ಬೆಂಗಳೂರಿನಲ್ಲಿ ಪೇಯ್ಡ್‌ ಪಾರ್ಕಿಂಗ್‌ - ವಾಹನ ಸವಾರರಿಗೆ ಮತ್ತೆ ಶಾಕ್‌ ನೀಡಲಿದೆ ಬಿಬಿಎಂಪಿ..!

ಬೃಹತ್‌ ಬೆಂಗಳೂರಿನಲ್ಲಿ ಪಾರ್ಕಿಂಗ್‌ ಒಂದು ಬಹುದೊಡ್ಡ ಸಮಸ್ಯೆಯೇ ಸರಿ. ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್‌ ಮಾಡುವುದರಿಂದ ಅಲ್ಲಲ್ಲಿ ಆಗಾಗ ಟ್ರಾಫಿಕ್‌ ಜಾಮ್‌ಗಳಾಗುವುದರ ಜೊತೆಗೆ ಸಾರ್ವಜನಿಕರೂ ಸಹ ತೊಂದರೆಗೆ ಒಳಗಾಗುತ್ತಿರುವುದು ತೀರಾ ಸಾಮಾನ್ಯವಾಗಿಬಿಟ್ಟಿದೆ.

ಬೆಂಗಳೂರಿನಲ್ಲಿ ಪೇಯ್ಡ್‌ ಪಾರ್ಕಿಂಗ್‌ - ವಾಹನ ಸವಾರರಿಗೆ ಮತ್ತೆ ಶಾಕ್‌ ನೀಡಲಿದೆ ಬಿಬಿಎಂಪಿ..!

ಈ ಪಾರ್ಕಿಂಗ್‌ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಮತ್ತು ಬಿಬಿಎಂಪಿ ಬೊಕ್ಕಸ ತುಂಬಿಸುವುದಕ್ಕಾಗಿ ಬಿಬಿಎಂಪಿಯು ಹೊಸ ಉಪಾಯ ಮಾಡಿದೆ. ಬಿಬಿಎಂಪಿಯು, ಬೃಹತ್‌ ಬೆಂಗಳೂರಿನಾದ್ಯಂತ ಪೇ ಅಂಡ್‌ ಪಾರ್ಕ್‌ ಆರಂಭಿಸಲು ಸಿದ್ದತೆ ನಡೆಸಿದೆ. ಇದಕ್ಕಾಗಿ ಈಗಾಗಲೇ ಗಾಂಧಿನಗರ ಕ್ಷೇತ್ರದಲ್ಲಿ, ಬಹುಮಹಡಿ ಪಾರ್ಕಿಂಗ್‌ ಕಟ್ಟಡಗಳನ್ನು ಶೀಘ್ರದಲ್ಲೇ ಆರಂಭಿಸಲು ಸಿದ್ದವಾಗಿದ್ದು, ವಾಹನ ಸವಾರರಿಗೆ ಶಾಕ್‌ ನೀಡಲಿದೆ.

ಬೆಂಗಳೂರಿನಲ್ಲಿ ಪೇಯ್ಡ್‌ ಪಾರ್ಕಿಂಗ್‌ - ವಾಹನ ಸವಾರರಿಗೆ ಮತ್ತೆ ಶಾಕ್‌ ನೀಡಲಿದೆ ಬಿಬಿಎಂಪಿ..!

ಇನ್ನು ಮೊದಲ ಬಾರಿಗೆ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಪಾರ್ಕಿಂಗ್‌ ಬೇ ಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಿದ್ದು, ಮುಂದೆ ಹಂತ-ಹಂತವಾಗಿ ನಗರದೆಲ್ಲೆಡೆ ಈ ಪೇಯ್ಡ್‌ ಪಾರ್ಕಿಂಗ್‌ ಬೇ ಗಳನ್ನು ಜಾರಿಗೆ ತರಲಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಫ್ರೀಡಂ ಪಾರ್ಕ್‌ನ ಸುತ್ತಮುತ್ತಲಿರುವ ಸುಮಾರು 12 ರಸ್ತೆಗಳನ್ನು ಸಹ ಈ ಪೇಯ್ಡ್‌ ಪಾರ್ಕಿಂಗ್‌ ಬೇ ಗಳಾಗಿ ಮಾರ್ಪಾಡುಗೊಳಿಸಲಿದೆ.

ಬೆಂಗಳೂರಿನಲ್ಲಿ ಪೇಯ್ಡ್‌ ಪಾರ್ಕಿಂಗ್‌ - ವಾಹನ ಸವಾರರಿಗೆ ಮತ್ತೆ ಶಾಕ್‌ ನೀಡಲಿದೆ ಬಿಬಿಎಂಪಿ..!

ಈ ಕುರಿತಾಗಿ ಮಾತನಾಡಿದ ಬಿಬಿಎಂಪಿ ಯ ಚೀಫ್‌ ಕಮೀಷನರ್‌ ತುಷಾರ್‌ ಗಿರಿ ಅವರು 'ಕಳೆದ 12 ವರ್ಷಗಳಿಂದ ಈ ಪಾರ್ಕ್‌ ಅಂಡ್‌ ಪೇ ಯೋಜನೆಯು ನಡೆಯುತ್ತಲೇ ಇದೆ. ಆದರೆ ಇದನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸುವ ಒಂದು ಮಾರ್ಗ ನಮ್ಮ ಮುಂದಿರಲಿಲ್ಲ. ಹಾಗಾಗಿ 12 ವರ್ಷಗಳಿಂದಲೂ ಈ ಯೋಜನೆ ಹಲವಾರು ಬಾರಿ ನೆನೆಗುದಿಗೆ ಬಿದ್ದಿತ್ತು. ಆದರೆ ಈಗ ನಾವು ಮಲ್ಟಿ ಲೆವೆಲ್‌ ಪಾರ್ಕಿಂಗ್‌ ಸೆಂಟರ್‌ಗಳನ್ನು ಮತ್ತು ಅದರ ಸುತ್ತಲಿನ ರಸ್ತೆಗಳನ್ನು ಈ ಯೋಜನೆಗಾಗಿ ಬಳಸುತ್ತಿದ್ದೇವೆ' ಎಂದಿದ್ದಾರೆ.

ಬೆಂಗಳೂರಿನಲ್ಲಿ ಪೇಯ್ಡ್‌ ಪಾರ್ಕಿಂಗ್‌ - ವಾಹನ ಸವಾರರಿಗೆ ಮತ್ತೆ ಶಾಕ್‌ ನೀಡಲಿದೆ ಬಿಬಿಎಂಪಿ..!

ಹಾಗೆಯೇ ಇದರಲ್ಲಿ ಇನ್ನೊಂದು ವಿಷಯವೇನೆಂದರೆ ರಸ್ತೆಗಳನ್ನು ಪಾರ್ಕಿಂಗ್‌ ಗಾಗಿ ಬಳಸುವುದು ಸರಿಯಲ್ಲ. ಯಾಕೆಂದರೆ ರಸ್ತೆಗಳನ್ನು ಪಾರ್ಕಿಂಗ್‌ ಗೆ ಬಳಸಿದರೆ ಟ್ರಾಫಿಕ್‌ ಜಾಮ್‌ಗಳಾಗುವ ಸಾಧ್ಯತೆಗಳು ತುಂಬಾ ಹೆಚ್ಚು. ಆದರೆ ಯಾವಾಗ ಬಹು ಹಂತದ ಪಾರ್ಕಿಂಗ್‌ ಸೆಂಟರ್‌ಗಳು ಬರುತ್ತವೋ ಆಗ ಚಾಲಕರು ತಮ್ಮ ವಾಹನಗಳನ್ನು ಈ ರೀತಿಯ ರಸ್ತೆಯಲ್ಲೇ ತೆಗೆದುಕೊಂಡು ಹೋಗಬೇಕಾಗತ್ತದೆ. ಹಾಗಾಗಿ ಇಂತಹ ಸಂಧರ್ಭಗಳಲ್ಲಿ ಈ ಪಾರ್ಕಿಂಗ್‌ ಸೆಂಟರ್‌ನ ಸುತ್ತಲಿರುವ ರಸ್ತೆಗಳನ್ನು ಪೇಯ್ಡ್‌ ಪಾರ್ಕಿಂಗ್‌ಗಾಗಿ ಉಪಯೋಗಿಸಲಾಗುತ್ತದೆ" ಎಂದು ಹೇಳಿದರು.

ಬೆಂಗಳೂರಿನಲ್ಲಿ ಪೇಯ್ಡ್‌ ಪಾರ್ಕಿಂಗ್‌ - ವಾಹನ ಸವಾರರಿಗೆ ಮತ್ತೆ ಶಾಕ್‌ ನೀಡಲಿದೆ ಬಿಬಿಎಂಪಿ..!

"ಈಗಾಗಲೇ ಫ್ರೀಡಂ ಪಾರ್ಕ್‌ ಬಳಿ ಪಾರ್ಕಿಂಗ್‌ ಬೇ ನ ಕಾಮಗಾರಿಯು ಶೇ. 90 ರಷ್ಟು ಮುಕ್ತಾಯಗೊಂಡಿದೆ. ಇನ್ನು ಕೆಲವೊಂದು ಯಂತ್ರೋಪಕರಣಗಳನ್ನು ಅಳವಡಿಸುವುದು ಮಾತ್ರ ಬಾಕಿ ಉಳಿದಿದೆ. ಆದರೆ ಫ್ರೀಡಂ ಪಾರ್ಕ್‌ನಲ್ಲಿ ಆಗಾಗ ಕೆಲವೊಂದು ಪ್ರತಿಭಟನೆಗಳು ನಡೆಯುತ್ತಿರುತ್ತವೆ. ಏನಿಲ್ಲವೆಂದರೂ ವಾರದಲ್ಲಿ ಮೂರರಿಂದ ನಾಲ್ಕು ಪ್ರತಿಭಟನೆಗಳಂತೂ ಇದ್ದೇ ಇರುತ್ತದೆ. ಪ್ರತಿಭಟನಾಕಾರರ ವಾಹನಗಳಿಂದಲೇ ಪಾರ್ಕ್‌ನ ಸುತ್ತ ಮುತ್ತ ಆಗಾಗ ಟ್ರಾಫಿಕ್‌ ಜಾಮ್‌ ಆಗುತ್ತಿರುತ್ತದೆ.

ಬೆಂಗಳೂರಿನಲ್ಲಿ ಪೇಯ್ಡ್‌ ಪಾರ್ಕಿಂಗ್‌ - ವಾಹನ ಸವಾರರಿಗೆ ಮತ್ತೆ ಶಾಕ್‌ ನೀಡಲಿದೆ ಬಿಬಿಎಂಪಿ..!

ಇದರಿಂದಾಗಿ ಸಾರ್ವಜನಿಕರ ಜೊತೆಗೆ ಅಲ್ಲಿನ ವ್ಯಾಪಾರಿಗಳೂ ಸಹ ತೊಂದರೆ ಅನುಭವಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ಪೇಯ್ಡ್‌ ಪಾರ್ಕಿಂಗ್‌ ಬೇ ಯನ್ನು ನಿರ್ಮಿಸುತ್ತಿದೆ. ಇದರಿಂದಾಗಿ ಟ್ರಾಫಿಕ್‌ ಜಾಮ್‌ಗಳನ್ನು ಆದಷ್ಟು ಕಡಿಮೆ ಮಾಡಬಹುದು" ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪೇಯ್ಡ್‌ ಪಾರ್ಕಿಂಗ್‌ - ವಾಹನ ಸವಾರರಿಗೆ ಮತ್ತೆ ಶಾಕ್‌ ನೀಡಲಿದೆ ಬಿಬಿಎಂಪಿ..!

