ಕೆಟ್ಟ ಹೆಲ್ಮೆಟ್‌ನಿಂದ ನಿಮ್ಮ ವಿಕೆಟ್ ಉರುಳಬಹುದು: ಮ್ಯಾಥ್ಯೂಸ್ ಉದಾಹರಣೆಯಾಗಿಸಿ ಹೆಲ್ಮೆಟ್ ಕುರಿತು ಜಾಗೃತಿ
ದೆಹಲಿಯ ಅರುಣ್ ಜೆಟ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವೆ ಸೋಮವಾರದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ತಮ್ಮನ್ನು ಟೈಮ್ಡ್ ಔಟ್ ಬಲೆಗೆ ಸಿಲುಕಿಸಿ ಶಕಿಬ್ ಅಲ್ ಹಸನ್ ಕ್ರೀಡಾ ಸ್ಪೂರ್ತಿಗೆ ದಕ್ಕೆ ತಂದಿದ್ದಾರೆ ಎಂದು ಏಂಜೆಲೊ ಮ್ಯಾಥ್ಯೂಸ್ (Angelo Mathews) ಆರೋಪಿಸಿದರು.
ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಹಲವು ನಾಟಕೀಯ ಬೆಳವಣಿಗೆಗಳು ನಡೆದವು. ಫಲತಾಂಶದ ಹೊರತಾಗಿಯೂ ಶ್ರೀಲಂಕಾ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಅವರು ಟೈಮ್ಡ್ ಔಟಾಗಿದ್ದರಿಂದ ಈ ಪಂದ್ಯ ಅತ್ಯಂತ ತೀವ್ತ ಕುತೂಹಲವನ್ನು ಮೂಡಿಸಿತ್ತು. ಈ ಘಟನೆಯಿಂದಾಗಿ ಎರಡೂ ತಂಡಗಳ ನಡುವಣ ಕದನ ಅತ್ಯಂತ ಕುತೂಹಲ ಕೆರಳಿಸಿತ್ತು. ಅಂತಿಮವಾಗಿ ಈ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾ ಟೀಂ ಗೆದ್ದರೂ ಹಲವು ಟೀಕೆಗಳಿಗೆ ಗುರಿಯಾಗಿದ್ದಾರೆ.

ಶ್ರೀಲಂಕಾ ತಂಡದ ಇನಿಂಗ್ಸ್‌ನ 25ನೇ ಓವರ್‌ನಲ್ಲಿ ನಡೆದ ಘಟನೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪರೂಪದ ಸಂಗತಿಯಾಗಿದೆ. ಹೆಲ್ಮೆಟ್ ಸರಿಯಾಗಿ ಅಳವಡಿಸದ ಕಾರಣ ಇನ್ನೊಂದು ಹೆಲ್ಮೆಟ್ ತರುವಂತೆ ಮ್ಯಾಥ್ಯೂಸ್ ತಮ್ಮ ಸಹ ಆಟಗಾರರಿಗೆ ಸೂಚಿಸಿದ್ದರು. ಆದರೆ ಹೆಲ್ಮೆಟ್ ಬರುವ ಮುನ್ನವೇ ಬಾಂಗ್ಲಾದೇಶದ ಆಟಗಾರರು ಸಮಯ ಮೀರಿದ ಹಿನ್ನೆಲೆಯಲ್ಲಿ ಫೀಲ್ಡ್ ಅಂಪೈರ್‌ಗಳಿಗೆ ಮೇಲ್ಮನವಿ ಸಲ್ಲಿಸಿದಾಗ ಅಂಪೈರ್‌ಗಳು ನಿಯಮದ ಪ್ರಕಾರ ಟೈಮ್ ಔಟ್ ನೀಡಿದರು.
ಮ್ಯಾಥ್ಯೂಸ್ ಔಟ್ ಆದ ಬಳಿಕ ಅಂಪೈರ್‌ಗಳ ಜೊತೆ ಚರ್ಚಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಕುರಿತು ಎಕ್ಸ್ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿರುವ ಒಡಿಶಾ ರಾಜ್ಯ ಸಾರಿಗೆ ಪ್ರಾಧಿಕಾರವು, "ಕೆಟ್ಟ ಹೆಲ್ಮೆಟ್‌ನಿಂದ ನಿಮ್ಮ ವಿಕೆಟ್ ಉರುಳಬಹುದು. ಸ್ಥಿರವಾಗಿ ದೀರ್ಘಕಾಲದ ಇನಿಂಗ್ಸ್ ಆಡಿ. ಯಾವಾಗಲೂ ಐಎಸ್‌ಐ ಪ್ರಮಾಣಿತ ಹೆಲ್ಮೆಟ್ (Helmets) ಅನ್ನೇ ಬಳಸಿ ಮತ್ತು ಪಟ್ಟಿಯನ್ನು ಕಟ್ಟಿಕೊಳ್ಳಿ. ಈ ಕೆಲಸವನ್ನು ಹಿಂಬದಿ ಸವಾರರೂ ಮಾಡುವಂತೆ ಪ್ರೊತ್ಸಾಹಿಸಿದೆ.
ಮೈದಾನದಲ್ಲಾಗಲಿ ಅಥವಾ ಮೈದಾನದ ಹೊರಗಾಗಲಿ ಎಂದಿಗೂ ಸುರಕ್ಷತೆಯೇ ಮೊದಲು" ಎಂದು #AngeloMatthews, #CricketWorldCup, #WorldCup2023 ಎಂಬ ಹ್ಯಾಶ್ ಟ್ಯಾಗ್‌ಗಳನ್ನು ಬಳಸಿ ವಾಹನ ಸವಾರರಿಗೆ ಮನವಿ ಮಾಡಿದೆ. ಹೆಲ್ಮೆಟ್ ಬಳಕೆಯ ಕಡ್ಡಾಯ ನಂತರ ಬೈಕ್ ಸವಾರರು ಇದೀಗ ಗುಣಮಟ್ಟದ ಉತ್ಪನ್ನಗಳ ಬಳಕೆಗೆ ಆದ್ಯತೆ ನೀಡುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಮಾರುಕಟ್ಟೆಯಲ್ಲಿ ಇದೀಗ ಹಲವಾರು ಹೆಲ್ಮೆಟ್‌ಗಳು ಖರೀದಿಗೆ ಲಭ್ಯವಿವೆ.
ನಗರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದ ಬೈಕ್ ಸವಾರರಿಗೆ ರಕ್ಷಣೆ ನೀಡಲು ಎಲೆಕ್ಟ್ರಿಕಲ್ ಇಂಜಿನಿಯರ್ ಒಬ್ಬರು ವಿಶೇಷ ಹೆಲ್ಮೆಟ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಅಪಘಾತಗಳಲ್ಲಿ ಹಾನಿಯಾಗುವುದನ್ನು ತಡೆಯಲು ಸರ್ಕಾರ ಜಾರಿಗೆ ತಂದಿರುವ ಕಡ್ಡಾಯ ಹೆಲ್ಮೆಟ್ ಪರಿಣಾಮ ಇದೀಗ ಬೈಕ್ ಸವಾರರಲ್ಲಿ ಸಾಕಷ್ಟು ಸುರಕ್ಷತಾ ಜಾಗೃತಿ ಮೂಡುತ್ತಿದ್ದು, ಮಾರುಕಟ್ಟೆಯಲ್ಲಿ ಬೈಕ್ ಸವಾರರ ಬೇಡಿಕೆಗೆ ಅನುಗುಣವಾಗಿ ಬಜೆಟ್ ಬೆಲೆಯಿಂದ ದುಬಾರಿಯ ಬೆಲೆಯ ಹೆಲ್ಮೆಟ್‌ಗಳು ಖರೀದಿಗೆ ಲಭ್ಯವಿವೆ.
ಹೆಲ್ಮೆಟ್‌ನಿಂದ ಕೇವಲ ದಂಡದಿಂದ ತಪ್ಪಿಸಿಕೊಳ್ಳುವುದಕ್ಕೆ ಮಾತ್ರವಲ್ಲ ಗರಿಷ್ಠ ಸುರಕ್ಷತೆ ನೀಡಲಿದೆ ಎನ್ನುವುದನ್ನು ಅರಿತಿರುವ ಬೈಕ್ ಸವಾರರು ವಿವಿಧ ಮಾದರಿಗಳ ಹೆಲ್ಮೆಟ್ ಬಳಕೆ ಮಾಡುತ್ತಿದ್ದು, ಇತ್ತೀಚೆಗೆ ಮಾರುಕಟ್ಟೆಗೆ ಏರ್ ಪ್ಯೂರಿಫೈಯರ್ ಸೌಲಭ್ಯ ಹೊಂದಿರುವ ವಿಶೇಷ ಹೆಲ್ಮೆಟ್ ಸಹ ಖರೀದಿಗೆ ಲಭ್ಯವಾಗಿದೆ. ಐಎಸ್ಐ ಪ್ರಮಾಣೀಕೃತ ಹೆಲ್ಮೆಟ್‌ಗಳ ಮಾತ್ರ ಮಾರಾಟ ಮಾಡಬೇಕೆಂಬ ನಿಯಮವನ್ನು ಜಾರಿಗೆ ತಂದಿದ್ದರೂ ಹಲವಾರು ಹೆಲ್ಮೆಟ್ ಕಂಪನಿಗಳು ಅಗ್ಗದ ಬೆಲೆಯ ಹೆಲ್ಮೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ಮುಂದುವರಿಸಿದ್ದವು.
ಇದಕ್ಕಾಗಿ ಉತ್ಪಾದಕರಿಗೆ ಮತ್ತು ಬಳಕೆದಾರರಿಗೂ ಅನ್ವಯವಾಗುವ ಹೊಸ ನಿಯಮ ಜಾರಿಗೆ ತಂದಿರುವ ಸಾರಿಗೆ ಇಲಾಖೆಯು ಮೊದಲ ಕಳಪೆ ಹೆಲ್ಮೆಟ್ ತಯಾಕರ ವಿರುದ್ಧ ಸಮರ ಸಾರಿದೆ. ಕಳಪೆ ಹೆಲ್ಮೆಟ್ ಉತ್ಪಾದಕರಿಗೆ ಮತ್ತು ಮಾರಾಟಗಾರರಿಗೆ ಕಠಿಣ ಶಿಕ್ಷೆ ಘೋಷಣೆ ಮಾಡಿರುವ ಕೇಂದ್ರ ಸಾರಿಗೆ ಇಲಾಖೆಯು ಕಳಪೆ ಹೆಲ್ಮೆಟ್ ಮಾರಾಟ ಕಂಡುಬಂದಲ್ಲಿ ತಯಾಕರಿಗೆ ಮತ್ತು ಮಾರಾಟಗಾರರಿಗೆ ಒಂದು ವರ್ಷ ಜೈಲು ಇಲ್ಲವೆ ರೂ.1 ಲಕ್ಷ ದಂಡ ವಿಧಿಸುವ ನಿಯಮವನ್ನು ಅಧಿಕೃತಗೊಳಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications