NWKRTC: ಉತ್ತರ ಕರ್ನಾಟಕದ ಪ್ರಯಾಣಿಕರೇ ಗಮನಿಸಿ.. ರಾಜ್ಯದಲ್ಲೇ ಪ್ರಥಮ, ನಿಗಮದ ಬಸ್‌ಗಳಲ್ಲಿ ಯುಪಿಐ ಸೇವೆ
ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯೂಕೆಆರ್‌ಟಿಸಿ) ತನ್ನ ಪ್ರಯಾಣಿಕರಿಗೆ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಈಚೆಗೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಯುಪಿಐ (UPI) ಆಧಾರಿತ ನಗದು ರಹಿತ ಸೇವೆಯನ್ನು ಪರಿಚಯಿಸಿದೆ. ಸಾರ್ವಜನಿಕರು ಕ್ಯೂಆರ್ ಕೋಡ್ ಸ್ಯಾನ್ ಮಾಡಿ ನಿಗದಿತ ಮೊತ್ತವನ್ನು ಪಾವತಿಸಿ ಟಿಕೆಟ್ ಪಡೆಯಬಹುದು.
ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ಒದಗಿಸುವ ದೃಷ್ಟಿಯಿಂದ ಎನ್‌ಡಬ್ಲ್ಯೂಕೆಆರ್‌ಟಿಸಿ, ಕಳೆದ ಜನವರಿಯಲ್ಲಿ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ ನಗದು ರಹಿತ ಯುಪಿಐ ಸೇವೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿತ್ತು. ಈ ಡಿಜಿಟಲ್ ವಹಿವಾಟಿನಿಂದ ಸಮಯದ ಉಳಿತಾಯದೊಂದಿಗೆ ನಿರ್ದಿಷ್ಟ ಮೊತ್ತದ ನಗದು ಹಿಂದಿರುಗಿಸುವಿಕೆ ಸಮಸ್ಯೆ (Change Issues) ಸುಲಭವಾಗಿ ಬಗೆಹರಿಯುವುದರಿಂದ ಸಾರ್ವಜನಿಕರು ಮತ್ತು ನಿಗಮದ ಸಿಬ್ಬಂದಿಯಿಂದ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿತ್ತು.

ಫೆಬ್ರವರಿ 3ರಂದು ಗದಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಎಲ್ಲ ಎನ್‌ಡಬ್ಲ್ಯೂಕೆಆರ್‌ಟಿಸಿ (NWKRTC) ಬಸ್‌ಗಳಲ್ಲಿ ನಗದು ರಹಿತ ಪಾವತಿ ಯುಪಿಐ ಸೇವೆಗೆ ಚಾಲನೆ ನೀಡಿದ್ದರು. ಈ ಬಗ್ಗೆ ಬಗ್ಗೆ ಮಾತನಾಡಿದ್ದ ಎನ್‌ಡಬ್ಲ್ಯುಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಭರತ್ ಎಸ್ ಅವರು, ಪ್ರತಿದಿನ ಅಂದಾಜು 15,000 ಡಿಜಿಟಲ್ ವಹಿವಾಟಿನಿಂದ ಒಟ್ಟು ರೂ.14 ಲಕ್ಷ ಆದಾಯ ಸಂಗ್ರಹವಾಗುತ್ತಿದೆ ಎಂದು ಹೇಳಿದ್ದರು.
ಫೆಬ್ರವರಿ.23ರಂದು ತನ್ನ ಅಧಿಕೃತ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಎನ್‌ಡಬ್ಲ್ಯೂಕೆಆರ್‌ಟಿಸಿ, ಯುಪಿಐ ವಹಿವಾಟಿನಿಂದ ನಿಗಮದ ಗಳಿಕೆ ರೂ.3.23 ಕೋಟಿ ದಾಟಿದೆ ಎಂದು ಬರೆದುಕೊಂಡಿತ್ತು. ಡಿಜಿಟಲ್ ವಹಿವಾಟನ್ನು ಉತ್ತೇಜಸಲು ವಾಯುವ್ಯ ಸಾರಿಗೆ ಸಂಸ್ಥೆಯು ಮಾರ್ಚ್ 3 ರಿಂದ 16 ರವರೆಗೆ ಯುಪಿಐ ಪಾವತಿ ಜಾಗೃತಿ ಪಾಕ್ಷಿಕ ಅಭಿಯಾನವನ್ನು ಹಮ್ಮಿಕೊಂಡಿದೆ.

ಈ ಅಭಿಯಾನದ ಯಶಸ್ಸಿಗಾಗಿ ದೊಡ್ಡಮಟ್ಟದಲ್ಲಿ ಕೊಡುಗೆ ನೀಡುವ ಸಾರಿಗೆ ಸಂಸ್ಥೆಯ ವಿಭಾಗಗಳು ಹಾಗೂ ವಿವಿಧ ಘಟಕಗಳಿಗೆ ನಗದು ಮತ್ತು ಪ್ರಶಂಸನಾ ಪತ್ರವನ್ನು ನೀಡಲಾಗುತ್ತದೆ. ಮೊದಲ ವಿಭಾಗಕ್ಕೆ ರೂ.10,000, ಪ್ರಥಮ ಘಟಕಕ್ಕೆ ರೂ.5000 ಬಹುಮಾನದ ಮೊತ್ತವಿದೆ. ಜೊತೆಗೆ ಇದೇ ಅಭಿಯಾನದಲ್ಲಿ ಪ್ರತಿದಿನ ಅತಿಹೆಚ್ಚು ಯುಪಿಐ ವಹಿವಾಟು ಮಾಡುವ ಸಂಸ್ಥೆಯ ನಿರ್ವಾಹಕರಿಗೆ ರೂ.1000 ಬಹುಮಾನದ ಮೊತ್ತ ಹಾಗೂ ಪ್ರಶಂಸನಾ ಪತ್ರವನ್ನು ಕೊಡಲಾಗುತ್ತದೆ.
ಕಳೆದ ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Transport Minister Ramalinga Reddy) ಉತ್ತರ ಕರ್ನಾಟಕ ಭಾಗದ ಜನರಿಗೆ ದೊಡ್ಡ ಸಿಹಿಸುದ್ದಿ ನೀಡಿದ್ದರು. 'ಪ್ರಯಾಣಿಕರ ಅನುಕೂಲಕ್ಕಾಗಿ 884 ಹೊಸ ಬಸ್‌ಗಳನ್ನು ಖರೀದಿಸಲಾಗುವುದು. ಈಗಾಗಲೇ 375 ಬಸ್ ಕೊಂಡುಕೊಳ್ಳಲು ಟೆಂಡರ್ ಕರೆಯಲಾಗಿದೆ ಎಂದು ಹೇಳಿದ್ದರು.
ಕರ್ನಾಟಕದಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಳಗೊಂಡಿದೆ. ನೂತನ ಬಸ್‌ಗಳು ಬಂದಾಗ ಪ್ರಯಾಣಿಕರ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಮಾರ್ಚ್ 2024 ರೊಳಗೆ ಹೊಸ ಬಸ್‌ಗಳನ್ನು ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಹುಬ್ಬಳ್ಳಿ - ಧಾರವಾಡ ನಗರಗಳಿಗೆ 100 ಎಲೆಕ್ಟ್ರಿಕ್ ಬಸ್‌ಗಳು ಸಿಗಲಿವೆ ಎಂದು ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications