ಪೊಲೀಸರಿಂದ ಕೆಲಸ ಆಗ್ಲಿಲ್ಲ: ನಾಪತ್ತೆಯಾಗಿದ್ದ ಬೈಕ್ ಹೆಲ್ಮೆಟ್ ಸಮೇತ ತಿರುಗಿ ಬಂತು: ಮಂಗಳೂರಿನ ಅಚ್ಚರಿ ಕಥೆ!

ನನ್ನ ಫೇವರಿಟ್‌ ಬೈಕ್‌ ಕಳವಾದ ಕಾರಣ ಕಂಗಾಲಾಗಿದ್ದೆ. ಇದರಿಂದ ಬೇಸತ್ತ ಅಮ್ಮ ಕೊರಗಜ್ಜ, ಕುಟುಂಬದ ದೈವ-ದೇವರಿಗೆ ಹರಕೆ ಹೇಳಿ ಬೈಕ್‌ ಸಿಗುವಂತೆ ಪ್ರಾರ್ಥಿಸಿದ್ದರು. ನಿಜಕ್ಕೂ ಸೋಮವಾರ ನಡೆದದ್ದು ಪವಾಡ ಅಂದುಕೊಳ್ಳುತ್ತೇನೆ. ದೈವ-ದೇವರ ಅನುಗ್ರಹದಿಂದ ಮತ್ತೆ ಬೈಕ್‌ ಸಿಕ್ಕಿದೆ. ಅಮ್ಮನ ಹರಕೆ ನಿಜಕ್ಕೂ ಫಲಿಸಿತು. ಅಮ್ಮನಿಗೂ ಬೈಕ್‌ ಸಿಕ್ಕಿದ್ದು ಖುಷಿ ನೀಡಿದೆ ಎನ್ನುತ್ತಾರೆ ನಾಗರಾಜ್‌.

ಭಾರತದಲ್ಲಿ ನಾವು ಒಂದು ಕಡೆ ಮತ್ತೊಂದು ಕಡೆಗೆ ಸುಲಭವಾಗಿ ಮತ್ತು ಅಗ್ಗದ ಮಾರ್ಗದಿಂದಾಗಿ ದ್ವಿಚಕ್ರ ವಾಹನಗಳು ಹೆಚ್ಚು ಉತ್ತಮ. ಕಳೆದ ವರ್ಷವೊಂದರಲ್ಲೇ ಭಾರತದಲ್ಲಿ 13.47 ಮಿಲಿಯನ್ ಮೋಟಾರ್ ಸೈಕಲ್‌ಗಳು ಮಾರಾಟವಾಗಿವೆ. ಆದರೆ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾದಂತೆ ಕಳ್ಳರ ಕಾಟವೂ ಹೆಚ್ಚುತ್ತಿದೆ. ಸಾಮಾನ್ಯವಾಗಿ ನಮ್ಮ ದೇಶದೆಲ್ಲೆಡೆ ಕಳ್ಳತನವಾಗುವ ದ್ವಿಚಕ್ರ ವಾಹನಗಳ ಮತ್ತೆ ಪತ್ತೆ ಆಗುವುದು ಕಷ್ಟ.

Retrieves Stolen Bike

ಆದರೆ ಕಳವಾದ ಬೈಕ್‌ ಒಂದೂವರೆ ವರ್ಷದ ಬಳಿಕ ಮಾಲೀಕನಿಗೆ ಸಿಕ್ಕ ಘಟನೆಯು ಮಂಗಳೂರಿನಲ್ಲಿ (Mangaluru) ನಡೆದಿದೆ. ಮಂಗಳೂರು ನಗರದ ಹಸಿರು ದಳ ಸಂಯೋಜಕ ನಾಗರಾಜ್‌ ಅವರ ಬಜಾಜ್ ಅವೆಂಜರ್‌ ಬೈಕ್ ಕಳೆದ ವರ್ಷ ಕಳವಾಗಿತ್ತು. ನಾಗರಾಜ್‌ ಅವರ ಬೈಕ್ 2022ರ ಮಾರ್ಚ್‌ನಲ್ಲಿ ಬಲ್ಮಠದ ಹೋಟೆಲ್‌ ರೂಪ ಬಳಿ ಕಳ್ಳತನವಾಗಿತ್ತು. ಈ ಬಗ್ಗೆ ಅವರು ಮಂಗಳೂರಿನ ಬಂದರು ಪೊಲೀಸರಿಗೆ ದೂರು ನೀಡಿದ್ದರು.

ಈ ಬಗ್ಗೆ ಪೊಲೀಸರು ದೂರು ಸ್ವೀಕರಿಸಿ ತನಿಖೆಯನ್ನು ಪ್ರಾರಂಭಿಸಿದ್ದರು. ಪೊಲೀಸರು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಮಾಸ್ಕ್‌ ಧರಿಸಿದ ವ್ಯಕ್ತಿ ಬೈಕ್ ಕಳ್ಳತನ ಮಾಡುತ್ತಿರುವುದು ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಕಳ್ಳನನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದರು. ಇದರಿಂದ ಬೈಕ್ ಮಾಲೀಕ ನಾಗರಾಜ್‌ ಅವರು ಮತ್ತೆ ಬೈಕ್ ಸಿಗುವ ಕನಸು ಕೂಡ ಮರಿಚಿಕೆಯಾಗಿ ಬರುತ್ತಿತ್ತು.

ನಾಗರಾಜ್‌ ಅವರು ಕಾಪಿಕಾಡ್‌ ಕಚೇರಿಯಲ್ಲಿ ಸಿಬ್ಬಂದಿ ಇಲ್ಲ್ದಿರುವುದರಿಂದ ತಾನೇ ಕೊರಿಯರ್‌ ನೀಡಲು ಬಿಜೈ ಕೆಎಆರ್‌ಟಿಸಿಗೆ ತೆರಳಿದ್ದರು. ಅಚ್ಚರಿ ಎಂದರೆ, ಈ ವೇಳೆ ಅವರು ತಮ್ಮ ಕಳೆದುಹೋಗಿದ್ದ ಬೈಕ್ ಅನ್ನು ನೋಡುತ್ತಾರೆ. ಕೂಡಲೇ ಅವರು ಅಚ್ಚರಿಯಿಂದ ಬೈಕಿನ ನಂಬರ್ ಪ್ಲೇಟ್ ಅನ್ನು ನೋಡುತ್ತಾರೆ. ಈ ವೇಲೆ ಅದೇ ನಂಬರ್ ಇರುತ್ತೇ. ಇದರಿಂದ ಅವರು ತಮ್ಮ ಕಳೆದುಹೋಗಿದ್ದ ಅದೇ ಬೈಕ್ ಎಂದು ಖಚಿತವಾಗುತ್ತದೆ.

ಬಳಕೆಯಾಗದ ಬೈಕಿನ ಕೀ ಮತ್ತು ಆವರ ಅದೆ ಹೆಲ್ಮೆಟ್‌ ಅದರಲ್ಲಿತ್ತು. ಈ ಬೈಕ್‌ ಸಂಪೂರ್ಣ ಧೂಳಿನಿಂದ ತುಂಬಿತು. ಇದರ ನಂತರ ಬೈಕಿನ ಬಳೆಕೆದಾರರನ್ನು ಕೇಳಿದರು, ವ್ಯಕ್ತಿಯನ್ನು ಬೈಕ್‌ ಮಾಲೀಕರಿಲ್ಲದ ಕಾರಣ ಕೆಲಸದವರಿಗೆ ಬೈಕ್‌ ಬಳಸಲು ಹೇಳಿದ್ದೆ ಎಂದು ಅಲ್ಲಿದ್ದ ವ್ಯಕ್ತಿ ಹೇಳುತ್ತಾರೆ. ನಂತರ ಗರಾಜ್‌ ಬೈಕ್‌ ಸವಾರನ ಜತೆ ಪೊಲೀಸ್‌ ಠಾಣೆಗೆ ಭೇಟಿ ನೀಡಿ ಎಲ್ಲಾ ಘಟನೆಯನ್ನು ವಿವರಸಿದರು. . ಪೊಲೀಸರು ವಿಚಾರಿಸಿ ಮಾಲೀಕರಿಗೆ ಬೈಕ್‌ ಹಸ್ತಾಂತರಿಸಿದರು.

ದುಬೈನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ ರಾಘವ್ ಅಂಜನ್ ಕಳೆದ ಕೆಲವು ವರ್ಷಗಳಿಂದ ಮನೆಗೆ ಮರಳಿದ್ದರು. ಅಲ್ಲದೆ ತಾಯ್ನಾಡಿನಲ್ಲಿಯೇ ನೆಲೆಯೂರಿದ್ದಾರೆ. ಈ ಹಂತದಲ್ಲಿ ಅವರು ತಮ್ಮ ತಮ್ಮ ಕೆಲಸ ನೋಡಿಕೊಳ್ಳಲು ಐದು ವರ್ಷಗಳ ಹಿಂದೆ ಬಜಾಜ್ ಅವೆಂಜರ್ ಬೈಕ್ ಅನ್ನು ಖರೀದಿಸಿದ್ದರು. ಇದು ಅವರ ಮೊದಲ ವಾಹನವಾಗಿದೆ. ಈ ಬಜಾಜ್ ಅವೆಂಜರ್ ಬೈಕ್ ಜೊತೆ ಅವರಿಗೆ ಭಾವನಾತ್ಮಕ ಸಂಬಂಧವಿದೆ.

ಈ ಬಜಾಜ್ ಅವೆಂಜರ್‌ ಬೈಕ್ ಕಳ್ಳತನವಾದ ಬಳಿಕ ಅವರು ಹೊಸ ಬೈಕ್ ಅನ್ನು ಖರೀದಿಸಿರಲಿಲ್ಲ. ಅವರು ತಮ್ಮ ಸಹೋದರನ ಬೈಕ್ ಅನ್ನು ಬಳಸುತ್ತಿದ್ದರು. ಅವರಿಗೆ ತಮ್ಮ ಮೆಚ್ಚಿನ ಬೈಕ್ ಅನ್ನು ಸಿಕ್ಕಿ ತುಂಬಾ ಸಂತೋಷವಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬೈಕ್ ಕದ್ದು ಅಪಾರ್ಟ್ ಮೆಂಟ್ ನಲ್ಲಿ ಅನಾಥ ಮಾಡಿದವರು ಯಾರು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಬೈಕ್ ಕಳೆದು ಹೋಗಿದ್ದು ಮಾತ್ರವಲ್ಲದೆ ಹೆಲ್ಮೆಟ್ ಕೂಡ ಸಿಕ್ಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Friday, October 13, 2023, 16:11 [IST]
English summary
Owner found stolen bike with helmet after a year in mangaluru details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+