ನಾರ್ವೆಯಲ್ಲಿ ವಿಶ್ವದ ಮೊಟ್ಟ ಮೊದಲ ನೀರಿನಡಿಯಲ್ಲಿ ತೇಲುವ ಸುರಂಗ

By Nagaraja

ಅಂಟ್ಲಾಟಿಕ್ ಸಾಗರದ ತೀರದಲ್ಲಿರುವ ಉತ್ತರ ಯುರೋಪ್ ನ ಒಂದು ಸುಂದರವಾದ ದೇಶ 'ನಾರ್ವೇ' ಎಂದಾಕ್ಷಣ ಮೊದಲು ನೆನಪಿಗೆ ಮನಸೊರೆಗೊಳ್ಳುವ ಪ್ರಕೃತಿ ದೃಶ್ಯಗಳ ನಡುವಣ ಹಾದು ಹೋಗುವ ದೃಶ್ಯ ವಿಸ್ಮಯ ರಸ್ತೆಗಳು. ಇಂತಹ ಇತಿಹಾಸ ಪ್ರಸಿದ್ಧ ದೇಶವೀಗ ಮಗದೊಂದು ದಾಖಲೆ ಬರೆಯಲು ಹೊರಟಿದೆ.

ಆಳವಾದ ಸರೋವರಗಳಿಂದ (fjords) ಕೂಡಿರುವ ನಾರ್ವೇ ಇದೀಗ ನೂತನ ಪ್ರಯೋಗಕ್ಕೆ ಮುಂದಾಗುತ್ತಿದ್ದು, ವಾಹನಗಳ ಸಂಚಾರಕ್ಕಾಗಿ ನೀರಿನಡಿಯಲ್ಲಿ ವಿಶ್ವದ ಮೊಟ್ಟ ಮೊದಲ ತೇಲುವ ಸುರಂಗ ಮಾರ್ಗವನ್ನು (world's first floating underwater tunnel) ನಿರ್ಮಿಸಲಿದೆ.

ನಾರ್ವೆಯಲ್ಲಿ ವಿಶ್ವದ ಮೊಟ್ಟ ಮೊದಲ ನೀರಿನಡಿಯಲ್ಲಿ ತೇಲುವ ಸುರಂಗ

ನೀರಿನಡಿಯಲ್ಲಿ ನಿರ್ಮಾಣವಾಗಲಿರುವ ಬಹುನಿರೀಕ್ಷಿತ ಸುರಂಗ ಮಾರ್ಗವು ಕ್ರಿಸ್ಟಿಯಾನ್ ಸ್ಯಾಂಡ್ (Kristiansand) ಮತ್ತು ಟ್ರಾಂಡ್ಹೇಮ್ ಗಳೆಂಬ (Trondheim) ಎರಡು ಪ್ರಮುಖ ನಗರಗಳನ್ನು ಬಂಧಿಸಲಿದ್ದು, ವಾಹನ ಸಂಚಾರಕ್ಕೆ ತರೆದು ಕೊಳ್ಳಲಿದೆ.

ನಾರ್ವೆಯಲ್ಲಿ ವಿಶ್ವದ ಮೊಟ್ಟ ಮೊದಲ ನೀರಿನಡಿಯಲ್ಲಿ ತೇಲುವ ಸುರಂಗ

ಉದ್ದೇಶಿತ ಈ ಮಹತ್ತರ ಸುರಂಗ ಮಾರ್ಗದ ಕನಸು ನನಸಾದ್ದಲ್ಲಿ ಎರಡು ನಗರಗಳ ನಡುವಣ ಈಗಿರುವ 21 ತಾಸುಗಳ ಸಂಚಾರ ಸಮಯವು ಅರ್ಧದಷ್ಟು ಇಳಿಕೆಯಾಗಲಿದೆ.

ನಾರ್ವೆಯಲ್ಲಿ ವಿಶ್ವದ ಮೊಟ್ಟ ಮೊದಲ ನೀರಿನಡಿಯಲ್ಲಿ ತೇಲುವ ಸುರಂಗ

ಯಾವುದೇ ರೀತಿಯ ಹವಾಮಾನ ವೈಪರೀತ್ಯ ಸಂಭವಿಸಿದರೂ ಸುರಂಗ ಮಾರ್ಗಕ್ಕೆ ಧಕ್ಕೆ ಎದುರಾಗಲಾರದು ಎಂಬುದಿಲ್ಲಿ ಮಹತ್ವವೆನಿಸಿಕೊಳ್ಳುತ್ತದೆ.

ನಾರ್ವೆಯಲ್ಲಿ ವಿಶ್ವದ ಮೊಟ್ಟ ಮೊದಲ ನೀರಿನಡಿಯಲ್ಲಿ ತೇಲುವ ಸುರಂಗ

4,000 ಅಡಿ ಉದ್ದದ ಕಾಂಕ್ರೀಟ್ ಟ್ಯೂಬ್ ಗಳಿಂದ ನೀರಿನಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುವುದು. ಇದರೊಳಗೆ ವಾಹನಗಳಿಗೆ ಇತ್ತ ದಿಕ್ಕಿನತ್ತ ಸಂಚರಿಸಲು ರಸ್ತೆ ಮಾರ್ಗವನ್ನು ನಿರ್ಮಿಸಲಾಗುವುದು. ಈ ಪೈಕಿ ಒಂದನ್ನು ಸಂಚಾರ ಯೋಗ್ಯ ಮಗದೊಂದು ತುರ್ತು ರಿಪೇರಿ ಕೆಲಸಗಳಿಗಾಗಿ ವಿನಿಯೋಗಿಸಲಾವುಗುದು.

ನಾರ್ವೆಯಲ್ಲಿ ವಿಶ್ವದ ಮೊಟ್ಟ ಮೊದಲ ನೀರಿನಡಿಯಲ್ಲಿ ತೇಲುವ ಸುರಂಗ

ಈ ಎಲ್ಲ ಮಹತ್ತರ ಯೋಜನೆ ನನಸಾಗಲು ಬರೋಬ್ಬರಿ 25 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚ ನಿರೀಕ್ಷೆ ಮಾಡಲಾಗಿದ್ದು, 2035ರ ವೇಳೆಗೆ ಯೋಜನೆ ಪೂರ್ಣಗೊಳ್ಳಲಿದೆ.

ನಾರ್ವೆಯಲ್ಲಿ ವಿಶ್ವದ ಮೊಟ್ಟ ಮೊದಲ ನೀರಿನಡಿಯಲ್ಲಿ ತೇಲುವ ಸುರಂಗ

ಈ ಸಂಬಂಧ 2012ನೇ ಇಸವಿಯಲ್ಲೇ ಅಧ್ಯಯನ ಹಮ್ಮಿಕೊಂಡಿರುವ ನಾರ್ವೇಜಿಯನ್ ಸಾರ್ವಜನಿಕ ಸಾರಿಗೆ ಆಡಳಿತ (ಎನ್‌ಪಿಆರ್‌ಎ) ವಿಭಾಗವು ಸಾರಿಗೆ ಸಮಸ್ಯೆ ಬಗೆ ಹರಿಸಲು ನೀರಿನಡಿಯಲ್ಲಿನ ತೇಲುವ ಸುರಂಗ ಸೂಕ್ತ ಆಯ್ಕೆಯಾಗಿರಲಿದೆ ಎಂಬುದನ್ನು ಖಚಿತಪಡಿಸಿಕೊಂಡಿದೆ.

ನಾರ್ವೆಯಲ್ಲಿ ವಿಶ್ವದ ಮೊಟ್ಟ ಮೊದಲ ನೀರಿನಡಿಯಲ್ಲಿ ತೇಲುವ ಸುರಂಗ

ಯೋಜನೆಯ ಮೊದಲ ಹಂತವಾಗಿ Sognefjord ಸರೋವರದಲ್ಲಿ ತೇಲುವ ಸುರಂಗ ನಿರ್ಮಿಸಲಾಗುವುದು. ಇದು ಈ ತುದಿಯಿಂದ ಓಪ್ಪೆಡ್ಯಾಲ್ ನಿಂದ (Oppedal) ಸರೋವರ ಮಾರ್ಗವಾಗಿ ಅತ್ತ ತುದಿಯಲ್ಲಿರುವ ಲ್ಯಾವಿಕ್ (Lavik) ನಗರವನ್ನು ಬಂಧಿಸಲಿದೆ.

ನಾರ್ವೆಯಲ್ಲಿ ವಿಶ್ವದ ಮೊಟ್ಟ ಮೊದಲ ನೀರಿನಡಿಯಲ್ಲಿ ತೇಲುವ ಸುರಂಗ

ಸಾಗರದಾಳದಲ್ಲಿರುವ ಸುರಂಗ ಸೇತುವೆಯ ಟ್ಯೂಬ್ ಗಳನ್ನು ನೀರಿನ ಮೇಲಿರುವ ತೆಪ್ಪದಂತಿರುವ ಪ್ಯಾಂಟೂನ್ ಗಳಿಂದ (pontoon) ನಿಯಂತ್ರಿಸಲಾಗುವುದು. ಇದರಿಂದ ಹಡಗುಗಳ ಸುಗಮ ಸಂಚಾರಕ್ಕೆ ಧಕ್ಕೆಯಾಗದು.

ನಾರ್ವೆಯಲ್ಲಿ ವಿಶ್ವದ ಮೊಟ್ಟ ಮೊದಲ ನೀರಿನಡಿಯಲ್ಲಿ ತೇಲುವ ಸುರಂಗ

ಜಲ ಮಟ್ಟದಿಂದ 65ರಿಂದ 100 ಅಡಿ ಆಳದಲ್ಲಿ ಸುರಂಗ ಸೇತುವೆ ನಿರ್ಮಿಸಲಾಗುವುದು. ಇದರಿಂದ ಹಡಗಿಗೆ ಹಾದು ಹೋಗಲು ಯಾವುದೇ ರೀತಿಯ ತೊಂದರೆ ಎದುರಾಗದು.

ನಾರ್ವೆಯಲ್ಲಿ ವಿಶ್ವದ ಮೊಟ್ಟ ಮೊದಲ ನೀರಿನಡಿಯಲ್ಲಿ ತೇಲುವ ಸುರಂಗ

ಸುರಂಗ ಮಾರ್ಗವು ಸಾಗರಾಳದಲ್ಲಿನ ಉಬ್ಬರಳಿತದ ಜೊತೆಗೆ ಶೀತ ಹವಾಮಾನವನ್ನು ಎದುರಿಸುವಷ್ಟು ಸಮರ್ಥವಾಗಿರುತ್ತದೆ. ಇನ್ನು ನೀರಿನಡಿಯಲ್ಲಿರುವುದರಿಂದ ಗಾಳಿಯ ಭೀತಿ ಕಾಡದು.

ನಾರ್ವೆಯಲ್ಲಿ ವಿಶ್ವದ ಮೊಟ್ಟ ಮೊದಲ ನೀರಿನಡಿಯಲ್ಲಿ ತೇಲುವ ಸುರಂಗ

ಇಷ್ಟೆಲ್ಲ ಆದರೂ ಯೋಜನೆ ಇನ್ನು ಪ್ರಾಥಮಿಕ ಹಂತದಲ್ಲಿದ್ದು, ಅನೇಕ ಭೂವೈಜ್ಞಾನಿಕ ಸಮೀಕ್ಷೆಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆಯಿದೆ. ಒಮ್ಮೆ ಕಾಮಗಾರಿ ಆರಂಭಗೊಂಡಲ್ಲಿ ಪೂರ್ಣಗೊಳ್ಳಲು ಕನಿಷ್ಠ 10 ವರ್ಷ ಸಮಯ ತಗುಲಲಿದೆ.

ನಾರ್ವೆಯಲ್ಲಿ ವಿಶ್ವದ ಮೊಟ್ಟ ಮೊದಲ ನೀರಿನಡಿಯಲ್ಲಿ ತೇಲುವ ಸುರಂಗ

ಈ ಮಹತ್ತರ ಯೋಜನೆಯಿಂದ ನಾರ್ವೇಜಿಯನ್ ಜನರಿಗೆ ನಷ್ಟವಾಗುವ ಏಕಮಾತ್ರ ಅಂಶವೆಂದರೆ ನಾರ್ವೇಯ ಭವ್ಯ ಮನೋಹರ ಪ್ರಕೃತಿಯ ದೃಶ್ಯವನ್ನು ಸವಿಯಲು ಸಾಧ್ಯವಾಗದು.

ನಾರ್ವೆಯಲ್ಲಿ ವಿಶ್ವದ ಮೊಟ್ಟ ಮೊದಲ ನೀರಿನಡಿಯಲ್ಲಿ ತೇಲುವ ಸುರಂಗ

ಒಟ್ಟಿನಲ್ಲಿ ನೀರಿನಡಿಯಲ್ಲಿ ತೇಲುವ ಸುರಂಗ ಮಾರ್ಗದ ಯೋಜನೆಯಿಂದ ಸ್ಥಳೀಯರಿಗೆ ಅತಿ ಹೆಚ್ಚು ಪ್ರಯೋಜನವುಂಟಾಗಲಿದ್ದು, ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ತೆರಳಲು ಹೆಲಿಕಾಪ್ಟರನ್ನು ಆಶ್ರಯಿಸುವ ಅಗತ್ಯವಿರುವುದಿಲ್ಲ.

More from DriveSpark

Article Published On: Friday, July 29, 2016, 11:54 [IST]
English summary
Norway to build world’s first floating underwater tunnel
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+