ಯುಪಿ ರಸ್ತೆಗಳು ಯು‌ಎಸ್‌ಎ ರಸ್ತೆಗಳಾಂತಾಗಲಿವೆ ಎಂದ ಕೇಂದ್ರ ಸಚಿವ

ಉತ್ತರ ಪ್ರದೇಶದ ರಸ್ತೆಗಳನ್ನು ಅಮೆರಿಕಾದ ರಸ್ತೆಗಳ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಹೇಳಿದ್ದಾರೆ. ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರು ರಾಜ್ಯದಲ್ಲಿ ರಸ್ತೆ ಮೂಲಸೌಕರ್ಯವನ್ನು ಸುಧಾರಿಸಲು ಕೇಂದ್ರ ಸಾರಿಗೆ ಇಲಾಖೆಯು ರೂ. 5 ಲಕ್ಷ ಕೋಟಿ ವೆಚ್ಚ ಮಾಡಲು ಯೋಜನೆಯನ್ನು ಸಿದ್ಧಪಡಿಸಿದೆ ಎಂದು ಹೇಳಿದರು.

ಯುಪಿ ರಸ್ತೆಗಳು ಯು‌ಎಸ್‌ಎ ರಸ್ತೆಗಳಾಂತಾಗಲಿವೆ ಎಂದ ಕೇಂದ್ರ ಸಚಿವ

ಈ ಮೊತ್ತದಿಂದ ಉತ್ತರ ಪ್ರದೇಶದ ರಸ್ತೆಗಳ ಮೂಲಸೌಕರ್ಯ ಸುಧಾರಣೆಯಾಗಲಿದ್ದು, ಅಮೆರಿಕಾದ ರಸ್ತೆಗಳಂತೆ ಇಲ್ಲಿನ ರಸ್ತೆಗಳೂ ಉತ್ತಮಗೊಳ್ಳಲಿವೆ ಎಂದು ಹೇಳಿದರು. ಉತ್ತರ ಪ್ರದೇಶದ ಜಾನ್‌ಪುರ ಹಾಗೂ ಮಿರ್ಜಾಪುರವನ್ನು ಸಂಪರ್ಕಿಸುವ 232 ಕಿ.ಮೀ ಉದ್ದದ ಹೆದ್ದಾರಿ ಯೋಜನೆಗೆ ನಿತಿನ್ ಗಡ್ಕರಿರವರು ಶಂಕುಸ್ಥಾಪನೆ ನೆರವೇರಿಸಿದರು. ಈ ಹೆದ್ದಾರಿಯನ್ನು ರೂ. 4,160 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

ಯುಪಿ ರಸ್ತೆಗಳು ಯು‌ಎಸ್‌ಎ ರಸ್ತೆಗಳಾಂತಾಗಲಿವೆ ಎಂದ ಕೇಂದ್ರ ಸಚಿವ

ರಾಜ್ಯದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ರಸ್ತೆ ಯೋಜನೆಗಳು ಮುಖ್ಯ ಎಂದು ಅವರು ಒತ್ತಿ ಹೇಳಿದರು. ಸರಕುಗಳ ವೇಗ ಹಾಗೂ ಸುರಕ್ಷಿತ ಸಾಗಣೆಯ ಭರವಸೆಯೊಂದಿಗೆ ರಾಜ್ಯದ ಎಲ್ಲಾ ಭಾಗಗಳನ್ನು ಸಂಪರ್ಕಿಸುವ ಉತ್ತಮ ರಸ್ತೆ ಮೂಲಸೌಕರ್ಯದ ಅಗತ್ಯದ ಬಗ್ಗೆಯೂ ಅವರು ಹೇಳಿದರು. ರೂ. 36,200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ 594 ಕಿ.ಮೀ ಉದ್ದದ ಗಂಗಾ ಎಕ್ಸ್‌ಪ್ರೆಸ್‌ವೇಗೆ ಇದೇ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು.

ಯುಪಿ ರಸ್ತೆಗಳು ಯು‌ಎಸ್‌ಎ ರಸ್ತೆಗಳಾಂತಾಗಲಿವೆ ಎಂದ ಕೇಂದ್ರ ಸಚಿವ

ಪ್ರಧಾನಿ ನರೇಂದ್ರ ಮೋದಿ ರವರು ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಅನ್ನು ಸಹ ಉದ್ಘಾಟಿಸಿದ್ದರು. ಈ ಎಕ್ಸ್‌ಪ್ರೆಸ್‌ವೇ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಬಿಹಾರದ ಗಡಿ ಪ್ರದೇಶಗಳಿಗೆ ಹಲವಾರು ಪೂರ್ವ ಜಿಲ್ಲೆಗಳಲ್ಲಿ ಪ್ರಯಾಣದ ಸಮಯವನ್ನು ಕಡಿತಗೊಳಿಸುತ್ತದೆ. 2021ರ ನವೆಂಬರ್ ವೇಳೆಗೆ ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಉದ್ದ 1,40,937 ಕಿ.ಮೀಗಳಾಗಿದೆ ಎಂದು ನಿತಿನ್ ಗಡ್ಕರಿ ರವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ಯುಪಿ ರಸ್ತೆಗಳು ಯು‌ಎಸ್‌ಎ ರಸ್ತೆಗಳಾಂತಾಗಲಿವೆ ಎಂದ ಕೇಂದ್ರ ಸಚಿವ

ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಒಟ್ಟು ಉದ್ದವು 2014ರ ಏಪ್ರಿಲ್ ನಲ್ಲಿ ಸುಮಾರು 91,287 ಕಿ.ಮೀಗಳಾಗಿತ್ತು. ಈ ವರ್ಷದ ನವೆಂಬರ್ ಅಂತ್ಯದ ವೇಳೆಗೆ ಈ ಪ್ರಮಾಣವು ಸುಮಾರು 1,40,937 ಕಿ.ಮೀಗಳಿಗೆ ಏರಿಕೆಯಾಗಿದೆ ಎಂದು ಅವರು ಹೇಳಿದರು. ಇದರ ಅಂಕಿ ಅಂಶಗಳನ್ನು ಹಂಚಿಕೊಂಡ ಗಡ್ಕರಿ ರವರು 2014 - 15 ರಿಂದ ಈ ವರ್ಷದ ನವೆಂಬರ್ ಅಂತ್ಯದವರೆಗೆ ಸುಮಾರು 82,058 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ನಿಗದಿಪಡಿಸಲಾಗಿದೆ.

ಯುಪಿ ರಸ್ತೆಗಳು ಯು‌ಎಸ್‌ಎ ರಸ್ತೆಗಳಾಂತಾಗಲಿವೆ ಎಂದ ಕೇಂದ್ರ ಸಚಿವ

ಇದೇ ಅವಧಿಯಲ್ಲಿ ಸುಮಾರು 68,068 ಕಿ.ಮೀ ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು. ಸುಮಾರು ರೂ. 1,13,000 ಕೋಟಿ ವೆಚ್ಚದಲ್ಲಿ 4,970 ಕಿ.ಮೀ ವ್ಯಾಪ್ತಿಯಲ್ಲಿ 49 ಯೋಜನೆಗಳು ಕಾಮಗಾರಿಯ ವಿವಿಧ ಹಂತಗಳಲ್ಲಿವೆ. ಇವುಗಳನ್ನು 2023 - 24 ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಅವರು ರಾಜ್ಯಸಭೆಗೆ ತಿಳಿಸಿದರು. ಕೇಂದ್ರ ಸಾರಿಗೆ ಇಲಾಖೆಯು ಹೆಚ್ಚುವರಿ 27 ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಅಥವಾ ಪ್ರವೇಶ ನಿಯಂತ್ರಿತ ಹೆದ್ದಾರಿಗಳಿಗಾಗಿ ಒಟ್ಟು ರೂ. 3.6 ಲಕ್ಷ ಕೋಟಿ ಹೂಡಿಕೆಗೆ ಆರಂಭಿಸಿದೆ ಎಂದು ಗಡ್ಕರಿ ಹೇಳಿದರು.

ಯುಪಿ ರಸ್ತೆಗಳು ಯು‌ಎಸ್‌ಎ ರಸ್ತೆಗಳಾಂತಾಗಲಿವೆ ಎಂದ ಕೇಂದ್ರ ಸಚಿವ

ಇನ್ನು ಫಾಸ್ಟ್ ಟ್ಯಾಗ್ ಕುರಿತು ಮಾತನಾಡಿದ ಗಡ್ಕರಿರವರು, ಈ ವರ್ಷದ ಡಿಸೆಂಬರ್ 11 ರವರೆಗೆ ಒಟ್ಟು ಟೋಲ್ ಪ್ಲಾಜಾ ಶುಲ್ಕದ ಸುಮಾರು 96%ನಿಂದ 97% ನಷ್ಟನ್ನು ಫಾಸ್ಟ್ಯಾಗ್ ಮೂಲಕ ಸಂಗ್ರಹಿಸಲಾಗಿದೆ ಎಂದು ಹೇಳಿದರು. 2020 - 21ರಲ್ಲಿ ರೂ. 27,744.15 ಕೋಟಿ ಟೋಲ್ ಶುಲ್ಕವನ್ನು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಟೋಲ್ ಪ್ಲಾಜಾಗಳಲ್ಲಿ ಸಂಗ್ರಹಿಸಲಾಗಿದೆ.

ಯುಪಿ ರಸ್ತೆಗಳು ಯು‌ಎಸ್‌ಎ ರಸ್ತೆಗಳಾಂತಾಗಲಿವೆ ಎಂದ ಕೇಂದ್ರ ಸಚಿವ

ದೇಶದಲ್ಲಿ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳ ವೇಗದ ಮಿತಿಯನ್ನು ಹೆಚ್ಚಿಸುವ ಬಗ್ಗೆಯೂ ನಿತಿನ್ ಗಡ್ಕರಿರವರು ಚಿಂತನೆ ನಡೆಸುತ್ತಿದ್ದಾರೆ. ಹೆದ್ದಾರಿಗಳಲ್ಲಿ ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಚಲಿಸುವ ವಾಹನಗಳ ವೇಗದ ಮಿತಿಯನ್ನು ಹೆಚ್ಚಿಸಲು ಸಂಸತ್ತಿನಲ್ಲಿ ಶೀಘ್ರದಲ್ಲೇ ಮಸೂದೆಯನ್ನು ಮಂಡಿಸುವುದಾಗಿ ಅವರು ಹೇಳಿದ್ದಾರೆ.

ಯುಪಿ ರಸ್ತೆಗಳು ಯು‌ಎಸ್‌ಎ ರಸ್ತೆಗಳಾಂತಾಗಲಿವೆ ಎಂದ ಕೇಂದ್ರ ಸಚಿವ

ಸದ್ಯ ದೇಶವು ಮಾಲಿನ್ಯ ಹಾಗೂ ಆರ್ಥಿಕತೆಯ ಸಮಸ್ಯೆಗಳಿಂದ ಬಳಸುತ್ತಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಕೇಂದ್ರ ಸರ್ಕಾರವು ಪ್ರತಿ ವರ್ಷ ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ವರ್ಷಕ್ಕೆ ರೂ. 8 ಲಕ್ಷ ಕೋಟಿ ವ್ಯಯಿಸುತ್ತಿದೆ. ಈ ಪ್ರಮಾಣವು ಮುಂದಿನ ಐದು ವರ್ಷಗಳಲ್ಲಿ ರೂ. 25 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಲಿದೆ ಎಂದು ಅವರು ಹೇಳಿದರು. ವಾಯು ಮಾಲಿನ್ಯವನ್ನು ತಪ್ಪಿಸಲು ಹಾಗೂ ಆರ್ಥಿಕ ಪ್ರಗತಿಯನ್ನು ಸಾಧಿಸಲು ಪೆಟ್ರೋಲ್, ಡೀಸೆಲ್ ವಾಹನಗಳ ಬಳಕೆಯನ್ನು ಕಡಿಮೆ ಮಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಯುಪಿ ರಸ್ತೆಗಳು ಯು‌ಎಸ್‌ಎ ರಸ್ತೆಗಳಾಂತಾಗಲಿವೆ ಎಂದ ಕೇಂದ್ರ ಸಚಿವ

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಇಲಾಖೆಯು ಈ ವರ್ಷ ಇದುವರೆಗೂ 12,000 ಕಿಮೀ ರಸ್ತೆ ನಿರ್ಮಾಣದ ಗುರಿಯಲ್ಲಿ 5,600 ಕಿ.ಮೀ ಪೂರ್ಣಗೊಳಿಸಿದೆ ಎಂದು ಮಾಹಿತಿ ನೀಡಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಾರೀ ಮಳೆಯ ಹೊರತಾಗಿಯೂ. ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಸಂಪೂರ್ಣ ಗುರಿ ಸಾಧಿಸಲಾಗುವುದು ಎಂದು ಇಲಾಖೆ ಕಾರ್ಯದರ್ಶಿ ಗಿರಿಧರ್ ಅರಮನೆ ರವರು ಹೇಳಿದರು.

ಯುಪಿ ರಸ್ತೆಗಳು ಯು‌ಎಸ್‌ಎ ರಸ್ತೆಗಳಾಂತಾಗಲಿವೆ ಎಂದ ಕೇಂದ್ರ ಸಚಿವ

ಈ ಬಗ್ಗೆ ಮಾತನಾಡಿದ ಗಿರಿಧರ್ ಅರಮನೆ ರವರು, ಈ ವರ್ಷ ಸುಮಾರು 12 ಸಾವಿರ ಕಿ.ಮೀ ಗುರಿ ಹೊಂದಿದ್ದು, ಇಲ್ಲಿಯವರೆಗೆ 5,600 ಕಿ.ಮೀ ಗುರಿಯನ್ನು ಈಗಾಗಲೇ ಪೂರ್ಣಗೊಳಿಸಲಾಗಿದ್ದು, ಉಳಿದ ರಸ್ತೆ ನಿರ್ಮಾಣ ಕಾರ್ಯವು ಸಹ ಉತ್ತಮ ಸ್ಥಿತಿಯಲ್ಲಿವೆ. ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ನಮ್ಮ ಗುರಿಯನ್ನು ಪೂರೈಸುವ ಬಗ್ಗೆ ಭರವಸೆ ಹೊಂದಿದ್ದೇವೆ ಎಂದು ತಿಳಿಸಿದರು.

ಯುಪಿ ರಸ್ತೆಗಳು ಯು‌ಎಸ್‌ಎ ರಸ್ತೆಗಳಾಂತಾಗಲಿವೆ ಎಂದ ಕೇಂದ್ರ ಸಚಿವ

ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, 2018 ಹಾಗೂ 2019 ರ ಅವಧಿಗೆ ಹೋಲಿಸಿದರೆ ಈಗಿರುವ ರಸ್ತೆ ನಿರ್ಮಾಣದ ವೇಗವು ಉತ್ತಮವಾಗಿಲ್ಲ. ಈಗ ನಾವು 6 ಲೇನ್ ಹಾಗೂ 8 ಲೇನ್ ಹೆದ್ದಾರಿಗಳನ್ನು ನಿರ್ಮಿಸುತ್ತಿದ್ದೇವೆ ಎಂದು ಹೇಳಿದರು. ಲೇನ್ - ಕಿ.ಮೀ ನಿರ್ಮಾಣವು ಐತಿಹಾಸಿಕ ಸರಾಸರಿಗೆ ಹೋಲಿಸಿದರೆ 1.5 ಪಟ್ಟು ಹತ್ತಿರದಲ್ಲಿದೆ. 2018 ಹಾಗೂ 2019ರ ಅವಧಿಗೆ ಹೋಲಿಸಿದರೆ ಪ್ರಸಕ್ತ ಆರ್ಥಿಕ ವರ್ಷವು ಉತ್ತಮವಾಗಿಲ್ಲ.

ಯುಪಿ ರಸ್ತೆಗಳು ಯು‌ಎಸ್‌ಎ ರಸ್ತೆಗಳಾಂತಾಗಲಿವೆ ಎಂದ ಕೇಂದ್ರ ಸಚಿವ

ನಮ್ಮ ಗುರಿ ಹೆಚ್ಚಾಗಿದ್ದು, ನಾವು ಈಗ ನಿರ್ಮಿಸುತ್ತಿರುವ ರಸ್ತೆಗಳು ಹಿಂದಿನ ರಸ್ತೆಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿವೆ ಎಂದು ಗಿರಿಧರ್ ಅರಮನೆ ಹೇಳಿದರು. 2018 ಹಾಗೂ 2019 ರಲ್ಲಿ ಮುಖ್ಯವಾಗಿ ನಾಲ್ಕು ಲೇನ್ ಹಾಗೂ ದ್ವಿಪಥಕ್ಕೆ ಹೋಲಿಸಿದರೆ ನಾವು ಈಗ ಹೆಚ್ಚಾಗಿ ಎಂಟು ಲೇನ್, ಎಕ್ಸ್‌ಪ್ರೆಸ್‌ವೇ ಹಾಗೂ ಕೆಲವು ರಾಜ್ಯಗಳಲ್ಲಿ ಆರು ಪಥದ ರಸ್ತೆಗಳನ್ನು ನಿರ್ಮಿಸುತ್ತಿದ್ದೇವೆ. ಇದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ ಎಂದು ಅವರು ಹೇಳಿದರು.

ಯುಪಿ ರಸ್ತೆಗಳು ಯು‌ಎಸ್‌ಎ ರಸ್ತೆಗಳಾಂತಾಗಲಿವೆ ಎಂದ ಕೇಂದ್ರ ಸಚಿವ

ವರ್ಷಾಂತ್ಯದ ವೇಳೆಗೆ ಇನ್ನೂ 1,100 - 1,200 ಕಿ.ಮೀ ಪೂರ್ಣಗೊಳಿಸುತ್ತೇವೆ. ನಾವು ನಿರ್ಮಾಣದ ವಿಷಯದಲ್ಲಿ ವರ್ಷಾಂತ್ಯದ ವೇಳೆಗೆ ಭಾರತಮಾಲಾ ಯೋಜನೆಯಡಿಯಲ್ಲಿ 7,800 - 8,000 ಕಿ.ಮೀಗಳಷ್ಟು ರಸ್ತೆ ನಿರ್ಮಾಣ ಮಾಡಲಿದ್ದೇವೆ. ನಾವು ಈಗಾಗಲೇ 19,500 ಕಿ.ಮೀಗಳಷ್ಟು ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇವೆ. ವರ್ಷಾಂತ್ಯದ ವೇಳೆಗೆ, ನಾವು ಐದು ವರ್ಷಗಳ ಅವಧಿಯಲ್ಲಿ ಮಾಡಲು ಯೋಜಿಸಿರುವ ಒಟ್ಟು 34,000 ಕಿ.ಮೀಗಳಲ್ಲಿ ಕನಿಷ್ಠ 21,600 ಕಿ.ಮೀ ಕ್ರಮಿಸುತ್ತೇವೆ ಎಂದು ಅವರು ಹೇಳಿದರು.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Nitin gadkari says up roads will be like usa roads details
Story first published: Thursday, December 23, 2021, 13:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X