ಕರೋನಾ ವೈರಸ್ ಭೀತಿ: ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ತಾತ್ಕಾಲಿಕ ಸ್ಥಗಿತ

ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಗೆ ಡ್ರಿಂಕ್ ಅಂಡ್ ಡ್ರೈವ್ ಸಹ ಕಾರಣವಾಗಿದೆ. ಡ್ರಿಂಕ್ ಅಂಡ್ ಡ್ರೈವ್ ಹೆಚ್ಚು ರಾತ್ರಿ ವೇಳೆಯಲ್ಲಿ ಸಂಭವಿಸುತ್ತದೆ. ಈ ಕಾರಣಕ್ಕೆ ಡ್ರಿಂಕ್ ಅಂಡ್ ಡ್ರೈವ್ ಮಾಡುವವರನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುತ್ತದೆ.

ಕರೋನಾ ವೈರಸ್ ಭೀತಿ: ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ತಾತ್ಕಾಲಿಕ ಸ್ಥಗಿತ

ಡ್ರಿಂಕ್ ಅಂಡ್ ಡ್ರೈವ್ ಮಾಡುವವರನ್ನು ಪತ್ತೆ ಹಚ್ಚಲು ಬ್ರೀಥ್ ಅನಾಲೈಜರ್ ಬಳಸಲಾಗುತ್ತದೆ. ಈ ಸಾಧನವು ವ್ಯಕ್ತಿಯು ಕುಡಿದಿದ್ದಾನೆಯೇ ಇಲ್ಲವೇ ಎಂಬುದನ್ನು ಪತ್ತೆ ಹಚ್ಚುತ್ತದೆ. ಈ ಸಾಧನವನ್ನು ವ್ಯಕ್ತಿಯ ಮುಂದೆ ಹಿಡಿದು ಪರೀಕ್ಷಿಸಲಾಗುತ್ತದೆ. ಈ ಬ್ರೀಥ್ ಅನಾಲೈಜರ್ ಬಳಸುವುದರಿಂದಲೂ ವೈರಸ್ ಹರಡಲಿದೆ.

ಕರೋನಾ ವೈರಸ್ ಭೀತಿ: ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ತಾತ್ಕಾಲಿಕ ಸ್ಥಗಿತ

ಈ ಕಾರಣಕ್ಕೆ ತಮಿಳುನಾಡು ಸರ್ಕಾರವು ಡ್ರಿಂಕ್ ಅಂಡ್ ಡ್ರೈವ್ ಪರೀಕ್ಷೆಯನ್ನು ಇತ್ತೀಚೆಗೆ ನಿಷೇಧಿಸಿತ್ತು. ಕರೋನಾ ವೈರಸ್ ಎಂಬ ಮಹಾಮಾರಿ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿದಿನ ಹಲವಾರು ಜನರು ಸಾವನ್ನಪ್ಪುತ್ತಿದ್ದಾರೆ.

ಕರೋನಾ ವೈರಸ್ ಭೀತಿ: ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ತಾತ್ಕಾಲಿಕ ಸ್ಥಗಿತ

ಹಲವೆಡೆ ಕರೋನಾ ವೈರಸ್ ಸೋಂಕಿತರು ಗುಣ ಮುಖರಾಗಿದ್ದಾರೆ. ಆದರೆ ಈ ವೈರಸ್‌ಗೆ ಯಾವುದೇ ಅಧಿಕೃತ ಔಷಧಿ ಇಲ್ಲ. ವೈರಸ್ ಹರಡುವುದನ್ನು ತಡೆಯಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕರೋನಾ ವೈರಸ್ ಭೀತಿ: ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ತಾತ್ಕಾಲಿಕ ಸ್ಥಗಿತ

ಆರಂಭದಲ್ಲಿ ಚೀನಾದ ವುಹಾನ್‌ನಲ್ಲಿ ಮಾತ್ರ ಕಂಡುಬಂದ ಈ ವೈರಸ್ ಈಗ ವಿಶ್ವದ 124ಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ. ಇದರಿಂದಾಗಿ ಪ್ರಪಂಚದ ಜನರು ಈ ವೈರಸ್ ನಿಂದ ಆಘಾತಕ್ಕೊಳಗಾಗಿದ್ದಾರೆ.

