ಮಹಿಳಾ ಶೌಚಾಲಯವಾಗಿ ಬದಲಾದ ಹಳೆ ಕೆಎಸ್‌ಆರ್‌ಟಿಸಿ ಬಸ್

ನಮ್ಮ ದೇಶದಲ್ಲಿ ಉಪಯುಕ್ತ ವಸ್ತುಗಳನ್ನು ಕೆಲವೇ ಕ್ಷಣಗಳಲ್ಲಿ ಅನುಪಯುಕ್ತ ವಸ್ತುವನ್ನಾಗಿ ಮಾಡಲಾಗುತ್ತದೆ. ಆದರೆ ಅನುಪಯುಕ್ತ ವಸ್ತುವನ್ನು ಉಪಯುಕ್ತ ವಸ್ತುವನ್ನಾಗಿ ಮಾಡಲು ಕಠಿಣ ಪರಿಶ್ರಮ ಹಾಗೂ ಹೆಚ್ಚು ಸಮಯ ಬೇಕಾಗುತ್ತದೆ.

ಮಹಿಳಾ ಶೌಚಾಲಯವಾಗಿ ಬದಲಾದ ಹಳೆ ಕೆಎಸ್‌ಆರ್‌ಟಿಸಿ ಬಸ್

ಇತ್ತೀಚೆಗೆ ನಮ್ಮ ಬೆಂಗಳೂರಿನಲ್ಲಿ ಹಳೆಯ ಬಸ್ ವೊಂದನ್ನು ಮಹಿಳಾ ಶೌಚಾಲಯವನ್ನಾಗಿ ಪರಿವರ್ತಿಸಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಈ ಬಸ್ ಅನ್ನು ಮಹಿಳಾ ಶೌಚಾಲಯವನ್ನಾಗಿ ಪರಿವರ್ತಿಸಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರವು ತನ್ನ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ಇದರ ವೆಚ್ಚವನ್ನು ಭರಿಸಿದೆ. ಈ ಹಳೆಯ ಬಸ್ ಅನ್ನು ಮಹಿಳಾ ಶೌಚಾಲಯವನ್ನಾಗಿ ಪರಿವರ್ತಿಸಲು ರೂ.12 ಲಕ್ಷ ಖರ್ಚು ಮಾಡಲಾಗಿದೆ.

ಮಹಿಳಾ ಶೌಚಾಲಯವಾಗಿ ಬದಲಾದ ಹಳೆ ಕೆಎಸ್‌ಆರ್‌ಟಿಸಿ ಬಸ್

ಈ ಎರಡೂ ಸಂಸ್ಥೆಗಳು ನಡೆಸುವ ಸ್ತ್ರೀ ಟಾಯ್ಲೆಟ್ ಎನ್ನುವ ಯೋಜನೆಯಡಿಯಲ್ಲಿ ಈ ಬಸ್ ಅನ್ನು ಮಾರ್ಪಡಿಸಲಾಗಿದೆ. ಈ ಶೌಚಾಲಯವನ್ನು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸ್ಥಾಪಿಸಲಾಗಿದೆ. ಈ ಬಸ್‌ನಲ್ಲಿ ಮೂರು ಇಂಡಿಯನ್ ಹಾಗೂ ಎರಡು ವೆಸ್ಟರ್ನ್ ಶೌಚಾಲಯಗಳನ್ನು ಅಳವಡಿಸಲಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಮಹಿಳಾ ಶೌಚಾಲಯವಾಗಿ ಬದಲಾದ ಹಳೆ ಕೆಎಸ್‌ಆರ್‌ಟಿಸಿ ಬಸ್

ಈ ಶೌಚಾಲಯದಲ್ಲಿ ಬೇಬಿ ಡಯಾಪರ್ ಬದಲಾಯಿಸುವ ಪ್ರದೇಶ ಹಾಗೂ ಸ್ಯಾನಿಟರಿ ನ್ಯಾಪ್ಕಿನ್ ಯಂತ್ರಗಳಿವೆ. ಇದರ ಜೊತೆಗೆ ಈ ಶೌಚಾಲಯವು ಸೋಲಾರ್ ಲೈಟ್, ವಾಶ್ ಬೇಸಿನ್ ಹಾಗೂ ಬೇಬಿ ಫೀಡಿಂಗ್ ಪ್ರದೇಶವನ್ನು ಹೊಂದಿದೆ. ಈ ಶೌಚಾಲಯವು ಸೌರಶಕ್ತಿಯನ್ನು ಆಟೋಮ್ಯಾಟಿಕ್ ಆಗಿ ಬಳಸುತ್ತದೆ.

ಮಹಿಳಾ ಶೌಚಾಲಯವಾಗಿ ಬದಲಾದ ಹಳೆ ಕೆಎಸ್‌ಆರ್‌ಟಿಸಿ ಬಸ್

ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿರುವ ಈ ಮಹಿಳಾ ಶೌಚಾಲಯವನ್ನು ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಈ ರೀತಿಯ ಹಲವು ಶೌಚಾಲಯಗಳನ್ನು ರಾಜ್ಯ ಸಾರಿಗೆ ನಿಗಮವು ನಿರ್ಮಿಸಲಿದೆ ಎಂದು ಅವರು ಹೇಳಿದರು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮಹಿಳಾ ಶೌಚಾಲಯವಾಗಿ ಬದಲಾದ ಹಳೆ ಕೆಎಸ್‌ಆರ್‌ಟಿಸಿ ಬಸ್

ಈ ಬಸ್ ಅನ್ನು ಒಳಗಿನಿಂದ ಹಾಗೂ ಹೊರಗಿನಿಂದ ಪೂರ್ತಿ ಪ್ರಮಾಣದಲ್ಲಿ ಅದ್ಭುತವಾಗಿ ಮಾಡಿಫೈ ಮಾಡಲಾಗಿದೆ. ಈ ಜನದಟ್ಟಣೆ ಪ್ರದೇಶದಲ್ಲಿ ಕೆಲಸ ಮಾಡುವ ಅನೇಕ ಮಹಿಳೆಯರಿಗೆ ಈ ಶೌಚಾಲಯದಿಂದ ಅನುಕೂಲವಾಗಲಿದೆ.

ಮಹಿಳಾ ಶೌಚಾಲಯವಾಗಿ ಬದಲಾದ ಹಳೆ ಕೆಎಸ್‌ಆರ್‌ಟಿಸಿ ಬಸ್

ದೇಶದ ಹಲವು ರಾಜ್ಯಗಳಲ್ಲಿರುವ ಸಾರಿಗೆ ಸಂಸ್ಥೆಗಳ ಕಳಪೆ ವಾಹನಗಳನ್ನು ಮಾರ್ಪಡಿಸಿ ಶೌಚಾಲಯ ಸೇರಿದಂತೆ ಇತರ ಕೆಲಸಗಳಿಗೆ ಬಳಸಿಕೊಳ್ಳಬೇಕು. ಆರ್‌ಟಿಒಗಳಲ್ಲಿ ಲಕ್ಷಾಂತರ ವಾಹನಗಳು ಹಾಳಾಗುತ್ತಿವೆ. ಅವುಗಳನ್ನು ಸಹ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಮಹಿಳಾ ಶೌಚಾಲಯವಾಗಿ ಬದಲಾದ ಹಳೆ ಕೆಎಸ್‌ಆರ್‌ಟಿಸಿ ಬಸ್

ಈ ಮಹಿಳಾ ಶೌಚಾಲಯದಲ್ಲಿ ಸೌರ ದೀಪಗಳನ್ನು ಬಳಸಲಾಗಿದ್ದು, ಎಲೆಕ್ಟ್ರಿಕ್ ಬಿಲ್ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಅನುಪಯುಕ್ತ ವಸ್ತುವನ್ನು ಹೇಗೆ ಉಪಯುಕ್ತ ಮಾಡಿಕೊಳ್ಳಬಹುದು ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನವಾಗಿದೆ.

Most Read Articles

Kannada
English summary
Old bus converted as women toilet in Bengaluru. Read in Kannada.
Story first published: Saturday, August 29, 2020, 18:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X