ನಾಯಿಗೆ ಕೆಲಸ ಕೊಟ್ಟ ಬೆಂಗಳೂರಿನ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿ... ಕೆಲಸ ಏನ್ ಗೊತ್ತಾ?

ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ನಾಯಿಗೆ ಕೆಲಸ ನೀಡಿದೆ. ಈ ಕುರಿತು ಟ್ವಿಟ್ಟರ್‌ನಲ್ಲಿ ನಾಯಿಯ ಫೋಟೊ ಜೊತೆಗೆ ಐಡಿ ಕಾರ್ಡ್ ಅನ್ನು ಸಹ ಹಂಚಿಕೊಳ್ಳಲಾಗಿದೆ. ಈ ಕಂಪನಿ ಮತ್ಯಾವುದೂ ಅಲ್ಲ ಓಲಾ ಎಲೆಕ್ಟ್ರಿಕ್, ಈ ಫೋಟೋಗಳನ್ನು ಕಂಪನಿಯ ಸಿಇಒ ಭವಿಷ್ ಅಗರ್ವಾಲ್ ಅವರು ಹಂಚಿಕೊಂಡಿದ್ದಾರೆ.

ಓಲಾ ಎಲೆಕ್ಟ್ರಿಕ್‌ನ ಹೊಸ ಉದ್ಯೋಗಿ 'ಬಿಜ್ಲೀ' ಎಂಬ ನಾಯಿ ಎಂದು ಸಿಇಒ ಭವಿಶ್ ಅಗರ್ವಾಲ್ ಭಾನುವಾರ ಘೋಷಿಸಿದ್ದಾರೆ. ಟ್ವಿಟ್ಟರ್‌ ಮೂಲಕ ಅಗರ್ವಾಲ್ ನಾಯಿಯನ್ನು ಪರಿಚಯಿಸಿದ್ದು, ಅದರ ಹೆಸರನ್ನು ಅನುವಾದಿಸಿದರೆ ಎಲೆಕ್ಟ್ರಿಸಿಟಿ (ಬಿಜಿಲೀ) ಎಂಬ ಅರ್ಥ ಬರುತ್ತದೆ. ಹಂಚಿಕೊಂಡಿರುವ ID ಕಾರ್ಡ್ ಪ್ರಕಾರ, ನಾಯಿಯ ಎಂಪ್ಲಾಯ್ ಕೋಡ್ '440 V' ಆಗಿದೆ.

ola-electric-gave-job-to-dog-ceo-shared-photo

ಇದು ಎಲೆಕ್ಟ್ರಿಕ್ ವ್ಯವಸ್ಥೆಗಳಲ್ಲಿನ ಪ್ರಮಾಣಿತ ವೋಲ್ಟೇಜ್‌ಗೆ (V) ಸ್ಪಷ್ಟವಾದ ಉಲ್ಲೇಖವಾಗಿದೆ. ಇನ್ನು ನಾಯಿಯ ಬ್ಲಡ್ ಗ್ರೂಪ್ ಅನ್ನು ಕೂಡ ಉಲ್ಲೇಖಿಸಿದ್ದು, 'paw+ve' ಎಂದು ನಮೂದಿಸಲಾಗಿದೆ. ಸಹೋದ್ಯೋಗಿಗಳು ಸ್ಲಾಕ್ ಮೂಲಕ ನಾಯಿಯನ್ನು ಸಂಪರ್ಕಿಸಬಹುದು, ಕೆಲವು ವೃತ್ತಿಪರ ಸಂಸ್ಥೆಗಳು ಆಂತರಿಕ ಸಂವಹನಕ್ಕಾಗಿ ಬಳಸುವ ತ್ವರಿತ ಸಂದೇಶ ಕಳುಹಿಸುವ ವೇದಿಕೆ ಇದಾಗಿದೆ.

ಬಿಜ್ಲೀಯನ್ನು ತುರ್ತಾಗಿ ಸಂಪರ್ಕಿಸಬೇಕಾದರೆ ಬಿಎ ಕಚೇರಿಯ್ನನು ಭೇಟಿ ನೀಡಬಹುದು ಎಂದು ಐಡಿಯಲ್ಲಿ ಉಲ್ಲೇಖಿಸಲಾಗಿದೆ. ಅಂದರೆ ಅದು ಭವಿಶ್ ಅಗರ್ವಾಲ್ ಅವರ ಕಚೇರಿಯಾಗಿದ್ದು, ಬಿಎ ಎಂದರೆ ಭವಿಷ್ ಅಗರ್ವಾಲ್ ಎಂಬ ಅರ್ಥ ನಿಡುತ್ತದೆ. ಇನ್ನು ಕಾರ್ಡ್‌ನಲ್ಲಿ ನಮೂದಿಸಲಾದ ವಿಳಾಸವು ಹೊಸೂರು ರಸ್ತೆಯಲ್ಲಿರುವ ಓಲಾ ಎಲೆಕ್ಟ್ರಿಕ್ ಕಚೇರಿಯಾಗಿದೆ.

ola-electric-gave-job-to-dog-ceo-shared-photo

ಬಿಜಿಲೀಗೆ ಕೋರಮಂಗಲದಲ್ಲಿನ ಕಚೇರಿಯು ಕಾರ್ಯಸ್ಥಳವಾಗಿದೆ ಎಂದು ಐಡಿನಲ್ಲಿ ತಿಳಿಸಲಾಗಿದೆ. ಈ ವಿವರಗಳೊಂದಿಗಿನ ಐಡಿಯನ್ನು ಬಿಜಿಲೀಗೆ ಓಲಾ ಸಿಇಓ ಒದಗಿಸಿದ್ದಾರೆ. ಆದ್ರೆ ನಾಯಿಯ ಕೆಲಸವೇನು ಎಂಬುದು ಹಲವರಿಗೆ ಕಾಡುತ್ತಿರುವ ಪ್ರಶ್ನೆಯಾಗಿದೆ ಅಲ್ಲವೇ? ನಾಯಿಗೆ ಇಲ್ಲಿ ಕೆಲಸ ಏನು ಇಲ್ಲ, ಬದಲಿಗೆ ಅವರ ಕಚೇರಿ ಸುತ್ತ ಓಡಾಡುವುದು ಅದರ ಕೆಲಸ ಎಂಬುದು ನಮ್ಮ ಅಭಿಪ್ರಾಯ.

ಸಿಇಒ ಅಗರ್ವಾಲ್ ಅವರಿಗೆ ನಾಯಿಗಳಂದ್ರೆ ಇಷ್ಟ, ಅವರು ತಮ್ಮ ಕೆಲಸದ ಸ್ಥಳದಲ್ಲಿ ನಾಯಿಗಳ ಕುರಿತು ಪೋಸ್ಟ್‌ಗಳನ್ನು ಹಂಚಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ನಾಯಿಗಳ ಪೋಟೋಗಳನ್ನು ಹಂಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರು. ಇದೇ ವರ್ಷದ ಫೆಬ್ರವರಿಯಲ್ಲಿ, ಓಲಾ ಕಚೇರಿಯೊಳಗಿನ ಸೋಫಾಗಳ ಮೇಲೆ ಮಲಗಿರುವ ಮೂರು ನಾಯಿಗಳ ಚಿತ್ರವನ್ನು "ಕಚೇರಿಯಲ್ಲಿ ಬೆಳಿಗ್ಗೆ" ಎಂಬ ಶೀರ್ಷಿಕೆಯೊಂದಿಗೆ ಅಗರ್ವಾಲ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.

ಕಳೆದ ವರ್ಷ, ಕಚೇರಿಯೊಳಗೆ ನಾಯಿಯೊಂದಿಗೆ ಆಟವಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದರು. "ಸಭೆಗಳನ್ನು ಮಾಡಲು ಉತ್ತಮ ಮಾರ್ಗ" ಎಂದು ಶೀರ್ಷಿಕೆ ಕೂಡ ನೀಡಿದ್ದರು. ಹೀಗೆ ನಾಯಿಗಳೊಂದಿಗಿನ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅವರಿಗೆ ನಾಯಿಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ.

ಓಲಾ ಎಸ್1 ಏರ್ ದಾಖಲೆಯ ಬುಕ್ಕಿಂಗ್: ಓಲಾ ಕಂಪನಿ ತನ್ನ ಅಗ್ಗದ ಬೆಲೆಯ ಎಸ್1 ಏರ್ (S1 Air) ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಅನ್ನು ಕಳೆದ ಗುರುವಾರ ಸಂಜೆಯಿಂದ ಆರಂಭಿಸಿದೆ. ಸದ್ಯ, ದೊರೆತ್ತಿರುವ ಮಾಹಿತಿ ಪ್ರಕಾರ, ಈ ಸ್ಕೂಟರ್ ಬುಕ್ಕಿಂಗ್‌ನಲ್ಲಿ ಆರ್ಭಟಿಸುತ್ತಿದ್ದು, ಈವರೆಗೆ 50,000ಕ್ಕೂ ಹೆಚ್ಚು ಗ್ರಾಹಕರು ಕಾಯ್ದಿರಿಸಿದ್ದಾರೆ. ಈ ಮಟ್ಟದ ಪ್ರತಿಕ್ರಿಯೆಯನ್ನು ಕಂಪನಿ ಕೂಡ ಅಂದಾಜಿಸಿರಲಿಲ್ಲ ಎಂದು ಹೇಳಲಾಗಿದೆ.

ola-electric-gave-job-to-dog-ceo-shared-photo

ಜುಲೈ 27ರಿಂದ ರೂ.1,09,999 ಆರಂಭಿಕ ಬೆಲೆಯಲ್ಲಿ ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಅನ್ನು ಶುರು ಮಾಡಲಾಯಿತು. ಕೇವಲ ಮೂರು ಗಂಟೆಯಲ್ಲಿ 3,000ಕ್ಕೂ ಹೆಚ್ಚಿನ ಆರ್ಡರ್ ಪಡೆದುಕೊಳ್ಳುವ ಮೂಲಕ ಹೊಸದೊಂದು ದಾಖಲೆ ನಿರ್ಮಿಸಿತು. ಆದರೆ, ಈ ಬೆಲೆಯಲ್ಲಿ ಕಾಯ್ದಿರಿಸಲು ಜುಲೈ 30ರವರೆಗೆ ಮಾತ್ರ ಅವಕಾಶವಿದೆ. ಆ ಬಳಿಕ, (ಜುಲೈ 31) ರೂ.1,19,999 ದರವಿರುತ್ತದೆ ಎಂದು ಕಂಪನಿ ತಿಳಿಸಿತ್ತು.

ಬಹುತೇಕ ಗ್ರಾಹಕರು, ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರೂ.1,09,999 ದರದಲ್ಲಿ ಖರೀದಿಗೆ ನೀಡಬೇಕು ಎಂದು ಮನವಿ ಮಾಡಿದ್ದರು. ಅದನ್ನು ಪುರಸ್ಕರಿಸಿದ ಕಂಪನಿಯು ಆಗಸ್ಟ್ 15 ವರೆಗೆ ಈ ಸ್ಕೂಟರ್ ಬುಕ್ಕಿಂಗ್ ಮಾಡುವವರಿಗೆ ಅದೇ ಬೆಲೆಯಲ್ಲಿ ನೀಡಲು ತೀರ್ಮಾನಿಸಿದೆ. ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಂಪನಿ ಹಲವು ಪರೀಕ್ಷೆಗೆ ಒಳಪಡಿಸಿ, ಅದು ಶಕ್ತಿಯುತವಾಗಿದೆ ಎಂಬುದನ್ನು ಈಗ ಸಾಬೀತು ಪಡಿಸಿದೆ.

Article Published On: Tuesday, August 1, 2023, 16:53 [IST]
English summary
Ola electric gave job to dog ceo shared photo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+