Just In
Don't Miss!
- Sports
ವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್ಗೆ ಸಿಗಲಿದೆ ಮತ್ತೊಂದು ಅವಕಾಶ?
- News
ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Technology
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಅಜ್ಜಿಯ ಕನಸಿನ ಕಾರನ್ನು ಗಿಫ್ಟ್ ನೀಡಿದ ಮೊಮ್ಮಗ: ಶೋರೂಂನಲ್ಲೇ ತಬ್ಬಿ ಮುದ್ದಾಡಿದ ವೃದ್ಧೆ
ಎಲ್ಲರಿಗು ಸರ್ಪೈಸ್ ನೀಡುವುದು ಎಂದರೆ ಬಹಳ ಇಷ್ಟ. ಬಂಧುಮಿತ್ರರು, ದಂಪತಿ, ಆಫೀಸ್‌ನಲ್ಲಿನ ಸಹ ಉದ್ಯೋಗಿಗಳು ಹೀಗೆ ನೆಚ್ಚಿನ ವ್ಯಕ್ತಿಗಳಿಗೆ ಸರ್ಪೈಸ್ ಆಗಿ ಉಡುಗೊರೆ ನೀಡುತ್ತಾರೆ. ಆದರೆ ವಯಸ್ಸಾದ ಅಜ್ಜ-ಅಜ್ಜಿಯರಿಗೆ ಇಂತಹ ಉಡುಗೊರೆಗಳು ನೀಡುವುದು ತೀರಾ ವಿರಳವೆಂದೇ ಹೇಳಬಹುದು. ಆದರೆ ನಾವು ಹೇಳಲು ಹೊರಟಿರುವ ಕಥಯಲ್ಲಿ ಮೊಮ್ಮೊಗನೊಬ್ಬ ತನ್ನ ಅಜ್ಜಿಯ ಕನಸಿನ ಕಾರನ್ನು ಗಿಫ್ಟ್ ನೀಡಿ ಅಚ್ಚರಿಗೊಳಿಸಿದ್ದಾನೆ.

ವಿದೇಶದಲ್ಲಿ ಕೆಲಸಮಾಡಿಕೊಂಡಿರುವ NRI ವ್ಲಾಗರ್ ಒಬ್ಬರು ಸ್ವದೇಶಕ್ಕೆ ಬಂದು ತಮ್ಮ ಅಜ್ಜಿಗೆ ಟಾಟಾ ನೆಕ್ಸಾನ್ ಕಾರನ್ನು ಗಿಫ್ಟ್ ನೀಡಿರುವ ವಿಡಿಯೋ ಭಾರಿ ವೈರಲ್ ಆಗಿದೆ. ಎನ್‌ಆರ್‌ಐ ತನ್ನ ಅಜ್ಜಿಗೆ ಟಾಟಾ ನೆಕ್ಸಾನ್ ಉಡುಗೊರೆಯಾಗಿ ನೀಡಿದ ಭಾವನಾತ್ಮಕ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ.

ವೀಡಿಯೊದ ಶೀರ್ಷಿಕೆಯ ಪ್ರಕಾರ, ಹೊಸ ವಾಹನದ ಖರೀದಿಯನ್ನು ಅಜ್ಜಿಗೆ ತಿಳಿಯದಂತೆ ಆಚ್ಚರಿಗೊಳಿಸಿ ನೀಡುವುದಾಗಿದೆ. ಇದಕ್ಕಾಗಿ ಮೊದಲೇ ಪೂರ್ವ ತಯಾರಿ ಮಾಡಿಕೊಂಡಿದ್ದ NRI ವ್ಲಾಗರ್ ಹಾಗೂ ಅವರ ತಂಡ, ಅಜ್ಜಿಯನ್ನು ಡೀಲರ್‌ಶಿಪ್‌ಗೆ ಕರೆದೊಯ್ದಿದ್ದಾರೆ. ಈ ವೇಳೆ ಮೊಮ್ಮಗ ಹೊಸ ವಾಹನವನ್ನು ಖರೀದಿಸಲಿದ್ದಾನೆ ಎಂದು ಅಜ್ಜಿ ಅಂದಿಕೊಂಡಿದ್ದಾಳೆ.

ಇಲ್ಲಿ ಮತ್ತೊಂದು ಆಸಕ್ತಿಕರ ಸಂಗತಿಯೆಂದರೆ ಕಾರು ಖರೀದಿಗಾಗಿ ಅಮೆರಿಕಾದಿಂದ NRI ವ್ಲಾಗರ್ ತಮ್ಮ ಗೆಳತಿಯೊಬ್ಬರನ್ನು ಕರೆತಂದಿದ್ದರು. ಸಾಮಾನ್ಯವಾಗಿ ಅಮೆರಿಕದಲ್ಲಿ ಶ್ರೀಮಂತರು ಮಾತ್ರ ಡೀಲರ್‌ಷಿಪ್‌ಗಳಿಂದ ವಾಹನವನ್ನು ನೇರವಾಗಿ ಖರೀದಿಸುತ್ತಾರೆ. ಉಳಿದೆಲ್ಲ ಮಧ್ಯಮ ವರ್ಗದ ಅಮರಿಕನ್ನರು ಬಳಸಿದ ವಾಹನಗಳನ್ನು ಖರೀದಿಸುತ್ತಾರೆ.
ಹಾಗಾಗಿ NRI ಮೊಮ್ಮಗನೊಂದಿಗೆ ಬಂದಿದ್ದ ವಿದೇಶಿ ಮಹಿಳೆ ಮೊದಲ ಬಾರಿಗೆ ಶೋರೂಂನಲ್ಲಿ ಕಾರನ್ನು ಖರೀದಿಸುವುದನ್ನು ನೋಡಲು ಬಂದಿದ್ದಾರೆ. ಡೀಲರ್‌ಶಿಪ್‌ನಿಂದ ಹೊಸ ಕಾರನ್ನು ಹೇಗೆ ಖರೀದಿಸುತ್ತಾರೆ ಎಂಬುದನ್ನು ವಿದೇಶಿ ಸ್ನೇಹಿತೆ ನೋಡುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು.

ಮೊದಲಿಗೆ ಎನ್‌ಆರ್‌ಐ ವ್ಲಾಗರ್ ಮತ್ತು ಅವರ ವಿದೇಶಿ ಸ್ನೇಹಿತೆ ಊಟದ ಸಮಯದಲ್ಲಿ ಅಜ್ಜಿಯೊಂದಿಗೆ ಮಾತನಾಡುವುದರೊಂದಿಗೆ ವಿಡಿಯೋ ಆರಂಭವಾಗುತ್ತದೆ. ನಂತರ ಅಲ್ಲಿಂದ ಅಜ್ಜಿಯನ್ನು ಶೋರೋಂಗೆ ಕರೆದೊಯ್ಯುತ್ತಾರೆ. ಈ ವೇಳೆ ಟಾಟಾ ಮೋಟಾರ್ಸ್ ಮಾರುಕಟ್ಟೆಯಲ್ಲಿ ನೆಕ್ಸಾನ್ ಮಾದರಿ ಹೇಗಿದೆ, ಅದರ ಬೇಡಿಕೆ ಹೇಗಿದೆ ಎಂಬುದನ್ನು ಅಜ್ಜಿಯ ಎದುರಿಗೆ ಚರ್ಚಿಸುತ್ತಾರೆ.

ಅವರು ಈ ಕಾರನ್ನು ಖರೀದಿಸಲು ಮೊದಲೇ ಯೋಜಿಸಿರುತ್ತಾರೆ ಆದರೆ ಅಜ್ಜಿಗೆ ಅನುಮಾನ ಬರದಂತೆ ಮಾತನಾಡುತ್ತರೆ. ನಂತರ ಶೋರೂಂಗೆ ಎಂಟ್ರಿಯಾಗಿ ವ್ಲಾಗರ್ನ ಸ್ನೇಹಿತೆ ಮತ್ತು ಅಜ್ಜಿಯನ್ನು ಡೀಲರ್‌ಶಿಪ್‌ನಲ್ಲಿ ಕುಳಿತುಕೊಳ್ಳಲು ಹೇಳುತ್ತಾರೆ. ಈ ವೇಳೆ ಅಜ್ಜಿ ತನ್ನ ಮೊಮ್ಮಗ ಕಾರು ಕೊಳ್ಳಲು ಬಂದಿದ್ದಾನೆ ಎಂಬ ಉತ್ಸಾಹದಲ್ಲಿದ್ದಲ್ಲಿರುತ್ತಾಳೆ.

ಅಂತಿಮವಾಗಿ, ಹೊಚ್ಚಹೊಸ ಟಾಟಾ ನೆಕ್ಸಾನ್ ಎಕ್ಸ್‌ಝಡ್‌ನ ಕೀಯನ್ನು ಅಜ್ಜಿಗೆ ಹಸ್ತಾಂತರಿಸಲಾಗುತ್ತದೆ. ಈ ವೇಳೆ ಅಜ್ಜಿ ಒಮ್ಮೆ ದಿಗ್ಬ್ರಮೆಗೊಂಡಳು, ಈ ವೇಳೆ ಮೊಮ್ಮಗ ನಿನಗಾಗಿಯೇ ಈ ಕಾರು ಖರೀದಿಸುತ್ತಿರುವುದಾಗಿ ಹೇಳಿದ ಕೂಡಲೇ ಅಜ್ಜಿಗೆ ಎಲ್ಲಿಲ್ಲದ ಸಂತೋಷ. ಮೊಮ್ಮಗನನ್ನು ಕಾರಿನಲ್ಲಿ ಕುಳಿತುಕೊಂಡೆ ತಬ್ಬಿಕೊಂಡು ಮುದ್ದಾಡುತ್ತಾಳೆ.

ನಂತರ ಕಾರಿನ ಬಗ್ಗೆ ವಿವರಿಸುತ್ತಾ, ವ್ಲಾಗರ್ ಅವರು ಸನ್‌ರೂಫ್ ರೂಪಾಂತರವನ್ನು ಏಕೆ ಆರಿಸಿಕೊಂಡಿಲ್ಲ ಎಂಬುದರ ಬಗ್ಗೆ ವಿವರಿಸುತ್ತಾರೆ. ಅವರ ಪ್ರಕಾರ, XZ ಟ್ರಿಮ್‌ನಲ್ಲಿ ಸಂಪೂರ್ಣ-ಲೋಡ್ ಮಾಡಲಾದ ಸನ್‌ರೂಫ್-ಸಜ್ಜಿತ ರೂಪಾಂತರದ ಪ್ರೀಮಿಯಂ ಅನ್ನು ಸಮರ್ಥಿಸಲಾಗುವುದಿಲ್ಲ. ಏಕೆಂದರೆ ವಿಶೇಷವಾಗಿ ದೇಶದ ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿ ಸನ್‌ರೂಫ್ ಕಡಿಮೆ ಬಳಕೆಯನ್ನು ಹೊಂದಿದೆ.

ಇನ್ನು SUV ಯ ಹಗುರವಾದ ಎಲೆಕ್ಟ್ರಾನಿಕ್ ಪಾರ್ಕಿಂಗ್ ಸ್ಟೀರಿಂಗ್ ಉತ್ತಮವಾಗಿದೆ. USA ನಲ್ಲಿ ಬಳಸುವ ಟೊಯೊಟಾ ಕೊರೊಲ್ಲಾವು ಹೈಡ್ರಾಲಿಕ್ ಪವರ್ ಸ್ಟೀರಿಂಗ್ ಘಟಕವನ್ನು ಹೊಂದಿರುವುದರಿಂದ ಅವರು ಈ ವೈಶಿಷ್ಟ್ಯದ ಬಗ್ಗೆ ಸಾಕಷ್ಟು ಉತ್ಸುಕರಾಗಿದ್ದಾರೆ. ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ಸಹಾಯ ಮಾಡುವ ಮೂಲಕ ಅವರು ಗೇರ್ ಸೂಚಕವನ್ನು ಸಹ ಮೆಚ್ಚಿಕೊಂಡಿರುವುದಾಗಿ ವಿಡಿಯೋದಲ್ಲಿ ತಿಳಿಸಿದ್ದಾರೆ.

ವ್ಲಾಗರ್ ತನ್ನ ಟಾಟಾ ನೆಕ್ಸಾನ್‌ನ ಪವರ್ ಏರ್‌ಕಾನ್ ಮತ್ತು ಹಿಂಭಾಗದ ಎಸಿ ವೆಂಟ್‌ಗಳನ್ನು ಸಹ ಇಷ್ಟಪಟ್ಟಿರುವುದಾಗಿ ತಿಳಿಸಿದರು. ನಂತರ ಸರ್ವಶಕ್ತನ ಆಶೀರ್ವಾದ ಪಡೆಯಲು ಅಜ್ಜಿಯೊಂದಿಗೆ ಗುರುದ್ವಾರಕ್ಕೆ ಹೋಗುತ್ತಾರೆ. ಈ ವೇಳೆ ಟಾಟಾ ನೆಕ್ಸಾನ್ ಮಾದರಿಯನ್ನೇ ಆಯ್ಕೆ ಮಾಡಿದ ಕಾರಣವನ್ನು ಹೇಳುತ್ತಾರೆ, ಅದು ಅವರ ಅಜ್ಜಿಗೆ ಸುಲಭವಾಗಿ ಪ್ರವೇಶಿಸಲು ಮತ್ತು ಹೊರಬರಲು ಸಹಾಯಕವಾಗಿದೆ.

ಅಲ್ಲದೇ ಈ ವಾಹನ ಉತ್ತಮ ಸವಾರಿ ಗುಣಮಟ್ಟದ್ದಾಗಿದ್ದು, ಕೆಟ್ಟ ರಸ್ತೆಗಳಲ್ಲಿ ಅಜ್ಜಿಯನ್ನು ಆರಾಮದಾಯಕವಾಗಿರಿಸುತ್ತದೆ. ಅವರು ಮನೆಗೆ ಹಿಂದಿರುಗುವ ಟೊಯೊಟಾ ಕೊರೊಲ್ಲಾಗಿಂತ ನೆಕ್ಸಾನ್ ಹೆಚ್ಚು ಆರಾಮದಾಯಕವಾಗಿದೆ ಎಂದು ಹೇಳಿದರು.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಒಟ್ಟಾರೆಯಾಗಿ ಟಾಟಾ ನೆಕ್ಸಾನ್ ಅನ್ನು ಮನೆಗೆ ತರುವ ಮೂಲಕ ಯುಎಸ್ ಮೂಲದ ವ್ಲಾಗರ್ ತನ್ನ ಅಜ್ಜಿಯನ್ನು ಹೇಗೆ ಸಂತೋಷಪಡಿಸಿದರು ಹಾಗೂ ಅಜ್ಜಿಯ ಸುಖಕರ ಪ್ರಯಾಣಕ್ಕೆ ಈ ವಾಹನ ಹೇಗೆ ಉತ್ತಮವಾಗಿದೆ ಎಂದುನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ. ಉಡೊಗೊರೆಗಳೆಂಬುದು ಸ್ನೇಹಿತರು, ಪ್ರಿಯರು, ಸಹುದ್ಯೋಗಿಗಳು ಮಾತ್ರವಲ್ಲದೇ ವಯಸ್ಸಾದ ಹಿರಿ ಜೀವಗಳಿಗೂ ಕೊಟ್ಟರೆ ಅವರ ಖುಷಿಗೆ ಮಿತಿಯಿರುವುದಿಲ್ಲ.
{document1}