ಆನ್ ಲೈನ್ ಮೂಲಕ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಲಿದೆ ಓಲಾ

ಓಲಾ ಭಾರತದ ಖ್ಯಾತ ಕ್ಯಾಬ್ ಕಂಪನಿಗಳಲ್ಲಿ ಒಂದಾಗಿದೆ. ಓಲಾ ಕಂಪನಿಯು ಕ್ಯಾಬ್ ಸೇವೆಯನ್ನು ನೀಡುವುದರ ಜೊತೆಗೆ ಎಲೆಕ್ಟ್ರಿಕ್ ವಾಹನವನ್ನು ಸಹ ಅಭಿವೃದ್ಧಿ ಪಡಿಸುತ್ತಿದೆ. ಕಂಪನಿಯು ಶೀಘ್ರದಲ್ಲಿಯೇ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಆನ್ ಲೈನ್ ಮೂಲಕ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಲಿದೆ ಓಲಾ

ಓಲಾ ಕಂಪನಿಯು ತನ್ನ ಅತ್ಯಾಧುನಿಕ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತಮಿಳುನಾಡಿನಲ್ಲಿರುವ ಉತ್ಪಾದನಾ ಘಟಕದಲ್ಲಿ ಅಭಿವೃದ್ಧಿ ಪಡಿಸುತ್ತಿದೆ. ಈ ಉತ್ಪಾದನಾ ಘಟಕದಲ್ಲಿ ಅಭಿವೃದ್ಧಿಪಡಿಸುತ್ತಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರ ಜೊತೆಗೆ ವಿದೇಶಗಳಿಗೂ ರಫ್ತು ಮಾಡಲಾಗುವುದು.

ಆನ್ ಲೈನ್ ಮೂಲಕ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಲಿದೆ ಓಲಾ

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ನಂತರ ಓಲಾ ಕಂಪನಿಯು ಹೊಸ ವ್ಯವಹಾರವನ್ನು ಆರಂಭಿಸಲಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ ಕಂಪನಿಯು ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟವನ್ನು ಆರಂಭಿಸಲಿದೆ ಎಂದು ಹೇಳಲಾಗಿದೆ.

ಆನ್ ಲೈನ್ ಮೂಲಕ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಲಿದೆ ಓಲಾ

ಕೋವಿಡ್ 19 ಸಾಂಕ್ರಾಮಿಕದ ನಂತರ ಭಾರತದಲ್ಲಿ ವೈರಸ್ ಸೋಂಕು ಹರಡುವ ಭೀತಿ ಹೆಚ್ಚುತ್ತಿದೆ. ಇದರಿಂದಾಗಿ ಪ್ರತಿಯೊಬ್ಬರೂ ವೈಯಕ್ತಿಕ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಬಳಸಿದ ಹಾಗೂ ಹೊಸ ವಾಹನಗಳ ಮಾರಾಟವು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.

ಆನ್ ಲೈನ್ ಮೂಲಕ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಲಿದೆ ಓಲಾ

ಹಲವಾರು ಜನರು ತಮ್ಮ ವೈಯಕ್ತಿಕ ಪ್ರಯಾಣಕ್ಕಾಗಿ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸುತ್ತಿದ್ದಾರೆ. ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಓಲಾ ಕಂಪನಿಯು ಬಳಸಿದ ವಾಹನ ಮಾರಾಟವನ್ನು ಆರಂಭಿಸಲು ಮುಂದಾಗಿದೆ.

ಆನ್ ಲೈನ್ ಮೂಲಕ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಲಿದೆ ಓಲಾ

ಓಲಾ ಕಂಪನಿಯು ಈ ಹೊಸ ವ್ಯಾಪಾರಕ್ಕೆ ಓಲಾ ಕಾರ್ಸ್ ಎಂದು ಹೆಸರಿಡಲು ನಿರ್ಧರಿಸಿದೆ. ಈ ಹೊಸ ವ್ಯವಹಾರಕ್ಕಾಗಿ ಹೊಸ ಪ್ಲಾಟ್ ಫಾರಂ ಅನ್ನು ಆರಂಭಿಸುವ ನಿರೀಕ್ಷೆಗಳಿವೆ. ಓಲಾ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಮೂಲಕ ತನ್ನ ಹೊಸ ವ್ಯವಹಾರದ ಬಗ್ಗೆ ಮಾಹಿತಿ ನೀಡಿದೆ.

ಆನ್ ಲೈನ್ ಮೂಲಕ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಲಿದೆ ಓಲಾ

ಈ ವ್ಯವಹಾರಕ್ಕೆ - ಹೆಚ್ಚು ಮೌಲ್ಯ, ಕಡಿಮೆ ತೊಂದರೆ - ನಿಮ್ಮ ಕಾರನ್ನು ಮಾರಾಟ ಮಾಡುವುದು ಸುಲಭ ಎಂದು ಓಲಾ ಕಂಪನಿ ಟ್ಯಾಗ್ ಲೈನ್ ನೀಡಿದೆ. ಕಂಪನಿಯು ಈ ಬಗ್ಗೆ ಜುಲೈ 21 ರಂದು ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ ಎಂಬುದು ಗಮನಾರ್ಹ.

ಆನ್ ಲೈನ್ ಮೂಲಕ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಲಿದೆ ಓಲಾ

ಕಾರು ಮಾಲೀಕರು ತಮ್ಮ ಕಾರ್ ಅನ್ನು ಮಾರಾಟ ಮಾಡಲು ನಿರ್ಧರಿಸುತ್ತಿದ್ದರೆ ಅವರು ನಮ್ಮ ಸೈಟ್ ಮೂಲಕ ಕಾರಿನ ಮಾಹಿತಿಯನ್ನು ಪೋಸ್ಟ್ ಮಾಡಬಹುದು. ಕಾರು ಮಾಲೀಕರು ನಮ್ಮ ಪ್ಲಾಟ್ ಫಾರಂ ಮೂಲಕ ಅವರ ಕಾರುಗಳನ್ನು ಮಾರಾಟ ಮಾಡಬಹುದು ಎಂದು ಓಲಾ ಕಂಪನಿ ಹೇಳಿದೆ.

ಆನ್ ಲೈನ್ ಮೂಲಕ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಲಿದೆ ಓಲಾ

ಓಲಾ ಕಂಪನಿಯು ನೋಂದಾಯಿತ ವಾಹನಗಳ ಗುಣಮಟ್ಟವನ್ನು ಪರೀಕ್ಷಿಸಲು ಹಾಗೂ ಮೌಲ್ಯಮಾಪನ ಮಾಡಲು ಒಂದು ತಂಡವನ್ನು ಸ್ಥಾಪಿಸುತ್ತದೆ. ನಂತರ ಆ ವಾಹನಗಳನ್ನು ಬೇರೊಬ್ಬರು ಖರೀದಿಸಲು ಮಾರಾಟಕ್ಕೆ ಇಡಲಿದೆ.

ಆನ್ ಲೈನ್ ಮೂಲಕ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಲಿದೆ ಓಲಾ

ಈ ಹೊಸ ಉದ್ಯಮವನ್ನು ಆರಂಭಿಸುವ ಕೆಲಸದಲ್ಲಿ ಓಲಾ ಸಕ್ರಿಯವಾಗಿದೆ. ಹೊಸ ಉದ್ಯಮಕ್ಕೆ ಈಗಿರುವ ಓಲಾ ಪ್ಲಾಟ್ ಫಾರಂ, ಹೊಸ ಸೆಲ್ ಫೋನ್ ಪ್ಲಾಟ್ ಫಾರಂ ಅಥವಾ ಬೇರೆ ಹೊಸ ಆಯ್ಕೆಯನ್ನು ಬಳಸಿಕೊಳ್ಳುವ ನಿರೀಕ್ಷೆಗಳಿವೆ.

ಆನ್ ಲೈನ್ ಮೂಲಕ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಲಿದೆ ಓಲಾ

ಓಲಾ ಕಂಪನಿಯು ಹೊಸ ಉದ್ಯಮವನ್ನು ಬೆಂಗಳೂರಿನಲ್ಲಿ ಪೂರ್ವ ವೀಕ್ಷಣೆಯಾಗಿ ಆರಂಭಿಸಲು ನಿರ್ಧರಿಸಿದೆ. ಇದರಿಂದ ಬೆಂಗಳೂರಿನ ನಿವಾಸಿಗಳು ಓಲಾ ಕಂಪನಿಯ ಹೊಸ ವ್ಯವಹಾರದ ಸೇವೆಯನ್ನು ಮೊದಲು ಬಳಸಲಿದ್ದಾರೆ. ಭಾರತದಲ್ಲಿ ಬಳಸಿದ ಕಾರುಗಳ ಮಾರಾಟವು ಈಗ ಹೊಸ ಕಾರುಗಳಿಗೆ ಸರಿಸಾಟಿಯಾಗಿ ಬೆಳೆಯುತ್ತಿದೆ.

ಆನ್ ಲೈನ್ ಮೂಲಕ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಲಿದೆ ಓಲಾ

ಈ ಹಿನ್ನೆಲೆಯಲ್ಲಿ ಈ ಉದ್ಯಮದಲ್ಲಿ ಹಲವು ಪ್ರಮುಖ ಕಂಪನಿಗಳು ತೊಡಗಿಸಿ ಕೊಂಡಿವೆ. ಜೊತೆಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಮಹೀಂದ್ರಾ ಅಂಡ್ ಮಹೀಂದ್ರಾ ಹಾಗೂ ಮಾರುತಿ ಸುಜುಕಿ ಸೇರಿದಂತೆ ಹಲವು ಪ್ರಮುಖ ಕಾರು ತಯಾರಕ ಕಂಪನಿಗಳು ಸಹ ಸೆಕೆಂಡ್ ಹ್ಯಾಂಡ್ ಕಾರು ಮಾರಾಟದಲ್ಲಿ ತೊಡಗಿಸಿಕೊಂಡಿವೆ ಎಂಬುದು ಗಮನಾರ್ಹ.

ಆನ್ ಲೈನ್ ಮೂಲಕ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಲಿದೆ ಓಲಾ

ಸೆಕೆಂಡ್ ಹ್ಯಾಂಡ್ ಕಾರುಗಳ ಬೆಲೆ ಕಡಿಮೆ ಎಂಬ ಕಾರಣಕ್ಕೆ ಹಾಗೂ ಅವುಗಳ ನಿರ್ವಹಣೆ ಸುಲಭ ಎಂಬ ಕಾರಣಕ್ಕೆ ಜನರು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಹೆಚ್ಚು ಹೆಚ್ಚು ಖರೀದಿಸುತ್ತಿದ್ದಾರೆ. ಕರೋನಾ ಸಾಂಕ್ರಾಮಿಕದ ನಂತರ ಸೆಕೆಂಡ್ ಹ್ಯಾಂಡ್ ಕಾರುಗಳು ಹೊಸ ಕಾರುಗಳಿಗೆ ಸರಿ ಸಮನಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ.

ಆನ್ ಲೈನ್ ಮೂಲಕ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಲಿದೆ ಓಲಾ

ಓಲಾ ಕಂಪನಿಯು ತನ್ನ ಪ್ಲಾಟ್ ಫಾರಂ ಮೂಲಕ ಸೆಕೆಂಡ್ ಹ್ಯಾಂಡ್ ಕಾರು ಖರೀದಿಯನ್ನು ಮತ್ತಷ್ಟು ಸುಲಭವಾಗಿಸಲು ಮುಂದಾಗಿದೆ. ಈ ಮೂಲಕ ಓಲಾ ಕಂಪನಿಯು ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಲು ಬಯಸಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Ola company to sell second hand cars through online details
Story first published: Saturday, August 7, 2021, 20:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X