ಕಾರಿಗೆ ಎಣ್ಣೆ ಹೊಡಿಸಿದ ಮಹಾನುಭಾವರು: ಕಾರಣ ತಿಳಿದರೆ ಷಾಕ್ ಆಗ್ತೀರಾ! ವಿಡಿಯೋ...
ವಾಹನಗಳು ಮತ್ತು ಮದ್ಯಪಾನ ಇವೆರಡೂ ಒಂದೇ ವಾಕ್ಯದಲ್ಲಿ ಬರಬಾರದ ಎರಡು ವಿಷಯಗಳಾಗಿವೆ. ಕುಡಿದು ವಾಹನ ಚಲಾಯಿಸುವುದು ಕಾನೂನುಬಾಹಿರ, ಆದರೆ ಇಲ್ಲಿಬ್ಬರು ವೃದ್ಧರು ವಾಹನಕ್ಕೆ ಎಣ್ಣೆ ಹೊಡಿಸಿ ವೈರಲ್ ಆಗಿದ್ದಾರೆ. ಸಣ್ಣ ವೀಡಿಯೊದಲ್ಲಿ, ಇಬ್ಬರು ವೃದ್ಧರು ಟೊಯೊಟಾ ಫಾರ್ಚೂನರ್‌ಗೆ ವೋಡ್ಕಾ ಸುರಿಯುವುದನ್ನು ಕಾಣಬಹುದು, ಹೀಗೆ ಮಾಡಲು ಅವರು ಕೊಟ್ಟ ಕಾರಣವು ಕಂಡಿತ ನಿಮಗೆ ಅಚ್ಚರಿಗೊಳಿಸಬಹುದು. ಹೌದು ಟೊಯೊಟಾ ಫಾರ್ಚೂನರ್ ಕಾರಿನ ಬಾನೆಟ್ ತೆರೆದು ವಿಂಡ್‌ಶೀಲ್ಡ್ ವೈಪರ್ ರಿಸರ್ವಾಯರ್‌ಗೆ ಓಡ್ಕಾವನ್ನು ಸುರಿದು, ವೀಡಿಯೋ ನೋಡುವವರಿಗೆ ಹೀಗೆಯೇ ಮಾಡಲು ಸಲಹೆ ಕೂಡ ನೀಡಿದ್ದಾರೆ.
ವಿಷಯವೇನು?: ಹೆಪ್ಪುಗಟ್ಟುವ ಶೀತ ತಾಪಮಾನದಲ್ಲಿ ವೈಪರ್‌ಗಳು ಕೆಲಸ ಮಾಡಲು ಅವರು ಹೀಗೆ ಮಾಡಿದ್ದಾರೆ. ಇದಕ್ಕಾಗಿ ಮ್ಯಾಜಿಕ್ ಮೊಮೆಂಟ್ಸ್ ವೋಡ್ಕಾವನ್ನು ಬಳಸಿದ್ದಾರೆ. ವಿಡಿಯೋ ನೋಡಿದ ಹಲವರು ಮದ್ಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಹೆಪ್ಪುಗಟ್ಟುವ ತಾಪಮಾನದಲ್ಲಿ ಚಾಲನೆ ಮಾಡುವ ಹಲವರು ಬಳಸುವ ಟ್ರಿಕ್ ಇದಾಗಿದೆ.

ವಿಂಡ್‌ಶೀಲ್ಡ್ ವೈಪರ್ ರಿಸರ್ವಾಯರ್ 0 ಡಿಗ್ರಿ ಸೆಲ್ಸಿಯಸ್‌ನಲ್ಲಿ ಹೆಪ್ಪುಗಟ್ಟುವುದರಿಂದ ವೈಪರ್‌ಗೆ ನೀರಿನ ಹರಿವಿಲ್ಲದೆ ಕೆಲಸ ಮಾಡುವುದಿಲ್ಲ. ಆದ್ರೆ ಮದ್ಯವು ಹೆಪ್ಪುಗಟ್ಟುವ ವಾತಾವರಣದಲ್ಲಿಯೂ ದ್ರವವಾಗಿಯೇ ಇರುತ್ತದೆ. ಹಾಗಾಗಿ ವಿಂಡ್‌ಶೀಲ್ಡ್ ವೈಪರ್ ರಿಸರ್ವಾಯರ್‌ಗೆ ನೀರಿನೊಂದಿಗೆ ಮದ್ಯವನ್ನು ಬೆರೆಸುವುದರಿಂದ ನೀರು ಹೆಪ್ಪುಗಟ್ಟುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ಅನಿವಾರ್ಯ ಪರಿಸ್ಥಿತಿಗಳಲ್ಲಿ ಮದ್ಯವನ್ನು ಬೆರೆಸುವುದು ಒಳ್ಳೆಯದಾದರೂ, ರಿಸರ್ವಾಯರ್ ಕೆಲವೊಮ್ಮೆ ಇಂತಹ ದ್ರವ್ಯಗಳಿಂದ ಹೆಚ್ಚು ದುರ್ಬಲಗೊಳ್ಳುತ್ತದೆ. ಹಾಗಾಗಿ ನಿಮಗೆ ಇಂತಹ ಹೆಪ್ಪುಟ್ಟುವ ಪರಿಸ್ಥಿತಿಗಳಲ್ಲಿ ಚಾಲನೆ ಮಾಡುವ ಬಗ್ಗೆ ಮೊದಲೇ ತಿಳಿದಿದ್ದರೇ, ಇಂತಹ ವಾತಾವರಣಗಳಿಗಾಗಿಯೇ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಆಟೋಮೋಟಿವ್ ಗ್ರೇಡ್ ಉತ್ಪನ್ನಗಳನ್ನು ಬಳಸುವುದು ಉತ್ತಮ.

ವೋಡ್ಕಾವನ್ನು ಬಳಸುವುದು ತುಂಬಾ ದುಬಾರಿ, ಅಂದರೆ ಈ ಉದ್ದೇಶಕ್ಕಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಆಟೋಮೋಟಿವ್ - ಗ್ರೇಡ್ ಉತ್ಪನ್ನಗಳಿಗೆ ಹೋಲಿಸಿದರೆ ವೋಡ್ಕಾ ತುಸು ದುಬಾರಿಯಾಗಿರುತ್ತದೆ. ಅಲ್ಲದೆ, ವೋಡ್ಕಾದಲ್ಲಿ ಯಾವುದೇ ಕ್ಲೀನಿಂಗ್ ಪ್ರಯೋಜಕಗಳು ಇರುವುದಿಲ್ಲ. ನಿಯಮಿತವಾಗಿ ಬಳಸುವುದರಿಂದ ವಿಂಡ್‌ಶೀಲ್ಡ್‌ಗೆ ಹಾನಿಯಾಗಬಹುದು. ಹಾಗಾಗಿ ಕಮರ್ಷಿಯಲ್ ದರ್ಜೆಯ ವಿಂಡ್‌ಶೀಲ್ಡ್ ವೈಪರ್ ಫ್ಲ್ಯೂಯೆಡ್‌ಗಳನ್ನು ಬಳಸಬಹುದು.
ನಿಮ್ಮ ವಾಹನವನ್ನು ಹೆಪ್ಪುಗಟ್ಟುವ ತಾಪಮಾನದಲ್ಲಿ ಓಡಿಸಲು ನೀವು ಬಯಸಿರೆ, ಈ ವೈಪರ್ ಫ್ಲ್ಯೂಯೆಡ್‌ಗಳು ಸೂಕ್ತವಾಗಿರುತ್ತವೆ. ಇಂದು ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಗೆ ಇಂತಹ ಉತ್ಪನ್ನಗಳು ಖರೀದಿಗೆ ಸಿಗುತ್ತಿವೆ. ಹಲವಾರು ನೆಟ್ಟಿಗರು ಈ ವೀಡಿಯೊಗೆ ಪ್ರತಿಕ್ರಿಯಿಸಿ, ವೋಡ್ಕಾ ವ್ಯರ್ಥ' ಅದರ ಬದಲು ಅವರು ಐಸೊಪ್ರೊಪೈಲ್ ಆಲ್ಕೋಹಾಲ್ ಅನ್ನು ಬಳಸಬೇಕಾಗಿತ್ತು ಎಂದು ಸಲಹೆ ನೀಡಿದ್ದಾರೆ.
ಏನೇ ಹೇಳಿ ತಿಳಿಯದೇ ಪ್ರಯಾಣ ಬೆಳೆಸಿದಾಗ ಮಾರ್ಗಮಧ್ಯೆ ಇಂತಹ ಪರಿಸ್ಥಿತಿಗಳು ಎದುರಾದಾಗ ಅನಿವಾರ್ಯವೆನಿಸಿದರೆ ಮದ್ಯವನ್ನು ಬಳಸುವುದು ತಪ್ಪೇನಲ್ಲ. ವಿಂಡ್‌ಶೀಲ್ಡ್ ದಾರಿಯನ್ನು ಸರಿಯಾಗಿ ತೋರದಿದ್ದಾಗ ಅಪಘಾತಗಳು ಆಗುವ ಸಾಧ್ಯತೆಗಳು ಹೆಚ್ಚು, ಇಂತಹ ಸಂಭವನೀಯ ಅವಘಡಗಳನ್ನು ತಪ್ಪಿಸಲು ವೃದ್ಧರು ಕಂಡುಕೊಂಡ ಉಪಾಯವನ್ನು ಮೆಚ್ಚಬಹುದು. ಇವರು ಮಾಡಿರುವ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications