Operation Kaveri: ಸುಡಾನ್‌ನಿಂದ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತಂದ ನಮ್ಮ ಹೆಮ್ಮೆಯ ಸೇನೆ
ಯುದ್ಧಪೀಡಿತ ಸುಡಾನ್‌ನಲ್ಲಿ ಭಾರತೀಯರನ್ನು ಭಾರತಕ್ಕೆ ಸ್ಥಳಾಂತರಿಸುವ ಕಾರ್ಯ ಭರದಿಂದ ಸಾಗುತ್ತಿದೆ, ಸುಡಾನ್‌ನಿಂದ ಭಾರತಕ್ಕೆ ಕರೆತರಲು ಆಪರೇಷನ್ ಕಾವೇರಿ ಎಂಬ ಕಾರ್ಯಚರಣೆ ಪ್ರಾರಂಭಿಸಲಾಗಿತ್ತು. ಇದೀಗ ಆಪರೇಷನ್ ಕಾವೇರಿ ಅಡಿಯಲ್ಲಿ ಇದುವರೆಗೆ 3 ಸಾವಿರಕ್ಕೂ ಹೆಚ್ಚು ಭಾರತೀಯರನ್ನು ಸುಡಾನ್‌ನಿಂದ ಸ್ಥಳಾಂತರಿಸಲಾಗಿದೆ. ಸುಡಾನ್‌ನ ಬೆಂಬಲದ ಕೊರತೆಯಿಂದ ಆಪರೇಷನ್ ಕಠಿಣವಾಗಿದೆ.
ಸುಡಾನ್ನಲ್ಲಿದ್ದ ಭಾರತೀಯರು ಐದು ಭಾರತೀಯ ನೌಕಾ ಹಡಗುಗಳು ಮತ್ತು ವಾಡಿ ಸಯ್ಯಿದ್ನ ಮಿಲಿಟರಿ ವಾಯುನೆಲೆ ಸೇರಿದಂತೆ 13 ಭಾರತೀಯ ವಾಯುಪಡೆಯ ವಿಮಾನಗಳನ್ನು ಬಳಸಿಕೊಂಡು ಪೋರ್ಟ್ ಸುಡಾನ್‌ನಿಂದ ಹೊರಬಂದಿದ್ದಾರೆ ಎಂದು ಖಾರ್ಟೂಮ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ತಿಳಿಸಿರುವ ಬಗ್ಗೆ ವರದಿಗಳಾಗಿದೆ. ಸುಡಾನ್‌ನ ಖಾರ್ಟೂಮ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಪೋರ್ಟ್ ಸುಡಾನ್‌ಗೆ ಸ್ಥಳಾಂತರಿಸಲಾಗುತ್ತದೆ.

ಖರ್ಟೂಮ್ ಮತ್ತು ಸುಡಾನ್‌ನ ಇತರ ಭಾಗಗಳಲ್ಲಿ ಏ.15ರಂದು ಸುಡಾನ್ ಸೇನೆಗಳ ನಡುವೆ ಸಂಘರ್ಷ ಪ್ರಾರಂಭವಾಗಿತ್ತು. ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರವು 'ಆಪರೇಷನ್ ಕಾವೇರಿ' ಅನ್ನು ಪ್ರಾರಂಭಿದ್ದರು. 'ಆಪರೇಷನ್ ಕಾವೇರಿ' ಅಡಿಯಲ್ಲಿ ಭಾರತೀಯ ನೌಕಾ ಹಡಗುಗಳು, ಭಾರತೀಯ ವಾಯುಪಡೆಯ ವಿಮಾನಗಳು ತ್ವರಿತ ಕಾರ್ಯಚರಣೆ ನಡೆಸಿದೆ.
ಇನ್ನು , ಯಾವುದೇ ದೀಪಗಳಿಲ್ಲದ ಮತ್ತು ಕ್ಷೀಣಿಸಿದ ಮೇಲ್ಮೈಯಲ್ಲಿ ರಾತ್ರಿಯಲ್ಲಿ ಏರ್‌ಸ್ಟ್ರಿಪ್‌ನಲ್ಲಿ ಅನ್ನು ನಡೆಸಲಾಯಿತು. ಈ ಅಪಾಯಕಾರಿ ಕಾರ್ಯಾಚರಣೆಯು ಯುದ್ಧತಂತ್ರದ ವಿಧಾನದಲ್ಲಿ ಭಾರತೀಯ ಸೇನೆಯು ನಡೆಸಿದೆ., ಈ ಕಾರ್ಯಾಚರಣೆಯನ್ನು ಭಾರತೀಯ ಸಶಸ್ತ್ರ ಪಡೆಗಳು C-130J ಹೆವಿ-ಲಿಫ್ಟ್ ವಿಮಾನದ ಸಹಾಯದಿಂದ ನಡೆಸಿದೆ. ಭಾರತೀಯ ಸಶಸ್ತ್ರ ಪಡೆಗಳು ಎಲೆಕ್ಟ್ರೋ-ಆಪ್ಟಿಕಲ್ ಮತ್ತು ಇನ್ಫ್ರಾರೆಡ್ ಸೆನ್ಸರ್ ಗಳನ್ನು ಬಳಸಿ ಏರ್‌ಸ್ಟ್ರಿಪ್ ಅನ್ನು ನಡೆಸಿದೆ.

C-130J ಹೆವಿ-ಲಿಫ್ಟ್ ವಿಮಾನವು ಇಳಿದ ತಕ್ಷಣ, ಎಂಟು IAF ಕಮಾಂಡೋಗಳು ತ್ವರಿತವಾಗಿ ಪ್ರಯಾಣಿಕರನ್ನು ಮತ್ತು ಅವರ ಲಗೇಜ್‌ಗಳನ್ನು ವಿಮಾನದೊಳಗೆ ಭದ್ರಪಡಿಸಿದರು. ವಾಸ್ತವವಾಗಿ, ಈ ಸಂಪೂರ್ಣ ಕಾರ್ಯಾಚರಣೆಯನ್ನು ಕೇವಲ ಎರಡೂವರೆ ಗಂಟೆಗಳಲ್ಲಿ ನಡೆಸಲಾಯಿತು. C-130J ಹೆವಿ-ಲಿಫ್ಟ್ ವಿಮಾನವು ಲಾಕ್ಹೀಡ್ C-130 ಹರ್ಕ್ಯುಲಸ್ ವಿಮಾನದ ಹೆಚ್ಚು ನವೀಕರಿಸಿದ ಆವೃತ್ತಿಯಾಗಿದೆ ಮತ್ತು ಇದನ್ನು ಕೆಲವೊಮ್ಮೆ ಸೂಪರ್ ಹರ್ಕ್ಯುಲಸ್ ಎಂದು ಕರೆಯಲಾಗುತ್ತದೆ.
ಭಾರತ ಸರ್ಕಾರವು 2008 ರಲ್ಲಿ $1.059 ಶತಕೋಟಿ (ರೂ. 8,655 ಕೋಟಿ) ವೆಚ್ಚದಲ್ಲಿ ಈ ವಿಮಾನಗಳ 6 ಯುನಿಟ್ ಗಳನ್ನು ಖರೀದಿಸಿತು. ನಂತರ, 2011 ರ ಸಿಕ್ಕಿಂ ಭೂಕಂಪದ ವೇಳೆ ಕಾರ್ಯಾಚರಣೆಗಳಲ್ಲಿ ಅದರ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಉಲ್ಲೇಖಿಸಿ ಭಾರತ ಸರ್ಕಾರವು ಈ ವಿಮಾನದ ಇನ್ನೂ 6 ವಿಮಾನಗಳನ್ನು ತನ್ನ ಫ್ಲೀಟ್‌ಗೆ ಆದೇಶಿಸಿತು. C-130J ಬಗ್ಗೆ ಹೇಳುವುದಾದರೆ, ಇದು ಹೆವಿ-ಲಿಫ್ಟ್ ವಿಮಾನವನ್ನು 2 ಪೈಲಟ್‌ಗಳು ಮತ್ತು 1 ಲೋಡ್‌ಮಾಸ್ಟರ್ ಒಳಗೊಂಡಿರುವ 3 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಾರೆ.

ಇದರ ಜೊತೆಗೆ, ವಿಮಾನವು 92 ಪ್ರಯಾಣಿಕರನ್ನು ಸಹ ಸಾಗಿಸಬಹುದು. ಇದಲ್ಲದೆ, C-130J ಸೂಪರ್ ಹರ್ಕ್ಯುಲಸ್ ನಾಲ್ಕು ರೋಲ್ಸ್ ರಾಯ್ಸ್ AE 2100D3 ಟರ್ಬೊಪ್ರಾಪ್ ಎಂಜಿನ್‌ಗಳನ್ನು ಬಳಸುತ್ತದೆ. ಈ ಎಂಜಿನ್‌ಗಳು ಒಟ್ಟು 18,549 bhp ಪವರ್ ಅನ್ನು ಉತ್ಪಾದಿಸುತ್ತವೆ, ಇದು ವಿಮಾನವು 22,000ft ಎತ್ತರದಲ್ಲಿ 670km/h ವೇಗವನ್ನು ತಲುಪಲು ಸಹಾಯ ಮಾಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಭದಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications