ಗ್ರಾಮಸ್ಥರ ಅಜ್ಞಾನಕ್ಕೆ ಬೆಲೆ ತೆತ್ತು ಕಾರಿನಲ್ಲೇ ಉಳಿದ ಯುವಕ

ಕರೋನಾ ವೈರಸ್ ಹರಡದಂತೆ ತಡೆಯುವ ಕಾರಣಕ್ಕೆ ಭಾರತದದ್ಯಾಂತ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಈ ಕಾರಣಕ್ಕೆ ಎಲ್ಲಾ ರೀತಿಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ರದ್ದುಪಡಿಸಲಾಗಿದೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ಅನುಮತಿ ನೀಡುತ್ತಿವೆ.

ಗ್ರಾಮಸ್ಥರ ಅಜ್ಞಾನಕ್ಕೆ ಬೆಲೆ ತೆತ್ತು ಕಾರಿನಲ್ಲೇ ಉಳಿದ ಯುವಕ

ಇದೇ ರೀತಿ ಬಿಹಾರದಲ್ಲಿದ್ದ ಯುವಕನೊಬ್ಬ ತನ್ನ ಸ್ವಂತ ರಾಜ್ಯವಾದ ಒಡಿಶಾಗೆ ಮರಳಿದ್ದಾನೆ. ತನ್ನ ಊರಿಗೆ ಮರಳಿದ ಯುವಕನನ್ನು ಗ್ರಾಮಸ್ಥರು ಊರಿಗೆ ಬರದಂತೆ ತಡೆದಿದ್ದಾರೆ. ಬಿಹಾರದಿಂದ ಮರಳಿದ ಎಂಬ ಏಕೈಕ ಕಾರಣಕ್ಕೆ ಆ ಯುವಕನ ವಿರುದ್ಧ ಇಂತಹ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಗ್ರಾಮಸ್ಥರ ಅಜ್ಞಾನಕ್ಕೆ ಬೆಲೆ ತೆತ್ತು ಕಾರಿನಲ್ಲೇ ಉಳಿದ ಯುವಕ

ಗ್ರಾಮಸ್ಥರಿಂದ ತೊಂದರೆಗೆ ಸಿಲುಕಿದ ವ್ಯಕ್ತಿಯನ್ನು ತೋಲಾಬಾ ಗ್ರಾಮದ ಮಾಧಬತ ಬದ್ರಾ ಎಂದು ಗುರುತಿಸಲಾಗಿದೆ. ಬೇರೆ ರಾಜ್ಯದಿಂದ ಹಿಂದಿರುಗಿದ ಕಾರಣ ಆ ಯುವಕನನ್ನು ಓಡಿಶಾದ ಗಡಿಯಲ್ಲಿ 14 ದಿನಗಳ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಗ್ರಾಮಸ್ಥರ ಅಜ್ಞಾನಕ್ಕೆ ಬೆಲೆ ತೆತ್ತು ಕಾರಿನಲ್ಲೇ ಉಳಿದ ಯುವಕ

ನಂತರ ಆತನ ರಕ್ತದ ಮಾದರಿಯನ್ನು ಸಂಗ್ರಹಿಸಿ ಕರೋನಾ ಪರೀಕ್ಷೆಗೆ ಒಳಪಡಿಸಲಾಯಿತು. ಪರೀಕ್ಷೆಯಲ್ಲಿ ಆತನಿಗೆ ಯಾವುದೇ ಸೋಂಕು ಇಲ್ಲದಿರುವುದು ಖಚಿತ ಪಟ್ಟಿದೆ. ಈ ಕಾರಣಕ್ಕೆ ಅಲ್ಲಿದ್ದ ಕರೋನಾ ವಾರಿಯರ್ಸ್ ಆತನಿಗೆ ಸ್ವಂತ ಊರಿಗೆ ತೆರಳು ಅವಕಾಶ ನೀಡಿದ್ದಾರೆ.

ಗ್ರಾಮಸ್ಥರ ಅಜ್ಞಾನಕ್ಕೆ ಬೆಲೆ ತೆತ್ತು ಕಾರಿನಲ್ಲೇ ಉಳಿದ ಯುವಕ

ಆದರೆ ಆತನನ್ನು ದಾರಿಯಲ್ಲೇ ತಡೆದ ಗ್ರಾಮಸ್ಥರು ಕರೋನಾ ವೈರಸ್ ಹರಡಬಹುದೆಂಬ ಕಾರಣಕ್ಕೆ ಬದ್ರಾನನ್ನು ಗ್ರಾಮದಿಂದ ಹೊರಕ್ಕೆ ಕಳುಹಿಸಿದ್ದಾರೆ. ಈಗ ಬದ್ರಾ ತನ್ನ ಕಾರಿನಲ್ಲಿಯೇ ತಿಂದು, ಮಲಗಿ ಕಾಲ ಕಳೆಯುತ್ತಿದ್ದಾನೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಗ್ರಾಮಸ್ಥರ ಅಜ್ಞಾನಕ್ಕೆ ಬೆಲೆ ತೆತ್ತು ಕಾರಿನಲ್ಲೇ ಉಳಿದ ಯುವಕ

ಬದ್ರಾ ಕ್ಯಾಮೆರಾ ಮ್ಯಾನ್ ಕೆಲಸ ಮಾಡಿಕೊಂಡಿದ್ದು, ಕೆಲಸದ ನಿಮಿತ್ತ ಮೇ 3ರಂದು ಬಿಹಾರಕ್ಕೆ ತೆರಳಿದ್ದ. ಕೆಲಸ ಮುಗಿದ ನಂತರ ತನ್ನ ಸ್ವಂತ ರಾಜ್ಯವಾದ ಒಡಿಶಾಗೆ ಮರಳಿದ್ದಾನೆ. ಕ್ವಾರಂಟೈನ್ ಕೇಂದ್ರದಿಂದ ತಪ್ಪಿಸಿಕೊಂಡು ಬಂದಿರಬಹುದು ಎಂಬ ಕಾರಣಕ್ಕೆ ಆತನನ್ನು ಗ್ರಾಮಕ್ಕೆ ಪ್ರವೇಶಿಸದಂತೆ ತಡೆಯಲಾಗಿದೆ.

ಗ್ರಾಮಸ್ಥರ ಅಜ್ಞಾನಕ್ಕೆ ಬೆಲೆ ತೆತ್ತು ಕಾರಿನಲ್ಲೇ ಉಳಿದ ಯುವಕ

ಆತನಿಗೆ ಕರೋನಾ ವೈರಸ್ ಸೋಂಕು ತಗುಲದೇ ಆರೋಗ್ಯವಾಗಿದ್ದಾನೆಂದು ಸರ್ಕಾರವೇ ಹೇಳಿದ್ದರೂ, ಗ್ರಾಮಸ್ಥರು ಒಪ್ಪುತ್ತಿಲ್ಲ. ಕೊನೆಗೆ ಬದ್ರಾ ಸ್ಥಳೀಯ ಪೊಲೀಸರ ನೆರವಿನಿಂದ ತನ್ನ ಮನೆ ಸೇರಿದ್ದಾನೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಗ್ರಾಮಸ್ಥರ ಅಜ್ಞಾನಕ್ಕೆ ಬೆಲೆ ತೆತ್ತು ಕಾರಿನಲ್ಲೇ ಉಳಿದ ಯುವಕ

ಆದರೆ ಮರುದಿನ ಗ್ರಾಮಸ್ಥರು ಬದ್ರಾನ ಮನೆ ಬಳಿ ಬಂದು ವಾಗ್ವಾದ ನಡೆಸಿದ್ದಾರೆ. ಗ್ರಾಮಸ್ಥರ ಅಜ್ಞಾನದಿಂದ ಬೇಸತ್ತ ಬದ್ರಾ ಗ್ರಾಮದ ಬಳಿ ಸ್ಥಾಪಿಸಲಾಗಿರುವ ಕ್ವಾರಂಟೈನ್ ಕೇಂದ್ರಕ್ಕೆ ಹೋಗಲು ಒಪ್ಪಿದ್ದಾನೆ. ಆದರೆ ಕ್ವಾರಂಟೈನ್ ಕೇಂದ್ರದಲ್ಲಿ ಉಳಿಯುವ ಬದಲು ತನ್ನ ಕಾರಿನಲ್ಲಿ ಉಳಿದುಕೊಂಡಿದ್ದಾನೆ.

ಗ್ರಾಮಸ್ಥರ ಅಜ್ಞಾನಕ್ಕೆ ಬೆಲೆ ತೆತ್ತು ಕಾರಿನಲ್ಲೇ ಉಳಿದ ಯುವಕ

ಸ್ನಾನ ಹಾಗೂ ಇನ್ನಿತರ ಅವಶ್ಯಕತೆಗಳಿಗಾಗಿ ಮಾತ್ರ ಕಾರಿನಿಂದ ಹೊರಬರುತ್ತಿದ್ದು, ತಿನ್ನುವುದಕ್ಕೆ, ಮಲಗುವುದಕ್ಕೆ ಕಾರನ್ನು ಬಳಸುತ್ತಿದ್ದಾನೆ. ಬದ್ರಾ ಗ್ರಾಮಸ್ಥರ ಅಜ್ಞಾನದಿಂದಾಗಿ ಇನ್ನೂ ಏಳು ದಿನಗಳ ಕಾಲ ಹೀಗೆಯೇ ಇರಬೇಕಾಗಿದೆ.

Article Published On: Friday, May 29, 2020, 14:00 [IST]
English summary
Odisha youngster returning home forced to sleep in car amidst covid 19 scare. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+