ಕರೋನಾ ವೈರಸ್ ಭೀತಿ: ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ತಾತ್ಕಾಲಿಕ ಸ್ಥಗಿತ

ವೈರಸ್ ಹೆಚ್ಚು ಜನರಿಗೆ ಹರಡದಂತೆ ತಡೆಯಲು ಸರ್ಕಾರಗಳು ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಅದರಂತೆ ದೇಶದಲ್ಲಿರುವ ಬಹುತೇಕ ಸಾರ್ವಜನಿಕ ಸ್ಥಳಗಳನ್ನು ಮುಚ್ಚಲು ಆದೇಶಿಸಲಾಗಿದೆ. ಇದರ ಜೊತೆಗೆ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಕರೋನಾ ವೈರಸ್ ಭೀತಿ: ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ತಾತ್ಕಾಲಿಕ ಸ್ಥಗಿತ

ತಮಿಳುನಾಡಿನ ನಂತರ ಈಗ ಮಹಾರಾಷ್ಟ್ರ ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ಪರೀಕ್ಷೆಯನ್ನು ಸ್ಥಗಿತಗೊಳಿಸಿದ್ದಾರೆ. ಅಲ್ಲಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿನಯ್ ಗರ್ಗವೊಂಕರ್ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ.

ಕರೋನಾ ವೈರಸ್ ಭೀತಿ: ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ತಾತ್ಕಾಲಿಕ ಸ್ಥಗಿತ

ಕರೋನಾ ಸೋಂಕಿತ ವ್ಯಕ್ತಿಯ ಪಕ್ಕದಲ್ಲಿ ನಿಂತರೆ ಕರೋನಾ ವೈರಸ್ ಹರಡುವುದರಿಂದ ಮಹಾರಾಷ್ಟ್ರ ಪೊಲೀಸರು ಈ ಕ್ರಮವನ್ನು ಕೈಗೊಂಡಿದ್ದಾರೆ. ಕರೋನಾ ವೈರಸ್ ಸೋಂಕಿತ ವ್ಯಕ್ತಿಯ ಚರ್ಮದ ಮೂಲಕ ಹಾದುಹೋಗುವ ನೀರಿನ ಗುಳ್ಳೆಗಳ ಮೂಲಕ ಹರಡುತ್ತದೆ. ಈ ನೀರಿನ ಗುಳ್ಳೆಗಳು ಬೇರೊಬ್ಬರ ಮೇಲೆ ಬಿದ್ದಾಗ, ಅವರಿಗೂ ಸಹ ಈ ವೈರಸ್ ತಗುಲುತ್ತದೆ.

ಕರೋನಾ ವೈರಸ್ ಭೀತಿ: ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ತಾತ್ಕಾಲಿಕ ಸ್ಥಗಿತ

ಕೊವಿಡ್ 19 ವೈರಸ್ ನಿಂದಾಗಿ ಇದುವರೆಗೂ ಮಹಾರಾಷ್ಟ್ರದಲ್ಲಿ 39 ಜನ ಸಾವನ್ನಪ್ಪಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿರುವ ಕಾರಣಕ್ಕೆ ಮುಂಜಾಗೃತೆಯಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವೈರಸ್ ಹರಡುವುದನ್ನು ತಡೆಗಟ್ಟಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಕರೋನಾ ವೈರಸ್ ಭೀತಿ: ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ತಾತ್ಕಾಲಿಕ ಸ್ಥಗಿತ

ಈ ಕಾರಣಕ್ಕೆ ಬ್ರೀಥ್ ಅನಾಲೈಜರ್ ಪರೀಕ್ಷೆ ನಡೆಸದಂತೆ ಪೊಲೀಸರಿಗೆ ಆದೇಶಿಸಲಾಗಿದೆ. ಇದರ ಜೊತೆಗೆ ಕೆಲಸದ ಸಮಯದಲ್ಲಿ ವೈರಸ್ ಹರಡದಂತೆ ರಕ್ಷಣಾತ್ಮಕ ಸಾಧನಗಳನ್ನು ಧರಿಸಲು ಸಹ ಸಲಹೆ ನೀಡಲಾಗಿದೆ.

Most Read Articles

Kannada
English summary
No drink and test via breath analyser in Maharashtra. Read in Kannada.
Story first published: Wednesday, March 18, 2020, 14:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X