Ola ಸ್ಕೂಟರ್ ಟೆಸ್ಟ್‌ ಮಾಡಿದವನಿಗೆ ಅಚ್ಚರಿ: ಸಮುದ್ರದಲ್ಲೂ ಓಡಿಸಿದ.. ಮುಂದೇನಾಯ್ತು? Video

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದೊಡ್ಡ ಮಟ್ಟದಲ್ಲಿ ಖ್ಯಾತಿಗಳಿಸುತ್ತಿವೆ. ಅದರಲ್ಲೂ ಓಲಾದ ಎಸ್1 ಸರಣಿ ಸ್ಕೂಟರ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಇದರಿಂದಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಗರಿಷ್ಠ ಪಾಲನ್ನು ಈ ಸ್ಕೂಟರ್ ಗಳೇ ಹೊಂದಿದ್ದು, ಮಾರಾಟದಲ್ಲಿ ಹಲವು ತಿಂಗಳಿಂದ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನ ಬಾಳಿಕೆ, ಸ್ವೀಡ್ ಹಾಗೂ ರೇಂಜ್ ಬಗ್ಗೆ ಹಲವು ಮಂದಿ ಪರೀಕ್ಷಿಸಿರುವ ವಿವಿಧ ವಿಡಿಯೋಗಳು ಈಗಾಗಲೇ ಇಂಟರ್‌ನೆಟ್‌ನಲ್ಲಿ ಲಭ್ಯವಿದೆ. ಇದೀಗ, ಅಂತಹದ್ದೇ ವಿಡಿಯೋವೊಂದನ್ನು 'ಅಕಿ ಡಿ ಹಾಟ್ ಪಿಸ್ಟೋನ್ಜ್' ಎಂಬ ಯೂಟ್ಯೂಬ್ ವಾಹಿನಿಯಲ್ಲಿ ಅಪ್ಲೋಡ್ ಮಾಡಲಾಗಿದೆ. ಇಲ್ಲಿ ಓಲಾ ಎಸ್1 ಪ್ರೊ ಸ್ಕೂಟರ್ ಅನ್ನು ICE ಚಾಲಿತ ಬೈಕ್ ಗಳು ಹಾಗೂ ಸ್ಕೂಟರ್ ನೊಂದಿಗೆ ರೇಸ್ ನಡೆಸುವುದು, ಗುಡ್ಡವನ್ನು ಹತ್ತಿಸುವುದು ಹಾಗೂ ಸಮುದ್ರದಲ್ಲಿ ಓಡಿಸುವುದನ್ನು ಕಾಣಬಹುದು.

Video: ಓಲಾ ಸ್ಕೂಟರ್ ಟೆಸ್ಟ್‌ ಮಾಡಿದವನಿಗೆ ಅಚ್ಚರಿ, ಸಮುದ್ರದಲ್ಲೂ ಓಡಿಸಿದ.. ಮುಂದೇನಾಯ್ತು?

ಮೊದಲಿಗೆ ಯೂಟ್ಯೂಬರ್ 400 ಮೀಟರ್ ರೇಸ್ ನಡೆಸಿ ಪರೀಕ್ಷಿಸುತ್ತಾರೆ. ಅದರ ಭಾಗವಾಗಿ 125 ಸಿಸಿ ಸುಜುಕಿ ಬರ್ಗ್‌ಮ್ಯಾನ್ ಹಾಗೂ ಓಲಾ ಎಸ್1 ಪ್ರೊ ನಡುವೆ ಸ್ಪರ್ಧೆ ನಡೆಯುತ್ತದೆ. ಅಂತಿಮವಾಗಿ ಎಸ್1 ಪ್ರೊ ಗೆಲ್ಲುತ್ತದೆ. ನಂತರ, ಯಮಹಾ R15 ಮೋಟಾರ್‌ಸೈಕಲ್ ನೊಂದಿಗೆ ರೇಸ್ ಜರುಗುತ್ತದೆ. ಜಿದ್ದಾಜಿದ್ದಿನ ಸ್ಪರ್ಧೆ ನಡೆದು, ಓಲಾನೇ ಜಯಗಳಿಸುತ್ತದೆ. ಇಲ್ಲಿ 116 km/h ಟಾಪ್ ಸ್ವೀಡ್ ತಲುಪಿದ್ದು ವಿಶೇಷವಾಗಿತ್ತು.

ಕಡೆಯದಾಗಿ ಮೂರನೇ ಸುತ್ತು ರಾಯಲ್ ಎನ್‌ಫೀಲ್ಡ್‌ ಹಿಮಾಲಯನ್‌ ಬೈಕ್ ನೊಂದಿಗೆ ನಡೆಯುತ್ತದೆ. ಇಲ್ಲಿಯು ಓಲಾ ಎಸ್1 ಪ್ರೊ ಪ್ರಯಾಸದ ಗೆಲುವು ಕಾಣುತ್ತದೆ. ಇದಾದ ಮೇಲೆ ಕೊಂಚ ಗುಡ್ಡವಿರುವ ಕಡಿದಾದ ರಸ್ತೆಯನ್ನು ಹತ್ತಿಸಲು ಯೂಟ್ಯೂಬರ್ ಯೋಚಿಸುತ್ತಾರೆ. ಅದರಂತೆ ತಾವೊಬ್ಬರೇ ಓಡಿಸದಾಗ ಕೊಂಚ ಸುಲಭವಾಗಿಯೇ ಹೋಗುತ್ತದೆ. ಆದರೆ, ಇಬ್ಬರು ಸವಾರರನ್ನು ಹೊತ್ತ ಓಲಾ ಸ್ಕೂಟರ್ ಎಲ್ಲಿಯೂ ನಿಲ್ಲದೆ ನಿಧಾನವಾಗಿ ಮೇಲೇರಲು ಯಶಸ್ವಿಯಾಗುತ್ತದೆ.

ಮತ್ತೆ ಯೂಟ್ಯೂಬರ್ ಇದರ ರೇಂಜ್ ಪರೀಕ್ಷಿಸಲು ಮುಂದಾಗುತ್ತಾರೆ. 100% ಚಾರ್ಜ್ ಮಾಡಿದ ಸ್ಕೂಟರ್ ನೊಂದಿಗೆ ಬರೋಬ್ಬರಿ 177 ಕಿಲೋಮೀಟರ್ ಕ್ರಮಿಸುತ್ತಾರೆ. ಆ ಬಳಿಕ, ಓಲಾ ಎಸ್1 ಪ್ರೊ ಸ್ಕೂಟರ್ ಅನ್ನು ಸಮುದ್ರದೊಳಗೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ಯಾವುದೇ ಅಲೆಗೂ ಜಪಯ್ಯ ಅನ್ನದೇ ಸ್ಕೂಟರ್ ಕಾರ್ಯ ನಿರ್ವಹಿಸುತ್ತಿರುತ್ತದೆ. ಯೂಟ್ಯೂಬರ್ ಆ ಉಪ್ಪು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿಸಿ ಹೊರತಂದರೂ ಅದರ ಸ್ವೀಕರ್, ಡಿಸ್ಪ್ಲೇ ಹಾಗೂ ಹಾರ್ನ್ ಅಚ್ಚುಕಟ್ಟಾಗಿಯೇ ಇರುತ್ತದೆ.

ಸದ್ಯದ ಬೆಲೆ ಏರಿಕೆಯಿಂದ ಓಲಾ ಎಸ್1 ಪ್ರೊ ರೂ.1,39,999 ದರದಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಇದು 4kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಫುಲ್ ಚಾರ್ಜಿನಲ್ಲಿ 181 km ರೇಂಜ್ ನೀಡಲಿದ್ದು, 95km/h ಟಾಪ್ ಸ್ವೀಡ್ ಹೊಂದಿದೆ. 2.9 ಸೆಕೆಂಡುಗಳಲ್ಲಿ 0 ಯಿಂದ 40 kmph ವೇಗವನ್ನು ಪಡೆಯುತ್ತದೆ.

ಗೃಹ ವಿದ್ಯುತ್ ಬಳಕೆಯಲ್ಲಿ ಓಲಾ ಎಸ್1 ಪ್ರೊ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲು 6.3 ಗಂಟೆಬೇಕು. ಈ ಸ್ಕೂಟರ್ ನಾಲ್ಕು ರೈಡಿಂಗ್ ಮೋಡ್ ಹೊಂದಿದೆ. ಅವುಗಳೆಂದರೆ, ನಾರ್ಮಲ್, ಇಕೋ, ಸ್ಪೋರ್ಟ್ ಹಾಗೂ ಹೈಪರ್. ಜೊತೆಗೆ 7 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಖರೀದಿದಾರರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.

Article Published On: Saturday, June 3, 2023, 15:07 [IST]
English summary
Ola s1 pro electric scooter youtuber rides in sea video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+