ಸ್ವದೇಶಿ ಎಲೆಕ್ಟ್ರಿಕ್ ಕಾರುಗಳಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಯಾಣಿಸಿ ಏನಂದ್ರು ಗೊತ್ತಾ?
ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಹೊಸ ಎರಡೂ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಾಗಿದೆ. ಮಹೀಂದ್ರಾ (Mahindra) ಕಂಪನಿಯು XEV 9e ಮತ್ತು BE 6e ಎಂಬ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಿ ಬಿರುಗಾಳಿಯನ್ನು ಎಬ್ಬಿಸಿದೆ. ಈ ಹೊಸ ಹೀಂದ್ರಾ XEV 9e (Mahindra XEV 9e) ಮತ್ತು ಮಹೀಂದ್ರಾ BE 6e (Mahindra BE 6e) ಎಲೆಕ್ಟ್ರಿಕ್ ಕಾರುಗಳಲ್ಲಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಪ್ರಯಾಣಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಮೊದಲಿನಿಂದಲೂ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಪ್ರೋತ್ಸಾಹಗಳನ್ನು ನೀಡುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ಮೂಲಕ ಹಸಿರು ಸಾರಿಗೆ ಮಾತ್ರವಲ್ಲದೆ ವಿದೇಶದಿಂದ ಕಚ್ಚಾ ತೈಲ ಆಮದು ಕಡಿಮೆ ಮಾಡಿ ದೇಶದ ಆರ್ಥಿಕತೆಯನ್ನು ಸುಧಾರಿಸಬಹುದು ಎಂಬುದು ನಿತಿನ್ ಗಡ್ಕರಿ ಅವರ ಅಭಿಪ್ರಾಯವಾಗಿದೆ. ಅವರ ಪ್ರಯತ್ನದ ಫಲವಾಗಿ ಈಗ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಸ್ವಲ್ಪ ಮಟ್ಟಿಗೆ ಹೆಚ್ಚುತ್ತಿದೆ.

ಚೀನಾದ ಎಲೆಕ್ಟ್ರಿಕ್ ಕಾರ್ ಕಂಪನಿ ಬಿವೈಡಿಯ ಭಾರತದಲ್ಲಿ ಮಾರಾಟ ಮಾಡುತ್ತಿರುವ ಎಲ್ಲಾ ಎಲೆಕ್ಟ್ರಿಕ್ ಕಾರುಗಳನ್ನು ನಿತಿನ್ ಗಡ್ಕರಿ ಅವರಿಗೆ ತೋರಿಸಿ ಮೆಚ್ಚುಗೆ ಪದೆದುಕೊಂಡರು. ಇದೀಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳಲ್ಲಿ ಪ್ರಯಾಣಿಸಿದ್ದಾರೆ. ಇದಾದ ಬಳಿಕ ನಿತಿನ್ ಗಡ್ಕರಿ ಅವರ ಎಕ್ಸ್ ಪೋಸ್ಟ್ ನಲ್ಲಿ ಮಹೀಂದ್ರಾದ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ವಿಶ್ವದರ್ಜೆಯ ಎಲೆಕ್ಟ್ರಿಕ್ ಕಾರುಗಳನ್ನು ಹೊಗಳಿದ್ದಾರೆ.
ಈಗಿರುವ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಜಾಗತಿಕ ಕಾರು ಕಂಪನಿಗಳಿಗೆ ಪೈಪೋಟಿ ನೀಡುತ್ತಿರುವುದು ಭಾರತೀಯ ಕಂಪನಿಗಳಿಗೆ ಹೆಮ್ಮೆ ಮತ್ತು ಸಂತೋಷದ ಸಂಗತಿ ಎಂದು ತಿಳಿಸಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಎಕ್ಸ್ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ, ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ 3 ನಮಸ್ತೆ ಎಮೋಜಿಗಳನ್ನು ಉಲ್ಲೇಖಿಸಿದ್ದಾರೆ.

ಮಹೀಂದ್ರಾ XEV 9e ಎಲೆಕ್ಟ್ರಿಕ್ ಕಾರಿನ ಬೆಲೆಯು ರೂ.21.90 ಲಕ್ಷವಾದರೆ, ಮಹೀಂದ್ರಾ BE 6e ಬೆಲೆಯು ರೂ.18.90 ಲಕ್ಷವಾಗಿದೆ. ಈ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಮಹೀಂದ್ರಾ ಕಂಪನಿಯು INGLO ಪ್ಲಾಟ್‌ಫಾರ್ಮ್‌ನ ಆಧಾರದ ಮೇಲೆ ಇವಿ-ನಿರ್ದಿಷ್ಟ ಮಾಡ್ಯುಲರ್ ಆರ್ಕಿಟೆಕ್ಚರ್ ಅನ್ನು ಕೆಲವು ಭವಿಷ್ಯದ ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳನ್ನು ಇರಿಸಲು ಉದ್ದೇಶಿಸಲಾಗಿದೆ.
ಮಹೀಂದ್ರಾ XEV 9e ಎಲೆಕ್ಟ್ರಿಕ್ ಕಾರು ತ್ರಿಕೋನ ಎಲ್ಇಡಿ ಹೆಡ್‌ಲ್ಯಾಂಪ್ ಕಾನ್ಫಿಗರೇಶನ್ ಅನ್ನು ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿವೆ. ಇರ್ನವರ್ಟಡ್ ಎಲ್-ಆಕಾರದ ಕನೆಕ್ಟಿವಿಟಿಯು LED DRL ಗಳೊಂದಿಗೆ LED ಟೈಲ್‌ಲೈಟ್‌ಗಳನ್ನು ಸಂರ್ಪಕಿಸುತ್ತದೆ. ಈ ಮಹೀಂದ್ರಾ BE 6e ಎಲೆಕ್ಟ್ರಿಕ್ ಕಾರು ಫಾಂಟ್ ಲೈನ್ ಗಳು, ಬೃಹತ್ ವ್ಹೀಲ್ ಅರ್ಚಾರ್ ಗಳು, ಸಿ-ಆಕಾರದ LED DRL ಗಳು ಮತ್ತು ನಯವಾದ ಬಂಪರ್ ಅನ್ನು ಒಳಗೊಂಡಿದೆ.
ಎರಡೂ ಎಲೆಕ್ಟ್ರಿಕ್ ಕಾರುಗಳು ಒಂದೇ ರೀತಿಯ ಡಿಸ್ ಪ್ಲೇ ಗಳನ್ನು ಹೊಂದಿವೆ. ಈ ಮಹೀಂದ್ರಾ XEV 9e ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಪನೋರಮಿಕ್ ಸನ್‌ರೂಫ್ ಮತ್ತು ADAS ಸೂಟ್ ಅನ್ನು ಪಡೆಯುತ್ತದೆ. ಈ ಮಹೀಂದ್ರಾ BE 6e ಲೋಗೋದೊಂದಿಗೆ ದೊಡ್ಡ ಸನ್‌ರೂಫ್ ಅನ್ನು ಪಡೆಯುತ್ತದೆ. ಈ BE 6e ಎಲೆಕ್ಟ್ರಿಕ್ ಕಾರಿನ ADAS ಸೂಟ್ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಇನ್ನು ಈ ಎರಡೂ ಎಸ್‌ಯುವಿಗಳಲ್ಲಿ 16-ಸ್ಪೀಕರ್ ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್ ಮತ್ತೊಂದು ಪ್ರಮುಖ ವೈಶಿಷ್ಟ್ಯವಾಗಿದೆ. ಮಹೀಂದ್ರಾ INGLO ಪ್ಲಾಟ್‌ಫಾರ್ಮ್ ಎರಡು ವಿಭಿನ್ನ ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತಿದೆ. ಇವುಗಳು 59 kWh ಮತ್ತು 79 kWh ಯುನಿಟ್ ಗಳಾಗಿವೆ. ಆರಂಭದಲ್ಲಿ, ಚಿಕ್ಕ ಬ್ಯಾಟರಿ ಪ್ಯಾಕ್ ರೂಪಾಂತರಗಳು ಮಾತ್ರ ಲಭ್ಯವಿರುತ್ತವೆ.
ಮಹೀಂದ್ರಾ XEV 9e ಮತ್ತು BE 6e ಗಳು ಲಿಥಿಯಂ ಐರನ್ ಫಾಸ್ಫೇಟ್ (LFP) ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದೆ. ಇನ್ನು ಈ ಎರಡೂ ಎಲೆಕ್ಟ್ರಿಕ್ ಎಸ್‍ಯುವಿಗಳು ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂಡಿದೆ. 175 kW DC ಫಾಸ್ಟ್ ಚಾರ್ಜರ್ ಅನ್ನು ಬಳಸಿಕೊಂಡು ಕೇವಲ 20 ನಿಮಿಷಗಳಲ್ಲಿ 20-80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು.
ಈ ಮಹೀಂದ್ರಾ XEV 9e ಮತ್ತು BE 6e ಎಲೆಕ್ಟ್ರಿಕ್ ಎಸ್‍ಯುವಿಗಳ ಪವರ್‌ಟ್ರೇನ್‌ಗಳು 224 bhp ಮತ್ತು 278 bhp ನಡುವೆ ಪವರ್ ಅನ್ನು ಉತ್ಪಾದಿಸುತ್ತದೆ, ಇನ್ನು 79 kWh ಬ್ಯಾಟರಿ ಪ್ಯಾಕ್ ಫುಲ್ ಚಾರ್ಜ್ ಮಾಡಿದರೆ ಸುಮಾರು 500 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಒಟ್ಟಾರೆಯಾಗಿ ಈ ಎರಡು ಮಹೀಂದ್ರಾ ಎಲೆಕ್ಟ್ರಿಕ್ ಎಸ್‍ಯುವಿಯು ಭಾರತದಲ್ಲಿ ಸಂಚಲನವನ್ನು ಸೃಷ್ಟಿಸುವಲ್ಲಿ ಯಶ್ವಸಿಯಾಗಿದೆ.


Click it and Unblock the Notifications