ಕೇವಲ 5 ರೂ.ಗಾಗಿ ಜಗಳವಾಡಿ ದುಬಾರಿ ಕಾರನ್ನು ಹಾನಿಗೊಳಿಸಿಕೊಂಡ ಮಾಲೀಕ!

ಎಸ್‌ಯುವಿ ಮಾಲೀಕನೊಬ್ಬ ಕೇವಲ 5 ರೂ.ಗಾಗಿ ಉದ್ದೇಶಪೂರ್ವಕವಾಗಿ ತಮ್ಮ ಕಾರನ್ನು ರಸ್ತೆಯಲ್ಲಿ ಓಡಾಡುತ್ತಿದ್ದ ಜನರ ಮೇಲೆ ಹತ್ತಿಸಲು ಮುಂದಾದ ಘಟನೆ ದೆಹಲಿಯಲ್ಲಿ ನಡೆದಿದೆ. ಇದೇ ವೇಳೆ ಜನರು ಕೂಡ ಕಾರಿನ ಮೇಲೆ ಕಲ್ಲುಗಳಿಂದ ದಾಳಿ ಮಾಡಲು ಮುಂದಾಗಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ಟೈಮ್ಸ್ ನೌ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಕೆಂಪು ಬಣ್ಣದ ಮಹೀಂದ್ರಾ ನುವೋಸ್ಪೋರ್ಟ್ ಎಸ್‌ಯುವಿ ರಸ್ತೆಯ ರಾಂಗ್ ಸೈಡ್‌ನಿಂದ ಚಾಲನೆ ಮಾಡುತ್ತಿರುವುದು ಕಂಡುಬರುತ್ತದೆ. ಚಾಲಕ ರಸ್ತೆಬದಿಯಲ್ಲಿ ನಿಂತಿರುವ ಜನರನ್ನು ಗುರಿಯಾಗಿಸಿಕೊಂಡು ಏಕಾಏಕಿ ಅವರ ಮೇಲೆ ಕಾರನ್ನು ಹತ್ತಿಸಲು ಹೊರಟಿದ್ದ.

owner-damaged-the-expensive-car-in-a-fight-for-just-rs-5

ಎಸ್‌ಯುವಿ ಚಾಲಕ ಜನರ ಹತ್ತಿರ ಅಪಾಯಕಾರಿಯಾಗಿ ಚಾಲನೆ ಮಾಡುತ್ತಿದ್ದು, ಒಂದೆಡೆ ಅವರನ್ನು ಓಡಿಸಲು ಪ್ರಯತ್ನಿಸುತ್ತಿದ್ದರೇ ಇತ್ತ ಜನರು ಕಾರಿನ ಮೇಲೆ ಕೋಲುಗಳು ಮತ್ತು ಕಲ್ಲುಗಳನ್ನು ಎಸೆಯುವ ಮೂಲಕ ಪ್ರತೀಕಾರ ತೀರಿಸಿಕೊಳ್ಳುವುದನ್ನು ನೋಡಬಹುದು. ಘಟನಾ ಸ್ಥಳದಲ್ಲಿದ್ದ ಕೆಲವರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎಂದು ತೋರುತ್ತಿದೆ.

ಸಾರ್ವಜನಿಕರ ದಾಳಿಯಿಂದ SUV ಯ ಹಿಂಭಾಗದ ವಿಂಡ್‌ಶೀಲ್ಡ್ ಮುರಿದಂತೆ ಕಾಣುತ್ತಿದ್ದು, ಹಿಂಭಾಗದ ಬಾಗಿಲಿನ ಮೇಲೆ ಡೆಂಟ್‌ಗಳು ಕೂಡ ಆಗಿವೆ. ವರದಿಗಳ ಪ್ರಕಾರ, ಉತ್ತರ ದೆಹಲಿಯಲ್ಲಿ ಸಿಗ್ನೇಚರ್ ಸೇತುವೆಯ ಬಳಿ ಈ ಘಟನೆ ಸಂಭವಿಸಿದೆ. ಸೇತುವೆ ಬಳಿ ಹೋಟೆಲ್ ಹೊಂದಿರುವ ರಾಮ್ ಚಂದ್ ಎಂಬಾತ ಪೊಲೀಸರಿಗೆ ದೂರು ನೀಡಿದ್ದಾರೆ.

owner-damaged-the-expensive-car-in-a-fight-for-just-rs-5

ಆಗಿದ್ದೇನು?: ಮಹೀಂದ್ರಾ ನುವೋಸ್ಪೋರ್ಟ್ ಎಸ್‌ಯುವಿಯಲ್ಲಿ ಇಬ್ಬರು ವ್ಯಕ್ತಿಗಳು ರಾಮ್ ಚಂದ್ ಅವರ ಹೊಟೆಲ್‌ಗೆ ಟಿಫನ್ ಮಾಡಲು ಬಂದಿದ್ದರು. ಎರಡು ಲೋಟ ನೀರು ಕೇಳಿದ್ದು, ಅವರಿಗೆ ಸೇವೆ ಸಲ್ಲಿಸಿದ ನಂತರ ರಾಮ್ ಚಂದ್ ನೀರಿಗಾಗಿ 5 ರೂ.ಗಳನ್ನು ಕೇಳಿದ್ದಾರೆ. ಆದ್ರೆ ಅವರು ಪಾವತಿಸಲು ನಿರಾಕರಿಸಿದ್ದು, ಎರಡೂ ಕಡೆಯವರ ನಡುವೆ ವಾಗ್ವಾದ ನಡೆದಿದೆ. ಇದೇ ವೇಳೆ ರಾಮ್ ಚಂದ್ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ.

ಪರಿಸ್ಥಿತಿಯು ಉಲ್ಬಣಗೊಂಡಿದ್ದು, ವೀಡಿಯೊದಲ್ಲಿ ಸೆರೆಹಿಡಿಯಲಾದ ಘಟನೆಗಳಿಗೆ ಕಾರಣವಾಗಿದೆ. ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಸದ್ಯ ಕಾರಿಗೆ ಸಂಬಂಧಿಸಿದ ವ್ಯಕ್ತಿಗಳಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ಸೆರೆಹಿಡಿಯಲಾದ ವೀಡಿಯೊಗಳ ಮೂಲಕ, ಪೊಲೀಸರು ಎಸ್‌ಯುವಿಯ ಮಾಲೀಕತ್ವದ ವಿವರಗಳನ್ನು ಪಡೆದುಕೊಂಡಿದ್ದಾರೆ. ಎಸ್‌ಯುವಿಯಲ್ಲಿದ್ದವರನ್ನು ಮೊಹಮ್ಮದ್ ಹಾಗೂ ಹಬೀಬ್ ಎಂದು ಗುರುತಿಸಲಾಗಿದೆ.

owner-damaged-the-expensive-car-in-a-fight-for-just-rs-5

ಇಂತಹ ಕ್ಷುಲ್ಲಕ ವಿಚಾರಕ್ಕೆ ದೈಹಿಕ ಹಲ್ಲೆಗೆ ಮುಂದಾಗುವುದು ಅನಗತ್ಯವಾಗಿತ್ತು. ವಾಹನ ಚಲಾಯಿಸುವಾಗ ಸಂಯಮವನ್ನು ಕಾಪಾಡಿಕೊಳ್ಳುವುದು ಮತ್ತು ಇಂತಹ ಘಟನೆಗಳಲ್ಲಿ ಕೋಪವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಹೆಚ್ಚುವರಿಯಾಗಿ, ಇಂತಹ ಸಮಸ್ಯೆಗಳು ಎದುರಾದರೆ, ಕಾನೂನನ್ನು ಕೈಗೆ ತೆಗೆದುಕೊಳ್ಳುವ ಬದಲು ಪೊಲೀಸರಿಗೆ ತಿಳಿಸುವುದು ಉತ್ತಮ ಎಂಬುದು ನಮ್ಮ ಅಭಿಪ್ರಾಯ.

ಇಂತಹ ಘಟನೆಗಳು ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ ಮೊದಲೇನಲ್ಲ, ಕಾರ್ ಡ್ರೈವರ್‌ಗಳು ಪೊಲೀಸರ ವಿರುದ್ಧವೇ ದಾಳಿಗೆ ಮುಂದಾದ ಘಟನೆಗಳು ಕೂಡ ನಡೆದಿವೆ. ಈ ಹಿಂದೆ ಪೊಲೀಸರೊಬ್ಬರನ್ನು ಡಿಕ್ಕಿ ಹೊಡೆದು ಬಾನೆಟ್ ಮೇಲೆ ಎಳೆದೊಯ್ದ ಘಟನೆಗಳು ಕೂಡ ವರದಿಯಾಗಿವೆ. ಟ್ರಾಫಿಕ್ ಉಲ್ಲಂಘನೆ ವೇಳೆ ಪೊಲೀಸರು ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದಾಗ ಇಂತಹ ಘಟನೆಗಳು ಸಾಮಾನ್ಯವಾಗಿ ಸಂಭವಿಸುತ್ತಲೇ ಇರುತ್ತವೆ. ಘಟನೆ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 8, 2024, 8:30 [IST]
English summary
Owner damaged the expensive car in a fight for just rs 5
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+