ನಿಟ್ರೊ ಸರ್ಕಸ್‌ನತ್ತ ಇಂದಿನ ಫೇಸ್‌ಬುಕ್ ವೀಡಿಯೋ ಪಯಣ
ಓದುಗರಿಗಾಗಿ ಡ್ರೈವ್‌ಸ್ಪಾರ್ಕ್ ಹೊಸತಾಗಿ ಹೊರತಂದಿರುವ 'ಫೇಸ್‌ಬುಕ್ ಇಂದಿನ ವೀಡಿಯೋ' ಲೇಖನ ಹೆಚ್ಚು ಜನಪ್ರಿಯವಾಗುತ್ತಿದೆ. ಇದೀಗಷ್ಟೇ ಆರಂಭಿಸಿರುವ ನೂತನ ಲೇಖನ ಸರಮಾಲೆಯಲ್ಲಿ ಆಟೋಮೊಬೈಲ್‌ಗೆ ಸಂಬಂಧಿಸಿದ ರೋಚಕ ವೀಡಿಯೋಗಳನ್ನು ನೀವು ವೀಕ್ಷಿಸಬಹುದಾಗಿದೆ.
ಇಂದಿನ ಈ ಲೇಖನದಲ್ಲಿ ನಿಟ್ರೊ ಸರ್ಕಸ್ ಬಗ್ಗೆ ಹೇಳಿಕೊಡಲಿದ್ದೇವೆ. ಇದು ಸ್ವಲ್ಪ ವಿಚಿತ್ರವಾಗಿ ಅನಿಸಿದರೂ ನಿಟ್ರೊ ಸರ್ಕಸ್ ಎಂಬುದು ಕಾರು, ಬೈಕ್ ಹಾಗೂ ದೈತ್ಯ ವಾಹನಗಳಲ್ಲಿ ಸಾಹಸ ಪ್ರದರ್ಶನ ನೀಡುವ ಸಾಹಸಿಗರ ಗುಂಪಾಗಿದೆ.
ಇದರಲ್ಲಿರುವ ಸದಸ್ಯರು ಒಂದೇ ಸಮಯದಲ್ಲಿ ವಿವಿಧ ರೀತಿಯ ರೋಚಕ ಭಂಗಿಗಳನ್ನು ನೀಡುತ್ತಾ ತಮ್ಮ ಸಾಹಸ ಮೆರೆಯುತ್ತಾರೆ. ಇದು ಪ್ರೇಕ್ಷಕರನ್ನು ಮೂಕ ವಿಸ್ಮಿತವಾಗಿತವಾಗಿಸುತ್ತದೆ. ಕೆಳಗಡೆ ಕೊಟ್ಟಿರುವ ಫೇಸ್‌ಬುಕ್ ವೀಡಿಯೋ ಆಫ್ ದಿ ಡೇ ಇದನ್ನೇ ಸಾರುತ್ತದೆ.
ಅಂದ ಹಾಗೆ ನಿಟ್ರೊ ಸರ್ಕಸ್ ತಂಡವನ್ನು ಟ್ರಾವೀಸ್ ಅಲನ್ ಪ್ಯಾಟ್ರಾನಾ ಎಂಬವರು ಸ್ಥಾಪಿಸಿದ್ದರು. ವೃತ್ತಿನಿರತ ಮೋಟಾರ್‌ಸ್ಪೋರ್ಟ್ಸ್ ಹಾಗೂ ಸ್ಟಂಟ್ ಚಾಲಕರಾಗಿರುವ ಅವರು ಅನೇಕ ಅಂತರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ವಿಜಯಿಯಾಗಿದ್ದಾರೆ.
ನೋಡಲು ಮರೆಯದಿರಿ ಇಂದಿನ ಫೇಸ್‌ಬುಕ್ ವೀಡಿಯೋ


Click it and Unblock the Notifications








