ನಿಂಜಾ ಸೂಪರ್‌ ಬೈಕ್‌ಗೆ ಟಕ್ಕರ್‌: ಯಮನ ಬಾಗಿಲು ತಟ್ಟಿ ವಾಪಸ್‌ ಬಂದ ಸ್ಕೂಟರ್‌ ರೈಡರ್

ಭಾರತದ ರೋಡ್‌ಗಳಲ್ಲಿ ಸೂಪರ್‌ ಬೈಕ್‌ಗಳನ್ನು ಓಡಿಸುವುದರ ಥ್ರಿಲ್‌ ಬೇರೆಯದೇ ಎನ್ನಬಹುದು. ಇಲ್ಲಿ ಸೂಪರ್‌ ಬೈಕ್‌ಗಳನ್ನು ಓಡಿಸಿದರೆ ಸಾಕು, ಜನರ ಗಮನ ನಿಮ್ಮ ಕಡೆ ನೀವು ಬೇಡ ಎಂದರೂ ಬರುತ್ತದೆ. ನಮ್ಮಲ್ಲಿ ಸೂಪರ್‌ ಬೈಕ್‌ ರೈಡರ್‌ಗಳು ಗಳಿಸುವಷ್ಟು ಗಮನವನ್ನು ಬೇರೆಲ್ಲೂ ಗಳಿಸಲಾರರು ಎಂಬುವುದು ಎಲ್ಲರಿಗೂ ತಿಳಿದಿರುವ ವಿಷಯ.

ಕೆಲವರು ಸೂಪರ್‌ ಬೈಕನ್ನು ಕಂಡು ಆನಂದಿಸಿದರೆ ಇನ್ನು ಕೆಲವರು ಅದರ ಜೊತೆ ರೇಸ್‌ಗೂ ಇಳಿಯುತ್ತಾರೆ. ಒಂದು ಸೂಪರ್ ಬೈಕ್‌ ಜೊತೆ ರೇಸ್‌ಗೆ ಇಳಿಯುವಾಗ ಬೈಕ್‌ ಗೆ ಟಕ್ಕರ್‌ ಕೊಡಲು ನ್ಮಮ ಬೈಕ್‌ಗೆ ಸಾಧ್ಯವಿಲ್ಲ ಎಂದು ತಿಳಿದಿದ್ದರೂ, ಕೆಲವರು ಇಂತಹ ಕೆಲಸವನ್ನು ಮಾಡುತ್ತಾರೆ. ಇಂತಹ ಸಂಧರ್ಭಗಳಲ್ಲಿ ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚು.

NTorq Rider Challenges Ninja ZX-10R,

ಇಲ್ಲೊಂದು ಕಡೆ ಟಿವಿಎಸ್‌ ಎನ್ ಟಾರ್ಕ್‌ ಸವಾರನೊಬ್ಬ ದೈತ್ಯ ಕವಾಸಕಿ Ninja ZX-10R ಜೊತೆ ಪೈಪೋಟಿ ನೀಡಲು ಹೋಗಿ ಕೊನೆಗೆ ಡಿವೈಡರ್‌ಗೆ ಗುದ್ದಿ ಅಪಘಾತವಾದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸೂಪರ್‌ ಬೈಕನ್ನು ರಸ್ತೆಗಿಳಿಸದರೆ ರೈಡರ್‌ಗಳು ಯಾವ ರೀತಿಯಾದ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ ಎಂಬುದು ಇಲ್ಲಿ ತಿಳಿಯುತ್ತದೆ.

ವಿಡಿಯೋದಲ್ಲಿ Ninja ZX-10R ಬೈಕ್‌ನ ಹೆಲ್ಮೆಟ್‌ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋದಲ್ಲಿ ಎನ್‌ಟಾರ್ಕ್‌ ಸವಾರ ಎಷ್ಟು ಅಪಾಯಕಾರಿಯಾಗಿ ಸ್ಕೂಟರ್‌ ಚಲಾಯಿಸುತ್ತಿದ್ದ ಎಂಬುದನ್ನು ವಿಡಿಯೋದಲ್ಲಿ ಕಾಣಬಹುದು. ಸೂಪರ್‌ ಬೈಕ್‌ ರೈಡರ್‌ ಮುಂದೆ ಶೋ ಆಫ್‌ ಮಾಡಲು ಪಬ್ಲಿಕ್‌ ರಸ್ತೆಗಳಲ್ಲಿ ಅಪಾಯಕಾರಿ ಝಿಗ್‌-ಝ್ಯಾಗ್‌ ರೀತಿಯಲ್ಲಿ ಬೈಕ್‌ ಓಡಿಸುವುದನ್ನು ಕಾಣಬಹುದು.

Ninja ZX 10-R

ಎಲ್ಲಾ ಸಂಧರ್ಭಗಳಲ್ಲಿಯೂ ಸೂಪರ್‌ ಬೈಕ್‌ ಸವಾರ ಯಾವುದೇ ರೀತಿ ಪ್ರತಿಕ್ರಿಯೆ ನೀಡದೇ ಶಾಂತವಾಗಿ ಆತನನ್ನು ಹಿಂಬಾಲಿಸುತ್ತಾನೆ. ಸಾರ್ವಜನಿಕ ರಸ್ತೆಗಳಲ್ಲಿ ಅಪಾಯಕಾರಿಯಾಗಿ ಸ್ಕೂಟರ್‌ ಚಲಾಯಿಸಿ ಕೊನೆಗೂ ಎನ್‌ಟಾರ್ಕ್‌ ಸವಾರ ರಸ್ತೆಯ ಡಿವೈಡರ್‌ಗೆ ಗುದ್ದಿ ಸ್ಕೂಟರ್‌ ಸಮೇತ ಕೆಳಗೆ ಬೀಳುವುದನ್ನು ವಿಡಿಯೋದಲ್ಲಿ ನೊಡಬಹುದಾಗಿದೆ.

ಬಿದ್ದ ನಂತರ ಎನ್‌ಟಾರ್ಕ್‌ ಸವಾರ ವಿಡಿಯೋದಲ್ಲಿ ತನ್ನ ತಪ್ಪಿನ ಅರಿವಾಗಿ ಕ್ಷಮೆ ಕೇಳುತ್ತಾನೆ. ಹೆಲ್ಮೆಟ್‌ ಇಲ್ಲದೆ ಅಪಾಯಕಾರಿಯಾಗಿ ಸ್ಕೂಟರ್‌ ಓಡಿಸಿ ಯಾವುದೇ ಪ್ರಾಣಾಪಾಯವಿಲ್ಲದೆ, ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು ಅದೃಷ್ಟವೇ ಸರಿ ಎನ್ನಬೇಕು. ಬಿದ್ದಲ್ಲಿಂದ ಎದ್ದ ಆತ ಅಲ್ಲೇ ಇದ್ದ ಬಸ್‌ ಸ್ಟ್ಯಾಂಡ್‌ನಲ್ಲಿ ಕುಳಿತು ಚೇತರಿಸಿಕೊಳ್ಳಲು ಯತ್ನಿಸುತ್ತಾನೆ.

ಯಾರು ಯಾವುದೇ ಬೈಕ್‌ ಓಡಿಸುವುದಾದರೂ ಎಚ್ಚರಿಕೆ ವಹಿಸಬೇಕಾಗಿರುವುದು ತುಂಬಾ ಅಗತ್ಯ. ಸೂಪರ್‌ ಬೈಕ್‌ ಇದೆ ಎಂದು ಎಲ್ಲಿ ಬೇಕೆಂದರಲ್ಲಿ ಮನಬಂದಂತೆ ಓಡಿಸುವುದು ಸರಿಯಲ್ಲ. ಅದೇ ರೀತಿ ಸೂಪರ್‌ ಬೈಕ್‌ಗೆ ಟಕ್ಕರ್‌ ಕೊಡಲು ಎಲ್ಲೆಂದರಲ್ಲಿ ಅದರ ಜೊತೆ ರೇಸ್‌ಗೆ ಶ್ರಮಿಸುವುದು ಸಹ ಸರಿಯಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, June 12, 2023, 16:35 [IST]
English summary
Ntorq rider challenges ninja zx 10 r crashes during race attempt
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+