ಓಲಾ ಎಸ್ 1 ಪ್ರೋ VS ಏಥರ್ 450X: ಮದಗಜಗಳ ಹಣಾಹಣಿಯಲ್ಲಿ ಯಾರು ಬೆಸ್ಟ್?
ಎಲೆಕ್ಟ್ರಿಕ್ ಸ್ಕೂಟರ್ ಕ್ಷೇತ್ರದಲ್ಲಿ ಹೆಚ್ಚು ಪ್ರಸಿದ್ದವಾಗಿ ಕೇಳಿ ಬರುತ್ತಿದ್ದಂತಹ ಹೆಸರು ಏಥರ್. ಓಲಾ ಕಂಪನಿ ಭಾತರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಲು ಆರಂಭಿಸಿದಾಗಿನಿಂದ ಎದುರಾಳಿಗಳೇ ಇಲ್ಲದಿದ್ದ ಏಥರ್‌ಗೆ ಪ್ರಭಲ ಪ್ರತಿಸ್ಪರ್ಧಿಯೊಂದು ಹುಟ್ಟಿಕೊಂಡಂತಾಯಿತು. ಅದರಲ್ಲೂ ಏಥರ್ 450X ಮತ್ತು ಓಲಾ ಎಸ್1 ಪ್ರೋ, ನೇರ ಹಣಾಹಣಿಯಲ್ಲಿ ತೊಡಗಿಕೊಂಡಿತು.
ಈ ಎರಡೂ ಸ್ಕುಟರ್‌ಗಳು ಸಹ ಒಂದೇ ಸೆಗ್ಮೆಂಟ್‌ನಲ್ಲಿ ತಮ್ಮ ನಡುವೆ ಯಾರು ಉತ್ತಮರು ಎಂದು ಸಾಧಿಸಲು ಹಲವಾರು ಪ್ರಯತ್ನವನ್ನು ಪಟ್ಟಿವೆ. ಏಥರ್ 450X ಮತ್ತು ಓಲಾ S1 ಪ್ರೋ (Ola S1 Pro VS Ather 450X) ನಡುವೆ ಫೀಚರ್‌ನಲ್ಲಿ ಹಲವಾರು ವ್ಯತ್ಯಾಸಗಳಿದ್ದರೂ, ಪರ್ಫಾಮೆನ್ಸ್ ಎಂದು ಬಂದಾಗ ಎರಡೂ ಸ್ಕೂಟರ್‌ಗಳು ಜಿದ್ದಾಜಿದ್ದಿಗೆ ಬೀಳುತ್ತವೆ. ಇಂದಿನ ಈ ಲೇಖನದಲ್ಲಿ ಈ ಎರಡೂ ಸ್ಕೂಟರ್‌ಗಳ ಕುರಿತಾಗಿ ನೋಡಲಿದ್ದು, ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೆ ಓದಿ.

ಬೆಲೆ: ಏಥರ್ ಕಂಪನಿಯು ನೂತನ 450ಎಸ್ ಹಾಗೂ ಸದ್ಯ, ಖರೀದಿಗೆ ಲಭ್ಯವಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ನ ಎರಡು ಹೊಸ ರೂಪಾಂತರಗಳನ್ನು ಲಾಂಚ್ ಮಾಡಿದೆ. ಇವು, ಬ್ಯಾಟರಿ ಪ್ಯಾಕ್, ರೇಂಜ್ ವಿಚಾರದಲ್ಲಿ ಭಿನ್ನತೆ ಹೊಂದಿವೆ. ಬೆಲೆ ಬಗ್ಗೆ ಹೇಳುವುದಾದರೆ, ಎಥರ್ 450ಎಸ್ ರೂ.1,29,999 ಹಾಗೂ 450ಎಕ್ಸ್ (2.9kWh ಬ್ಯಾಟರಿ) ರೂ.1,38,000, 450ಎಕ್ಸ್ (3.7kWh) ರೂ.1,44,921 (ಎಕ್ಸ್ ಶೋರೂಂ, ಬೆಂಗಳೂರು) ಬೆಲೆಯಲ್ಲಿ ಖರೀದಿಗೆ ಲಭ್ಯವಿವೆ.
ಇನ್ನು ಓಲಾ ಎಸ್ ೧ ಪ್ರೋ ಬೆಲೆಯು 1,47,499 ಗೆ ಆರಂಭವಾಗುತ್ತಿದ್ದು, ಏಥರ್ ಸ್ಕೂಟರ್‌ಗಿಂತ ಕೊಂಚ ದುಬಾರಿಯಾಗಿದೆ. ಆದರೆ ಫೀಚರ್‌ಗಳನ್ನು ಅಕ್ಕಪಕ್ಕದಲ್ಲಿಟ್ಟುಕೊಂಡು ನೋಡುವಾಗ ಈ ಸ್ಕೂಟರ್‌ನಲ್ಲಿ ಕೊಂಚ ಹೆಚ್ಚೇ ಎಂದು ಹೇಳಬಹುದು. ಇದು ಈ ಎರಡೂ ಸ್ಕೂಟರ್‌ನ ಬೆಲೆ. ಬಜೆಟ್‌ಗೆ ತಕ್ಕದಾಗಿ ಯಾವ ಸ್ಕೂಟರ್ ಬೇಕೋ ಅದನ್ನು ಆರಿಸಬಹುದು.

ಬ್ಯಾಟರಿ: ಎಥರ್ 450X, 3.7kWh ಬ್ಯಾಟರಿಯನ್ನು 6.2kW ಮೋಟಾರ್‌ಗೆ ಜೋಡಿಸಲಾಗಿದೆ. ಇದು 90kmph ಗರಿಷ್ಠ ವೇಗ, 110km ರೇಂಜ್ ನೀಡುತ್ತದೆ. ಜಾರ್ಜ್ ಮಾಡಲು ನಾಲ್ಕು ಗಂಟೆ 30 ನಿಮಿಷಗಳು ಬೇಕು. ಓಲಾ ಎಸ್1 ಪ್ರೊ (Ola S1 Pro) ಶಕ್ತಿಯುತ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ.
ಇದು 4 ಕೆಡಬ್ಲ್ಯೂಹೆಚ್ (Kwh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಪೂರ್ತಿ ಚಾರ್ಜ್ ನಲ್ಲಿ 195 ಕಿಲೋಮೀಟರ್ ಓಡುತ್ತದೆ. 120 ಕೆಎಂಪಿಹೆಚ್ ಟಾಪ್ ಸ್ವೀಡ್ (ಗರಿಷ್ಠ ವೇಗ) ಹೊಂದಲಿದ್ದು, ಇದರಲ್ಲಿ ಉಪಯೋಗಿಸಿರುವ ಎಲೆಕ್ಟ್ರಿಕ್ ಮೋಟಾರ್ 11 ಕೆಡಬ್ಲ್ಯೂ (kW) ಪವರ್ ಉತ್ಪಾದಿಸುತ್ತದೆ.

ರೇಂಜ್: ಒಲಾ ಕಂಪನಿ ಹೇಳುವ ಪ್ರಕಾರ ಒಲಾ S1 Pro ಸ್ಕೂಟರ್ 135 ಕಿ.ಮೀ ಮೈಲೇಜ್ ಪಡೆಯಲು ಸಾಧ್ಯವಿದೆ. ಆದರೆ ಕಂಡೀಷನ್ ಅಪ್ಲೈ. ಈ ಮೈಲೇಜ್ ಪಡೆಯಲು ಸ್ಕೂಟರ್‌ನಲ್ಲಿ ಪಿಲಿಯನ್ ರೈಡರ್ ಅಂದರೆ ಹಿಂಬದಿ ಸವಾರ ಇರಬಾರದು, ಸವಾರನ ತೂಕ 70 ಕೆಜಿ ಮೀರಿರಬಾರದು, ಇತರ ಯಾವುದೇ ತೂಕದ ವಸ್ತುಗಳು ಇರಬಾರದು.
2 ರಿಂದ 5 ಶೇಕಡಾ ಇಳಿಜಾರು ಸೇರಿದಂತೆ ಸಮತಟ್ಟಾದ ರಸ್ತೆ ಇರಬೇಕು. ಹವಾಮಾನ ಪರಿಸ್ಥಿತಿ ಪ್ರತಿಕೂಲವಾಗರಬೇಕು. ಹೀಗಿದ್ದಲ್ಲಿ 135 ರಿಂದ 145 ಕಿ.ಮೀ ಮೈಲೇಜ್ ಸಿಗಲಿದೆ. ಇದೇ ಸಂಧರ್ಭದಲ್ಲಿ ಏಥರ್ 450X ಸ್ಕೂಟರ್ ಸುಮಾರು ೧೫೦ ಕಿಮೀ ರೇಂಜ್ ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications