ಇದೆಂಥ ಸಂಸ್ಕೃತಿ.. ಹೋಳಿ ಆಚರಣೆ ವೇಳೆ ಸ್ಕೂಟರ್ ಮೇಲೆ ಯುವತಿಯರ ಹುಚ್ಚಾಟ: ಮುಂದಿತ್ತು ಮಾರಿಹಬ್ಬ!

ದೇಶಾದ್ಯಂತ ವಿವಿಧೆಡೆ ಸೋಮವಾರ ಬಣ್ಣಗಳ ಹಬ್ಬ ಹೋಳಿ (Holi)ಯನ್ನು ಸಡಗರದಿಂದ ಆಚರಿಸಲಾಯಿತು. ವಯಸ್ಸಿನ ಅಂತರವಿಲ್ಲದೆ ಪ್ರತಿಯೊಂದು ವಯೋಮಾನದವರೂ ಸಂಭ್ರಮಿಸಿದರು. ಆದರೆ, ಉತ್ತರ ಪ್ರದೇಶದ ನೋಯ್ಡಾದಲ್ಲಿ ಯುವತಿಯರಿಬ್ಬರೂ ಹೋಳಿ ವೇಳೆ ಹುಚ್ಚಾಟವನ್ನು ಪ್ರದರ್ಶಿಸಿದ್ದು, ಅವರಿಗೆ ಸ್ಥಳೀಯ ಪೊಲೀಸರು ಸರಿಯಾಗಿಯೇ ಪಾಠ ಕಲಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಯುವತಿಯರು ಅತಿರೇಕವಾಗಿ ವರ್ತಿಸಿರುವ ವಿಡಿಯೋ ವೈರಲ್ ಆಗಿದೆ. ಯುವಕನೊಬ್ಬ ಸ್ಕೂಟರ್ ಓಡಿಸುತ್ತಿದ್ದಾನೆ. ಹಿಂಬದಿಯ ಆಸನದಲ್ಲಿ ಯುವತಿಯರಿಬ್ಬರೂ ಪರಸ್ಪರ ಮುಖ ಮಾಡಿ ಕುಳಿತುಕೊಂಡು ಬಾಲಿವುಡ್ ಹಾಡೊಂದಕ್ಕೆ ಅಶ್ಲೀಲವಾಗಿ ನೃತ್ಯ ಮಾಡುತ್ತಿದ್ದು, ಇನೋರ್ವ ವ್ಯಕ್ತಿ ವಿಡಿಯೋವನ್ನು ಚಿತ್ರೀಕರಿಸಿದ್ದಾನೆ. ಒಂದೇ ಗಂಟೆಯಲ್ಲಿ ಈ ದೃಶ್ಯಗಳು ಎಲ್ಲೆಡೆ ಹರಿದಾಡಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದರು.

Noida Man Driving Scooter - Two Girls Playing Holi And Indecency Dance Police Fined Rs 33 000

ಈ ವಿಡಿಯೋ ನೋಯ್ಡಾ ಪೊಲೀಸರು ಗಮನಕ್ಕೂ ಬಂದಿದ್ದು, ವಾಹನ ಮಾಲೀಕನಿಗೆ ರೂ.33,000 ದಂಡ ವಿಧಿಸಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪೊಲೀಸರು, 'ಸಂಚಾರ ನಿಯಮಗಳ ಉಲ್ಲಂಘನೆಗಾಗಿ ಸಂಬಂಧಪಟ್ಟ ವಾಹನ ಮಾಲೀಕನ ವಿರುದ್ಧ ನಿಯಮಾನುಸಾರ ಚಲನ್ ನೀಡಿ ಕ್ರಮ ಕೈಗೊಳ್ಳಲಾಗಿದೆ' ಎಂದು ಹೇಳಿದ್ದಾರೆ. ಆದರೆ, ವಿಡಿಯೋ ಚಿತ್ರೀಕರಣ ಮಾಡಿದ ವ್ಯಕ್ತಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿಯಾಗಿದೆ.

ನೆಟ್ಟಿಗನೊಬ್ಬ, 'ಹೋಳಿ ಹಬ್ಬದ ನೆಪದಲ್ಲಿ ಹುಡುಗಿಯರು ಅಶ್ಲೀಲತೆಯನ್ನು ಹರಡಿದ್ದಾರೆ. ದೆಹಲಿ ಮೆಟ್ರೋದ ಪ್ರಭಾವ ಗ್ರೇಟರ್ ನೋಯ್ಡಾವನ್ನು ತಲುಪಿದೆ. ಇದನ್ನು ನಾವು ಅಸಭ್ಯತೆ ಅಥವಾ ರೀಲ್ಸ್ ಭೂತ ಎಂದು ಕರೆಯಬೇಕೇ?' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಇವರಿಬ್ಬರು ಏನು ಸಂದೇಶ ಕೊಡುತ್ತಿದ್ದಾರೆ, ಇಂತಹ ಅಶ್ಲೀಲ ಕೃತ್ಯಗಳಲ್ಲಿ ತೊಡಗುವುದನ್ನು ಸಮಾಜಕ್ಕೆ ತಿಳಿಸುವುದೇ? ಮಕ್ಕಳು ಸಹ ಈ ವಿಡಿಯೋವನ್ನು ನೋಡುತ್ತಾರೆ' ಎಂದು ಹೇಳಿದ್ದಾರೆ.

Noida Man Driving Scooter - Two Girls Playing Holi And Indecency Dance Police Fined Rs 33 000

ಮತ್ತೊಬ್ಬ ಸಾಮಾಜಿಕ ಜಾಲತಾಣ ಬಳಕೆದಾರ, 'ಹಬ್ಬಗಳ ಹೆಸರಿನಲ್ಲಿ ಅಶ್ಲೀಲತೆ, ಗೂಂಡಾಗಿರಿ ಪ್ರದರ್ಶಿಸುವುದು ಎಷ್ಟು ಸರಿ? ಇಲ್ಲಿ ಸುಧಾರಣೆ ಅಗತ್ಯವಿದೆ. ಪೊಲೀಸರು ಕಠಿಣ ಕ್ರಮ ಕೈಗೊಳ್ಳುವ ಮೂಲಕ ಈ ರೀತಿಯ ಕೃತ್ಯಗಳಿಗೆ ಕಡಿವಾಣ ಹಾಕಬೇಕು' ಎಂದು ತಿಳಿಸಿದ್ದಾರೆ. ಇನ್ನೊಬ್ಬ ನೆಟ್ಟಿಗ, '15 ಸೆಕೆಂಡುಗಳ ಬೆಲೆ ರೂ.33,000. ಇದು ಅವರ ಜೀವನದ ಅತ್ಯಂತ ದುಬಾರಿ ವಿಡಿಯೋ ಆಗಲಿದೆ' ಎಂದಿದ್ದಾರೆ.

ಆ ಯುವಕರು - ಯುವತಿಯರದ್ದೇ ಎನ್ನಲಾದ ಮತ್ತೊಂದು ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದೇ ಸ್ಕೂಟರ್‌ನ್ನು ಇನ್ನೊಬ್ಬ ಯುವಕ ಚಲಾಯಿಸುವಾಗ ಹಿಂಬದಿಯ ಆಸನದಲ್ಲಿ ನಿಂತಿರುವ ಯುವತಿ, ಆತನ ಮುಖಕ್ಕೆ ಬಣ್ಣ ಹಚ್ಚಿದ್ದಾಳೆ. ಯುವಕ ಸ್ಕೂಟರ್ ಓಡಿಸಿಕೊಂಡು ಮುಂದೆ ಹೋಗಿದ್ದಾನೆ. ಸ್ವಲ್ಪ ದೂರ ಕ್ರಮಿಸಿದ ಬಳಿಕ, ಆಕೆ ಮುಗ್ಗರಿಸಿ ನೆಲಕ್ಕೆ ಬಿದ್ದಿರುವುದನ್ನು ದೃಶ್ಯಗಳಲ್ಲಿ ಕಾಣಬಹುದು.

ಹೋಳಿ ಹಬ್ಬವೆಂಬುದು ಪವಿತ್ರವಾದ ಆಚರಣೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಬೇಗನೆ ಖ್ಯಾತಿ ಗಳಿಸುವ ಉದ್ದೇಶದಿಂದ ಯುವ ಜನತೆ ಇಂತಹ ಕೆಲಸಗಳಿಗೆ ಕೈಹಾಕುವುದು ಎಷ್ಟರಮಟ್ಟಿಗೆ ಸರಿ?.. ಪೋಷಕರು ಸಹ ಈ ರೀತಿ ಮಾಡದಂತೆ ತಮ್ಮ ಮಕ್ಕಳಿಗೆ ತಿಳಿಹೇಳಬೇಕಾಗಿದೆ. ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು, ಸಂಚಾರ ನಿಯಮಗಳ ಉಲ್ಲಂಘನೆಗಾಗಿ ವಿಧಿಸುವ ದಂಡ ಹಾಗೂ ಶಿಕ್ಷೆಯ ಪ್ರಮಾಣದ ಕುರಿತು ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, March 26, 2024, 12:48 [IST]
English summary
Noida man driving scooter two girls playing holi indecency dance police fined rs 33000
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+