ಸಾಯಿಬಾಬಾ ಭಕ್ತರಿಗೆ ಸಿಹಿಸುದ್ದಿ: ಇಲ್ಲಿಂದ ಶಿರಡಿಗೆ ಪಲ್ಲಕ್ಕಿ ಬಸ್.. ಕಡಿಮೆ ಖರ್ಚಿನಲ್ಲಿ ಹೋಗಬಹುದು!

ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯೂಕೆಆರ್‌ಟಿಸಿ - NWKRTC) ತನ್ನ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ಹುಬ್ಬಳ್ಳಿಯಿಂದ ಶಿರಡಿಗೆ ಪಲ್ಲಕ್ಕಿ (Pallakki) ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ. ಆ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.

ಎನ್‌ಡಬ್ಲ್ಯೂಕೆಆರ್‌ಟಿಸಿಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗವು ಹುಬ್ಬಳ್ಳಿ (Hubballi) ಹಾಗೂ ಶಿರಡಿ (Shirdi) ಮಧ್ಯೆ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ (Pallakki Non-AC Sleeper) ಬಸ್‌ನ್ನು ಬಿಟ್ಟಿದೆ. ಹುಬ್ಬಳ್ಳಿಯಿಂದ ರಾತ್ರಿ 8.08ಕ್ಕೆ ಸಂಚಾರವನ್ನು ಆರಂಭಿಸುವ ಈ ಬಸ್, ಮರುದಿನ ಬೆಳಗ್ಗೆ 8.44ರ ಸುಮಾರಿಗೆ ಶಿರಡಿಯನ್ನು ತಲುಪಲಿದೆ. ಧಾರವಾಡ, ಬೆಳಗಾವಿ, ಪುಣೆ ಹಾಗೂ ಅಹಮದ್ ನಗರ ಮಾರ್ಗವಾಗಿ ಹೋಗುತ್ತದೆ.

Nwkrtc Starts Pallakki Bus Service Hubballi To Shiradi Low Ticket Price

ಶಿರಡಿಯಿಂದ ರಾತ್ರಿ 8ಕ್ಕೆ ಹೊರಡಲಿರುವ ಈ ಬಸ್, ಮುಂಜಾನೆ 8.45ರ ಸುಮಾರಿಗೆ ಹುಬ್ಬಳ್ಳಿಗೆ ಬರಲಿದೆ. ಟಿಕೆಟ್ ಯೊಂದಕ್ಕೆ ರೂ.1300 ದರವನ್ನು ನಿಗದಿಪಡಿಸಲಾಗಿದೆ. ಪ್ರಯಾಣಿಕರು, ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್‌ https://www.ksrtc.in/oprs-web/ಗೆ ಭೇಟಿ ನೀಡಿ ಟೆಕೆಟ್ ಅನ್ನು ಕಾಯ್ದಿರಿಸಬಹುದು. ಹುಬ್ಬಳ್ಳಿ - ಶಿರಡಿ ನಡುವೆ ಮತ್ತೊಂದು ನಾನ್ ಎಸಿ ಸ್ಲೀಪರ್ ಕೂಡ ಕಾರ್ಯಾಚರಣೆಯನ್ನು ನಡೆಸುತ್ತಿದೆ.

ಈ ಬಸ್ ಹುಬ್ಬಳ್ಳಿಯಿಂದ ಸಂಜೆ 7.03ಕ್ಕೆ ಹೊರಟು ಮರುದಿನ ಬೆಳಗ್ಗೆ 8 ಗಂಟೆಗೆ ಶಿರಡಿಗೆ ತೆರಳುತ್ತದೆ. ಅಲ್ಲಿಂದ ಸಂಜೆ 7 ಗಂಟೆಗೆ ಸಂಚಾರವನ್ನು ಆರಂಭಿಸಲಿದ್ದು, ಮುಂಜಾನೆ 7:30ಕ್ಕೆ ಹುಬ್ಬಳ್ಳಿಗೆ ಬರುತ್ತದೆ. ರೂ.1,181 ಪ್ರಯಾಣದ ದರವಿದೆ. ಬೆಂಗಳೂರು - ಶಿರಡಿ ನಡುವೆ ಅಂಬಾರಿ ಡ್ರೀಮ್ ಕ್ಲಾಸ್ ಎಸಿ ಸ್ಲೀಪರ್ (Ambaari Dream Class AC Sleeper) ಬಸ್ ಕೂಡ ಓಡಾಟವನ್ನು ನಡೆಸುತ್ತಿದೆ.

Nwkrtc Starts Pallakki Bus Service Hubballi To Shiradi Low Ticket Price

ಈ ಅಂಬಾರಿ ಬಸ್ ಪ್ರತಿದಿನ ಮಧ್ಯಾಹ್ನ1 ಗಂಟೆ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್)ನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 8.15ರ ಸುಮಾರಿಗೆ ಶಿರಡಿಗೆ ಹೋಗುತ್ತದೆ. ಅಲ್ಲಿಂದಲೂ ಮಧ್ಯಾಹ್ನ1ಕ್ಕೆ ಸಂಚಾರವನ್ನು ಆರಂಭಿಸಲಿದ್ದು, ಮುಂಜಾನೆ 8:15ರ ಸುಮಾರಿಗೆ ಬೆಂಗಳೂರಿಗೆ ಬರುತ್ತದೆ. ಟಿಕೆಟ್ ವೊಂದಕ್ಕೆ ರೂ.2,115 ದರವಿದೆ.

ಸದ್ಯ, ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳ ನಡುವೆ ಕಾರ್ಯಾಚರಣೆಯನ್ನು ನಡೆಸುತ್ತಿರುವ ಪಲ್ಲಕ್ಕಿ ಬಸ್‌ಗಳ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇವು ನಾನ್ ಎಸಿ ಸ್ಲೀಪರ್ ಬಸ್‍ಗಳಾಗಿದ್ದು, ಕಡಿಮೆ ಖರ್ಚಿನಲ್ಲಿ ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತವೆ. ವಿಶೇಷವಾಗಿ ಸಂತೋಷವು ಪ್ರಯಾಣಿಸುತ್ತಿದೆ (Happiness is travelling) ಎಂಬ ಅಡಿಬರಹವನ್ನು ಹೊಂದಿವೆ.

ಈ ಪಲ್ಲಕ್ಕಿ ಬಸ್‌ಗಳು 30 ಸ್ಲೀಪರ್ ಬರ್ತ್‌ ಗಳನ್ನು ಹೊಂದಿದ್ದು, ಪ್ರೀಮಿಯಂ ಎಸಿ ಸ್ಲೀಪರ್ ಅಂಬಾರಿ ಉತ್ಸವ್ ಬಸ್‌ಗಳಂತೆಯೇ ಹಲವು ಆಧುನಿಕ ಸೌಕರ್ಯವನ್ನು ಒಳಗೊಂಡಿವೆ. ಈ ಬಸ್‌ಗಳು ಸ್ಪೆಷಲ್ ಫೈರ್ ಡಿಟೆಕ್ಷನ್, ಸಪ್ಪೆರೇಶನ್ ಸಿಸ್ಟಮ್ ಅನ್ನು ಪಡೆದಿವೆ. ಇದು ಬಸ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಪ್ರಯಾಣಿಕರನ್ನು ಎಚ್ಚರಿಸಲು ನೆರವಾಗುತ್ತದೆ. ಜೊತೆಗೆ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ನ್ನು ಚಾರ್ಜ್ ಮಾಡಲು ಚಾರ್ಜಿಂಗ್ ಪೋರ್ಟ್‌ಗಳನ್ನು ಹೊಂದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, April 18, 2024, 16:00 [IST]
English summary
Nwkrtc starts pallakki bus service hubballi to shiradi low ticket price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+