ಬಿಬಿಎಂಪಿಯು ಮೂರು ಮಹಡಿಯ ಪಾರ್ಕಿಂಗ್‌ ಸೌಲಭ್ಯವನ್ನು ಹೊಂದಿರುವ ಪಾರ್ಕಿಂಗ್‌ ಸೆಂಟರ್‌ಗಳನ್ನು ನಿರ್ಮಿಸುತ್ತಿದೆ. ಈ ಕಾಮಗಾರಿಯ ಅಂದಾಜು ಮೊತ್ತ ಸುಮಾರು 79.81 ಕೋಟಿ ರೂಪಾಯಿಗಳಾಗಿದೆ. ಈ ಪಾರ್ಕಿಂಗ್‌ ಸೆಂಟರ್‌ನಲ್ಲಿ ಲಿಫ್ಟ್‌ನ ವ್ಯವಸ್ಥೆಯಿದ್ದು, ಮಹಿಳೆಯರು ಮತ್ತು ಪುರುಷರ ಶೌಚಾಲಯದ ವ್ಯವಸ್ಥೆಯೂ ಇದೆ.

ಬೆಂಗಳೂರಿನಲ್ಲಿ ಪೇಯ್ಡ್‌ ಪಾರ್ಕಿಂಗ್‌ - ವಾಹನ ಸವಾರರಿಗೆ ಮತ್ತೆ ಶಾಕ್‌ ನೀಡಲಿದೆ ಬಿಬಿಎಂಪಿ..!

ಇನ್ನು ಈ ಕಟ್ಟಡದ ಮೇಲ್ಚಾವಣಿಯಲ್ಲಿ ಸೋಲಾರ್‌ ಪ್ಯಾನಲ್‌ಗಳನ್ನೂ ಅಳವಡಿಸಲಾಗಿದ್ದು, ಸಂಪೂರ್ಣ ಸೋಲಾರ್‌ ವಿದ್ಯುತ್‌ ಬಳಕೆಗೂ ಸಿದ್ದತೆ ನಡೆದಿದೆ. ಈ ಬಹುಮಹಡಿ ಕಟ್ಟಡದಲ್ಲಿ ವಾಹನ ನಿಲುಗಡೆ ಮಾಡಲು ಖಾಸಗಿ ಸಂಸ್ಥೆ ನಿಯೋಜಿಸಲು ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದೆ.

ಬೆಂಗಳೂರಿನಲ್ಲಿ ಪೇಯ್ಡ್‌ ಪಾರ್ಕಿಂಗ್‌ - ವಾಹನ ಸವಾರರಿಗೆ ಮತ್ತೆ ಶಾಕ್‌ ನೀಡಲಿದೆ ಬಿಬಿಎಂಪಿ..!

ಗಾಂಧಿನಗರದ ವ್ಯಾಪ್ತಿಯಲ್ಲಿನ ವಾಹನ ನಿಲುಗಡೆ ಶುಲ್ಕದಿಂದ ಬಿಬಿಎಂಪಿಯು ವಾರ್ಷಿಕವಾಗಿ 4 ರಿಂದ 4.5 ಕೋಟಿ ರೂ. ಆದಾಯ ಗಳಿಸುವ ಯೋಜನೆಯಲ್ಲಿದ್ದು, ಮುಂಬುವ ದಿನಗಳಲ್ಲಿ ಚಿಕ್ಕಪೇಟೆ, ಗಾಂಧಿ ನಗರ, ಬಿವಿಕೆ ಅಯ್ಯಂಗಾರ್‌ ರೋಡ್‌, ಕೆ ಜಿ ರೋಡ್‌, ಪ್ಯಾಲೇಸ್‌ ರೋಡ್‌ ಗಳಲ್ಲೂ ವಾಹನಗಳಿಗೆ ಪೇ ಅಂಡ್ ಪಾರ್ಕ್‌ ಸೌಲಭ್ಯ ನಿರ್ಮಿಸಬಹುದಾಗಿದೆ.

ಬೆಂಗಳೂರಿನಲ್ಲಿ ಪೇಯ್ಡ್‌ ಪಾರ್ಕಿಂಗ್‌ - ವಾಹನ ಸವಾರರಿಗೆ ಮತ್ತೆ ಶಾಕ್‌ ನೀಡಲಿದೆ ಬಿಬಿಎಂಪಿ..!

ಇದರಲ್ಲಿ ಸುಮಾರು 556 ಕಾರುಗಳು ಹಾಗೂ 445 ಬೈಕ್‌ಗಳನ್ನು ಪಾರ್ಕ್‌ ಮಾಡಬಹುದಾಗಿದ್ದು, ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿರುವ ಬೆಂಗಳೂರಿನ ಜನತೆಗೆ ಇದು ಉಪಾಯವಾಗಬಹುದಾಗಿದೆ. ಜೊತೆಗೆ ಪೇ ಪಾರ್ಕಿಂಗ್ ಸ್ಥಳಗಳಲ್ಲಿ ಹೆಚ್ಚಿನ ಸುರಕ್ಷಾ ಸೌಲಭ್ಯಗಳಿರುವುದರಿಂದ ವಾಹನ ಕಳ್ಳತನ ಪ್ರಕರಣ ತಗ್ಗಲಿದ್ದು, ಇದು ವಾಹನ ಮಾಲೀಕರಿಗೆ ತುಸು ಹೊರೆಯಾದರೂ ಟ್ರಾಫಿಕ್ ಕಿರಿಕಿರಿಗೆ ಮುಕ್ತಿ ಸಿಗಲಿದೆ.

ಬೆಂಗಳೂರಿನಲ್ಲಿ ಪೇಯ್ಡ್‌ ಪಾರ್ಕಿಂಗ್‌ - ವಾಹನ ಸವಾರರಿಗೆ ಮತ್ತೆ ಶಾಕ್‌ ನೀಡಲಿದೆ ಬಿಬಿಎಂಪಿ..!

ಡ್ರೈವ್‌ಸ್ಪಾರ್ಕ್‌ ಅಭಿಪ್ರಾಯ

ಬೆಂಗಳೂರಿನಂತಹ ಮಹಾನಗರದಲ್ಲಿ ಟ್ರಾಫಿಕ್‌ ಒಂದು ಬಹುದೊಡ್ಡ ಸಮಸ್ಯೆಯೇ. ಎಲ್ಲೆಂದರಲ್ಲಿ ಪಾರ್ಕ್‌ ಮಾಡಿ ಹೋಗುವುದರಿಂದಲೇ ಈ ಟ್ರಾಫಿಕ್‌ ಜಾಮ್‌ ಮಿತಿ ಮೀರಲು ಪ್ರಮುಖ ಕಾರಣವಾಗಿದೆ. ಹಾಗಾಗಿ ಇಂತಹ ಪೇಯ್ಡ್‌ ಪಾರ್ಕಿಂಗ್‌ ಬೇ ಗಳನ್ನು ನಿರ್ಮಿಸುವುದರಿಂದ ಚಾಲಕರ ಜೇಬಿಗೆ ಕತ್ತರಿ ಬೀಳುತ್ತದೆಯಾದರೂ ಕೊಂಚ ಮಟ್ಟಿಗಾದರೂ ಟ್ರಾಫಿಕ್‌ ಜಾಮ್‌ ಗಳನ್ನು ಕಡಿಮೆ ಮಾಡಬಹುದು.

Article Published On: Thursday, July 7, 2022, 13:00 [IST]
English summary
Paid parking bay are opening shortly in bangalore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+