಾರಿಗಳನ್ನು ಹೊಂದಲಿದೆ. ರಸ್ತೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಕೇಂದ್ರವು ಸುಮಾರು 2 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಂಗಳವಾರ ಉತ್ತರಾಖಂಡ ರಾಜ್ಯಕ್ಕೆ ಭರವಸೆ ನೀಡಿದರು.
ಈಗಾಗಲೇ ಹಲವಾರು ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ, ಅವುಗಳಲ್ಲಿ ಕೆಲವು ಶೀಘ್ರದಲ್ಲೇ ಪೂರ್ಣಗೊಳ್ಳುವ ಹಂತದಲ್ಲಿವೆ. ದೆಹಲಿ-ಡೆಹ್ರಾಡೂನ್ ಎಕಾನಮಿಕ್ ಕಾರಿಡಾರ್ ಎಂದೂ ಕರೆಯಲ್ಪಡುವ ದೆಹಲಿ-ಡೆಹ್ರಾಡೂನ್ ಎಕ್ಸ್ ಪ್ರೆಸ್ ವೇ ಅತ್ಯಂತ ನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿದೆ. ಇದು ದೆಹಲಿ ಮತ್ತು ಉತ್ತರಾಖಂಡ ರಾಜ್ಯ ರಾಜಧಾನಿ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ.

ಸಚಿವ ನಿತಿನ್ ಗಡ್ಕರಿ ಅವರ ಪ್ರಕಾರ, ಉತ್ತರಾಖಂಡದಲ್ಲಿ ಪ್ರಸ್ತುತ 3,608 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಗಳಿವೆ. ಈ ವರ್ಷದ ಅಂತ್ಯದ ವೇಳೆಗೆ ಉತ್ತರಾಖಂಡ ರಾಜ್ಯ ರಸ್ತೆಗಳು ಅಂತರರಾಷ್ಟ್ರೀಯ ಗುಣಮಟ್ಟದ್ದಾಗಿರುತ್ತವೆ. ಇಂದು ರಾಜ್ಯದಲ್ಲಿ 2,000 ಕೋಟಿ ರೂ. ಮೌಲ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನು ಘೋಷಿಸುವಾಗ ಗಡ್ಕರಿ ಈ ಹೇಳಿಕೆ ನೀಡಿದ್ದಾರೆ.
ಮುಂಬರುವ ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, "2024ರ ಅಂತ್ಯದ ವೇಳೆಗೆ ಉತ್ತರಾಖಂಡದ ರಾಷ್ಟ್ರೀಯ ಹೆದ್ದಾರಿಗಳು ಅಂತರರಾಷ್ಟ್ರೀಯ ಮಾನದಂಡಗಳಿಗೆ ಸರಿಹೊಂದುತ್ತವೆ ಎಂದು ಘೋಷಿಸಲು ನಾನು ಬಯಸುತ್ತೇನೆ. ರಾಜ್ಯದಲ್ಲಿ ರಸ್ತೆ ಜಾಲವನ್ನು ಸುಧಾರಿಸಲು ಕೇಂದ್ರವು ಹಣವನ್ನು ಹೆಚ್ಚಿಸುತ್ತಿದೆ. ಪ್ರಸ್ತುತ ರಸ್ತೆ ಮೂಲಸೌಕರ್ಯಕ್ಕಾಗಿ 1.40 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ, ಇದಕ್ಕೆ ಹೆಚ್ಚುವರಿ 60 ಕೋಟಿ ರೂ.ಗಳನ್ನು ಶೀಘ್ರದಲ್ಲೇ ಸೇರಿಸಲಾಗುವುದು ಎಂದರು.

ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಇತ್ತೀಚೆಗೆ ದೆಹಲಿ-ಡೆಹ್ರಾಡೂನ್ ಎಕ್ಸ್ ಪ್ರೆಸ್ ವೇ ಈ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದ್ದರು. ವನ್ಯಜೀವಿ ಕಾರಿಡಾರ್ ಹೊಂದಿರುವ 340 ಕಿ.ಮೀ ಉದ್ದದ ಎಕ್ಸ್ ಪ್ರೆಸ್ ವೇ ಮುಂದಿನ ವರ್ಷದ ಜನವರಿ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಈ ಹೆದ್ದಾರಿಯು ಪ್ರಯಾಣದ ಸಮಯವನ್ನು ಕೇವಲ 2.5 ಗಂಟೆಗಳಿಗೆ ಇಳಿಸಲಿದೆ ಎಂದು ಧಾಮಿ ಹೇಳಿದರು.
ಹಾಗೆಯೇ ಇದು ದೆಹಲಿ ಮತ್ತು ಹರಿದ್ವಾರದ ನಡುವಿನ ಪ್ರಯಾಣಿಕರಿಗೆ ಈಗ ತೆಗೆದುಕೊಳ್ಳುವ ಐದು ಗಂಟೆಗಳ ಬದಲಿಗೆ ಎರಡು ಗಂಟೆಗಳ ಒಳಗೆ ದೂರವನ್ನು ಕ್ರಮಿಸಲು ಸಹಾಯ ಮಾಡುತ್ತದೆ. ಹರಿದ್ವಾರ, ಮುಜಾಫರ್‌ನಗರ, ಶಾಮ್ಲಿ, ಯಮುನಗರ, ಬಾಗ್‌ಪತ್, ಮೀರತ್ ಮತ್ತು ಬರೌತ್‌ಗೆ ಸಂಪರ್ಕ ಕಲ್ಪಿಸಲು ಕಾರಿಡಾರ್ ಏಳು ಪ್ರಮುಖ ಇಂಟರ್‌ಚೇಂಜ್‌ಗಳನ್ನು ಹೊಂದಿರುತ್ತದೆ.
ದೆಹಲಿ-ಡೆಹ್ರಾಡೂನ್ ಎಕಾನಮಿಕ್ ಕಾರಿಡಾರ್ ಅನ್ನು ಸುಮಾರು 8,300 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಮೇಲ್ವಿಚಾರಣೆಯಲ್ಲಿ, ಎಕ್ಸ್ಪ್ರೆಸ್ವೇಯನ್ನು ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಎಕ್ಸ್ಪ್ರೆಸ್ವೇ ಏಷ್ಯಾದ ಅತಿದೊಡ್ಡ ವನ್ಯಜೀವಿ ಎಲಿವೇಟೆಡ್ ಕಾರಿಡಾರ್ ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications