ಕಲಾ ರಸಿಕರಿಗೆ ಎಮ್ಮಾ ಮಾನವ ಕಲಾಶಿಲ್ಪ
ಕೆಲವು ತಿಂಗಳುಗಳ ಹಿಂದೆಯಷ್ಟೇ ಫಿಯೆಟ್ ವಿಶೇಷ ಕಲಾ ಶಿಲ್ಪಯೊಂದರ ಬಗ್ಗೆ ಲೇಖನವೊಂದನ್ನು ಬರೆದಿದ್ದೆವು. ಫಿಯೆಟ್ ಅರೆನಗ್ನ ಯುವತಿಯರ ಕಲಾ ಪ್ರದರ್ಶನ ವಿವಾದಕ್ಕೆ ಕಾರಣವಾಗಿದ್ದರೂ ಅದ್ಭುತ ಕಲಾಶಿಲ್ಪ ರಚಿಸುವಲ್ಲಿ ಯಶಸ್ವಿಯಾಗಿತ್ತು.
ಇದಕ್ಕೆ ಪೂರಕವೆಂಬಂತೆ ಇನ್ನೊಂದು ಸುದ್ದಿ ವರದಿಯಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಕಲಾ ರಸಿಕರ ದೇಹಗಳಿಗೆ ಬಣ್ಣ ಬಳಿಯುವ ಮೂಲಕ ಆಕರ್ಷಕ ಶಿಲ್ಪ ರಚಿಸುವ ಪ್ರವೃತ್ತಿ ವಾಹನೋದ್ಯಮದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.
ಇದೇ ರೀತಿಯ ಪ್ರಯತ್ನಕ್ಕೆ ಮುಂದಾಗಿರುವ ಆಸ್ಟ್ರೇಲಿಯಾ ಮೂಲದ ದೇಹ ಕಲಾವಿದೆ ಎಮ್ಮಾ ಹ್ಯಾಕ್ ಎಂಬಾಕೆ ಇಂತಹದೊಂದು ಅದ್ಭುತ ಕಲಾಶಿಲ್ಪಕ್ಕೆ ರೂಪುರೇಷೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಎಮ್ಮಾ ಹ್ಯಾಕ್ ರಚಿಸಿರುವ ಕಲಾಸೃಷ್ಟಿಯ ಧ್ಯೇಯ ಅಪಘಾತಕ್ಕೀಡಾದ ಕಾರಿನ ಶಿಲ್ಪ ರಚಿಸುವುದಾಗಿದೆ. ಅವರ ಈ ಪ್ರಯತ್ನಕ್ಕೆ 17 ಮಂದಿ ನೆರವಾಗಿದ್ದಾರೆ.

ಮಾನವ ದೇಹಕ್ಕೆ ಬಣ್ಣ ಬಳಿಯುವ ಮೂಲಕ ಅಪಘಾತಕ್ಕೀಡಾದ ಕಾರಿನ ತದ್ರೂಪವನ್ನು ರಚಿಸಲಾಗಿದೆ. ಈ ಮಾನವ ಶಿಲ್ಪ ರೂಪಿಸಲು ಕಲಾವಿದೆಗೆ 18 ತಾಸುಗಳಷ್ಟು ಸಮಯ ತಗುಲಿತ್ತು.

ಎಮ್ಮಾ ಅವರ ಈ ಪ್ರಯತ್ನಕ್ಕೆ ಆರಂಭದಲ್ಲಿ ಹಲವಾರು ತೊಡಕುಗಳು ಎದುರಾಗಿದ್ದರೂ ಅವೆಲ್ಲವನ್ನು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಎಮ್ಮಾ ಅವರ ಈ ಸಾಧನೆಗೆ ಬಾಡಿ ಬಿಲ್ಡರುಗಳು, ಅಥ್ಲೀಟ್‌ಗಳು ಸೇರಿದಂತೆ ಅನೇಕರು ಸಹಕರಿಸಿದ್ದರು.

ಅಂದ ಹಾಗೆ ಆಸ್ಟ್ರೇಲಿಯಾ ರಸ್ತೆ ಸುರಕ್ಷತೆ ಅಂಗವಾಗಿ ಈ ಕಾರು ಕ್ರಾಶ್ ಚಿತ್ರಣವನ್ನು ರಚಿಸಲಾಗಿದೆ.

ಇದಕ್ಕೆ ಆಸ್ಟ್ರೇಲಿಯಾದ ಮೋಟಾರ್ ಆಕ್ಸಿಡೆಂಟ್ ಕಮಿಷನ್ ಪ್ರಾಯೋಜಕತ್ವವನ್ನು ವಹಿಸಿದೆ. ಹಾಗೆಯೇ ಕಲಾಶಿಲ್ಪಕ್ಕೆ ಪರಿಪೂರ್ಣತೆ ನೀಡುವಲ್ಲಿ ಕಲಾವಿದೆ ಯಶಸ್ವಿಯಾಗಿದ್ದಾರೆ.

18 ತಾಸುಗಳ ಹೊತ್ತಿನ ಈ ಕಲಾ ಶಿಲ್ಪ ರಚನೆಗೆ ಸಂಬಂಧಪಟ್ಟ ಅದ್ಭುತ ವೀಡಿಯೊ ಚಿತ್ರಿಕರಿಸಲಾಗಿದೆ.

ಅಂತಿಮ ಸ್ಲೈಡರ್‌ನಲ್ಲಿ ಕೊಡಲಾಗಿರುವ ಆಕರ್ಷಕ ವೀಡಿಯೋ ನೋಡಲು ಮರೆಯದಿರಿ...

ಕಲಾ ರಸಿಕರಿಗೆ ಎಮ್ಮಾ ಮಾನವ ಕಲಾಶಿಲ್ಪ

ಕಲಾ ರಸಿಕರಿಗೆ ಎಮ್ಮಾ ಮಾನವ ಕಲಾಶಿಲ್ಪ

ಕಲಾ ರಸಿಕರಿಗೆ ಎಮ್ಮಾ ಮಾನವ ಕಲಾಶಿಲ್ಪ

ಕಲಾ ರಸಿಕರಿಗೆ ಎಮ್ಮಾ ಮಾನವ ಕಲಾಶಿಲ್ಪ

ಕಲಾ ರಸಿಕರಿಗೆ ಎಮ್ಮಾ ಮಾನವ ಕಲಾಶಿಲ್ಪ

ಕಲಾ ರಸಿಕರಿಗೆ ಎಮ್ಮಾ ಮಾನವ ಕಲಾಶಿಲ್ಪ
ವೀಡಿಯೋ ವೀಕ್ಷಿಸಿ


Click it and Unblock the Notifications