ಬೆಂಕಿ ಕಡ್ಡಿಗಳಿಂದ ತಯಾರಾಯ್ತು ಅಪರೂಪದ ಸೈಕಲ್ ಪ್ರತಿಕೃತಿ

ಪ್ರತಿ ವರ್ಷ ಜೂನ್ 3ರಂದು ವಿಶ್ವ ಬೈಸಿಕಲ್ ದಿನವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಓಡಿಶಾ ಮೂಲದ ಕಲಾವಿದ ಸಾಸ್ವತ್ ರಂಜನ್ ಸಾಹೂ ರಚಿಸಿದ ಉತ್ಪನ್ನವೊಂದು ಎಲ್ಲರ ಗಮನ ಸೆಳೆಯುತ್ತಿದೆ.

ಬೆಂಕಿ ಕಡ್ಡಿಗಳಿಂದ ತಯಾರಾಯ್ತು ಅಪರೂಪದ ಸೈಕಲ್ ಪ್ರತಿಕೃತಿ

ಹಿಂದಿನ ಕಾಲದಲ್ಲಿ ಪೆನ್ನಿ ಫಾರ್ಥಿಂಗ್ ಸೈಕಲ್‌ಗಳು ಹೆಚ್ಚು ಜನಪ್ರಿಯವಾಗಿದ್ದವು. ಪೆನ್ನಿ ಫಾರ್ಥಿಂಗ್ ಸೈಕಲ್‌ಗಳ ಮುಂಭಾಗದ ವ್ಹೀಲ್'ಗಳು ದೊಡ್ಡದಾಗಿದ್ದರೆ, ಹಿಂಭಾಗದ ವ್ಹೀಲ್'ಗಳು ತುಂಬಾ ಚಿಕ್ಕದಾಗಿರುತ್ತವೆ. ಇತ್ತೀಚಿನ ದಿನಗಳಲ್ಲಿ ಈ ಸೈಕಲ್‌ಗಳು ಕಾಣುವುದೇ ಅಪರೂಪ. ಇಂತಹ ಅಪರೂಪದ ಸೈಕಲ್‌ನ ಪ್ರತಿಕೃತಿಯನ್ನು ಸಾಸ್ವತ್ ರಂಜನ್ ಸಾಹು ತಯಾರಿಸಿದ್ದಾರೆ.

ಬೆಂಕಿ ಕಡ್ಡಿಗಳಿಂದ ತಯಾರಾಯ್ತು ಅಪರೂಪದ ಸೈಕಲ್ ಪ್ರತಿಕೃತಿ

ಈ ಸೈಕಲ್ ತಯಾರಿಸಲು ಅವರು 3,600ಕ್ಕೂ ಬೆಂಕಿ ಕಡ್ಡಿಗಳನ್ನು ಬಳಸಿದ್ದಾರೆ. ಅವರು ತಯಾರಿಸಿರುವ ಈ ಸೈಕಲ್ 1870ರ ದಶಕದ ಮಾದರಿಯನ್ನು ಹೋಲುತ್ತದೆ. 50 ಇಂಚು ಉದ್ದ, 25 ಇಂಚು ಅಗಲ ಹೊಂದಿರುವ ಈ ಸೈಕಲ್ ಅನ್ನು ಸಾಸ್ವತ್ ರಂಜನ್ ಸಾಹೂ 7 ದಿನಗಳಲ್ಲಿ ತಯಾರಿಸಿದ್ದಾರೆ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಬೆಂಕಿ ಕಡ್ಡಿಗಳಿಂದ ತಯಾರಾಯ್ತು ಅಪರೂಪದ ಸೈಕಲ್ ಪ್ರತಿಕೃತಿ

ವಿಶ್ವ ಬೈಸಿಕಲ್ ದಿನಕ್ಕಿಂತ ಮುಂಚೆಯೇ ಈ ಸೈಕಲ್ ಅನ್ನು ತಯಾರಿಸಿದ್ದರು. ಈ ಬಗ್ಗೆ ಮಾತನಾಡಿರುವ ಸಾಸ್ವತ್ ರಂಜನ್ ಸಾಹು, ನಾನು ಶಾಲೆಯಲ್ಲಿದ್ದಾಗ ಈ ಸೈಕಲ್ ಅನ್ನು ನೋಡಿದ್ದೆ. ಈ ಸೈಕಲ್ ನನ್ನನ್ನು ಬಹುವಾಗಿ ಆಕರ್ಷಿಸಿತ್ತು.

ಬೆಂಕಿ ಕಡ್ಡಿಗಳಿಂದ ತಯಾರಾಯ್ತು ಅಪರೂಪದ ಸೈಕಲ್ ಪ್ರತಿಕೃತಿ

ನಾನು ಈ ಸೈಕಲ್ ಹೊಂದಲು ಬಯಸಿದ್ದೆ. ಆದರೆ ಈ ಸೈಕಲ್ ಸದ್ಯಕ್ಕೆ ಲಭ್ಯವಿಲ್ಲ. ಈ ಕಾರಣಕ್ಕೆ ವಿಶ್ವ ಸೈಕಲ್ ದಿನಾಚರಣೆಯ ಸಂದರ್ಭದಲ್ಲಿ ಈ ಸೈಕಲ್ ತಯಾರಿಸಿದ್ದೇನೆ. ಈ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಯಸುತ್ತೇನೆ ಎಂದು ಹೇಳಿದರು.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಬೆಂಕಿ ಕಡ್ಡಿಗಳಿಂದ ತಯಾರಾಯ್ತು ಅಪರೂಪದ ಸೈಕಲ್ ಪ್ರತಿಕೃತಿ

ಜನರು ಕಾರುಗಳ ಬದಲು ಸೈಕಲ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಬೇಕು ಎಂದು ಅವರು ಹೇಳಿದರು. ಸೈಕಲ್‌ಗಳು ಪರಿಸರ ಸ್ನೇಹಿಯಾಗಿದ್ದು, ನಮ್ಮ ಆರೋಗ್ಯ ಕಾಪಾಡಲು ನೆರವಾಗುತ್ತವೆ.

ಬೆಂಕಿ ಕಡ್ಡಿಗಳಿಂದ ತಯಾರಾಯ್ತು ಅಪರೂಪದ ಸೈಕಲ್ ಪ್ರತಿಕೃತಿ

ಈ ಕಾರಣಕ್ಕೆ ಜನರು ಸೈಕಲ್‌ಗಳಿಗೆ ಆದ್ಯತೆ ನೀಡಬೇಕು ಎಂದು ಸಾಸ್ವತ್ ರಂಜನ್ ಸಾಹು ಹೇಳಿದರು. ದ್ವಿಚಕ್ರ ವಾಹನಗಳಿಗೆ ಸೈಕಲ್‌ಗಳು ಅತ್ಯುತ್ತಮ ಪರ್ಯಾಯವಾಗಿವೆ. ಈ ಬಗ್ಗೆ ಸಾಸ್ವತ್ ರಂಜನ್'ರವರು ಇನ್‌ಸ್ಟಾಗ್ರಾಂನಲ್ಲಿಯೂ ಮಾಹಿತಿ ನೀಡಿದ್ದಾರೆ.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಬೆಂಕಿ ಕಡ್ಡಿಗಳಿಂದ ತಯಾರಾಯ್ತು ಅಪರೂಪದ ಸೈಕಲ್ ಪ್ರತಿಕೃತಿ

ಸೈಕ್ಲಿಂಗ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಾನು ಈ ಸೈಕಲ್ ಅನ್ನು ತಯಾರಿಸಿದೆ. ಪ್ರತಿಯೊಬ್ಬರೂ ಸೈಕಲ್‌ ಬಳಸಬೇಕೆಂದು ನನ್ನ ಆಸೆ. ಇದರಿಂದಪರಿಸರವನ್ನು ಕಲುಷಿತಗೊಳಿಸದೆ ಆರೋಗ್ಯವಂತರಾಗಿರ ಬಹುದು ಎಂದು ಹೇಳಿದ್ದಾರೆ.

ಬೆಂಕಿ ಕಡ್ಡಿಗಳಿಂದ ತಯಾರಾಯ್ತು ಅಪರೂಪದ ಸೈಕಲ್ ಪ್ರತಿಕೃತಿ

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ವಾಹನಗಳಿಂದ ವಾಯುಮಾಲಿನ್ಯ ಸಮಸ್ಯೆ ಉಲ್ಬಣಗೊಂಡಿದೆ. ಸಾಕಷ್ಟು ಜನರು ಸ್ಥೂಲಕಾಯದಿಂದ ಬಳಲುತ್ತಿರುವ ಪ್ರಮುಖ ಕಾರಣಗಳಲ್ಲಿ ವಾಹನಗಳ ಬಳಕೆಯು ಒಂದು. ಈ ಸಮಸ್ಯೆಗಳಿಗೆ ಸೈಕ್ಲಿಂಗ್ ಪರಿಹಾರ ನೀಡಬಲ್ಲದು ಎಂಬುದರಲ್ಲಿ ಸಂದೇಹವಿಲ್ಲ.

ಚಿತ್ರ ಕೃಪೆ: ಸಾಸ್ವತ್ ರಂಜನ್ ಸಾಹೂ/ಇನ್‌ಸ್ಟಾಗ್ರಾಂ

Most Read Articles

Kannada
English summary
Odisha artist makes bicycle replica using more than 3600 match sticks. Read in Kannada.
Story first published: Friday, June 4, 2021, 19:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X